ಉಡುಪಿ: ಸೆಂಟ್ರಲ್‌ ಗವರ್ನ್‌ಮೆಂಟ್‌ ಹೆಲ್ತ್‌ ಸ್ಕೀಮ್‌ ವೆಲ್ನೆಸ್‌ ಸೆಂಟರ್‌ ಗೆ ಕೇಂದ್ರದ ಅನುಮೋದನೆ

ಉಡುಪಿ: ಭಾರತ ಸರಕಾರದ ನಿವೃತ್ತ ನೌಕರರ ಬಹುದಿನದ ಬೇಡಿಕೆಯಾದ ಸೆಂಟ್ರಲ್‌ ಗವರ್ನ್‌ಮೆಂಟ್‌ ಹೆಲ್ತ್‌ ಸ್ಕೀಮ್‌ (CGHS) ವೆಲ್ನೆಸ್‌ ಸೆಂಟರ್‌ ಅನ್ನು ಉಡುಪಿಯಲ್ಲಿ ತೆರೆಯಲು ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರಕಾರ ಅನುಮೋದನೆ ನೀಡಿದೆ. ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಹಾಗೂ ಆಹಾರ ಸಂಸ್ಕರಣಾ ಉದ್ಯಮಗಳ ರಾಜ್ಯ ಖಾತೆ ಸಚಿವರೂ ಹಾಗೂ ಉಡುಪಿ-ಚಿಕ್ಕಮಗಳೂರು ಸಂಸದರಾದ ಶೋಭಾ ಕರಂದ್ಲಾಜೆ ಅವರ ಪ್ರಯತ್ನದಿಂದ ಬಹುದಿನದ ಬೇಡಿಕೆ ಈಡೇರಿದ್ದು, ಫೆಬ್ರವರಿ 2023ರಲ್ಲಿ ಕೇಂದ್ರ ಆರೋಗ್ಯ ಸಚಿವರಿಗೆ ಭೇಟಿಯಾಗಿ ಉಡುಪಿಯಲ್ಲಿ […]

ಫೆ.14 ‘ದ ತವಾ ಪಂಜಾಬ್’ ರೆಸ್ಟೋರೆಂಟ್ ಶುಭಾರಂಭ

ಮಣಿಪಾಲ: ಇಲ್ಲಿನ ವಿದ್ಯಾರತ್ನ ನಗರದಲ್ಲಿರುವ ಶಾಂಭವಿ ಸೋವರಿನ್ ಕಟ್ಟಡದಲ್ಲಿ ನಾಳೆ ಸಂಜೆ 6.30 ಕ್ಕೆ ‘ದ ತವಾ ಪಂಜಾಬ್’ ರೆಸ್ಟೋರೆಂಟ್ ಶುಭಾರಂಭಗೊಳ್ಳುತ್ತಿದ್ದು, ತುಳು ಚಿತ್ರನಟ-ನಿರ್ದೇಶಕ ಅರ್ಜುನ್ ಕಾಪಿಕಾಡ್, ಹಾಗೂ ನಟ ನಿರ್ದೇಶಕ ಸಂದೇಶ್ ಶೆಟ್ಟಿ ಆಜ್ರಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಫೆ. 13- 17: ಉಪ್ಪೂರು ಮಹತೋಭಾರ ಶ್ರೀ ಸಿದ್ದಿವಿನಾಯಕ ದೇವಸ್ಥಾನ ವಾರ್ಷಿಕ ಮಹಾರಥೋತ್ಸವ

ಉಪ್ಪೂರು: ಮಹತೋಭಾರ ಶ್ರೀ ಸಿದ್ದಿವಿನಾಯಕ ದೇವಸ್ಥಾನದ ವಾರ್ಷಿಕ ಮಹಾರಥೋತ್ಸವವು ಫೆ.13 ರಿಂದ 17 ರವರೆಗೆ ಜರುಗಲಿದೆ. ಫೆ.13 ರಂದು ಬೆಳಿಗ್ಗೆ ಧ್ವಜಾರೋಹಣ ಹಾಗೂ ರಾತ್ರಿ ರಂಗಪೂಜೆ. ಸಂಜೆ 6 ಗಂಟೆಗೆ ಧರ್ಮ ಸಭೆ ವಿದ್ವಾನ್ ಹರಿಪ್ರಸಾದ್ ಭಟ್ ಹೆರ್ಗ ಇವರಿಂದ ಧಾರ್ಮಿಕ ಉಪನ್ಯಾಸ. ಸಂಜೆ 8 ಗಂಟೆಗೆ ನೃತ್ಯ ವೈವಿಧ್ಯ ಕಾರ್ಯಕ್ರಮ ಫೆ.14 ರಂದು ಬೆಳಿಗ್ಗೆ 7 ರಿಂದ ಗಣಹೋಮ, ಕಲಶಾಭಿಷೇಕ, ಮಹಾಪೂಜೆ. ಸಂಜೆ 5 ರಿಂದ ಸಾರ್ವಜನಿಕರಿಂದ 1001 ತೆಂಗಿನಕಾಯಿ ಮೂಡುಗಣಪತಿ ಸೇವೆ, ಮಹಾರಂಗಪೂಜೆ ಸಂಜೆ […]

ರಾಜ್ಯಕ್ಕೆ ಗಾಯದ ಮೇಲೆ ಬರೆ: ತಮಿಳುನಾಡಿಗೆ 2.5 ಟಿಎಂಸಿ ನೀರು ಬಿಡುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿ ಸೂಚನೆ

ಬೆಂಗಳೂರು: ಒಂದೆಡೆ ಮಳೆ ಕೊರತೆ ಮತ್ತೊಂದೆಡೆ ಬರದಿಂದ ರಾಜ್ಯವು ಸಂಕಷ್ಟದಲ್ಲಿದ್ದು ಇದೀಗ ಗಾಯದ ಮೇಲೆ ಬರೆ ಎಂಬಂತೆ ತಮಿಳುನಾಡಿಗೆ ಫೆಬ್ರವರಿ ಮತ್ತು ಮಾರ್ಚ್ ತಿಂಗಳಿನಲ್ಲಿ ತಲಾ 2.5 ಟಿಎಂಸಿ ನೀರು ಹರಿಸುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿ ಸೂಚನೆ ನೀಡಿದೆ. ದೆಹಲಿಯಲ್ಲಿ ಸೋಮವಾರ ಸಮಿತಿಯ ಸಭೆ ನಡೆದಿದ್ದು, 7.61 ಟಿಎಂಸಿ ಬಾಕಿ ಜೊತೆಗೆ ಫೆಬ್ರವರಿಯಿಂದ ಮೇ ತಿಂಗಳವರೆಗೆ ಪ್ರತಿ ತಿಂಗಳು 2.5 ಟಿಎಂಸಿ ನೀರು ಹರಿಸಲು ಕರ್ನಾಟಕಕ್ಕೆ ಸೂಚಿಸಬೇಕೆಂದು ತಮಿಳುನಾಡು ಸಭೆಯಲ್ಲಿ ಒತ್ತಾಯಿಸಿದೆ. ಇದಕ್ಕೆ ತೀವ್ರ ಆಕ್ಷೇಪ […]

ಸೋನಿಯಾಗಾಂಧಿ ರಾಜ್ಯಸಭೆಗೆ; ಪ್ರಿಯಾಂಕಾಗೆ ರಾಯಬರೇಲಿ? ಕಾಂಗ್ರೆಸ್ ಪಾಳಯದಲ್ಲಿ ರಾಜಕೀಯ ಲೆಕ್ಕಾಚಾರ

ನವದೆಹಲಿ: ಸಕ್ರಿಯ ರಾಜಕೀಯಕ್ಕೆ ಪ್ರವೇಶಿಸಿದ ಐದು ವರ್ಷಗಳ ನಂತರ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ತಮ್ಮ ತಾಯಿ ಸೋನಿಯಾ ಗಾಂಧಿ ದಶಕಗಳಿಂದ ಪ್ರತಿನಿಧಿಸುತ್ತಿರುವ ಉತ್ತರ ಪ್ರದೇಶದ ರಾಯ್ ಬರೇಲಿಯಿಂದ ಲೋಕಸಭೆಗೆ ಪಾದಾರ್ಪಣೆ ಮಾಡಲಿದ್ದಾರೆ ಎನ್ನಲಾಗಿದೆ. ಕಾಂಗ್ರೆಸ್ ಪಕ್ಷದ ನಾಯಕಿ ಸೋನಿಯಾಗಾಂಧಿ ಬಹುತೇಕ ರಾಜಸ್ಥಾನದಿಂದ ರಾಜ್ಯಸಭೆ ಚುನಾವಣೆಗೆ ಸ್ಪರ್ಧಿಸುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. ಫೆಬ್ರವರಿ 27 ರಂದು ನಡೆಯಲಿರುವ ರಾಜ್ಯಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷವು ಸಜ್ಜಾಗುತ್ತಿದ್ದು, 77 ವರ್ಷದ ಸೋನಿಯಾ ಗಾಂಧಿಗೆ ರಾಜಸ್ಥಾನ ಸುರಕ್ಷಿತ ಸ್ಥಾನ ಎಂದು […]