ತುಳು ಕನ್ನಡಿಗರ ಶೃದ್ದಾಕೇಂದ್ರ ಬೊಯಿಸರ್ ನ ನಿತ್ಯಾನಂದ ಮಂದಿರದಲ್ಲಿ ಐದನೆಯ ವರ್ಷದ ಶ್ರೀ ದೇವೀ ಜಪಪಾರಾಯಣ

ಬೊಯಿಸರ್: ವರ್ಷದುದ್ದಕ್ಕೂ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಮಹಾರಾಷ್ಟ್ರದ ಪಶ್ಚಿಮ ಕರಾವಳಿಯಲ್ಲಿನ ಪಾಲ್ಘರ್ ಜಿಲ್ಲೆಯಲ್ಲಿನ ತುಳು ಕನ್ನಡಿಗರ ಶೃದ್ದಾಕೇಂದ್ರವೆನಿಸಿದ ಬೊಯಿಸರ್ ನ ಶ್ರೀ ಸ್ವಾಮಿ ನಿತ್ಯಾನಂದ ಮಂದಿರದಲ್ಲಿ ಐದನೆಯ ವರ್ಷದ ಶ್ರೀ ದೇವೀ ಜಪಪಾರಾಯಣ ಅನುಷ್ಠಾನ ಫೆ.5 ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರಗಿತು. ಶ್ರೀ ರಾಮ ಮಂದಿರದಲ್ಲಿ ದೀಪಪ್ರಜ್ವಲನೆಯ ಮೂಲಕ ಕಾರ್ಯಕ್ರಮ ಆರಂಭಗೊಂಡು ನಿತ್ಯಾನಂದ ಮಂದಿರದ ಆವರಣದಲ್ಲಿ ಕಲಶ ಪೂಜೆ, ದೀಪಾರಾಧನೆ, ಷೋಡಶ ಪೂಜೆ ಹಾಗೂ ದುರ್ಗಾ ಅಷ್ಟೋತ್ತರ ನಾಮಾರ್ಚನೆ ಹಾಗೂ ಸಂಪನ್ನ […]

ರಾಜ್ಯಾದ್ಯಂತ ಇ-ಚಲನ್ ದಂಡ ವ್ಯವಸ್ಥೆಗೆ ಚಾಲನೆ ನೀಡಿದ ಸಂಚಾರಿ ಪೊಲೀಸ್ ಇಲಾಖೆ

ಬೆಂಗಳೂರು: ರಾಜ್ಯಾದ್ಯಂತ ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣಗಳು ಹೆಚ್ಚಾಗುತ್ತಲೇ ಇದ್ದು ಸಂಚಾರಿ ಪೊಲೀಸ್ ಇನ್ನು ಮುಂದೆ ಪೆನ್ನು-ಪೇಪರು ಹಿಡಿದು ದಂಡ ವಿಧಿಸುವ ಬದಲಿಗೆ ಹೈಟೆಕ್ ದಂಡ ಪಾವತಿಯನ್ನು ಅಳವಡಿಸ್ಕೊಂಡಿದೆ. ಹೈಟೆಕ್ ದಂಡ ಪಾವತಿ ಬಗ್ಗೆ ಕರ್ನಾಟಕ ಟ್ರಾಫಿಕ್ ಪೊಲೀಸ್ ಇಲಾಖೆ ಮಹತ್ವದ ನಿರ್ಧಾರ ಕೈಗೊಂಡಿದ್ದು, ರಾಜ್ಯದ ಎಲ್ಲೆಡೆ ಇನ್ಮುಂದೆ ಇ-ಚಲನ್ ಮೂಲಕ ದಂಡ ವ್ಯವಸ್ಥೆಗೆ ಚಾಲನೆ ಸಿಕ್ಕಿದೆ. ರಾಜ್ಯದಲ್ಲಿ ಶೇ.100 ರಷ್ಟು ಪೇಪರ್‌ಲೆಸ್ ದಂಡ ಪಾವತಿ ವ್ಯವಸ್ಥೆ ಜಾರಿಯಾಗಿದೆ. ದೇಶದಲ್ಲೆ ಮೊದಲ ರಾಜ್ಯ ಕರ್ನಾಟಕವಾಗಿದ್ದು, ಸಂಚಾರ ನಿರ್ವಹಣೆಯಲ್ಲಿ […]

ಮಾ. 6-8: ತಿಂಗಳೆ ಧರ್ಮ ದೈವ ನೇಮೋತ್ಸವ, 63ನೇ ಸಾಹಿತ್ಯೋತ್ಸವ ಹಾಗೂ ನಾಡ್ಪಾಲು ಗ್ರಾಮೋತ್ಸವ

ಉಡುಪಿ: ತಿಂಗಳೆ ಪ್ರತಿಷ್ಠಾನ ವತಿಯಿಂದ ಮಾರ್ಚ್ 6 ರಿಂದ 8 ರವರೆಗೆ ತಿಂಗಳೆಯಲ್ಲಿ ಧರ್ಮ ದೈವಗಳ ನೇಮೋತ್ಸವ, 63ನೇ ಸಾಹಿತ್ಯೋತ್ಸವ ಹಾಗೂ ನಾಡ್ಪಾಲು ಗ್ರಾಮೋತ್ಸವ ನಡೆಯಲಿದೆ ಎಂದು ತಿಂಗಳೆ ಪ್ರತಿಷ್ಠಾನದ ಅಧ್ಯಕ್ಷ ತಿಂಗಳೆ ವಿಕ್ರಮಾರ್ಜುನ ಹೆಗ್ಗಡೆ ತಿಳಿಸಿದರು. ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಾ. 6ರಂದು ಬೆಳಿಗ್ಗೆ 9 ಗಂಟೆಗೆ ನಡೆಯುವ ಗ್ರಾಮೋತ್ಸವ ಕಾರ್ಯಕ್ರಮವನ್ನು ವಾದಿರಾಜ್ ಶೆಟ್ಟಿ ಉದ್ಘಾಟಿಸಲಿದ್ದಾರೆ. ಬಳಿಕ ಗ್ರಾಮೀಣ ಭಾಗದ ಕ್ರೀಡೆಗಳು ಹಾಗೂ ಜನಪದ ನೃತ್ಯ ಮತ್ತು ಹಾಡುಗಳ ಕಾರ್ಯಕ್ರಮ ಜರಗಲಿದೆ. […]

ಫೆ.10 ರಿಂದ 16: ಮಂದರ್ತಿ ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರದಲ್ಲಿ ಮನ್ಮಹಾರಥೋತ್ಸವ

ಮಂದರ್ತಿ: ಇಲ್ಲಿನ ಇತಿಹಾಸ ಪ್ರಸಿದ್ದ ಮಂದರ್ತಿ ಶ್ರೀದುರ್ಗಾಪರಮೇಶ್ವರಿ ದೇವಸ್ಥಾನದ ಮನ್ಮಹಾರಥೋತ್ಸವವು ಫೆ.10 ರಿಂದ 16 ರವರೆಗೆ ಜರುಗಲಿದೆ. ಫೆ 10- ಬೆಳಿಗ್ಗೆ 9 ಗಂಟೆಗೆ ಬಾರಾಳಿ ಶ್ರೀ ಮಹಾಗಣಪತಿ ಸನ್ನಿಧಿಯಲ್ಲಿ ಗಣಹೋಮರಾತ್ರಿ 8 ರಿಂದ ವಿಘ್ನೇಶ್ವರ ಪ್ರಾರ್ಥನೆ, ರಂಗಪೂಜೆ ಫೆ.11- ಬೆಳಿಗ್ಗೆ 8 ರಿಂದ ವಿಶೇಷ ಪೂಜೆ, ರಂಗಪೂಜೆ, ಕಟ್ಟೆಪೂಜೆಫೆ.12- ರಾತ್ರಿ 8 ರಿಂದ ರಂಗಪೂಜೆ, ಕಟ್ಟೆಪೂಜೆ, ವಸಂತಪೂಜೆ ಫೆ-13 – ಕುಂಭ ಸಂಕ್ರಮಣರಾತ್ರಿ 9 ರಿಂದ ಕೆಂಡಸೇವೆರಾತ್ರಿ 3 ರಿಂದ ಹಾಲಿಟ್ಟು ಸೇವೆ, ನಾಗದರ್ಶನರಾತ್ರಿ 4 […]

ಶಿಕ್ಷಕಿ ನಾಗರತ್ನ ಇವರಿಗೆ ಶೆಫಿನ್ಸ್ ನ ಕ್ರಿಯಾಶೀಲ ಶಿಕ್ಷಕ ಪ್ರಶಸ್ತಿ

ಉಡುಪಿ: ಸ್ಪೋಕನ್ ಇಂಗ್ಲಿಷ್ ಕಲಿಸುವ ಮೂಲಕ ಕನ್ನಡ ಮಾಧ್ಯಮ ಶಾಲೆ ಉಳಿಸಿ ಆಂದೋಲನ ಅಂಗವಾಗಿ ಶೆಫಿನ್ಸ್ ನಿಂದ ನಡೆಸಲಾದ ಅತಿಥಿ ಹಾಗೂ ಗೌರವ ಶಿಕ್ಷಕರ ತರಬೇತಿಯ 5ನೇ ಬ್ಯಾಚ್ ಉಡುಪಿಯ ಹಿಂದೀ ಪ್ರಚಾರ ಸಮಿತಿಯ ಹಾಲ್ ನಲ್ಲಿ ಸಂಪನ್ನಗೊಂಡಿತು. ಈ ತರಬೇತಿಯಲ್ಲಿ ಭಾಗವಹಿಸಿದ ಎಲ್ಲಾ ಅತಿಥಿ ಹಾಗೂ ಗೌರವ ಶಿಕ್ಷಕರೂ ತಾವು ಪಾಠ ಮಾಡುವ ವಿಷಯದ ಮೇಲೆ ಕಿರು ಪಾಠವನ್ನು ಬಹಳಷ್ಟು ಕಲಿಕಾ ಪರಿಕರಗಳ ಜೊತೆಗೆ ಬಹಳ ಅದ್ಭುತವಾಗಿ ಮಾಡಿ, ತಮ್ಮ ಅಧ್ಯಾಪನದಲ್ಲಿನ ಕ್ರಿಯಾಶೀಲತೆಯನ್ನು ಪ್ರದರ್ಶಿಸಿದರು. ಭಾಗವಹಿಸಿದ […]