ತುಳು ಕನ್ನಡಿಗರ ಶೃದ್ದಾಕೇಂದ್ರ ಬೊಯಿಸರ್ ನ ನಿತ್ಯಾನಂದ ಮಂದಿರದಲ್ಲಿ ಐದನೆಯ ವರ್ಷದ ಶ್ರೀ ದೇವೀ ಜಪಪಾರಾಯಣ

ಬೊಯಿಸರ್: ವರ್ಷದುದ್ದಕ್ಕೂ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಮಹಾರಾಷ್ಟ್ರದ ಪಶ್ಚಿಮ ಕರಾವಳಿಯಲ್ಲಿನ ಪಾಲ್ಘರ್ ಜಿಲ್ಲೆಯಲ್ಲಿನ ತುಳು ಕನ್ನಡಿಗರ ಶೃದ್ದಾಕೇಂದ್ರವೆನಿಸಿದ ಬೊಯಿಸರ್ ನ ಶ್ರೀ ಸ್ವಾಮಿ ನಿತ್ಯಾನಂದ ಮಂದಿರದಲ್ಲಿ ಐದನೆಯ ವರ್ಷದ ಶ್ರೀ ದೇವೀ ಜಪಪಾರಾಯಣ ಅನುಷ್ಠಾನ ಫೆ.5 ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರಗಿತು.

ಶ್ರೀ ರಾಮ ಮಂದಿರದಲ್ಲಿ ದೀಪಪ್ರಜ್ವಲನೆಯ ಮೂಲಕ ಕಾರ್ಯಕ್ರಮ ಆರಂಭಗೊಂಡು ನಿತ್ಯಾನಂದ ಮಂದಿರದ ಆವರಣದಲ್ಲಿ ಕಲಶ ಪೂಜೆ, ದೀಪಾರಾಧನೆ, ಷೋಡಶ ಪೂಜೆ ಹಾಗೂ ದುರ್ಗಾ ಅಷ್ಟೋತ್ತರ ನಾಮಾರ್ಚನೆ ಹಾಗೂ ಸಂಪನ್ನ ಜಪವನ್ನು ಭಕ್ತ ಸಮೂಹದೊಂದಿಗೆ ಆಚರಿಸಲಾಯಿತು.

ಬಾಬಾ ನಿತ್ಯಾನಂದರ ಆರತಿಯ ಬಳಿಕ ಪ್ರಸಾದರೂಪದಲ್ಲಿ ಅನ್ನ ಸಂತರ್ಪಣೆ ಜರಗಿತು.

ಮಹಾದೇವ ಮಂದಿರದಲ್ಲಿ ಜರಗಿದ ಸೀಯಾಳ ಹಾಗೂ ಪಂಚಾಮೃತ ರುದ್ರಾಭಿಷೇಕದ ಬಳಿಕ ಕಳಶ ವಿಸರ್ಜನೆಯೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.

ಕಾರ್ಯಕ್ರಮದಲ್ಲಿ ಸ್ಥಳೀಯ ಮರಾಠಿ ಭಾಷಿಕರೂ ಸೇರಿದಂತೆ ತುಳು ಕನ್ನಡಿಗ ಭಕ್ತಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ಚಿತ್ರ ಹಾಗೂ ವರದಿ : ಪಿ.ಆರ್.ರವಿಶಂಕರ್