ಮಾತೃಪಕ್ಷಕ್ಕೆ ಮರಳಲು ಸಿದ್ದ; ಸ್ಪಂದನೆ ದೊರೆಯದಿದ್ದಲ್ಲಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ನಿಶ್ಚಿತ : ಪುತ್ತಿಲ ಪರಿವಾರ

ಪುತ್ತೂರು: ಪುತ್ತಿಲ ಪರಿವಾರವನ್ನು ಬಿಜೆಪಿಗೆ ಸೇರ್ಪಡೆಗೊಳಿಸುವ ಬಗ್ಗೆ ತೀರ್ಮಾನ ಕೈಗೊಳ್ಳಲು ಬಿಜೆಪಿ ನಾಯಕರಿಗೆ ಮೂರು ದಿನಗಳ ಗಡುವು ನೀಡಲಾಗಿದ್ದು ಸಕಾರಾತ್ಮಕ ಸ್ಪಂದನೆ ದೊರೆಯದಿದ್ದಲ್ಲಿ ಪುತ್ತಿಲ ಪರಿವಾರವು ರಾಜಕೀಯ ಕ್ಷೇತ್ರಕ್ಕೆ ಕಾಲಿಡಲಿದೆ ಎಂದು ಪುತ್ತೂರಿನಲ್ಲಿ ನಡೆದ ಪುತ್ತಿಲ ಪರಿವಾರದ ಸಮಾಲೋಚನೆ ಸಭೆಯಲ್ಲಿ ಘೋಷಿಸಲಾಗಿದೆ. ಫೆ.5ರಂದು ಕೊಟೇಚಾ ಸಭಾಂಗಣದಲ್ಲಿ ನಡೆದ ಪುತ್ತಿಲ ಪರಿವಾರದ ಸಮಾಲೋಚನೆ ಸಭೆಯಲ್ಲಿ ಪುತ್ತಿಲ ಪರಿವಾರದ ಪರವಾಗಿ ಮಾತನಾಡಿದ ಶ್ರೀಕೃಷ್ಣ ಉಪಾಧ್ಯಾಯ, ಸಾಮಾನ್ಯ ಕಾರ್ಯಕರ್ತರಾಗಿ ಅರುಣ್‌ಕುಮಾರ್‌ ಬಿಜೆಪಿ ಸೇರಬೇಕು ಎನ್ನುವುದನ್ನು ಯಾವುದೇ ಕಾರ್ಯಕರ್ತರು ಒಪ್ಪುವುದಿಲ್ಲ. ಅರುಣ್‌ 35 […]

ಕೆಜಿಗೆ 29 ರೂ ಬೆಲೆಯ ‘ಭಾರತ್ ಅಕ್ಕಿ’ ಬಿಡುಗಡೆ: ಕೇಂದ್ರ ಆಹಾರ ಸಚಿವ ಪಿಯೂಷ್ ಗೋಯಲ್ ಚಾಲನೆ

ನವದೆಹಲಿ: ಆಹಾರ ಸಚಿವ ಪಿಯೂಷ್ ಗೋಯಲ್ ಇಂದು ರಾಷ್ಟ್ರ ರಾಜಧಾನಿಯ ಕರ್ತವ್ಯ ಪಥದಲ್ಲಿ ‘ಭಾರತ್ ಅಕ್ಕಿ’ಯನ್ನು ಬಿಡುಗಡೆಗೊಳಿಸಲಿದ್ದಾರೆ ಎಂದು ಸಚಿವಾಲಯದ ಅಧಿಕೃತ ಪ್ರಕಟಣೆ ತಿಳಿಸಿದೆ. ಕೇಂದ್ರ ಸರ್ಕಾರದ ‘ಭಾರತ್ ಅಕ್ಕಿ’ ವಾಹನಗಳಿಗೆ ಇಂದು ಚಾಲನೆ ದೊರೆಯಲಿದ್ದು, ಪ್ರತಿ ಕೆಜಿಗೆ 29 ರೂಪಾಯಿ ಬೆಲೆ ನಿಗದಿಪಡಿಸಲಾಗಿದೆ. ದೇಶಾದ್ಯಂತ ಎಲ್ಲ ಚಿಲ್ಲರೆ ಮಾರುಕಟ್ಟೆ ಅಂಗಡಿಗಳಲ್ಲಿ ಅಕ್ಕಿ ದೊರೆಯಲಿದ್ದು, ಆನ್‌ಲೈನ್‌ನಲ್ಲಿಯೂ ಅಕ್ಕಿ ಖರೀದಿ ಮಾಡಬಹುದಾಗಿದೆ. ಭಾರತ್ ಅಕ್ಕಿ ಯೋಜನೆಯಡಿ ಮಾರಾಟ ಮಾಡಲಾಗುತ್ತಿದ್ದು, 5 ಕೆಜಿ ಹಾಗೂ 10 ಕೆಜಿ ಬ್ಯಾಗ್‌ಗಳಲ್ಲಿ ಅಕ್ಕಿ […]

ಮಂಡ್ಯ ಹನುಮ ಧ್ವಜ ತೆರವು ಪ್ರಕರಣ: ಜಿಲ್ಲಾಧಿಕಾರಿ ಸಂಧಾನ ಯಶಸ್ವಿ; ಬಂದ್ ಗೆ ತಾತ್ಕಾಲಿಕ ತಡೆ

ಮಂಡ್ಯ: ಮಂಡ್ಯ ಕೆರೆಗೋಡು ಹನುಮ ಧ್ವಜ ತೆರವು ವಿವಾದ ಸದ್ಯಕ್ಕೆ ತಣ್ಣಗಾಗುವ ಲಕ್ಷಣ ಕಾಣುತ್ತಿದ್ದು, ವಿವಾದ ಸಂಬಂಧ ಜಿಲ್ಲಾಧಿಕಾರಿಗಳು ನಡೆಸಿದ ಸಂಧಾನ ಸಭೆ ಯಶಸ್ವಿಯಾಗಿದೆ. ನಾಳೆ(ಫೆ.7) ನಡೆಯಬೇಕಿದ್ದ ಮಂಡ್ಯ ಬಂದ್ ಅನ್ನು ತಾತ್ಕಾಲಿಕವಾಗಿ ಹಿಂಪಡೆಯಲಾಗಿದೆ. ಕೆರಗೋಡು ಹನುಮ ಧ್ವಜ ತೆರವು ವಿರೋಧಿಸಿ ಫೆ.9ಕ್ಕೆ ಭಜರಂಗದಳ ಬಂದ್ ಗೆ ಕರೆ ಕೊಟ್ಟಿದೆ. ಮತ್ತೊಂದೆಡೆ ಭಜರಂಗದಳ ಬಂದ್ ಕರೆ ವಿರೋಧಿಸಿ ಫೆ.7 ಕ್ಕೆ ಸಮಾನ ಮನಸ್ಕರ ವೇದಿಕೆ ಬಂದ್​ಗೆ ಕರೆ ಕೊಟ್ಟಿತ್ತು. ಸಮಾನ ಮನಸ್ಕರ ವೇದಿಕೆಗೆ ದಲಿತ ಪರ ಸಂಘಟನೆ, […]

ಮಲ್ಪೆ ಮೀನುಗಾರಿಕೆ ಬಂದರಿಗೆ ಸಚಿವ ಮಂಕಾಳ ವೈದ್ಯ ಭೇಟಿ : ಸಿ.ಆರ್.ಝಡ್ ಸಮಸ್ಯೆಯನ್ನು ಬಗೆಹರಿಸಲು ಕ್ರಮ

ಉಡುಪಿ: ನಗರದ ಮಲ್ಪೆ ಮೀನುಗಾರಿಕೆ ಬಂದರಿಗೆ ರಾಜ್ಯ ಮೀನುಗಾರಿಕೆ ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಮಂಕಾಳ ಎಸ್ ವೈದ್ಯ ಸೋಮವಾರ ಭೇಟಿ ನೀಡಿ ಪರೀಶಿಲನೆ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮಲ್ಪೆ ಬಂದರನ್ನು ಅವಲೋಕಿಸಿದಾಗ ಬಂದರಿನಲ್ಲಿ ಬೋಟ್ ನಿಲ್ಲಿಸಲು, ಅವುಗಳನ್ನು ಓಡಿಸಲು ಹಾಗೂ ಅವುಗಳನ್ನು ಎಳೆಯಲು ಸಮಸ್ಯೆ ಇದೆ. ಈ ಸಮಸ್ಯೆಗಳನ್ನು ನಿವಾರಿಸಲು ನೀಲನಕ್ಷೆಯನ್ನು ತಯಾರಿಸಲಾಗುತ್ತಿದ್ದು, ಶೀಘ್ರದಲ್ಲಿಯೇ ಇಲ್ಲಿನ ಸಮಸ್ಯೆಗಳನ್ನು ಬಗೆಹರಿಸಲಾಗುವುದು ಎಂದರು. 2017-18 ನೇ ಸಾಲಿನಲ್ಲಿ ಬಂದರಿನಲ್ಲಿ ವಿವಿಧ ಕಾಮಗಾರಿಗಳನ್ನು ಕೈಗೊಳ್ಳಲು ಹಣ […]