ಜ್ಞಾನವಾಪಿ ಮಂದಿರ ಪರಿಸರದಲ್ಲಿ ಹಿಂದೂ ಪಕ್ಷಕ್ಕೆ ಪೂಜೆ ಸಲ್ಲಿಸಲು ಅವಕಾಶ ನೀಡಿದ ವಾರಣಾಸಿಯ ಜಿಲ್ಲಾ ನ್ಯಾಯಾಲಯ

ವಾರಣಾಸಿ: ವಾರಣಾಸಿಯ ಜಿಲ್ಲಾ ನ್ಯಾಯಾಲಯವು ಬುಧವಾರದಂದು ಹಿಂದೂ ಪಕ್ಷದವರಿಗೆ ಜ್ಞಾನವಾಪಿ ಮಂದಿರದ ದಕ್ಷಿಣ ನೆಲಮಾಳಿಗೆಯಲ್ಲಿ ಪೂಜೆ, ಪ್ರಾರ್ಥನೆ ಸಲ್ಲಿಸಲು ಅನುಮತಿ ನೀಡಿದೆ. ಶ್ರೀ ಕಾಶಿ ವಿಶ್ವನಾಥ ದೇವಸ್ಥಾನ ಟ್ರಸ್ಟ್‌ನಿಂದ ನಾಮನಿರ್ದೇಶನಗೊಂಡ ಪೂಜಾರಿ ಮತ್ತು ಹಿಂದೂ ಕಡೆಯಿಂದ ಪೂಜೆಯನ್ನು ಮಾಡಲು ವ್ಯವಸ್ಥೆ ಮಾಡುವಂತೆ ನ್ಯಾಯಾಲಯ ಸೂಚಿಸಿದೆ. “ಏಳು ದಿನದೊಳಗೆ ಪೂಜೆ ಆರಂಭವಾಗಲಿದೆ. ಪ್ರತಿಯೊಬ್ಬರಿಗೂ ಪೂಜೆ ಮಾಡುವ ಹಕ್ಕಿದೆ” ಎಂದು ಹಿಂದೂ ಪರ ವಕೀಲ ವಿಷ್ಣು ಶಂಕರ್ ಜೈನ್ ಹೇಳಿದ್ದಾರೆ. ಕಾಶಿ ವಿಶ್ವನಾಥ ದೇವಸ್ಥಾನ ಟ್ರಸ್ಟ್‌ ಪೂಜೆಯ ವಿಧಿ ವಿಧಾನಗಳನ್ನು […]

ಸಾಂಪ್ರದಾಯಿಕ ಕುದುರೆಗಾಡಿಯಲ್ಲಿ ಸದನಕ್ಕಾಗಮಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು: ಸದನದಲ್ಲಿ ಸೆಂಗೋಲಿನ ಸಹಿತ ಭವ್ಯ ಸ್ವಾಗತ

ನವದೆಹಲಿ: ಅಯೋಧ್ಯೆಯಲ್ಲಿ ರಾಮಮಂದಿರ (Ram Mandir) ನಿರ್ಮಾಣದ ಶತಮಾನಗಳ ಹಿಂದಿನ ಕನಸು ಈಗ ನನಸಾಗಿದೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಹೇಳಿದ್ದಾರೆ. ಸಂಸತ್ತಿನ ಸದನಕ್ಕೆ ಪಾರಂಪರಿಕ ಕುದುರೆಗಾಡಿಯಲ್ಲಿ ಆಗಮಿಸಿದ ಅವರನ್ನು ಸೆಂಗೋಲು ಮತ್ತು ಪಾರಂಪರಿಕ ವಾದ್ಯಗಳ ಮೂಲಕ ಸದನದೊಳಕ್ಕೆ ಭವ್ಯವಾಗಿ ಸ್ವಾಗತಿಸಲಾಯಿತು. ಅವರ ಆಗಮನವನ್ನು ಉಪರಾಷ್ಟ್ರಪತಿ ಜಗದೀಪ್ ಧನಕರ್, ಪ್ರಧಾನಿ ನರೇಂದ್ರ ಮೋದಿ ಮತ್ತು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಸ್ವಾಗತಿಸಿದರು. ಬಜೆಟ್ ಅಧಿವೇಶನಕ್ಕೂ (Budget 2024) ಮುನ್ನಾದಿನ ಬುಧವಾರ ಸಂಸತ್ತಿನ ಜಂಟಿ ಅಧಿವೇಶನವನ್ನುದ್ದೇಶಿ […]

ಮರವಂತೆಯಲ್ಲಿ ಸಂವಿಧಾನ ಜಾಗೃತಿ ಜಾಥಾಗೆ ಭರ್ಜರಿ ಸ್ವಾಗತ

ಬೈಂದೂರು: ದೇಶದೆಲ್ಲೆಡೆ ಮೇಲು-ಕೀಳು ಜಾತಿ ಪದ್ಧತಿಯನ್ನು ಹೋಗಲಾಡಿಸುವ ಉದ್ದೇಶದಿಂದ ಬಲವಾದ ಸಂವಿಧಾನವನ್ನು ರಚಿಸಲಾಯಿತು. ಸಂವಿಧಾನ ಧ್ಯೇಯದಲ್ಲಿ ನಾವು ಬದುಕುತ್ತಿದ್ದು, ಅದರ ಮಹತ್ವದ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಸಂವಿಧಾನ ಜಾಗೃತಿ ಜಾಥಾ ರಥವು ಜಿಲ್ಲೆಯಾದ್ಯಂತ ಸಂಚರಿಸಲಿದೆ ಎಂದು ಶಾಸಕ ಗುರುರಾಜ್ ಶೆಟ್ಟಿ ಗಂಟಿಹೊಳೆ ಹೇಳಿದರು. ಅವರು ಮಂಗಳವಾರ ಮರವಂತೆಯಲ್ಲಿ ಸಂವಿಧಾನ ಜಾಗೃತಿ ರಥವನ್ನು ಸ್ವಾಗತಿಸಿ ಮಾತನಾಡಿದರು. ಪ್ರಪಂಚದ ಅತೀದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಭಾರತ. ಅನೇಕ ದೇಶಗಳ ಸಂವಿಧಾನವನ್ನು ಅಧ್ಯಯನ ನಡೆಸಿ, ದೇಶಕ್ಕೆ ಹೊಂದುವಂತೆ ಡಾ. ಬಿ.ಆರ್ ಅಂಬೇಡ್ಕರ್ […]

ಮಣಿಪಾಲ: ಗ್ಲೋಬಲ್ ಕ್ಯಾನ್ಸರ್ ಕನ್ಸೋರ್ಟಿಯಂ ಇಂಟರ್ ಡಿಸಿಪ್ಲಿನರಿ ಲ್ಯಾಬೋರೇಟರಿಯ ಉದ್ಘಾಟನೆ

ಮಣಿಪಾಲ್ ಸ್ಕೂಲ್ ಆಫ್ ಲೈಫ್ ಸೈನ್ಸಸ್, ಕಸ್ತೂರ್ಬಾ ಮೆಡಿಕಲ್ ಕಾಲೇಜ್, ಮಣಿಪಾಲ್ ಕಾಲೇಜ್ ಆಫ್ ಫಾರ್ಮಾಸ್ಯುಟಿಕಲ್ ಸೈನ್ಸಸ್ ಮತ್ತು ಗ್ಲೋಬಲ್ ಕ್ಯಾನ್ಸರ್ ಕನ್ಸೋರ್ಟಿಯಂ ಸಹಯೋಗದೊಂದಿಗೆ ಗ್ಲೋಬಲ್ ಕ್ಯಾನ್ಸರ್ ಕನ್ಸೋರ್ಟಿಯಂ ಇಂಟರ್ ಡಿಸಿಪ್ಲಿನರಿ ಲ್ಯಾಬೋರೇಟರಿಯ ಉದ್ಘಾಟನೆ ನಡೆಯಿತು. ಲ್ಯಾಬೋರೇಟರಿಯನ್ನು ಡಾ. ಶರತ್ ಕೆ ರಾವ್ ಮತ್ತು ಡಾ. ವಿವೇಕ್ ಎಂ ರಂಗನೇಕರ್ ಉದ್ಘಾಟಿಸಿದರು. ಗ್ಲೋಬಲ್ ಕ್ಯಾನ್ಸರ್ ಕನ್ಸೋರ್ಟಿಯಮ್‌ನ ಸಹ-ಸಂಸ್ಥಾಪಕ ಮತ್ತು ಫಾರ್ಮಸಿ ಪ್ರಾಕ್ಟೀಸ್ ವಿಭಾಗದ ಪ್ರಾಧ್ಯಾಪಕ ಡಾ.ಮಹಾದೇವ ರಾವ್ ಅವರು ಒಕ್ಕೂಟದ ಪ್ರಯಾಣ ಮತ್ತು ಅದರ ಶೈಕ್ಷಣಿಕ ಮತ್ತು […]

ಕಿದಿಯೂರು ಹೋಟೆಲ್ ಕಾರಣಿಕ ಶ್ರೀ ನಾಗ ಸನ್ನಿಧಿಯಲ್ಲಿ ಸರ್ಪ ಸೂಕ್ತ ಹವನ

ಉಡುಪಿ: ಇಲ್ಲಿನ ಕಿದಿಯೂರು ಹೋಟೆಲ್ ಕಾರಣಿಕ ಶ್ರೀ ನಾಗ ಸನ್ನಿಧಿಯಲ್ಲಿ ತೃತೀಯ ಅಷ್ಟಪವಿತ್ರ ನಾಗಮಂಡಲೋತ್ಸವ ಅಂಗವಾಗಿ ಕಬಿಯಾಡಿ ಜಯರಾಮ ಆಚಾರ್ಯ ನೇತೃತ್ವದಲ್ಲಿ ವಿದ್ವಾನ್ ರಾಘವೇಂದ್ರ ಉಪದ್ಯಾಯ ಬಳಗದವರಿಂದ ನಾಗ ದೇವರಿಗೆ ನೂತನವಾಗಿ ನಿರ್ಮಿಸಿದ ಭವ್ಯ ರಜತ ಮಂಟಪದಲ್ಲಿ ಸರ್ಪ ಸೂಕ್ತ ಹವನ ನಡೆಯಿತು. ಸೋಮವಾರ ಮಹಾ ರುದ್ರಯಾಗ, ಲಕ್ಷ್ಮೀ ನಾರಾಯಣ ಹೃದಯ ಹವನ, ಕಲಶಾಭಿಷೇಕ ಸಹಿತ ಮಹಾ ಪೂಜೆ, ಸುದರ್ಶನ ಹೋಮ, ಶ್ರೀ ಸೂಕ್ತ ಹವನದ ಮಹಾಪೂಜೆಯನ್ನು ಸೇವಾಕರ್ತ ಭುವನೇಂದ್ರ ಕಿದಿಯೂರು, ಹೀರಾ.ಬಿ ಕಿದಿಯೂರು ನೆರವೇರಿಸಿದರು. ಈ […]