ಕಿದಿಯೂರು ಹೋಟೆಲ್ ಕಾರಣಿಕ ಶ್ರೀ ನಾಗ ಸನ್ನಿಧಿಯಲ್ಲಿ ಸರ್ಪ ಸೂಕ್ತ ಹವನ

ಉಡುಪಿ: ಇಲ್ಲಿನ ಕಿದಿಯೂರು ಹೋಟೆಲ್ ಕಾರಣಿಕ ಶ್ರೀ ನಾಗ ಸನ್ನಿಧಿಯಲ್ಲಿ ತೃತೀಯ ಅಷ್ಟಪವಿತ್ರ ನಾಗಮಂಡಲೋತ್ಸವ ಅಂಗವಾಗಿ ಕಬಿಯಾಡಿ ಜಯರಾಮ ಆಚಾರ್ಯ ನೇತೃತ್ವದಲ್ಲಿ ವಿದ್ವಾನ್ ರಾಘವೇಂದ್ರ ಉಪದ್ಯಾಯ ಬಳಗದವರಿಂದ ನಾಗ ದೇವರಿಗೆ ನೂತನವಾಗಿ ನಿರ್ಮಿಸಿದ ಭವ್ಯ ರಜತ ಮಂಟಪದಲ್ಲಿ ಸರ್ಪ ಸೂಕ್ತ ಹವನ ನಡೆಯಿತು.

ಸೋಮವಾರ ಮಹಾ ರುದ್ರಯಾಗ, ಲಕ್ಷ್ಮೀ ನಾರಾಯಣ ಹೃದಯ ಹವನ, ಕಲಶಾಭಿಷೇಕ ಸಹಿತ ಮಹಾ ಪೂಜೆ, ಸುದರ್ಶನ ಹೋಮ, ಶ್ರೀ ಸೂಕ್ತ ಹವನದ ಮಹಾಪೂಜೆಯನ್ನು ಸೇವಾಕರ್ತ ಭುವನೇಂದ್ರ ಕಿದಿಯೂರು, ಹೀರಾ.ಬಿ ಕಿದಿಯೂರು ನೆರವೇರಿಸಿದರು.

ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ಯುವರಾಜ್ ಮಸ್ಕತ್, ನಾಡೋಜ ಡಾ ಜಿ ಶಂಕರ್ , ಭವ್ಯಶ್ರೀ ಕಿದಿಯೂರು , ಪ್ರಿಯಾಂಕಾ ಕಿದಿಯೂರು , ಹರಿಯಪ್ಪ ಕೊಟ್ಯಾನ , ಭವ್ಯಶ್ರೀ ಕಿದಿಯೂರು, ಡಾ. ವಿಜಯೇಂದ್ರ, ಗಣೇಶ ರಾವ್, ಹಿರಿಯಣ್ಣ ಕಿದಿಯೂರು, ಜೀತೇಶ ಬಿ ಕಿದಿಯೂರು, ಬೃಜೇಶ್ ಕಿದಿಯೂರು, ರಮೇಶ ಕಿದಿಯೂರು, ಪ್ರಕಾಶ್ ಸುವರ್ಣ, ಚಂದ್ರೇಶ್ ಪಿತ್ರೋಡಿ ಹಾಗೂ ಸಾವಿರಾರು ಭಕ್ತರು ಉಪಸ್ಥಿತರಿದ್ದರು.