ತೆಕ್ಕಟ್ಟೆಯಲ್ಲಿ ಸಂವಿಧಾನ ಜಾಗೃತಿ ಜಾಥಾಗೆ ಅದ್ದೂರಿ ಸ್ವಾಗತ

ಉಡುಪಿ: ಸಂವಿಧಾನ ದಿನಾಚರಣೆಯ ಅಂಗವಾಗಿ ಸಾರ್ವಜನಿಕರಲ್ಲಿ ಸಂವಿಧಾನ ಕುರಿತು ಜಾಗೃತಿ ಮೂಡಿಸುವ ಸಂವಿಧಾನ ಜಾಗೃತಿ ಜಾಥಾವು ಸೋಮವಾರ ತೆಕ್ಕಟ್ಟೆಗೆ ಆಗಮಿಸಿದ್ದು, ತೆಕ್ಕಟ್ಟೆ ಗ್ರಾಮ ಪಂಚಾಯತ್ ವತಿಯಿಂದ ಅದ್ಧೂರಿಯಾಗಿ ಸ್ವಾಗತಿಸಲಾಯಿತು. ಸಂವಿಧಾನ ಜಾಗೃತಿ ಜಾಥಾಕ್ಕೆ ಶಾಸಕ ಕಿರಣ್ ಕುಮಾರ್ ಕೊಡ್ಗಿ ಚಾಲನೆ ನೀಡಿ, ಅಂಬೇಡ್ಕರ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಮಾತನಾಡಿ, ನಮ್ಮ ದೇಶವೂ ಸಂವಿಧಾನದ ಆಶಯದ ಮೇಲೆ ನಡೆಯುತ್ತಿದೆ ಸಂವಿಧಾನದ ಮಹತ್ವ ಮತ್ತು ಮೌಲ್ಯವನ್ನು ಪ್ರತಿಯೊಬ್ಬರು ಅರಿವನ್ನು ಹೊಂದಬೇಕು ಸಂವಿಧಾನದ ಚೌಕಟ್ಟಿನಲ್ಲಿ ಎಲ್ಲರೂ ಸಮಾನರು ಈ ಜಾಥಾ ಕಾರ್ಯಕ್ರಮಕ್ಕೆ […]

ಬ್ರಹ್ಮಾವರ: ವೀರಗಾಥಾ 3.0 ಸ್ಪರ್ಧೆಯಲ್ಲಿ ಬಹುಮಾನ ಪಡೆದ ಲಿಟಲ್ ರಾಕ್ ಶಾಲೆಯ ವಿದ್ಯಾರ್ಥಿನಿ ಧೃತಿ. ಎಸ್

ಬ್ರಹ್ಮಾವರ: ಭಾರತೀಯ ರಕ್ಷಣಾ ಇಲಾಖೆ ಹಾಗೂ ಭಾರತೀಯ ಶಿಕ್ಷಣ ಇಲಾಖೆಗಳ ಜಂಟಿ ಸಹಯೋಗದಲ್ಲಿ ‘ಗ್ಯಾಲಂಟ್ರಿ ಅವಾರ್ಡ್ಸ್ ಪೋರ್ಟಲ್ ಆಫ್ ಇಂಡಿಯಾ’ ಅಡಿಯಲ್ಲಿ ಆಯೋಜಿಸಲ್ಪಟ್ಟ “ವೀರಗಾಥಾ 3.0 ಸ್ಪರ್ಧೆ” ಯಲ್ಲಿ ದೇಶದ ಟಾಪ್ 100 ವಿದ್ಯಾರ್ಥಿಗಳಲ್ಲಿ ಲಿಟಲ್ ರಾಕ್ ಇಂಡಿಯನ್ ಸ್ಕೂಲ್ ನ ವಿದ್ಯಾರ್ಥಿನಿ ಧೃತಿ. ಎಸ್ 8 ನೇ ತರಗತಿ ವಿಭಾಗದಲ್ಲಿ ಆಯ್ಕೆಯಾಗಿದ್ದಾಳೆ. ಈ ಸ್ಪರ್ಧೆಯಲ್ಲಿ ದೇಶದ 2.43 ಲಕ್ಷ ಶಾಲೆಗಳಿಂದ 1.37 ಕೋಟಿ ವಿದ್ಯಾರ್ಥಿಗಳು 4 ವರ್ಗಗಳಲ್ಲಿವಿವಿಧ ವಿಷಯಗಳಲ್ಲಿ ಭಾಗವಹಿಸಿದ್ದು, ಚಿತ್ರಕಲಾ ಕ್ಷೇತ್ರದಲ್ಲಿ ಧೃತಿ ಸಲ್ಲಿಸಿದ್ದ […]

ಶ್ರೀರಾಮ ಭಜನಾ ಮಂಡಳಿ ಭಜನೆಕಟ್ಟೆ ಕೊಂಡಾಡಿ ಸುವರ್ಣ ಮಹೋತ್ಸ ನಿಮಿತ್ತ ನೆನೆದವರ ಮನೆಯಲ್ಲಿ ಭಜನೆ ಕಾರ್ಯಕ್ರಮ

ಹಿರಿಯಡ್ಕ: ಶ್ರೀರಾಮ ಭಜನಾ ಮಂಡಳಿ ಭಜನೆಕಟ್ಟೆ ಕೊಂಡಾಡಿಯ ಸುವರ್ಣ ಮಹೋತ್ಸವದ ಅಂಗವಾಗಿ ‘ನೆನೆದವರ ಮನೆಯಲ್ಲಿ ಭಜನೆ’ ಎನ್ನುವ ಕಾರ್ಯಕ್ರಮ ಹಮ್ಮಿಕೊಂಡಿದೆ. ಕೇಮಾರು ಮಠದ ಈಶ ವಿಠ್ಠಲದಾಸ ಸ್ವಾಮೀಜಿಯವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದು ಯಶಸ್ವಿ ಕಾರ್ಯಕ್ರಮವು ಮನೆಮಾತಾಗಿದೆ. ಮದರಂಗಿ, ಹುಟ್ಟುಹಬ್ಬ, ಮದುವೆಯ ವಾರ್ಷಿಕೋತ್ಸವ ಹಾಗೂ ಹಬ್ಬ ಹರಿದಿನಗಳಲ್ಲಿಯೂ ಭಜನೆ ನಡೆಸಿದ್ದು 60ನೇ ದಿನದ ಭಜನೆಯು ಆನಂದ ಶೆಟ್ಟಿ ಕೊಂಡಾಡಿ ಇವರ ಮನೆಯಲ್ಲಿ ನಡೆಯಿತು. ಭಜನೆ ನಡೆದ ಪ್ರತಿ ಮನೆಯವರಿಗೆ ಪುರಂದರದಾಸರ ಒಂದು ಭಜನೆ ಪುಸ್ತಕವನ್ನು ನೀಡಿ ಶ್ರೀ ರಾಮ […]

ಆಹಾರ-ಬೆಳೆ ಒಣಗಿಸಲು ಭಾರತದ ಅತ್ಯುತ್ತಮ ಗುಣಮಟ್ಟದ ನವೀನ ಮತ್ತು ಪರಿಸರ ಸ್ನೇಹಿ ಪರಿಹಾರ: ‘ಮಣಿಪಾಲ್ ಗ್ರೀನ್ ಟೆಕ್ ಸೊಲ್ಯೂಶನ್ಸ್’

ಕೃಷಿ ಮತ್ತು ಆಹಾರ ಸಂಸ್ಕರಣಾ ಉದ್ಯಮಗಳಿಗೆ ನವೀನ ಮತ್ತು ಪರಿಸರ ಸ್ನೇಹಿ ಪರಿಹಾರಗಳ ಪ್ರಮುಖ ಪೂರೈಕೆದಾರರಾದ ಮಣಿಪಾಲ್ ಗ್ರೀನ್ ಟೆಕ್ (MGT) ಕೈಗಾರಿಕಾ ಪ್ರಮಾಣದಲ್ಲಿ ಆಹಾರವನ್ನು ಒಣಗಿಸುವ(ಡ್ರೈ) ಮತ್ತು ನಿರ್ಜಲೀಕರಣಗೊಳಿಸುವ(ಡಿಹೈಡ್ರೇಟ್) ವಿಧಾನಗಳನ್ನು ನೀಡುತ್ತದೆ. MGT ಡಿಹೈಡ್ರೇಟರ್ ಅಡಿಕೆ, ತೆಂಗು, ಕೋಕೋ, ಮೀನು ಮತ್ತು ಧಾನ್ಯಗಳು ಸೇರಿದಂತೆ ಯಾವುದೇ ಬೆಳೆಯನ್ನು ಒಣಗಿಸುವ ಸಾಮರ್ಥ್ಯವನ್ನು ಹೊಂದಿದೆ. ಪ್ರತಿ ಬೆಳೆಗೆ ಮೊದಲೇ ಸೆಟ್ ಮಾಡಲಾದ ತಾಪನ ಆಯ್ಕೆಗಳೊಂದಿಗೆ ಬೆಳೆಗಳನ್ನು ಪ್ರತಿ ಬಾರಿಯೂ ಪರಿಪೂರ್ಣವಾಗಿ ಒಣಗಿಸುವ ಖಚಿತತೆ ಬಗ್ಗೆ ನಿಶ್ಚಿಂತೆಯಾಗಿರಬಹುದು. MGT ಡಿಹೈಡ್ರೇಟರ್ […]

ವಿಶ್ವದ ಮೊದಲ ರೋಗಿಯಲ್ಲಿ ನ್ಯೂರಾಲಿಂಕ್ ಬ್ರೈನ್-ಚಿಪ್ ಅಳವಡಿಕೆ ಯಶಸ್ವಿ: ಪಾರ್ಶ್ವವಾಯು, ನರವೈಜ್ಞಾನಿಕ ಕಾಯಿಲೆಯ ರೋಗಿಗಳಿಗೆ ವರದಾನ

ನ್ಯೂಯಾರ್ಕ್: ಮೊದಲ ಮಾನವ ರೋಗಿಯು ಭಾನುವಾರ ಬ್ರೈನ್-ಚಿಪ್ ಸ್ಟಾರ್ಟ್ಅಪ್ ನ್ಯೂರಾಲಿಂಕ್‌ನಿಂದ ( Neuralink) ಇಂಪ್ಲಾಂಟ್ ಅನ್ನು ಸ್ವೀಕರಿಸಿದ್ದಾರೆ ಮತ್ತು ಚೆನ್ನಾಗಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಕಂಪನಿಯ ಸಂಸ್ಥಾಪಕ ಎಲೋನ್ ಮಸ್ಕ್ (Elon Musk) ಹೇಳಿದ್ದಾರೆ. ಆರಂಭಿಕ ಫಲಿತಾಂಶಗಳು ಭರವಸೆಯ ನ್ಯೂರಾನ್ ಸ್ಪೈಕ್ ಪತ್ತೆಯನ್ನು ತೋರಿಸುತ್ತವೆ” ಎಂದು ಮಸ್ಕ್ ಸೋಮವಾರ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಸ್ಪೈಕ್‌ಗಳು ನ್ಯೂರಾನ್‌ಗಳ ಚಟುವಟಿಕೆಯಾಗಿದೆ, ಮೆದುಳಿನ ಸುತ್ತ ಮತ್ತು ದೇಹಕ್ಕೆ ಮಾಹಿತಿಯನ್ನು ಕಳುಹಿಸಲು ವಿದ್ಯುತ್ ಮತ್ತು ರಾಸಾಯನಿಕ ಸಂಕೇತಗಳನ್ನು ಬಳಸುವ ಜೀವಕೋಶಗಳು […]