ಆಹಾರ-ಬೆಳೆ ಒಣಗಿಸಲು ಭಾರತದ ಅತ್ಯುತ್ತಮ ಗುಣಮಟ್ಟದ ನವೀನ ಮತ್ತು ಪರಿಸರ ಸ್ನೇಹಿ ಪರಿಹಾರ: ‘ಮಣಿಪಾಲ್ ಗ್ರೀನ್ ಟೆಕ್ ಸೊಲ್ಯೂಶನ್ಸ್’

ಕೃಷಿ ಮತ್ತು ಆಹಾರ ಸಂಸ್ಕರಣಾ ಉದ್ಯಮಗಳಿಗೆ ನವೀನ ಮತ್ತು ಪರಿಸರ ಸ್ನೇಹಿ ಪರಿಹಾರಗಳ ಪ್ರಮುಖ ಪೂರೈಕೆದಾರರಾದ ಮಣಿಪಾಲ್ ಗ್ರೀನ್ ಟೆಕ್ (MGT) ಕೈಗಾರಿಕಾ ಪ್ರಮಾಣದಲ್ಲಿ ಆಹಾರವನ್ನು ಒಣಗಿಸುವ(ಡ್ರೈ) ಮತ್ತು ನಿರ್ಜಲೀಕರಣಗೊಳಿಸುವ(ಡಿಹೈಡ್ರೇಟ್) ವಿಧಾನಗಳನ್ನು ನೀಡುತ್ತದೆ.

MGT ಡಿಹೈಡ್ರೇಟರ್ ಅಡಿಕೆ, ತೆಂಗು, ಕೋಕೋ, ಮೀನು ಮತ್ತು ಧಾನ್ಯಗಳು ಸೇರಿದಂತೆ ಯಾವುದೇ ಬೆಳೆಯನ್ನು ಒಣಗಿಸುವ ಸಾಮರ್ಥ್ಯವನ್ನು ಹೊಂದಿದೆ. ಪ್ರತಿ ಬೆಳೆಗೆ ಮೊದಲೇ ಸೆಟ್ ಮಾಡಲಾದ ತಾಪನ ಆಯ್ಕೆಗಳೊಂದಿಗೆ ಬೆಳೆಗಳನ್ನು ಪ್ರತಿ ಬಾರಿಯೂ ಪರಿಪೂರ್ಣವಾಗಿ ಒಣಗಿಸುವ ಖಚಿತತೆ ಬಗ್ಗೆ ನಿಶ್ಚಿಂತೆಯಾಗಿರಬಹುದು.

MGT ಡಿಹೈಡ್ರೇಟರ್ ಬೆಳೆಗಳಿಂದ ತೇವಾಂಶವನ್ನು ಹೊರತೆಗೆಯಲು ಹೀಟ್ ಪಂಪ್ ವ್ಯವಸ್ಥೆಯನ್ನು ಬಳಸುತ್ತದೆ, ಇದು ಹೆಚ್ಚು ಇಂಧನ ದಕ್ಷತೆ ಮತ್ತು ಪರಿಸರ ಸ್ನೇಹಿ ಒಣಗಿಸುವ ಪ್ರಕ್ರಿಯೆಗೆ ಕಾರಣವಾಗುತ್ತದೆ. ಮಾತ್ರವಲ್ಲದೆ, ಇನ್ನಿತರ ಒಣಗಿಸುವ ಯಂತ್ರಗಳಲ್ಲಿ ಬೆಳೆಗಳಲ್ಲಿರುವ ಪೋಷಕಾಂಶಗಳು ನಷ್ಟವಾಗುವ ಸಾಧ್ಯತೆಗಳಿರುತ್ತವೆ. ಆದರೆ MGT ಡಿಹೈಡ್ರೇಟರ್ ನಲ್ಲಿ ಬೆಳೆಗಳಲ್ಲಿರುವ ಪೋಷಕಾಂಶಗಳು ನಷ್ಟವಾಗುವ ಯಾವುದೇ ಭಯವಿಲ್ಲ.

MGT ಡಿಹೈಡ್ರೇಟರ್ ಗಳು ಸೌರ ಫಲಕಗಳು ಅಥವಾ ಗಾಳಿ ಗಿರಣಿಗಳಂತಹ ನವೀಕರಿಸಬಹುದಾದ ಇಂಧನ ಮೂಲಗಳಿಂದಲೂ ಕಾರ್ಯಾಚರಣೆ ಮಾಡಬಲ್ಲವು. ಇದು ಪರಿಸರದಲ್ಲಿ ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಪರಿಸರ ಸ್ನೇಹಿ ಹೀಟ್ ಪಂಪ್ ಡಿಹೈಡ್ರೇಟರ್ 100kg, 500kg, 1000kg, 2500kg ಮತ್ತು 5000kg ವೇರಿಯೆಂಟ್ ಗಳಲ್ಲಿ ಲಭ್ಯವಿದೆ.

ವೇರಿಯೆಂಟ್ ಗಳು:
ಎವರೆಸ್ಟ್ : 5 ಟನ್ ಸಾಮರ್ಥ್ಯ, ಐಕಾನ್ ಸೀರಿಸ್: 1 ಟನ್ ಸಾಮರ್ಥ್ಯ, 2 ಟನ್, 2.5 ಟನ್ ಸಾಮರ್ಥ್ಯ, ಸೆಂಚುರು ಸೀರಿಸ್: 100 ಕೆಜಿ ಸಾಮರ್ಥ್ಯ, 500 ಕೆಜಿ ಸಾಮರ್ಥ್ಯ

ನಾವೀನ್ಯತೆ, ದಕ್ಷತೆ ಮತ್ತು ಸುಸ್ಥಿರತೆಯ ಮೇಲೆ ಕೇಂದ್ರೀಕರಿಸಿದ MGT ಯಂತ್ರಗಳು ಗ್ರಾಹಕರಿಗೆ ಉತ್ತಮ ಪರಿಹಾರಗಳನ್ನು ಒದಗಿಸಲು ಬದ್ಧವಾಗಿದೆ. ನೀವು ರೈತರಾಗಿರಲಿ, ಆಹಾರ ಸಂಸ್ಕಾರಕರಾಗಿರಲಿ ಅಥವಾ ಕೈಗಾರಿಕಾ ತಯಾರಕರಾಗಿರಲಿ, ನಿಮ್ಮ ಅಗತ್ಯಗಳನ್ನು ಪೂರೈಸಲು ನಿಮ್ಮ ನಿರೀಕ್ಷೆಗಳನ್ನು ಮೀರುವ ಪರಿಣತಿ ಮತ್ತು ತಂತ್ರಜ್ಞಾನವನ್ನು MGT ಹೊಂದಿದೆ. ವಿಶ್ವಾಸಾರ್ಹ, ತ್ವರಿತ ಸೇವೆ, ಸ್ಪರ್ಧಾತ್ಮಕ ಬೆಲೆ ಮತ್ತು ಉತ್ತಮ ಗುಣಮಟ್ಟದ ಉತ್ಪನ್ನಗಳು MGT ಯ ವಾಗ್ದಾನವಾಗಿದೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : 30 A3 ಶಿವಳ್ಳಿ ಕೈಗಾರಿಕಾ ಪ್ರದೇಶ, ಮಣಿಪಾಲ, ಉಡುಪಿ – 576104

ದೂರವಾಣಿ: 91 80730 80178

ಇ-ಮೇಲ್- hellomanipalgreentech@gmail.com

ವೆಬ್ ಸೈಟ್: www.manipalgreentech.in