ರೋಹನ್ ಕಾರ್ಪೊರೇಷನ್ ವತಿಯಿಂದ ರೋಹನ್ ಕ್ರಿಯೇಟರ್ಸ್ ಮೀಟ್ 2024 ಯಶಸ್ವಿ ಆಯೋಜನೆ

ಮಂಗಳೂರು: ರೋಹನ್ ಕಾರ್ಪೊರೇಷನ್ ವತಿಯಿಂದ ಜ.20 ರಂದು ಮಂಗಳೂರಿನ ಸೃಜನಾತ್ಮಕ ಕಂಟೆಂಟ್ ಕ್ರಿಯೇಟರ್ ಗಳಿಗಾಗಿ ರೋಹನ್ ಕ್ರಿಯೇಟರ್ಸ್ ಮೀಟ್ 2024 ಅನ್ನು ಆಯೋಜಿಸಿತ್ತು. ಜಿಲ್ಲೆಯ ಎಲ್ಲಾ ಕಂಟೆಂಟ್ ಕ್ರಿಯೇಟರ್ ಗಳನ್ನು ಒಂದೇ ಸೂರಿನಡಿ ತರುವ ಮತ್ತು ಅವರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ನಗರದ ಎಜೆ ಗ್ರ್ಯಾಂಡ್ ಹೋಟೆಲ್‌ನಲ್ಲಿ 50 ಕ್ಕೂ ಹೆಚ್ಚು ಉತ್ಸಾಹದಿಂದ ಕೂಡಿದ ಕಂಟೆಂಟ್ಕ್ರಿಯೇಟರ್ಗಳು, ಬ್ಲಾಗರ್‌ಗಳು, ಛಾಯಾಗ್ರಾಹಕರು, ವಿಡಿಯೋಗ್ರಾಹಕರು, ಸಂಗೀತಕಾರರು ಮತ್ತು ಇತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಶರಣ್ ಚಿಲಿಂಬಿ, ಪ್ರಜ್ವಲ್ ಶೆಟ್ಟಿ, ಮೋಕ್ಷಿತ್ […]

ಗಾಂಧಿ ಆಸ್ಪತ್ರೆ ಆಡಳಿತ ನಿರ್ದೇಶಕ ಡಾ. ಹರಿಶ್ಚಂದ್ರ ಎಮ್ ಇವರಿಗೆ ಪರ್ಯಾಯ ದರ್ಬಾರ್ ಗೌರವ

ಉಡುಪಿ: ವೈದ್ಯಕೀಯ ಸೇವೆ ಜೊತೆಗೆ ಆಧ್ಯಾತ್ಮಿಕ ಕಾರ್ಯದಲ್ಲೂ ತನ್ನನ್ನು ತೊಡಗಿಸಿಕೊಂಡಿರುವ ಉಡುಪಿಯ ಪ್ರತಿಷ್ಠಿತ ಗಾಂಧಿ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ. ಹರಿಶ್ಚಂದ್ರ ಎಮ್ ಇವರನ್ನು ಪರ್ಯಾಯ ಪುತ್ತಿಗೆ ಸುಗುಣೇಂದ್ರ ತೀರ್ಥ ಶ್ರೀಪಾದರು ರಾಜಾಂಗಣದಲ್ಲಿ‌ ನಡೆದ ಸಂಧ್ಯಾ ದರ್ಬಾರ್ ‌ನಲ್ಲಿ ಗೌರವಪೂರ್ವಕವಾಗಿ ಅಭಿನಂದಿಸಿದರು. ಈ ಸಂದರ್ಭದಲ್ಲಿ ಪುತ್ತಿಗೆ ಕಿರಿಯ ಸ್ವಾಮೀಜಿ ಸುಶ್ರೀಂದ್ರ ತೀರ್ಥ ಶ್ರೀಪಾದರು, ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಮತ್ತಿತರರು ಉಪಸ್ಥಿತಿತರಿದ್ದರು.

ಪರ್ಯಾಯಕ್ಕೆ ಆಗಮಿಸಿದ ಜಪಾನ್ ನಿಯೋಗದಿಂದ ಕೆಮುಂಡೇಲು ಅನುದಾನಿತ ಶಾಲೆಗೆ ಭೇಟಿ

ಉಡುಪಿ: ಪುತ್ತಿಗೆ ಮಠದ ವಿಶ್ವ ಗೀತಾ ಪರ್ಯಾಯಕ್ಕೆ ವಿಶೇಷ ಅತಿಥಿಗಳಾಗಿ ಆಗಮಿಸಿರುವ ಜಪಾನ್ ದೇಶದ ರೆವ್ ಕೋಶೋ ನಿವಾನೋ ಮತ್ತು ಅವರ 7 ಸದಸ್ಯರ ನಿಯೋಗವು ಉಡುಪಿ ಜಿಲ್ಲೆಯ ಎಲ್ಲೂರು ಸಮೀಪದ ಕೆಮುಂಡೇಲು ಅನುದಾನಿತ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ, ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟ ಬಡಿಸಿದರು. ಜಪಾನಿನ ರಿಷ್ಯೋ ಕೊಸೈ ಕಾಯ್ ಸಂಸ್ಥೆಯ ನಿಯೋಜಿತ ಮಹಾ ಅಧ್ಯಕ್ಷೆ ರೆವ್ ಕೋಶೋ ನಿವಾನೋ ಅವರು ಸೇವೆಯೇ ಪರಮ ಧರ್ಮ ಎಂಬ ತತ್ವವನ್ನು ನಂಬಿದವರು. ಶಾಲೆಯ ಮಕ್ಕಳನ್ನು ಉದ್ದೇಶಿಸಿ ಮಾತನಾಡಿದ […]

ಅನಂತೇಶ್ವರ ದೇವಸ್ಥಾನದಲ್ಲಿ ಮಧ್ವವಿಜಯ ಮಂಗಳ ಮಹೋತ್ಸವ ಕಾರ್ಯಕ್ರಮ

ಉಡುಪಿ: ಮಧ್ವಾಚಾರ್ಯರು ಅದೃಶ್ಯರಾಗಿರುವ ಅನಂತೇಶ್ವರ ದೇವಸ್ಥಾನದಲ್ಲಿ ಸೌರ ಮಧ್ವನವಮಿ ಪ್ರಯುಕ್ತ ಮಧ್ವವಿಜಯದ ಮಂಗಳ ಮಹೋತ್ಸವ ನಡೆಯಿತು. ವಿದ್ವಾನ್ ಪ್ರಸನ್ನಾಚಾರ್ಯರು ಕಳೆದ ಮೂರು ವರ್ಷಗಳಿಂದ ಆನ್ಲೈನ್ ಮೂಲಕ ವಿಶ್ವಾದ್ಯಂತ ಜನರಿಗೆ ಮಧ್ವ ವಿಜಯ ಪಾಠ ಮಾಡಿದ್ದು ಅದರ ಮಂಗಳ ಮಹೋತ್ಸವ ಅನಂತೇಶ್ವರದಲ್ಲಿ ನಡೆಯಿತು. ಸಂಜೆ ರಾಜಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಆಸ್ಟ್ರೇಲಿಯಾದ ಪ್ರತಿನಿಧಿಗಳಾಗಿ ಆಗಮಿಸಿದ ವಿದ್ಯಾರ್ಥಿಗಳು ಮಧ್ವವಿಜಯದ ಆಚಾರ್ಯರ ಚರಿತ್ರೆಯನ್ನು ಸಂಕ್ಷಿಪ್ತವಾಗಿ ಅನುವಾದ ಮಾಡಿದರು. ಪರ್ಯಾಯ ಪುತ್ತಿಗೆ ಸ್ವಾಮೀಜಿಗಳು ಎಲ್ಲರಿಗೂ ಆಶೀರ್ವಾದ ನೀಡಿ, ಆನ್ಲೈನ್ ಮೂಲಕ ಮಠದಿಂದ ಜ್ಞಾನಪ್ರಸಾರ ನಿರಂತರವಾಗಿ […]

ಬಿಜೆಪಿ ಯುವ ಮೋರ್ಚಾ ಕಾಪು ಮಂಡಲ ವತಿಯಿಂದ ‘2024 ಮೋದಿ ಮತ್ತೊಮ್ಮೆ’ ಗೋಡೆ ಬರಹ ಬರೆದ ಗುರ್ಮೆ ಸುರೇಶ್ ಶೆಟ್ಟಿ

ಕಾಪು: ಭಾರತೀಯ ಜನತಾ ಪಾರ್ಟಿ ಯುವ ಮೋರ್ಚಾ ಕಾಪು ಮಂಡಲ ವತಿಯಿಂದ ಶನಿವಾರದಂದು ಕಾಪು ಮಂಡಲ ಬಿಜೆಪಿ ಕಚೇರಿ ಬಳಿ ಆಯೋಜಿಸಲಾದ “2024 ಮೋದಿ ಮತ್ತೊಮ್ಮೆ” ಗೋಡೆ ಬರಹಕ್ಕೆ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಚಾಲನೆ ನೀಡಿದರು. ಬಳಿಕ ಮಾತನಾಡಿ ಜಗತ್ತು ಕಂಡ ಶ್ರೇಷ್ಠ ನಾಯಕ ನರೇಂದ್ರ ಮೋದಿ. ಭಾರತವನ್ನು ವಿಶ್ವಗುರುವನ್ನಾಗಿಸಲು ಹೊರಟ ನಾಯಕನನ್ನು ಮತ್ತೊಮ್ಮೆ ಪ್ರಧಾನಿಯಾಗಿ ನೋಡಲು ಇಡೀ ವಿಶ್ವವೇ ಕಾಯುತ್ತಿದೆ ಎಂದರು. ಕಾಪು ಮಂಡಲ ಬಿಜೆಪಿ ಅಧ್ಯಕ್ಷ ಶ್ರೀಕಾಂತ್ ನಾಯಕ್, ಕಾಪು ಮಂಡಲ ಯುವಮೋರ್ಚಾ […]