ರೋಹನ್ ಕಾರ್ಪೊರೇಷನ್ ವತಿಯಿಂದ ರೋಹನ್ ಕ್ರಿಯೇಟರ್ಸ್ ಮೀಟ್ 2024 ಯಶಸ್ವಿ ಆಯೋಜನೆ

ಮಂಗಳೂರು: ರೋಹನ್ ಕಾರ್ಪೊರೇಷನ್ ವತಿಯಿಂದ ಜ.20 ರಂದು ಮಂಗಳೂರಿನ ಸೃಜನಾತ್ಮಕ ಕಂಟೆಂಟ್ ಕ್ರಿಯೇಟರ್ ಗಳಿಗಾಗಿ ರೋಹನ್ ಕ್ರಿಯೇಟರ್ಸ್ ಮೀಟ್ 2024 ಅನ್ನು ಆಯೋಜಿಸಿತ್ತು.

ಜಿಲ್ಲೆಯ ಎಲ್ಲಾ ಕಂಟೆಂಟ್ ಕ್ರಿಯೇಟರ್ ಗಳನ್ನು ಒಂದೇ ಸೂರಿನಡಿ ತರುವ ಮತ್ತು ಅವರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ನಗರದ ಎಜೆ ಗ್ರ್ಯಾಂಡ್ ಹೋಟೆಲ್‌ನಲ್ಲಿ 50 ಕ್ಕೂ ಹೆಚ್ಚು ಉತ್ಸಾಹದಿಂದ ಕೂಡಿದ ಕಂಟೆಂಟ್
ಕ್ರಿಯೇಟರ್ಗಳು, ಬ್ಲಾಗರ್‌ಗಳು, ಛಾಯಾಗ್ರಾಹಕರು, ವಿಡಿಯೋಗ್ರಾಹಕರು, ಸಂಗೀತಕಾರರು ಮತ್ತು ಇತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಶರಣ್ ಚಿಲಿಂಬಿ, ಪ್ರಜ್ವಲ್ ಶೆಟ್ಟಿ, ಮೋಕ್ಷಿತ್ ಪೂಜಾರಿ, ಸಾಹಿಲ್ ರೈ, ಹೇರಾ ಪಿಂಟೊ, ಮಂಗಳೂರು ಮೇರಿ ಜಾನ್, ಸೌಜನ್ಯಾ ಹೆಗ್ಡೆ ಮತ್ತು ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯರಾಗಿರುವ ಪ್ರಮುಖ ವ್ಯಕ್ತಿಗಳ ಭಾಗವಹಿಸುವಿಕೆಯು ಈ ಕಾರ್ಯಕ್ರಮಕ್ಕೆ ಹೆಚ್ಚಿನ ಮೌಲ್ಯವನ್ನು ನೀಡಿತು.

ಇಂದಿನ ಕ್ರಿಯೇಟಿವ್ ಕಂಟೆಂಟ್ ತಯಾರಕರು ಧಾರಣೆಗಳನ್ನು ರೂಪಿಸುವ ಮತ್ತು ಮಂಗಳೂರನ್ನು ಒಂದು ಯಶಸ್ವಿ ಬ್ರ್ಯಾಂಡ್ ಎಂದು ಉತ್ತೇಜಿಸುವಲ್ಲಿ ಗಮನಾರ್ಹವಾದ ಕೊಡುಗೆ ನೀಡುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಮಂಗಳೂರಿನ ದೃಷ್ಟಿಕೋನದೊಂದಿಗೆ ಹೊಂದಿಕೊಳ್ಳುವ ಯಾವುದೇ ಭರವಸೆಯ ಕಲ್ಪನೆಗಳಿಗೆ ರೋಹನ್ ಕಾರ್ಪೊರೇಷನ್ ಸಹಕರಿಸಲು ಮತ್ತು ಬೆಂಬಲಿಸಲು
ಉತ್ಸುಕವಾಗಿದೆ ಎಂದು ಕಾರ್ಯಕ್ರಮದ ಸಂಯೋಜಕ ರೋಹನ್ ಕಾರ್ಪೋರೇಷನ್‌ನ ವ್ಯವಸ್ಥಾಪಕ ನಿರ್ದೇಶಕ ರೋಹನ್ ಮೊಂತೇರೊ ಹೇಳಿದರು.

ಚರ್ಚೆಗಳು, ಆಕರ್ಷಕ ಚಟುವಟಿಕೆಗಳು ಮತ್ತು ಮೌಲ್ಯಯುತ ನೆಟ್‌ವರ್ಕಿಂಗ್ ಅವಕಾಶಗಳ ಈ ಕಾರ್ಯಕ್ರಮವು ಕ್ರಿಯೇಟರ್ ಮತ್ತು ಭಾಗವಹಿಸುವವರ ಮೆಚ್ಚುಗೆಯನ್ನು ಪಡೆಯಿತು. ರೋಹನ್ ಕ್ರಿಯೇಟರ್ಸ್ ಮೀಟ್ 2024, ಸಾಮಾಜಿಕ ಮಾಧ್ಯಮ ಪ್ರಭಾವಿಗಳು ಮತ್ತು ಕಾರ್ಪೊರೇಟ್ ಘಟಕಗಳ ನಡುವಿನ ಸಹಕಾರಕ್ಕೆ ಅವಕಾಶವನ್ನು ಒದಗಿಸಿತು ಹಾಗೂ ಮಂಗಳೂರನ್ನು ವಿಶಿಷ್ಟವಾದ ಬ್ರ‍್ಯಾಂಡ್ ಎಂದು ಉತ್ತೇಜಿಸುವ ಸೃಜನಶೀಲ ವಾತಾವರಣವನ್ನು ಬೆಳೆಸಿತು.