ಅನಂತೇಶ್ವರ ದೇವಸ್ಥಾನದಲ್ಲಿ ಮಧ್ವವಿಜಯ ಮಂಗಳ ಮಹೋತ್ಸವ ಕಾರ್ಯಕ್ರಮ

ಉಡುಪಿ: ಮಧ್ವಾಚಾರ್ಯರು ಅದೃಶ್ಯರಾಗಿರುವ ಅನಂತೇಶ್ವರ ದೇವಸ್ಥಾನದಲ್ಲಿ ಸೌರ ಮಧ್ವನವಮಿ ಪ್ರಯುಕ್ತ ಮಧ್ವವಿಜಯದ ಮಂಗಳ ಮಹೋತ್ಸವ ನಡೆಯಿತು.

ವಿದ್ವಾನ್ ಪ್ರಸನ್ನಾಚಾರ್ಯರು ಕಳೆದ ಮೂರು ವರ್ಷಗಳಿಂದ ಆನ್ಲೈನ್ ಮೂಲಕ ವಿಶ್ವಾದ್ಯಂತ ಜನರಿಗೆ ಮಧ್ವ ವಿಜಯ ಪಾಠ ಮಾಡಿದ್ದು ಅದರ ಮಂಗಳ ಮಹೋತ್ಸವ ಅನಂತೇಶ್ವರದಲ್ಲಿ ನಡೆಯಿತು. ಸಂಜೆ ರಾಜಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಆಸ್ಟ್ರೇಲಿಯಾದ ಪ್ರತಿನಿಧಿಗಳಾಗಿ ಆಗಮಿಸಿದ ವಿದ್ಯಾರ್ಥಿಗಳು ಮಧ್ವವಿಜಯದ ಆಚಾರ್ಯರ ಚರಿತ್ರೆಯನ್ನು ಸಂಕ್ಷಿಪ್ತವಾಗಿ ಅನುವಾದ ಮಾಡಿದರು.

ಪರ್ಯಾಯ ಪುತ್ತಿಗೆ ಸ್ವಾಮೀಜಿಗಳು ಎಲ್ಲರಿಗೂ ಆಶೀರ್ವಾದ ನೀಡಿ, ಆನ್ಲೈನ್ ಮೂಲಕ ಮಠದಿಂದ ಜ್ಞಾನಪ್ರಸಾರ ನಿರಂತರವಾಗಿ ನಡೆಯುದಕ್ಕೆ ವ್ಯವಸ್ಥೆಯನ್ನು ಮಾಡಲಾಗಿದ್ದು ವಿಶ್ವದಾದ್ಯಂತ ಜ್ಞಾನ ಪ್ರಸಾರ ನಡೆಯುತ್ತಿದೆ ಎಂದರು. ಪ್ರಸನ್ನಚಾರ್ಯರಿಗೆ ಶಾಲುಹೊದಿಸಿ ಕೃಷ್ಣ ಪ್ರಸಾದವನ್ನು ನೀಡಿದರು.