ಪುತ್ತಿಗೆ ಪರ್ಯಾಯ: ಪುತ್ತಿಗೆ ಶ್ರೀಗಳಿಂದ ಮಹಾಲಕ್ಷ್ಮೀ ಕೋ ಆಪರೇಟಿವ್‌ ಬ್ಯಾಂಕ್‌ಗೆ ಭೇಟಿ

ಮಲ್ಪೆ: ಉಡುಪಿಯ ಶ್ರೀಕೃಷ್ಣ ಮತ್ತು ಕರಾವಳಿಯ ಮೀನುಗಾರರು ಅವಿನಾಭಾವ ಸಂಬಂಧ ಹೊಂದಿದ್ದಾರೆ. ಶ್ರೀಕೃಷ್ಣ ಮತ್ತು ಮಹಾಲಕ್ಷ್ಮೀ ದೇವರ ಪ್ರಿಯ ಸಮಾಜ ಮೊಗವೀರರದ್ದು ಎಂದು ಪುತ್ತಿಗೆ ಮಠದ ಶ್ರೀ ಸುಗುಣೇಂದ್ರತೀರ್ಥ ಸ್ವಾಮೀಜಿ ಹೇಳಿದರು. ಪರ್ಯಾಯ ಮಹೋತ್ಸವದ (Puttige Paryaya) ಪೂರ್ವಭಾವಿಯಾಗಿ ಶ್ರೀಗಳು ಸೋಮವಾರ ಮಲ್ಪೆಯ ಮಹಾಲಕ್ಷ್ಮೀ ಕೋ ಆಪರೇಟಿವ್‌ ಬ್ಯಾಂಕ್‌ಗೆ ಭೇಟಿ ನೀಡಿ ಪಾದಪೂಜೆ ಸ್ವೀಕರಿಸಿ ಆಶೀರ್ವಚನ ನೀಡಿ ಮಾತನಾಡಿದರು. ಮಹಾಲಕ್ಷ್ಮೀ ಬ್ಯಾಂಕ್‌, ದ.ಕ. ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್‌ ಹಾಗೂ ಮಲ್ಪೆಯ ವಿವಿಧ […]

ಉಭಯ ಜಿಲ್ಲೆಗಳ ಬಿಜೆಪಿ ಅಧ್ಯಕ್ಷರ ನೇಮಕ: ದ.ಕ ಜಿಲ್ಲೆಗೆ ಸತೀಶ್ ಕುಂಪಲ; ಉಡುಪಿಗೆ ಕಿಶೋರ್ ಕುಮಾರ್ ಸಾರಥ್ಯ

ಮಂಗಳೂರು/ಉಡುಪಿ: ಬಿಜೆಪಿಯ ದಕ್ಷಿಣ ಕನ್ನಡ ಘಟಕದ ಅಧ್ಯಕ್ಷರಾಗಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಸತೀಶ್ ಕುಂಪಲ ಹಾಗೂ ಉಡುಪಿ ಘಟಕದ ಅಧ್ಯಕ್ಷರಾಗಿ ಬಿಜೆಪಿಯ ಮಾಜಿ ಉಪಾಧ್ಯಕ್ಷ ಕಿಶೋರ್ ಕುಮಾರ್ ಅವರನ್ನು ನೇಮಕ ಮಾಡಲಾಗಿದೆ. ಕುಂಪಲ ಅವರು ಈ ಹಿಂದೆ ಮೂರು ಬಾರಿ ಜಿಲ್ಲಾ ಬಿಜೆಪಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. ಇವರು ಗ್ರಾಮ ಪಂಚಾಯಿತಿ ಸದಸ್ಯರಾಗಿ ರಾಜಕೀಯ ಜೀವನ ಆರಂಭಿಸಿದ್ದರು ಮತ್ತು ನಂತರ ಬಿಜೆಪಿ ಉಳ್ಳಾಲ ಘಟಕದ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದರು. ಕಿಶೋರ್ ಕುಮಾರ್ […]

ಭಗವಾನ್ ನಿತ್ಯಾನಂದ ಸ್ವಾಮಿ ಮಂದಿರ ಮಠದ ಪ್ರಥಮ ಪ್ರತಿಷ್ಠಾ ವರ್ಧಂತಿ

ಉಡುಪಿ: ಭಗವಾನ್ ನಿತ್ಯಾನಂದ ಸ್ವಾಮಿ ಮಂದಿರ ಮಠದ ಪ್ರಥಮ ಪ್ರತಿಷ್ಠಾ ವರ್ಧಂತಿ ಅಂಗವಾಗಿ ಸ್ವಾಮಿಗಳಿಗೆ ವಿಶೇಷ ಹೂಗಳಿಂದ ಅಲಂಕಾರ, ನಿತ್ಯಾನಂದ ಸ್ವಾಮಿಯ ರಜತ ಪಲ್ಲಕಿ ಪೇಟೆ ಉತ್ಸವದ ಮೆರವಣಿಗೆ ನಡೆಯಿತು. ಭಗವಾನ್ ನಿತ್ಯಾನಂದ ಸ್ವಾಮಿ ಮಂದಿರ ಮಠದ ಎಂ.ಡಿ ಕೆ. ಕೆ ಅವರ್ಸೆಕರ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶುಭ ಹಾರೈಸಿದರು. ಭವ್ಯ ಮೆರವಣಿಗೆಯು ಮಂದಿರದಿಂದ ಆರಂಭಗೊಂಡು, ತ್ರಿವೇಣಿ ಸರ್ಕಲ್ , ಮಾರುತಿ ವೀಥಿಕಾ ಮಾರ್ಗ, ಚಿತ್ತರಂಜನ್ ಸರ್ಕಲ್, ತೆಂಕಪೇಟೆ, ಡಯಾನ ಸರ್ಕಲ್ , ಕೋರ್ಟ್ ರಸ್ತೆ ಜೋಡುರಸ್ತೆ, […]

ಎರಡನೇ ವರ್ಷದ ಸಮ್ಮಿಲನ ಟ್ರೋಫಿ: ಅನಾರೋಗ್ಯ ಪೀಡಿತರಿಗೆ ಆರ್ಥಿಕ ಸಹಾಯ

ಉಡುಪಿ: ಇಲ್ಲಿನ ಬೀಡಿನಗುಡ್ಡೆಯಲ್ಲಿ ನಡೆದ ಎರಡನೇ ವರ್ಷದ ಸಮ್ಮಿಲನ ಟ್ರೋಫಿ, 2024 ಕ್ರಿಕೆಟ್ ಪಂದ್ಯಾಟದಲ್ಲಿ ಉಡುಪಿ ಜಿಲ್ಲೆಯ ಆರು ಜನ ಅನಾರೋಗ್ಯ ಪೀಡಿತರಾದ ರಾಜೇಶ್, ಗಿರಿಜಾ, ಸೃಷ್ಟಿ, ಕೃಷ್ಣಪ್ಪ, ಅಜಿತ್ ಅವಿನಾಶ್ ನಾಯಕ್ ಇವರಿಗೆ ಆರ್ಥಿಕ ಸಹಾಯ ನೀಡಿ ಸಹಕರಿಸಲಾಯಿತು. ಸಮ್ಮಿಲನ ಟ್ರೋಫಿ ಉದ್ಘಾಟನೆಯಲ್ಲಿ ಬಿ.ವಿದ್ಯಾಧರ ಶೆಟ್ಟಿ, ಉಪ ಪ್ರಾದೇಶಿಕ ವ್ಯವಸ್ಥಾಪಕ ಬ್ಯಾಂಕ್ ಆಫ್ ಬರೋಡ, ದೀಪರಾಜ್ ಹೆಗ್ಡೆ ಡೆಪ್ಯುಟಿ ಮ್ಯಾನೇಜರ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾರಾಜೇಶ್ ಬಳ್ಳಾಲ್ ಭಾಗವಹಿಸಿದ್ದರು. ಕಸ್ತೂರ್ಬಾ ಮಣಿಪಾಲ ಪ್ರಥಮ ಹಾಗೂ ಯುನೈಟೆಡ್ […]

ಕ್ರಿಯೇಟಿವ್‌ ಕಾಲೇಜಿನಲ್ಲಿ ರಾಷ್ಟ್ರಚೇತನ ಸ್ವಾಮಿ ವಿವೇಕಾನಂದ ಜಯಂತಿ ಆಚರಣೆ

ಕಾರ್ಕಳ: ಸ್ವಾಮಿ ವಿವೇಕಾನಂದರ ಚಿಂತನೆಗಳು ವಿಶ್ವವ್ಯಾಪಿಯಾದುದು. ಯುವಕರು ದೇಶದ ಭವಿಷ್ಯ ಉಜ್ವಲಗೊಳಿಸುವ ಸಾಮರ್ಥ್ಯ ಹೊಂದಿದ್ದಾರೆ. ಆತ್ಮೋದ್ಧಾರ ಮಾರ್ಗವೇ ಜಗವನ್ನು ಹಾಗೂ ಮನುಷ್ಯರನ್ನು ಅರಿಯಲು ಇರುವ ದಾರಿ. ಯುವಕರ ಕಣ್ಮಣಿಯಾಗಿ, ಸಿಡಿಲ ಸಂತನಾಗಿ ವಿಶ್ವವೇ ಭಾರತದ ಕಡೆಗೆ ತಿರುಗಿ ನೋಡುವಂತೆ ಮಾಡಿದ ಮಹಾತ್ಮ ಸ್ವಾಮಿ ವಿವೇಕಾನಂದರು. ಎಲ್ಲರಿಗೂ ಸ್ಪೂರ್ತಿಯ ಚಿಲುಮೆ ಎಂದು ಕ್ರಿಯೇಟಿವ್‌ ಕಾಲೇಜಿನ ಗಣಿತ ಉಪನ್ಯಾಸಕ ಪ್ರದೀಪ್‌ ಅಂಚನ್‌ ಹೇಳಿದರು. ಕಾರ್ಕಳದ ಕ್ರಿಯೇಟಿವ್‌ ಕಾಲೇಜಿನಲ್ಲಿ ‘ಯುವ ಸಪ್ತಾಹ’ದ ಅಂಗವಾಗಿ ನಡೆದ ವಿವೇಕಾನಂದರ ಜನ್ಮದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಜಗತ್ತು […]