ಪುತ್ತಿಗೆ ಪರ್ಯಾಯ: ಪುತ್ತಿಗೆ ಶ್ರೀಗಳಿಂದ ಮಹಾಲಕ್ಷ್ಮೀ ಕೋ ಆಪರೇಟಿವ್‌ ಬ್ಯಾಂಕ್‌ಗೆ ಭೇಟಿ

ಮಲ್ಪೆ: ಉಡುಪಿಯ ಶ್ರೀಕೃಷ್ಣ ಮತ್ತು ಕರಾವಳಿಯ ಮೀನುಗಾರರು ಅವಿನಾಭಾವ ಸಂಬಂಧ ಹೊಂದಿದ್ದಾರೆ. ಶ್ರೀಕೃಷ್ಣ ಮತ್ತು ಮಹಾಲಕ್ಷ್ಮೀ ದೇವರ ಪ್ರಿಯ ಸಮಾಜ ಮೊಗವೀರರದ್ದು ಎಂದು ಪುತ್ತಿಗೆ ಮಠದ ಶ್ರೀ ಸುಗುಣೇಂದ್ರತೀರ್ಥ ಸ್ವಾಮೀಜಿ ಹೇಳಿದರು.

ಪರ್ಯಾಯ ಮಹೋತ್ಸವದ (Puttige Paryaya) ಪೂರ್ವಭಾವಿಯಾಗಿ ಶ್ರೀಗಳು ಸೋಮವಾರ ಮಲ್ಪೆಯ ಮಹಾಲಕ್ಷ್ಮೀ ಕೋ ಆಪರೇಟಿವ್‌ ಬ್ಯಾಂಕ್‌ಗೆ ಭೇಟಿ ನೀಡಿ ಪಾದಪೂಜೆ ಸ್ವೀಕರಿಸಿ ಆಶೀರ್ವಚನ ನೀಡಿ ಮಾತನಾಡಿದರು.

ಮಹಾಲಕ್ಷ್ಮೀ ಬ್ಯಾಂಕ್‌, ದ.ಕ. ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್‌ ಹಾಗೂ ಮಲ್ಪೆಯ ವಿವಿಧ ಮೀನುಗಾರ ಸಂಘಟನೆಗಳ ಮುಖಂಡರು ಶ್ರೀಗಳನ್ನು ಗೌರವಿಸಿದರು.

ಬ್ಯಾಂಕ್ ಅಧ್ಯಕ್ಷ ಶಾಸಕ ಯಶ್‌ಪಾಲ್‌ ಸುವರ್ಣ ಮಾತನಾಡಿ, ಹಿಂದೂ ಧರ್ಮದ ಶ್ರೀಮಂತಿಕೆಯನ್ನು ವಿಶ್ವದೆಲ್ಲೆಡೆ ಪಸರಿಸುತ್ತಿರುವ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಚತುರ್ಥ ಬಾರಿಗೆ ಸರ್ವಜ್ಞ ಪೀಠಾರೋಹಣ ಮಾಡುತ್ತಿದ್ದು, ಶಾಸಕನಾಗಿ ಅವರ ಪರ್ಯಾಯ ಕಾಲದ ಎಲ್ಲ ಯೋಜನೆಗಳಲ್ಲೂ ಸಂಪೂರ್ಣ ಸಹಕಾರ ನೀಡುತ್ತೇನೆ ಎಂದರು.

ಉಚ್ಚಿಲ ದೇವಸ್ಥಾನ‌ದ ಪ್ರಧಾನ ಅರ್ಚಕ ರಾಘವೇಂದ್ರ ಉಪಾಧ್ಯಾಯ, ದ.ಕ. ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್‌, ಮಲ್ಪೆ ಮೀನುಗಾರ ಸಂಘದ ಅಧ್ಯಕ್ಷ ದಯಾನಂದ ಕೆ. ಸುವರ್ಣ, ಪ್ರಮುಖರಾದ ಆನಂದ ಸಿ. ಕುಂದರ್‌, ಆನಂದ ಪಿ. ಸುವರ್ಣ, ವಿವಿಧ ಮೀನುಗಾರ ಸಂಘಟನೆಗಳ ಮುಖಂಡರಾದ ನಾಗರಾಜ್‌ ಸುವರ್ಣ, ಸುಭಾಸ್‌ ಮೆಂಡನ್‌, ರಾಮಚಂದ್ರ ಕುಂದರ್‌, ರತ್ನಾಕರ ಸಾಲ್ಯಾನ್‌, ಗುಂಡು ಬಿ. ಅಮೀನ್‌, ಗೋಪಾಲ ಆರ್‌.ಕೆ., ಕಿಶೋರ್‌ ಪಡುಕರೆ, ರವಿರಾಜ್‌ ಸುವರ್ಣ, ಸುಂದರ್‌ ಪಿ. ಸಾಲ್ಯಾನ್‌, ಸುರೇಶ್‌ ಬಿ. ಕುಂದರ್‌, ಸುಮಿತ್ರಾ ಕುಂದರ್‌, ಮಹಾಲಕ್ಷ್ಮೀ ಬ್ಯಾಂಕಿನ ನಿದೇರ್ಶಕರಾದ ಎನ್‌.ಟಿ. ಅಮೀನ್‌, ವಾಸುದೇವ ಸಾಲ್ಯಾನ್‌, ವಿನಯ ಕರ್ಕೇರ, ಸುರೇಶ್‌ ಕರ್ಕೇರ, ಶಿವರಾಮ ಕುಂದರ್‌, ವನಜಾ ಪುತ್ರನ್‌, ವನಜಾ ಕಿದಿಯೂರು, ವೆಂಕಟರಮಣ ಕಿದಿಯೂರು, ರಾಮ ನಾಯಕ್‌, ಮಂಜುನಾಥ್‌ ಎಸ್‌.ಕೆ., ಶಶಿಕಾಂತ್‌ ಪಡುಬಿದ್ರಿ, ಶೋಭೇಂದ್ರ ಸಸಿಹಿತ್ಲು, ಮನೋಜ್‌ ಎಸ್‌. ಕರ್ಕೇರ, ಸಂಜೀವ ಶ್ರೀಯಾನ್‌ ಉಪಸ್ಥಿತರಿದ್ದರು.