ಭಗವಾನ್ ನಿತ್ಯಾನಂದ ಸ್ವಾಮಿ ಮಂದಿರ ಮಠದ ಪ್ರಥಮ ಪ್ರತಿಷ್ಠಾ ವರ್ಧಂತಿ

ಉಡುಪಿ: ಭಗವಾನ್ ನಿತ್ಯಾನಂದ ಸ್ವಾಮಿ ಮಂದಿರ ಮಠದ ಪ್ರಥಮ ಪ್ರತಿಷ್ಠಾ ವರ್ಧಂತಿ ಅಂಗವಾಗಿ ಸ್ವಾಮಿಗಳಿಗೆ ವಿಶೇಷ ಹೂಗಳಿಂದ ಅಲಂಕಾರ, ನಿತ್ಯಾನಂದ ಸ್ವಾಮಿಯ ರಜತ ಪಲ್ಲಕಿ ಪೇಟೆ ಉತ್ಸವದ ಮೆರವಣಿಗೆ ನಡೆಯಿತು.

ಭಗವಾನ್ ನಿತ್ಯಾನಂದ ಸ್ವಾಮಿ ಮಂದಿರ ಮಠದ ಎಂ.ಡಿ ಕೆ. ಕೆ ಅವರ್ಸೆಕರ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶುಭ ಹಾರೈಸಿದರು.

ಭವ್ಯ ಮೆರವಣಿಗೆಯು ಮಂದಿರದಿಂದ ಆರಂಭಗೊಂಡು, ತ್ರಿವೇಣಿ ಸರ್ಕಲ್ , ಮಾರುತಿ ವೀಥಿಕಾ ಮಾರ್ಗ, ಚಿತ್ತರಂಜನ್ ಸರ್ಕಲ್, ತೆಂಕಪೇಟೆ, ಡಯಾನ ಸರ್ಕಲ್ , ಕೋರ್ಟ್ ರಸ್ತೆ ಜೋಡುರಸ್ತೆ, ಮುಖ್ಯರಸ್ತೆಯಲ್ಲಿ ಸಾಗಿ ಮಂದಿರ ತಲುಪಿತು. ವಿವಿಧ ಭಜನಾ ತಂಡಗಳಿಂದ ಕುಣಿತ ಭಜನೆ ಮಹಿಳಾ ಚಂಡೆ ವಾದನ, ಭಗವಾನ್ ನಿತ್ಯಾನಂದ ಸ್ವಾಮಿ ಟ್ಯಾಬ್ಲೋ , ಮಂಗಳ ವಾದ್ಯ ಪೂರ್ಣ ಕುಂಭ ಸ್ವಾಗತ ಮಹಿಳಾ ತಂಡ ಮೆರವಣಿಗೆಗೆ ಮೆರಗು ನೀಡಿತು.

ಭಜನಾ ಕಾರ್ಯಕ್ರಮ

ಭಜನಾ ಕಾರ್ಯಕ್ರಮಕ್ಕೆ ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷ ಪುರುಷೋತ್ತಮ ಶೆಟ್ಟಿ ದೀಪ ಬೆಳಗಿಸಿ ಚಾಲನೆ ನೀಡಿದರು.

ಉಡುಪಿ ಹರ್ಷ ಸೂರ್ಯಪ್ರಕಾಶ ತಂಡದವರಿಂದ ಭಜನೆ ಆರಂಭಗೊಂಡು ವಿವಿಧ ತಂಡಗಳಿಂದ ನಿರತಂತರ ಭಜನಾ ಕಾರ್ಯಕ್ರಮ ನಡೆಯಿತು. ಸ್ವಾಮಿಗೆ ವಿಶೇಷ ಪೂಜೆಯ ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.

ನಿತ್ಯಾನಂದ ವಿದ್ಯಾಕೇಂದ್ರದ ಅಧ್ಯಕ್ಷದಿವಾಕರ ಶೆಟ್ಟಿ , ನವೀನ ಶೆಟ್ಟಿ ತೋನ್ಸೆ ,ಜಯಕರ್ ಶೆಟ್ಟಿ ಇಂದ್ರಾಳಿ , ಸುರೇಂದ್ರ ಕಲ್ಯಾಣಪುರ ,ಭಾಸ್ಕರ್ ಶೆಟ್ಟಿ ಮುಂಬಯಿ, ಮನೋಹರ್ ಶೆಟ್ಟಿ, ಉದಯಕುಮಾರ್ ಶೆಟ್ಟಿ , ಈಶ್ವರ ಚಿಟ್ಪಾಡಿ , ನಟರಾಜ್ ಹೆಗ್ಡೆ ಪಳ್ಳಿ, ಸುರೇಶ ಕುಮಾರ್, ಶ್ರೀಕಾಂತ್ ಶೆಟ್ಟಿ, ಸುರೇಂದ್ರ ಶೆಟ್ಟಿ , ವಿ ಜಿ ಶೆಟ್ಟಿ, ರಘುವೀರ ಶಣೈ, ವಿಶ್ವನಾಥ್ ಸನಿಲ್ ಕಡೆಕಾರ್ , ದೀಪಕ್ ಪ್ರಭು, ತಾರಾ ಮೇಸ್ತ, ಸುನಂದಾ, ಶಾರದಾ ಹಾಗೂ ಆಡಳಿತ ಮಂಡಳಿಯ ಸದಸ್ಯರು, ನಿತ್ಯಾನಂದ ಸೇವಾ ಸಮಿತಿಯ ಸದಸ್ಯರು, ಊರ, ಪರ ಊರ ನೂರಾರು ಭಕ್ತರೂ ಉಪಸ್ಥಿತರಿದ್ದರು.