ಅಂಬಲಪಾಡಿ: ವಿಕಸಿತ ಭಾರತ ಸಂಕಲ್ಪ ಯಾತ್ರೆ ಕಾರ್ಯಕ್ರಮ
ಅಂಬಲಪಾಡಿ: ಕೇಂದ್ರ ಸರಕಾರ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಅಂಬಲಪಾಡಿ , ಅಂಬಲಪಾಡಿ ಗ್ರಾಮ ಪಂಚಾಯತ್ ಜಂಟಿ ಆಶ್ರಯದಲ್ಲಿ ಭಾರತ ಸರಕಾರದ ಯೋಜನೆಯಾದ ‘ವಿಕಸಿತ ಭಾರತ ಸಂಕಲ್ಪ ಯಾತ್ರೆ’ ಕಾರ್ಯಕ್ರಮ ಅಂಬಲಪಾಡಿ ಬಸ್ ನಿಲ್ದಾಣದ ಬಳಿ ಗುರುವಾರದಂದು ಜರಗಿತು. ಎಲ್ ಡಿ ಎಂ ಪಿಂಜರ್ ಕಾರ್ಯಕ್ರಮವನ್ನು ಉದ್ಘಾಟಿಸಿ ವಿಶ್ವ ಕರ್ಮ ಯೋಜನೆ ಅಡಿಯಲ್ಲಿ 18 ರೀತಿಯ ಸ್ವ ಉದ್ಯೋಗವನ್ನು ಆರಂಭಿಸಲು ಶೇ 5 % ಬಡ್ಡಿದರದಲ್ಲಿ ಧನ ಸಹಾಯ ನೀಡುತ್ತಿದ್ದು, ಗ್ರಾಮೀಣ ಹಾಗೂ ನಗರದ ಯುವ ಜನಾಂಗ […]
ಸಿಎ ಅಂತಿಮ ಪರೀಕ್ಷೆ: ಮಹಾಲಕ್ಷ್ಮಿ ಕಿಣಿ ತೇರ್ಗಡೆ
ಉಡುಪಿ: ಮಹಾಲಕ್ಷ್ಮಿ ಕಿಣಿ ಟಿ ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ ಆಫ್ ಇಂಡಿಯಾ ನಡೆಸಿದ ಸಿಎ ಅಂತಿಮ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಈಕೆ ಉಡುಪಿಯ ನಾಯಕ್ ಆಂಡ್ ಅಸೋಸಿಯೇಟ್ಸ್ ನ ಸಿಎ ನರಸಿಂಹ ನಾಯಕ್ ಅವರಿಂದ ಆರ್ಟಿಕಲ್ ಶಿಪ್ ಮಾಡಿದ್ದಾರೆ. ಈಕೆ ಟಿ ವಸಂತ್ ಕಿಣಿ ಮತ್ತು ಟಿ ವನಿತಾ ಕಿಣಿ ಅವರ ಪುತ್ರಿ.
ಹಾವೇರಿ: ಅಂತರ್ ಮತೀಯ ಜೋಡಿಗಳ ಮೇಲೆ ಹಲ್ಲೆ ಪ್ರಕರಣ; 7 ಜನರ ಮೇಲೆ ಅತ್ಯಾಚಾರ ಆರೋಪ ದಾಖಲು
ಹಾವೇರಿ: ಇಲ್ಲಿನ ಲಾಡ್ಜ್ ಒಂದರ ಕೋಣೆಗೆ ನುಗ್ಗಿ ಅಂತರ್ ಮತೀಯ ಜೋಡಿಗಳನ್ನು ಥಳಿಸಿದ ಏಳು ಮಂದಿಯ ವಿರುದ್ಧ ಅತ್ಯಾಚಾರದ ಆರೋಪ ದಾಖಲಿಸಲಾಗಿದೆ ಎಂದು ಪೊಲೀಸರು ಮಾಧ್ಯಮಗಳಿಗೆ ತಿಳಿಸಿದ್ದಾರೆ. ತನ್ನ ಸ್ನೇಹಿತನೊಂದಿಗೆ ಹೊಟೇಲ್ ಕೋಣೆಯಲ್ಲಿದ್ದ ಅನ್ಯ ಕೋಮಿನ ಮಹಿಳೆಯು ತನ್ನನ್ನು ನಿರ್ಜನ ಸ್ಥಳಕ್ಕೆ ಕರೆದೊಯ್ದು ತನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಿ ಏಳು ಪುರುಷರ ವಿರುದ್ಧ ಅತ್ಯಾಚಾರ ಪ್ರಕರಣವನ್ನು ದಾಖಲಿಸಿದ್ದಾರೆ. ಈ ಬಗ್ಗೆ ಗುರುವಾರ ಮಹಿಳೆ ವಿಡಿಯೋ ಬಿಡುಗಡೆ ಮಾಡಿದ್ದು, ಕಾಡಿನಲ್ಲಿ ತನ್ನ ಮೇಲೆ ಅತ್ಯಾಚಾರ ನಡೆಸಿದ […]
ಎ.25 ರಂದು ಕನ್ನರ್ಪಾಡಿ ದೇವಸ್ಥಾನದಲ್ಲಿ ನೃತ್ಯವಲ್ಲರಿ ಕಾರ್ಯಕ್ರಮ
ಉಡುಪಿ: ಕನ್ನರ್ಪಾಡಿ ಶ್ರೀ ಜಯದುರ್ಗಾಪರಮೇಶ್ವರಿ ದೇವಸ್ಥಾನ ಇದರ ಆಶ್ರಯದಲ್ಲಿ ಅಭಿಜ್ಞಾ ನೃತ್ಯಭೂಮಿ(ರಿ) ಉಡುಪಿ ಪ್ರಸ್ತುತ ಪಡಿಸುವ ಗುರು ನೃತ್ಯವಿದುಷಿ ಡಾ. ರಶ್ಮಿ ಗುರುಮೂರ್ತಿ ನಿರ್ದೇಶನದಲ್ಲಿ ಭರತನಾಟ್ಯ ಕೂಚುಪುಡಿ ದಶಾವತಾರ ನ್ರ್ತ್ಯ ರೂಪಕ ನೃತ್ಯವಲ್ಲರಿ ಕಾರ್ಯಕ್ರಮವು ಎ.25 ರಂದು ದೇವಸ್ಥಾನದ ಪ್ರಾಂಗಣದಲ್ಲಿ ಸಂಜೆ 5.30 ರಿಂದ 7 ರವರೆಗೆ ನಡೆಯಲಿದೆ ಎಂದು ದೇವಳದ ಪ್ರಕಟಣೆ ತಿಳಿಸಿದೆ.
ಉಡುಪಿ: ಆಶಾ ಜ್ಯುವೆಲ್ಲರ್ಸ್ ನಲ್ಲಿ ಸೇಲ್ಸ್ ಎಕ್ಸಿಕ್ಯೂಟಿವ್, ಸ್ಟೋರ್ ಅಸಿಸ್ಟೆಂಟ್ ಹುದ್ದೆಗೆ ಅಭ್ಯರ್ಥಿಗಳು ಬೇಕಾಗಿದ್ದಾರೆ
ಉಡುಪಿ: ಇಲ್ಲಿನ ಕನಕದಾಸ ರಸ್ತೆಯಲ್ಲಿರುವ ಆಶಾ ಜ್ಯುವೆಲ್ಲರ್ಸ್ ನಲ್ಲಿ ಸೇಲ್ಸ್ ಎಕ್ಸಿಕ್ಯೂಟಿವ್, ಸ್ಟೋರ್ ಅಸಿಸ್ಟೆಂಟ್ ಹುದ್ದೆಗೆ ಅಭ್ಯರ್ಥಿಗಳು ಬೇಕಾಗಿದ್ದಾರೆ. ಸೇಲ್ಸ್ ಎಕ್ಸಿಕ್ಯೂಟಿವ್ ಹುದ್ದೆಗೆ ಅರ್ಹತೆಮಹಿಳಾ ಅಥವಾ ಪುರುಷ ಅಭ್ಯರ್ಥಿಬಿ.ಕಾಂ ಪದವಿಸಾಫ್ಟ್ ಸ್ಕಿಲ್ ಮತ್ತು ರೀಟೈಲ್ ವಿಭಾಗದಲ್ಲಿ 2 ವರ್ಷದ ಅನುಭವ25-35 ವರ್ಷ ವಯಸ್ಸಿನವರಾಗಿರಬೇಕು ಸ್ಟೋರ್ ಅಸಿಸ್ಟೆಂಟ್ ಹುದ್ದೆಗೆ ಅರ್ಹತೆಹೌಸ್ ಕೀಪಿಂಗ್ ಮತ್ತು ಪ್ಯಾಂಟ್ರಿಯಲ್ಲಿ ಕೆಲಸ ಮಾಡಿದ ಪೂರ್ವಾನುಭವಪುರುಷ ಅಭ್ಯರ್ಥಿ-21 ರಿಂದ 40 ವರ್ಷದವರಾಗಿರಬೇಕು ಆಸಕ್ತ ಅಭ್ಯರ್ಥಿಗಳು ತಮ್ಮ ರೆಸ್ಯೂಮ್, ಫೋಟೋ ಮತ್ತು ಆಧಾರ್ ಕಾರ್ಡ್ ಜೊತೆ ಮಳಿಗೆಗೆ […]