ಎ.25 ರಂದು ಕನ್ನರ್ಪಾಡಿ ದೇವಸ್ಥಾನದಲ್ಲಿ ನೃತ್ಯವಲ್ಲರಿ ಕಾರ್ಯಕ್ರಮ

ಉಡುಪಿ: ಕನ್ನರ್ಪಾಡಿ ಶ್ರೀ ಜಯದುರ್ಗಾಪರಮೇಶ್ವರಿ ದೇವಸ್ಥಾನ ಇದರ ಆಶ್ರಯದಲ್ಲಿ ಅಭಿಜ್ಞಾ ನೃತ್ಯಭೂಮಿ(ರಿ) ಉಡುಪಿ ಪ್ರಸ್ತುತ ಪಡಿಸುವ ಗುರು ನೃತ್ಯವಿದುಷಿ ಡಾ. ರಶ್ಮಿ ಗುರುಮೂರ್ತಿ ನಿರ್ದೇಶನದಲ್ಲಿ ಭರತನಾಟ್ಯ ಕೂಚುಪುಡಿ ದಶಾವತಾರ ನ್ರ್‍ತ್ಯ ರೂಪಕ ನೃತ್ಯವಲ್ಲರಿ ಕಾರ್ಯಕ್ರಮವು ಎ.25 ರಂದು ದೇವಸ್ಥಾನದ ಪ್ರಾಂಗಣದಲ್ಲಿ ಸಂಜೆ 5.30 ರಿಂದ 7 ರವರೆಗೆ ನಡೆಯಲಿದೆ ಎಂದು ದೇವಳದ ಪ್ರಕಟಣೆ ತಿಳಿಸಿದೆ.