ಮಧು ಬಂಗಾರಪ್ಪ ಭರವಸೆ : ಮುಂದಿನ ವರ್ಷದಿಂದ ಉಚಿತ ಬೈಸಿಕಲ್ ವಿತರಣೆ

ಬೆಳಗಾವಿ: ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ರವಿಕುಮಾರ್ ಪ್ರಶ್ನೆಗೆ ಉತ್ತರಿಸಿದ ಸಚಿವರು, ಮಕ್ಕಳಿಗೆ ಸೈಕಲ್ ಕೊಡಬಾರದಂತಲ್ಲ, ಇದಕ್ಕೆ ನಮಗೆ ಹಣಕಾಸು ಸಮಸ್ಯೆಯೂ ಆಗುವುದಿಲ್ಲ. ಆದರೆ, ಒಂದೇ ಬಾರಿ ಅಷ್ಟು ಸೈಕಲ್​ಗಳ ಉತ್ಪಾದನೆ ಕಷ್ಟವಾಗಲಿದೆ. ಹಾಗಾಗಿ ಈ ಬಾರಿ ಮೊಟ್ಟೆ ವಿತರಣೆಗೆ ಆದ್ಯತೆ ನೀಡಲಾಗುತ್ತದೆ. ನಾವು ಬೇಡಿ ನೀಡಿದ ಕಡೆಯಲ್ಲೆಲ್ಲಾ ಮಕ್ಕಳು ಸೈಕಲ್ ಕೇಳಿದ್ದಾರೆ. ಹಣದ ಕೊರತೆ ಆಗಲ್ಲ. ಮುಂದಿನ ವರ್ಷದಿಂದ ಸೈಕಲ್ ಕೊಡಲಿದ್ದೇವೆ ಎಂದು ಭರವಸೆ ನೀಡಿದರು. ರಾಜ್ಯದ ಪ್ರಾಥಮಿಕ ಹಾಗು ಪ್ರೌಢಶಾಲಾ ಮಕ್ಕಳಿಗೆ […]

ಗಾಜಾದಲ್ಲಿ ಹಸಿವಿನಿಂದ ಬಳಲುತ್ತಿರುವ ಶೇಕಡ 90ರಷ್ಟು ಜನ : 7 ಸಾವಿರ ಹಮಾಸ್ ಉಗ್ರರ ಹತ್ಯೆ

ಖಾನ್​ ಯೂನಿಸ್ ​(ಗಾಜಾ): ದಕ್ಷಿಣ ಗಾಜಾದ ಖಾನ್ ಯೂನಿಸ್ ನಗರದಿಂದ ಈಜಿಪ್ಟ್ ಗಡಿ ನಗರವಾದ ರಫಾಗೆ ಹೋಗುವ ರಸ್ತೆಗಳನ್ನು ಗುರಿಯಾಗಿಸಿಕೊಂಡು ಇಸ್ರೇಲಿ ಬಾಂಬ್ ದಾಳಿ ನಡೆಸಿದೆ ಎಂದು ಹಮಾಸ್ ಉಗ್ರಗಾಮಿ ಗುಂಪು ಹೇಳಿದೆ.ಕದನ ವಿರಾಮಕ್ಕೆ ಕರೆ ನೀಡುವ ವಿಶ್ವಸಂಸ್ಥೆ ನಿರ್ಣಯವನ್ನು ಅಮೆರಿಕ ನಿರ್ಬಂಧಿಸಿದ ನಂತರ ಇಸ್ರೇಲಿ ಪಡೆಗಳು ಗಾಜಾದ ಮೇಲೆ ದಾಳಿಯನ್ನು ತೀವ್ರಗೊಳಿಸಿದವು. ಹಮಾಸ್ ಅನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವ ಗುರಿಯೊಂದಿಗೆ ಇಸ್ರೇಲ್ ದಕ್ಷಿಣ ಗಾಜಾದ ಮೇಲೆ ತನ್ನ ದಾಳಿಯನ್ನು ಹೆಚ್ಚಿಸಿದೆ. ಹಮಾಸ್ ನಿರ್ಮೂಲನೆಯೇ ನಮ್ಮ ಗುರಿ: […]

ಕುತೂಹಲ ಹೆಚ್ಚಿಸಿದ ‘ದಳಪತಿ ​68’ : ವಿಜಯ್​ 10 ನಿಮಿಷದ ವಿಂಟೇಜ್​ ಲುಕ್​ಗಾಗಿ 6 ಕೋಟಿ ಖರ್ಚು

ಇತ್ತೀಚೆಗಷ್ಟೇ ‘ಲಿಯೋ’ ಚಿತ್ರದ ಮೂಲಕ ವಿಶ್ವದಾದ್ಯಂತ ಧೂಳೆಬ್ಬಿಸಿದ್ದ ಹೀರೋ ಸದ್ಯ ‘ದಳಪತಿ 68’ ವರ್ಕಿಂಗ್​ ಟೈಟಲ್​ನಲ್ಲಿ ತಯಾರಾಗುತ್ತಿರುವ ಸಿನಿಮಾ ವಿಚಾರವಾಗಿ ಬ್ಯುಸಿಯಾಗಿದ್ದಾರೆ. ಈ ಚಿತ್ರವನ್ನು ವೆಂಕಟ್​ ಪ್ರಭು ನಿರ್ದೇಶಿಸುತ್ತಿದ್ದಾರೆ. ಹೈ ಬಜೆಟ್​ನಲ್ಲಿ ಸಿದ್ಧಗೊಳ್ಳುತ್ತಿರುವ ಈ ಬಹುನಿರೀಕ್ಷಿತ ಸಿನಿಮಾದಲ್ಲಿ ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಲಾಗಿದೆಯಂತೆ. ಈಗಾಗಲೇ ಚಿತ್ರದ ಶೂಟಿಂಗ್​ ಕೂಡ ಪ್ರಾರಂಭವಾಗಿದೆ. ಅದರ ಭಾಗವಾಗಿ ವಿಜಯ್​ 3D VFX ಸ್ಕ್ಯಾನ್​ ಅನ್ನು ಯುಎಸ್​ನಲ್ಲಿ ತೆಗೆದುಕೊಂಡಿದ್ದಾರೆ. ತಮಿಳು ಚಿತ್ರರಂಗದ ಸೂಪರ್​ಸ್ಟಾರ್​ ದಳಪತಿ ವಿಜಯ್​ ಸಾಲು ಸಾಲು ಸಿನಿಮಾಗಳ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ.ದಳಪತಿ […]

ಶಬರಿಗಿರಿ ದರ್ಶನದ ಸಮಯ ಒಂದು ಗಂಟೆ ವಿಸ್ತರಣೆ : ಅಯ್ಯಪ್ಪ ಭಕ್ತರಿಗೆ ಸಿಹಿಸುದ್ದಿ

ಪತ್ತನಂತಿಟ್ಟ (ಕೇರಳ) : ಶಬರಿಗಿರಿಯ ದರ್ಶನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರಿಂದ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ದರ್ಶನ ಸಮಯವನ್ನು ಇನ್ನೂ ಒಂದು ಗಂಟೆ ಕಾಲ ವಿಸ್ತರಿಸಲಾಗಿದೆ. ಪ್ರತಿದಿನ ಸಂಜೆ 4 ರಿಂದ ರಾತ್ರಿ 11ರ ವರೆಗೆ ಭಕ್ತರು ದೇಗುಲಕ್ಕೆ ಭೇಟಿ ನೀಡುವ ಸಮಯವಾಗಿತ್ತು. ಆದ್ರೆ ಈಗ ಮಧ್ಯಾಹ್ನ 3 ರಿಂದ ದೇಗುಲಕ್ಕೆ ಭೇಟಿ ನೀಡಬಹುದು ಎಂದು ಅವರು ಹೇಳಿದರು. ದರ್ಶನಕ್ಕಾಗಿ ಸರತಿ ಸಾಲಿನಲ್ಲಿ ಕಾಯುವ ಭಕ್ತರಿಗೆ ನೀರು, ಬಿಸ್ಕತ್‌ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ತಿಳಿದುಬಂದಿದೆ. ತಿರುವಾಂಕೂರು […]

18 ಶೇಖರಣಾ ಘಟಕಗಳು ಬೆಂಕಿಗಾಹುತಿ: ತೈಲ ಸಂಸ್ಕರಣ ಸ್ಥಳದಲ್ಲಿ ಭಾರಿ ಸ್ಫೋಟ

ಟೆಹ್ರಾನ್(ಇರಾನ್)​: ಪೂರ್ವ ಇರಾನ್‌ನ ಬಿರ್ಜಾಂಡ್ ವಿಶೇಷ ಆರ್ಥಿಕ ವಲಯದಲ್ಲಿರುವ ತೈಲ ಸಂಸ್ಕರಣಾ ಘಟಕದಲ್ಲಿ ಭಾರಿ ಸ್ಫೋಟ ಸಂಭವಿಸಿದೆ.ಈಗ ಸಂಸ್ಕರಣಾಗಾರದ ಎಲ್ಲಾ 18 ಶೇಖರಣಾ ಘಟಕಗಳು ಬೆಂಕಿಗೆ ಆಹುತಿಯಾಗಿವೆ. ನಿರಂತರ ಸ್ಫೋಟದಿಂದಾಗಿ ರಕ್ಷಣಾ ತಂಡಗಳು ತಾತ್ಕಾಲಿಕವಾಗಿ ಸ್ಥಳದಿಂದ ದೂರ ಸರಿದಿವೆ.ಇರಾನ್‌ನ ತೈಲ ಸಂಸ್ಕರಣ ಘಟಕದಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿದ್ದು, ಆತಂಕ ಮನೆ ಮಾಡಿದೆ. ಸ್ಫೋಟದ ತೀವ್ರತೆ ಹೆಚ್ಚಾಗ್ತಿದ್ದು, ರಕ್ಷಣಾ ತಂಡಗಳು ಸ್ಥಳದಿಂದ ಹೊರಬಂದಿವೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಇತ್ತೀಚಿನ ದಿನಗಳಲ್ಲಿ ಇರಾನ್ ಸ್ಥಾವರಗಳಲ್ಲಿ ಸ್ಫೋಟಗಳು ಮತ್ತು […]