ರಾಜ್ಯದಲ್ಲೇ ಪ್ರಥಮ ಗ್ರಾಮೀಣ ಭಾಗದ ಸರ್ಕಾರಿ ಶಾಲೆ ಮಕ್ಕಳಿಗೆ ಕಂಪ್ಯೂಟರ್ ಶಿಕ್ಷಣ ನೀಡಲು ಡಿಜಿಟಲ್ ಬಸ್

ಮಂಗಳೂರು: ಮಂಗಳೂರಿನ ಎಂ ಫ್ರೆಂಡ್ಸ್ ಎಂಬುದು ವಾಟ್ಸಪ್ ಗ್ರೂಪ್ ಮೂಲಕ 2013 ರಲ್ಲಿ ಆರಂಭವಾದ ಸಂಘಟನೆ. ಈ ಸಂಘಟನೆ ಆರೋಗ್ಯ ಕ್ಷೇತ್ರದಲ್ಲಿ ಕಳೆದ ಹಲವು ವರ್ಷಗಳಿಂದ ಸಾಮಾಜಿಕ ಸೇವೆ ನೀಡುತ್ತಿದೆ. ಇದೀಗ ಎಂ. ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ (ರಿ) ಆಗಿರುವ ಈ ಸಂಸ್ಥೆ ತನ್ನ ದಶಮಾನೋತ್ಸವದ ಸ್ಮರಣಾರ್ಥ ಗ್ರಾಮೀಣ ಪ್ರದೇಶದ ಮಕ್ಕಳಿಗಾಗಿ ನೂತನ ತಂತ್ರಜ್ಞಾನದ ಡಿಜಿಟಲ್ ಬಸ್ ಲೋಕಾರ್ಪಣೆಗೊಳಿಸಿದೆ.ಗ್ರಾಮೀಣ ಭಾಗದ ಸರ್ಕಾರಿ ಶಾಲಾ ಮಕ್ಕಳು ಕಂಪ್ಯೂಟರ್ ಶಿಕ್ಷಣದಿಂದ ವಂಚಿತರಾಗಬಾರದೆನ್ನುವ ದೃಷ್ಟಿಯಿಂದ‌ ಮಂಗಳೂರಿನ ಎಂ ಫ್ರೆಂಡ್ಸ್ ಸಂಸ್ಥೆ ಹೊಸ […]

ರಕ್ಷಣಾ ಕಾರ್ಯಾಚರಣೆ ತಾತ್ಕಾಲಿಕವಾಗಿ ಸ್ಥಗಿತ: ಉತ್ತರಾಖಂಡ ಸುರಂಗ ಕುಸಿತ

ರಕ್ಷಣಾ ಕಾರ್ಯಕ್ಕೆ ಪದೇ ಪದೆ ಅಡ್ಡಿ ಎದುರಾಗುತ್ತಿರುವ ಹಿನ್ನೆಲೆ ಅಮೆರಿಕದ ನಿರ್ಮಿತ ಆಗರ್ ಯಂತ್ರವು ಪೈಪ್‌ಗಳನ್ನು ಕೊರೆಯಲು ಮತ್ತು ತಳ್ಳಲು ನಿಯೋಜಿಸಲಾಗಿದೆ.ಉತ್ತರಕಾಶಿ, ಉತ್ತರಾಖಂಡ್​​: ಉತ್ತರಾಕಾಶಿಯ ಭಾಗಶಃ ಕುಸಿದಿರುವ ಸಿಲ್ಕ್ಯಾರಾ ಸುರಂಗದಲ್ಲಿ ಸಿಲುಕಿರುವ 40 ಕಾರ್ಮಿಕರ ರಕ್ಷಣಾ ಕಾರ್ಯಾಚರಣೆಯನ್ನು ಶುಕ್ರವಾರ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.ಶುಕ್ರವಾರ ಸುರಂಗದ ರಕ್ಷಣಾ ಕಾರ್ಯಾಚರಣೆ ವೇಳೆ ಭಾರಿ ಸದ್ದು ಬಂದ ಹಿನ್ನೆಲೆ ಸ್ಥಗಿತಗೊಳಿಸಲಾಗಿದೆ. ಈ ವೇಳೆ, ಶುಕ್ರವಾರ ಮಧ್ಯಾಹ್ನ ಈ ರಕ್ಷಣಾ ಕಾರ್ಯಾಚರಣೆ ನಿಲ್ಲಿಸಲಾಗಿದೆ. ಸುರಂಗದ 60 ಮೀಟರ್​ ಪ್ರದೇಶದೊಳಗೆ ಹೆವಿ ಡ್ಯೂಟಿ ಆಗರ್ ಮಷಿನ್​ […]

ಹಮಾಸ್​ ಉಗ್ರ ದಾಳಿಯ ರಹಸ್ಯ ಬಯಲು: ಇಸ್ರೇಲ್​ನ ಪ್ರಮುಖ ನಗರ​ ಟೆಲ್​ ಅವೀವ್​ ಮೇಲೂ ದಾಳಿಗೆ ಸಂಚು​

ಟೆಲ್ ಅವೀವ್: ಅಕ್ಟೋಬರ್​ 7 ರಂದು ಹಮಾಸ್​ ಉಗ್ರರು ಯಹೂದಿ ರಾಷ್ಟ್ರದ ಗಡಿ ಛೇದಿಸಿ ಒಳಬಂದು ಯಾದ್ ಮೊರ್ದೆಚೈ ವಸಾಹತು ಪ್ರದೇಶದಲ್ಲಿನ ಜನರ ಮೇಲೆ ಮನಸೋಇಚ್ಛೆ ಗುಂಡಿನ ದಾಳಿ ಮಾಡಿ 1400 ಮಂದಿ ಬಲಿ ತೆಗೆದುಕೊಂಡಿದ್ದರು.ಹಮಾಸ್​ ಮತ್ತು ಇಸ್ರೇಲ್​ ಮಧ್ಯೆ ನಡೆಯುತ್ತಿರುವ ಯುದ್ಧದಲ್ಲಿ ಹಲವು ರೋಚಕ ಸುದ್ದಿಗಳು ಈಗ ಹೊರಬೀಳುತ್ತಿವೆ.ಇಸ್ರೇಲ್​ ಮೇಲಿನ ಹಮಾಸ್​ ದಾಳಿಯ ಹಿಂದಿನ ಒಂದೊಂದು ಕತೆಗಳು ಇದೀಗ ಹೊರಬರುತ್ತಿವೆ. ಸೆರೆಸಿಕ್ಕ ಉಗ್ರರು ದಾಳಿಯ ರಹಸ್ಯಗಳನ್ನು ಬಾಯ್ಬಿಟ್ಟಿದ್ದಾರೆ. ಬಂಧಿತ ಹಮಾಸ್ ಉಗ್ರರನ್ನು ವಿಚಾರಣೆ ನಡೆಸಿದ ವೇಳೆ […]

ಮುಂಬೈನಿಂದ ಅಹಮದಾಬಾದ್​ಗೆ 3 ವಿಶೇಷ ರೈಲು : ವಿಶ್ವಕಪ್​ ಫೈನಲ್​ ಪಂದ್ಯ

ಮುಂಬೈ: ಭಾರತ ಆತಿಥ್ಯ ವಹಿಸಿರುವ ಏಕದಿನ ವಿಶ್ವಕಪ್​ (World Cup) ಸರಣಿ ಈಗಾಗಲೇ ಅಂತಿಮಘಟ್ಟ ತಲುಪಿದ್ದು, 2023ರ ವಿಶ್ವಕಪ್​ ವಿಜೇತರನ್ನು ನಿರ್ಧರಿಸಲು ಇನ್ನೊಂದು ಪಂದ್ಯ ಮಾತ್ರ ಬಾಕಿ ಉಳಿದಿದೆ.ಈಗಾಗಲೇ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ವಿಶ್ವಕಪ್​ ಫೈನಲ್​ಗೆ ಲಗ್ಗೆ ಇಟ್ಟಿದ್ದು ಭಾನುವಾರ (ನಾಳೆ) ಅಹಮದಾಬಾದ್​ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಪ್ರಶಸ್ತಿ ಗೆಲುವಿಗಾಗಿ ಉಭಯ ತಂಡಗಳು ಮುಖಾಮುಖಿಯಾಗಲಿವೆ. ಫೈನಲ್​ ಪಂದ್ಯವಾದ ಕಾರಣ ನಾಳೆ ಪ್ರಧಾನಿ ಮೋದಿ ಸೇರಿದಂತೆ ಸಿನಿತಾರೆಯರು, ಗಣ್ಯರು ಪಂದ್ಯ ವೀಕ್ಷಣೆಗೆ ಆಗಮಿಸಿದುತ್ತಿದ್ದಾರೆ. ಜತೆಗೆ ಈ ವಿಶೇಷ […]

ಇದು ವಿಶ್ವಕಪ್​ ಫೈನಲ್​ ಎಫೆಕ್ಟ್​ : 2 ಸಾವಿರದ ಹೋಟೆಲ್​ ರೂಮ್​ ಬಾಡಿಗೆ ಈಗ 50 ಸಾವಿರ

ಅಹಮದಾಬಾದ್​: ಎರಡು ಮದಗಜಗಳ ಆಟ ನೋಡಲು ಕ್ರಿಕೆಟ್​ ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ. ವಿಶ್ವದ ಅತಿದೊಡ್ಡ ಕ್ರೀಡಾಂಗಣವಾದ ನರೇಂದ್ರ ಮೋದಿ ಸ್ಟೇಡಿಯಂಗೆ ದೇಶ, ವಿದೇಶಗಳಿಂದ ಜನರು ಆಗಮಿಸುತ್ತಿದ್ದಾರೆ. ಎಷ್ಟೇ ಖರ್ಚಾದರೂ ಸರಿ ಪಂದ್ಯ ವೀಕ್ಷಿಸಬೇಕು ಎಂಬ ಅಭಿಮಾನಿಗಳ ಆಸೆಯನ್ನೇ ಬಂಡವಾಳ ಮಾಡಿಕೊಂಡಿರುವ ಅಹಮದಾಬಾದ್‌ನಲ್ಲಿ ಹೋಟೆಲ್‌ಗಳು ರೂಮ್​​ಗಳ ದರವನ್ನು ವಿಪರೀತ ಹೆಚ್ಚಿಸಿವೆ. 2 ಸಾವಿರ ರೂಪಾಯಿ ಇರುವ ಕೊಠಡಿಗಳ ಬಾಡಿಗೆಯನ್ನು ಏಕಾಏಕಿ 50 ಸಾವಿರಕ್ಕೆ ಹೆಚ್ಚಿಸಿವೆ.ಭಾರತದಲ್ಲಿ ಕ್ರಿಕೆಟ್​ ಬರೀ ಜ್ವರವಲ್ಲ, ಅದು ಎಂದಿಗೂ ಗುಣಮುಖವಾಗದ ಕಾಯಿಲೆ ಇದ್ದ ಹಾಗೆ. ಅದೆಷ್ಟೇ […]