ರಾಜ್ಯದಲ್ಲೇ ಪ್ರಥಮ ಗ್ರಾಮೀಣ ಭಾಗದ ಸರ್ಕಾರಿ ಶಾಲೆ ಮಕ್ಕಳಿಗೆ ಕಂಪ್ಯೂಟರ್ ಶಿಕ್ಷಣ ನೀಡಲು ಡಿಜಿಟಲ್ ಬಸ್
ಮಂಗಳೂರು: ಮಂಗಳೂರಿನ ಎಂ ಫ್ರೆಂಡ್ಸ್ ಎಂಬುದು ವಾಟ್ಸಪ್ ಗ್ರೂಪ್ ಮೂಲಕ 2013 ರಲ್ಲಿ ಆರಂಭವಾದ ಸಂಘಟನೆ. ಈ ಸಂಘಟನೆ ಆರೋಗ್ಯ ಕ್ಷೇತ್ರದಲ್ಲಿ ಕಳೆದ ಹಲವು ವರ್ಷಗಳಿಂದ ಸಾಮಾಜಿಕ ಸೇವೆ ನೀಡುತ್ತಿದೆ. ಇದೀಗ ಎಂ. ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ (ರಿ) ಆಗಿರುವ ಈ ಸಂಸ್ಥೆ ತನ್ನ ದಶಮಾನೋತ್ಸವದ ಸ್ಮರಣಾರ್ಥ ಗ್ರಾಮೀಣ ಪ್ರದೇಶದ ಮಕ್ಕಳಿಗಾಗಿ ನೂತನ ತಂತ್ರಜ್ಞಾನದ ಡಿಜಿಟಲ್ ಬಸ್ ಲೋಕಾರ್ಪಣೆಗೊಳಿಸಿದೆ.ಗ್ರಾಮೀಣ ಭಾಗದ ಸರ್ಕಾರಿ ಶಾಲಾ ಮಕ್ಕಳು ಕಂಪ್ಯೂಟರ್ ಶಿಕ್ಷಣದಿಂದ ವಂಚಿತರಾಗಬಾರದೆನ್ನುವ ದೃಷ್ಟಿಯಿಂದ ಮಂಗಳೂರಿನ ಎಂ ಫ್ರೆಂಡ್ಸ್ ಸಂಸ್ಥೆ ಹೊಸ […]
ರಕ್ಷಣಾ ಕಾರ್ಯಾಚರಣೆ ತಾತ್ಕಾಲಿಕವಾಗಿ ಸ್ಥಗಿತ: ಉತ್ತರಾಖಂಡ ಸುರಂಗ ಕುಸಿತ
ರಕ್ಷಣಾ ಕಾರ್ಯಕ್ಕೆ ಪದೇ ಪದೆ ಅಡ್ಡಿ ಎದುರಾಗುತ್ತಿರುವ ಹಿನ್ನೆಲೆ ಅಮೆರಿಕದ ನಿರ್ಮಿತ ಆಗರ್ ಯಂತ್ರವು ಪೈಪ್ಗಳನ್ನು ಕೊರೆಯಲು ಮತ್ತು ತಳ್ಳಲು ನಿಯೋಜಿಸಲಾಗಿದೆ.ಉತ್ತರಕಾಶಿ, ಉತ್ತರಾಖಂಡ್: ಉತ್ತರಾಕಾಶಿಯ ಭಾಗಶಃ ಕುಸಿದಿರುವ ಸಿಲ್ಕ್ಯಾರಾ ಸುರಂಗದಲ್ಲಿ ಸಿಲುಕಿರುವ 40 ಕಾರ್ಮಿಕರ ರಕ್ಷಣಾ ಕಾರ್ಯಾಚರಣೆಯನ್ನು ಶುಕ್ರವಾರ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.ಶುಕ್ರವಾರ ಸುರಂಗದ ರಕ್ಷಣಾ ಕಾರ್ಯಾಚರಣೆ ವೇಳೆ ಭಾರಿ ಸದ್ದು ಬಂದ ಹಿನ್ನೆಲೆ ಸ್ಥಗಿತಗೊಳಿಸಲಾಗಿದೆ. ಈ ವೇಳೆ, ಶುಕ್ರವಾರ ಮಧ್ಯಾಹ್ನ ಈ ರಕ್ಷಣಾ ಕಾರ್ಯಾಚರಣೆ ನಿಲ್ಲಿಸಲಾಗಿದೆ. ಸುರಂಗದ 60 ಮೀಟರ್ ಪ್ರದೇಶದೊಳಗೆ ಹೆವಿ ಡ್ಯೂಟಿ ಆಗರ್ ಮಷಿನ್ […]
ಹಮಾಸ್ ಉಗ್ರ ದಾಳಿಯ ರಹಸ್ಯ ಬಯಲು: ಇಸ್ರೇಲ್ನ ಪ್ರಮುಖ ನಗರ ಟೆಲ್ ಅವೀವ್ ಮೇಲೂ ದಾಳಿಗೆ ಸಂಚು
ಟೆಲ್ ಅವೀವ್: ಅಕ್ಟೋಬರ್ 7 ರಂದು ಹಮಾಸ್ ಉಗ್ರರು ಯಹೂದಿ ರಾಷ್ಟ್ರದ ಗಡಿ ಛೇದಿಸಿ ಒಳಬಂದು ಯಾದ್ ಮೊರ್ದೆಚೈ ವಸಾಹತು ಪ್ರದೇಶದಲ್ಲಿನ ಜನರ ಮೇಲೆ ಮನಸೋಇಚ್ಛೆ ಗುಂಡಿನ ದಾಳಿ ಮಾಡಿ 1400 ಮಂದಿ ಬಲಿ ತೆಗೆದುಕೊಂಡಿದ್ದರು.ಹಮಾಸ್ ಮತ್ತು ಇಸ್ರೇಲ್ ಮಧ್ಯೆ ನಡೆಯುತ್ತಿರುವ ಯುದ್ಧದಲ್ಲಿ ಹಲವು ರೋಚಕ ಸುದ್ದಿಗಳು ಈಗ ಹೊರಬೀಳುತ್ತಿವೆ.ಇಸ್ರೇಲ್ ಮೇಲಿನ ಹಮಾಸ್ ದಾಳಿಯ ಹಿಂದಿನ ಒಂದೊಂದು ಕತೆಗಳು ಇದೀಗ ಹೊರಬರುತ್ತಿವೆ. ಸೆರೆಸಿಕ್ಕ ಉಗ್ರರು ದಾಳಿಯ ರಹಸ್ಯಗಳನ್ನು ಬಾಯ್ಬಿಟ್ಟಿದ್ದಾರೆ. ಬಂಧಿತ ಹಮಾಸ್ ಉಗ್ರರನ್ನು ವಿಚಾರಣೆ ನಡೆಸಿದ ವೇಳೆ […]
ಮುಂಬೈನಿಂದ ಅಹಮದಾಬಾದ್ಗೆ 3 ವಿಶೇಷ ರೈಲು : ವಿಶ್ವಕಪ್ ಫೈನಲ್ ಪಂದ್ಯ
ಮುಂಬೈ: ಭಾರತ ಆತಿಥ್ಯ ವಹಿಸಿರುವ ಏಕದಿನ ವಿಶ್ವಕಪ್ (World Cup) ಸರಣಿ ಈಗಾಗಲೇ ಅಂತಿಮಘಟ್ಟ ತಲುಪಿದ್ದು, 2023ರ ವಿಶ್ವಕಪ್ ವಿಜೇತರನ್ನು ನಿರ್ಧರಿಸಲು ಇನ್ನೊಂದು ಪಂದ್ಯ ಮಾತ್ರ ಬಾಕಿ ಉಳಿದಿದೆ.ಈಗಾಗಲೇ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ವಿಶ್ವಕಪ್ ಫೈನಲ್ಗೆ ಲಗ್ಗೆ ಇಟ್ಟಿದ್ದು ಭಾನುವಾರ (ನಾಳೆ) ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಪ್ರಶಸ್ತಿ ಗೆಲುವಿಗಾಗಿ ಉಭಯ ತಂಡಗಳು ಮುಖಾಮುಖಿಯಾಗಲಿವೆ. ಫೈನಲ್ ಪಂದ್ಯವಾದ ಕಾರಣ ನಾಳೆ ಪ್ರಧಾನಿ ಮೋದಿ ಸೇರಿದಂತೆ ಸಿನಿತಾರೆಯರು, ಗಣ್ಯರು ಪಂದ್ಯ ವೀಕ್ಷಣೆಗೆ ಆಗಮಿಸಿದುತ್ತಿದ್ದಾರೆ. ಜತೆಗೆ ಈ ವಿಶೇಷ […]
ಇದು ವಿಶ್ವಕಪ್ ಫೈನಲ್ ಎಫೆಕ್ಟ್ : 2 ಸಾವಿರದ ಹೋಟೆಲ್ ರೂಮ್ ಬಾಡಿಗೆ ಈಗ 50 ಸಾವಿರ
ಅಹಮದಾಬಾದ್: ಎರಡು ಮದಗಜಗಳ ಆಟ ನೋಡಲು ಕ್ರಿಕೆಟ್ ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ. ವಿಶ್ವದ ಅತಿದೊಡ್ಡ ಕ್ರೀಡಾಂಗಣವಾದ ನರೇಂದ್ರ ಮೋದಿ ಸ್ಟೇಡಿಯಂಗೆ ದೇಶ, ವಿದೇಶಗಳಿಂದ ಜನರು ಆಗಮಿಸುತ್ತಿದ್ದಾರೆ. ಎಷ್ಟೇ ಖರ್ಚಾದರೂ ಸರಿ ಪಂದ್ಯ ವೀಕ್ಷಿಸಬೇಕು ಎಂಬ ಅಭಿಮಾನಿಗಳ ಆಸೆಯನ್ನೇ ಬಂಡವಾಳ ಮಾಡಿಕೊಂಡಿರುವ ಅಹಮದಾಬಾದ್ನಲ್ಲಿ ಹೋಟೆಲ್ಗಳು ರೂಮ್ಗಳ ದರವನ್ನು ವಿಪರೀತ ಹೆಚ್ಚಿಸಿವೆ. 2 ಸಾವಿರ ರೂಪಾಯಿ ಇರುವ ಕೊಠಡಿಗಳ ಬಾಡಿಗೆಯನ್ನು ಏಕಾಏಕಿ 50 ಸಾವಿರಕ್ಕೆ ಹೆಚ್ಚಿಸಿವೆ.ಭಾರತದಲ್ಲಿ ಕ್ರಿಕೆಟ್ ಬರೀ ಜ್ವರವಲ್ಲ, ಅದು ಎಂದಿಗೂ ಗುಣಮುಖವಾಗದ ಕಾಯಿಲೆ ಇದ್ದ ಹಾಗೆ. ಅದೆಷ್ಟೇ […]