ಗಾಜಾದಲ್ಲಿ ಯಹೂದಿಗಳ ವಸಾಹತು ಸ್ಥಾಪಿಸುವಂತೆ ಒತ್ತಾಯ

ಟೆಲ್ ಅವೀವ್ (ಇಸ್ರೇಲ್) : ಗಾಜಾ ಮತ್ತು ಉತ್ತರ ಸಮರಿಯಾದಲ್ಲಿ ಯಹೂದಿಗಳ ಪುನರ್ವಸತಿಗಾಗಿ ಹನ್ನೊಂದು ಪ್ರಮುಖ ಬಲಪಂಥೀಯ ಸಂಘಟನೆಗಳು ಒಗ್ಗೂಡಿವೆ. ಸಮರಿಯಾ ಪ್ರಾದೇಶಿಕ ಮಂಡಳಿ ಮತ್ತು ನಹಲಾ ಚಳವಳಿಯ ಮುಖ್ಯಸ್ಥ ಯೋಸಿ ದಗ್ಗನ್ ಈ ಅಭಿಯಾನದ ನೇತೃತ್ವ ವಹಿಸಿದ್ದಾರೆಯುದ್ಧ ಮುಗಿದ ಬಳಿಕ ಗಾಜಾದಲ್ಲಿ ಯಹೂದಿಗಳ ನೆಲೆಗೆ ಅವಕಾಶ ನೀಡುವಂತೆ ಇಸ್ರೇಲ್​ನ ಹಲವಾರು ಬಲಪಂಥೀಯ ಸಂಘಟನೆಗಳು ಬೆಂಜಮಿನ್ ನೆತನ್ಯಾಹು ಸರಕಾರದ ಮೇಲೆ ಒತ್ತಡ ಹೇರಲು ಆರಂಭಿಸಿವೆ.ಯುದ್ಧದ ನಂತರ ಗಾಜಾ ಪಟ್ಟಿಯಲ್ಲಿ ಯಹೂದಿಗಳ ವಸಾಹತು ಸ್ಥಾಪಿಸುವಂತೆ ಇಸ್ರೇಲ್​ನ ಬಲಪಂಥೀಯ ಸಂಘಟನೆಗಳು […]

19,730ಕ್ಕೆ ಇಳಿದ ನಿಫ್ಟಿ, ಸೆನ್ಸೆಕ್ಸ್​ 188 ಪಾಯಿಂಟ್ ಕುಸಿತ

ಮುಂಬೈ : ಶುಕ್ರವಾರದ ವಹಿವಾಟಿನಲ್ಲಿ ಬಿಎಸ್‌ಇ ಸೆನ್ಸೆಕ್ಸ್ 188 ಪಾಯಿಂಟ್ಸ್ ಕುಸಿದು 65,795 ಮಟ್ಟದಲ್ಲಿ ಕೊನೆಗೊಂಡರೆ, ನಿಫ್ಟಿ-50 33 ಪಾಯಿಂಟ್ಸ್ ಕುಸಿದು 19,732 ಕ್ಕೆ ಕೊನೆಗೊಂಡಿತು.ಹಣಕಾಸು ಷೇರುಗಳ ಮೇಲೆ ಲಾಭ ಪಡೆಯುವ ಪ್ರವೃತ್ತಿಯಿಂದ ಶುಕ್ರವಾರ ಭಾರತದ ಷೇರು ಮಾರುಕಟ್ಟೆಗಳು ಕುಸಿತ ಕಂಡವು.ಇದಲ್ಲದೆ, ಇನ್ಫೋಸಿಸ್, ವಿಪ್ರೋ, ಟೆಕ್ ಎಂ, ಎಚ್​ಸಿಎಲ್ ಟೆಕ್ ಮತ್ತು ರಿಲಯನ್ಸ್ ಇಂಡಸ್ಟ್ರೀಸ್​ ಷೇರುಗಳು ಕೂಡ ಹೆಚ್ಚು ಮಾರಾಟಕ್ಕೆ ಒಳಗಾದವು.ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್​ಬಿಐ), ಆಕ್ಸಿಸ್ ಬ್ಯಾಂಕ್, ಬಜಾಜ್ ಫೈನಾನ್ಸ್, ಐಸಿಐಸಿಐ ಬ್ಯಾಂಕ್, ಕೋಟಕ್ […]

ಲೋಕಾಯುಕ್ತಕ್ಕೆ‌ ದೂರು : ಆಹಾರ ಸರಬರಾಜಿನಲ್ಲಿ ಗೋಲ್‌ಮಾಲ್ ಆರೋಪ

ಬೆಂಗಳೂರು : ಇಲಾಖೆಯಲ್ಲಿ ಜವಾಬ್ದಾರಿ ಹೊತ್ತ ಮೂವರ ವಿರುದ್ಧ ದೂರು ನೀಡಲಾಗಿದೆ. ಇಲಾಖೆಯು‌ ಅಂಗನವಾಡಿಯಲ್ಲಿ ಮಕ್ಕಳಿಗೆ ಹಾಗೂ ಗರ್ಭಿಣಿಯರಿಗೆ ಪೌಷ್ಠಿಕ ಆಹಾರ ಸರಬರಾಜು ಮಾಡಲು ನೀಡಿರುವ ಟೆಂಡರ್ ವಿಚಾರದಲ್ಲಿ ಗೋಲ್‌ಮಾಲ್ ನಡೆದಿದೆ ಎಂದು ಆರೋಪಿಸಿದ್ದಾರೆ.ಮಕ್ಕಳು ಹಾಗೂ ಗರ್ಭಿಣಿಯರಿಗೆ ಪೌಷ್ಠಿಕ ಆಹಾರ ಸರಬರಾಜು ಮಾಡಲು ಅನರ್ಹ ಸಂಸ್ಥೆಗಳಿಗೆ ನೀಡಿದ ಗುತ್ತಿಗೆಯಲ್ಲಿ ಸುಮಾರು 600 ಕೋಟಿ ರೂ. ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ವಕೀಲ ಎಸ್ ನಟರಾಜ ಶರ್ಮಾ ಅವರು ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ. ಮಕ್ಕಳು ಹಾಗೂ ಗರ್ಭಿಣಿಯರಿಗೆ ನೀಡುವ […]

ಪ್ರತಿಪಕ್ಷ ನಾಯಕನ ಪಟ್ಟಕ್ಕೆ ಮಾಜಿ ಡಿಸಿಎಂ ಆರ್​ ಅಶೋಕ್

ಬೆಂಗಳೂರು: “ಇದೊಂದು ಅವಿರೋಧ ಆಯ್ಕೆಯಾಗಿತ್ತು. ಅಶೋಕ್​ ಒಬ್ಬ ಹಿರಿಯ ನಾಯಕ. ನಾನು ಅವರನ್ನು ಅಭಿನಂದಿಸುತ್ತೇನೆ. ಪ್ರತಿಪಕ್ಷ ನಾಯಕನಾಗಿ ಆರ್​ ಅಶೋಕ್​ ಅವರ ಹೆಸರನ್ನು ಬಿಜೆಪಿ ನಾಯಕರು ಘೋಷಣೆ ಮಾಡಿದ್ದಾರೆ.ಅಶೋಕ್​ ಆಯ್ಕೆಯಿಂದ ನನಗೂ ಬಹಳ ಖುಷಿಯಾಗಿದೆ” ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯಿಸಿದ್ದಾರೆ.ಮಾಜಿ ಉಪ ಮುಖ್ಯಮಂತ್ರಿ ಆರ್​. ಅಶೋಕ್​ಗೆ ಪ್ರತಿಪಕ್ಷ ನಾಯಕನ ಸ್ಥಾನ ಒಲಿದಿದೆ. ಹೈಕಮಾಂಡ್ ಕಳುಹಿಸಿದ್ದ ವೀಕ್ಷಕರ ಸಮ್ಮುಖದಲ್ಲಿ ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಪ್ರತಿಪಕ್ಷ ನಾಯಕನಾಗಿ ಅಶೋಕ್​ ಅವರನ್ನು ಘೋಷಣೆ ಮಾಡಲಾಗಿದೆ.ಧನ್ಯವಾದ ತಿಳಿಸಿದ […]

ಮದುವೆ ಆಗುವುದಕ್ಕೆ ನಿರಾಕರಿಸಿದ್ದಕ್ಕೆ ಕೊಲೆ

ಉಡುಪಿ: ಉಡುಪಿಯ ನೇಜಾರು ಕೊಲೆ ಪ್ರಕರಣದ ಆರೋಪಿಯನ್ನು ಕೊಲೆ ನಡೆದ ಸ್ಥಳಕ್ಕೆ ಕರೆ ತರಲಾಗಿದ್ದು ಈ ವೇಳೆ ಆಕ್ರೋಶಗೊಂಡ ಜನ ಆತನನ್ನು ತಮಗೆ ಒಪ್ಪಿಸಿ ನಾವೇ ಈ ಹಂತಕನಿಗೆ ಶಿಕ್ಷೆ ಕೊಡುತ್ತೇವೆ ಎಂದು ಪೊಲೀಸ್‌ ವಾಹನದ ಮೇಲೆ ದಾಳಿ ನಡೆಸಿದ್ದು ಪೊಲೀಸರು ಲಘು ಲಾಠಿ ಚಾರ್ಜ್ ಮಾಡಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ತಾಯಿ, ಮೂವರು ಮಕ್ಕಳ ಹತ್ಯೆ ಆರೋಪಿಗೆ 14 ದಿನ ನ್ಯಾಯಾಂಗ ಬಂಧನವಾಗಿದೆ. ಆದರೆ ಪೊಲೀಸರ ತನಿಖೆ ವೇಳೆ ಕಾರಣ ಬಯಲಾಗಿದೆ. ಲವ್ ಮಾಡಿಲ್ಲ ಎಂದು ಕೊಲೆ […]