ಮದುವೆ ಆಗುವುದಕ್ಕೆ ನಿರಾಕರಿಸಿದ್ದಕ್ಕೆ ಕೊಲೆ

ಉಡುಪಿ: ಉಡುಪಿಯ ನೇಜಾರು ಕೊಲೆ ಪ್ರಕರಣದ ಆರೋಪಿಯನ್ನು ಕೊಲೆ ನಡೆದ ಸ್ಥಳಕ್ಕೆ ಕರೆ ತರಲಾಗಿದ್ದು ಈ ವೇಳೆ ಆಕ್ರೋಶಗೊಂಡ ಜನ ಆತನನ್ನು ತಮಗೆ ಒಪ್ಪಿಸಿ ನಾವೇ ಈ ಹಂತಕನಿಗೆ ಶಿಕ್ಷೆ ಕೊಡುತ್ತೇವೆ ಎಂದು ಪೊಲೀಸ್‌ ವಾಹನದ ಮೇಲೆ ದಾಳಿ ನಡೆಸಿದ್ದು ಪೊಲೀಸರು ಲಘು ಲಾಠಿ ಚಾರ್ಜ್ ಮಾಡಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ತಾಯಿ, ಮೂವರು ಮಕ್ಕಳ ಹತ್ಯೆ ಆರೋಪಿಗೆ 14 ದಿನ ನ್ಯಾಯಾಂಗ ಬಂಧನವಾಗಿದೆ. ಆದರೆ ಪೊಲೀಸರ ತನಿಖೆ ವೇಳೆ ಕಾರಣ ಬಯಲಾಗಿದೆ. ಲವ್ ಮಾಡಿಲ್ಲ ಎಂದು ಕೊಲೆ ಮಾಡಿದ ಹಂತಕನ ನಡೆ ಈಗ ಅಚ್ಚರಿ ಮೂಡಿಸಿದೆ. ಆರೋಪಿ ಪ್ರವೀಣ್ ಚೌಗಲೆ ಮತ್ತು ಅಯ್ಯಜ್ ಒಟ್ಟಿಗೆ ವಿಮಾನಯಾನ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು.ಈ ವೇಳೆ ಆರೋಪಿಯನ್ನು ಗಲ್ಲಿಗೇರಿಸಿ ಎಂದು ರಸ್ತೆ ತಡೆದು ಪ್ರತಿಭಟನೆ ನಡೆಸಿದ್ದಾರೆ.

ಸೌದಿ ಅರೇಬಿಯಾದಲ್ಲಿ ಉದ್ಯೋಗದಲ್ಲಿರುವ ನೂರ್ ಮಹಮ್ಮದ್ ಅವರ ಪತ್ನಿ ಹಸೀನಾ (48), ಪುತ್ರಿಯರಾದ ಅಫ್ಘಾನ್ (23), ಅಯ್ಯಾಝ್ (21), ಪುತ್ರ ಅಸೀಮ್ (14) ಹತ್ಯೆಗೀಡಾಗಿದ್ದರು. ನೂ‌ರ್ ಮಹಮ್ಮದ್ ಅವರ ತಾಯಿ ಹಾಜಿರಾಬಿ (70) ಮೇಲೆಯೂ ದಾಳಿ ನಡೆಸಲಾಗಿತ್ತು. ಈ ವೇಳೆ ಅಯ್ಸಜ್ ಪ್ರವೀಣ್‌ ಜತೆ ಸ್ವಲ್ಪ ಮಾತನಾಡುತ್ತಿದ್ದರು. ಅದನ್ನೇ ಪ್ರೀತಿ ಎಂದುಕೊಂಡಿದ್ದ ಭಗ್ನ ಪ್ರೇಮಿ ಪದೇ ಪದೇ ವಾಟ್ಸಪ್ ಚಾಟ್ ಮಾಡುತ್ತಿದ್ದ. ಇತ್ತೀಚಿಗೆ ಆಕೆ ಈತನ ವಾಟ್ಸಪ್ ಬ್ಲಾಕ್ ಮಾಡಿದ್ದಳು. ಆದ್ದರಿಂದ ಮೆಂಟಲ್ ಆದ ಆರೋಪಿ ಮನೆಗೆ ಹೋಗಿ ಆಕೆ ಜತೆ ಗಲಾಟೆ ಮಾಡಿದ್ದಾನೆ. ಈ ವೇಳೆ ತಾಯಿ, ತಂಗಿ, ತಮ್ಮ ಅಡ್ಡ ಬಂದಿದ್ದು ಅವರನ್ನು ಚುಚ್ಚಿ ಕೊಲೆ ಮಾಡಿದ್ದಾನೆ. ಉಡುಪಿ ಮತ್ತು ಬೆಳಗಾವಿ ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ಮಂಗಳವಾರ ಬೆಳಗಾವಿ ಜಿಲ್ಲೆಯ ರಾಯಬಾಗ उऊ ಕುಡಚಿಯಲ್ಲಿ ಬಂಧಿಸಲಾಗಿತ್ತು.
ಮಾಡಿದ್ದಾನೆ. ಉಡುಪಿ ಮತ್ತು ಬೆಳಗಾವಿ ಪೊಲೀಸರ ಜಂಟಿ ಬೆಳಗಾವಿ ಕಾರ್ಯಾಚರಣೆಯಲ್ಲಿ ಮಂಗಳವಾರ ಜಿಲ್ಲೆಯ ರಾಯಬಾಗ ತಾಲೂಕಿನ ಕುಡಚಿಯಲ್ಲಿ ಬಂಧಿಸಲಾಗಿತ್ತು.