19,730ಕ್ಕೆ ಇಳಿದ ನಿಫ್ಟಿ, ಸೆನ್ಸೆಕ್ಸ್​ 188 ಪಾಯಿಂಟ್ ಕುಸಿತ

ಮುಂಬೈ : ಶುಕ್ರವಾರದ ವಹಿವಾಟಿನಲ್ಲಿ ಬಿಎಸ್‌ಇ ಸೆನ್ಸೆಕ್ಸ್ 188 ಪಾಯಿಂಟ್ಸ್ ಕುಸಿದು 65,795 ಮಟ್ಟದಲ್ಲಿ ಕೊನೆಗೊಂಡರೆ, ನಿಫ್ಟಿ-50 33 ಪಾಯಿಂಟ್ಸ್ ಕುಸಿದು 19,732 ಕ್ಕೆ ಕೊನೆಗೊಂಡಿತು.
ಹಣಕಾಸು ಷೇರುಗಳ ಮೇಲೆ ಲಾಭ ಪಡೆಯುವ ಪ್ರವೃತ್ತಿಯಿಂದ ಶುಕ್ರವಾರ ಭಾರತದ ಷೇರು ಮಾರುಕಟ್ಟೆಗಳು ಕುಸಿತ ಕಂಡವು.
ಇದಲ್ಲದೆ, ಇನ್ಫೋಸಿಸ್, ವಿಪ್ರೋ, ಟೆಕ್ ಎಂ, ಎಚ್​ಸಿಎಲ್ ಟೆಕ್ ಮತ್ತು ರಿಲಯನ್ಸ್ ಇಂಡಸ್ಟ್ರೀಸ್​ ಷೇರುಗಳು ಕೂಡ ಹೆಚ್ಚು ಮಾರಾಟಕ್ಕೆ ಒಳಗಾದವು.ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್​ಬಿಐ), ಆಕ್ಸಿಸ್ ಬ್ಯಾಂಕ್, ಬಜಾಜ್ ಫೈನಾನ್ಸ್, ಐಸಿಐಸಿಐ ಬ್ಯಾಂಕ್, ಕೋಟಕ್ ಬ್ಯಾಂಕ್, ಬಜಾಜ್ ಫಿನ್ಸರ್ವ್, ಇಂಡಸ್‌ಇಂಡ್ ಬ್ಯಾಂಕ್ ಮತ್ತು ಎಚ್​ಡಿಎಫ್​ಸಿ ಬ್ಯಾಂಕ್ ಶುಕ್ರವಾರ ಶೇಕಡಾ 3.6 ರಷ್ಟು ಇಳಿಕೆಯಾದವು.ಹಣಕಾಸು ಷೇರುಗಳ ಮಾರಾಟದ ಒತ್ತಡದಿಂದ ಶುಕ್ರವಾರ ಭಾರತೀಯ ಷೇರು ಮಾರುಕಟ್ಟೆಗಳು ಇಳಿಕೆಯೊಂದಿಗೆ ಕೊನೆಗೊಂಡಿವೆ.

ಮತ್ತೊಂದೆಡೆ, ಬಿಎಸ್‌ಇ ಮಿಡ್​ಕ್ಯಾಪ್ ಮತ್ತು ಸ್ಮಾಲ್​ಕ್ಯಾಪ್ ಸೂಚ್ಯಂಕಗಳು ಕ್ರಮವಾಗಿ ಶೇಕಡಾ 0.27 ಮತ್ತು ಶೇಕಡಾ 0.36 ರಷ್ಟು ಏರಿಕೆ ಕಂಡಿವೆ. ವಲಯಗಳ ಪೈಕಿ, ನಿಫ್ಟಿ ಪಿಎಸ್​ಯು ಬ್ಯಾಂಕ್ ಸೂಚ್ಯಂಕವು ಶೇಕಡಾ 2.4 ರಷ್ಟು ಕುಸಿದರೆ, ನಿಫ್ಟಿ ಬ್ಯಾಂಕ್ ಮತ್ತು ಖಾಸಗಿ ಬ್ಯಾಂಕ್ ಸೂಚ್ಯಂಕಗಳಲ್ಲಿ ಶೇಕಡಾ 1 ಕ್ಕಿಂತ ಹೆಚ್ಚು ಇಳಿಕೆಯಾಗಿದೆ. ನಿಫ್ಟಿ ಫಾರ್ಮಾ ಸೂಚ್ಯಂಕ ಶೇಕಡಾ 1 ರಷ್ಟು ಏರಿಕೆಯಾಗಿದೆ.
ಕ್ರೆಡಿಟ್ ಕಾರ್ಡ್​ಗಳು ಮತ್ತು ವೈಯಕ್ತಿಕ ಸಾಲಗಳಿಗೆ ಸಂಬಂಧಿಸಿದ ನಿಯಮಗಳನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್​ಬಿಐ) ಬಿಗಿಗೊಳಿಸಿದ ನಂತರ, ಬ್ಯಾಂಕುಗಳು, ಹಣಕಾಸು ಸೇವೆಗಳು, ಸಾರ್ವಜನಿಕ ವಲಯದ ಬ್ಯಾಂಕುಗಳು ಮತ್ತು ಖಾಸಗಿ ಬ್ಯಾಂಕುಗಳು ಈ ವಲಯದ ಸಾಲದ ಬೆಳವಣಿಗೆ ಮತ್ತು ಲಾಭದಾಯಕತೆಯ ಬಗ್ಗೆ ಆತಂಕದಿಂದಾಗಿ ಈ ಷೇರುಗಳು ಶೇ 0.9 ರಿಂದ 2.5 ಕ್ಕೆ ಇಳಿದಿವೆ.

ಇಂಟರ್​ ಬ್ಯಾಂಕ್ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ, ಕಚ್ಚಾ ತೈಲ ಬೆಲೆಗಳಲ್ಲಿ ರಾತ್ರೋರಾತ್ರಿ ನಷ್ಟದ ನಂತರ ಯುಎಸ್ ಕರೆನ್ಸಿ ವಿರುದ್ಧ ರೂಪಾಯಿ 83.23 ಕ್ಕೆ ಪ್ರಾರಂಭವಾಯಿತು. ದಿನದ ವಹಿವಾಟಿನಲ್ಲಿ ರೂಪಾಯಿ 83.23 ರಿಂದ 83.28 ರವರೆಗೆ ವ್ಯಾಪ್ತಿಯಲ್ಲಿ ಚಲಿಸಿತು.ಸಾಗರೋತ್ತರ ಮಾರುಕಟ್ಟೆಗಳಲ್ಲಿ ಬಲವಾದ ಡಾಲರ್ ಮತ್ತು ದೇಶೀಯ ಷೇರುಗಳಲ್ಲಿನ ನಷ್ಟವು ಹೂಡಿಕೆದಾರರ ಭಾವನೆಯ ಮೇಲೆ ಪರಿಣಾಮ ಬೀರಿದ್ದರಿಂದ ರೂಪಾಯಿ ಶುಕ್ರವಾರ ಯುಎಸ್ ಡಾಲರ್ ವಿರುದ್ಧ 4 ಪೈಸೆ ಕುಸಿದು 83.27 ಕ್ಕೆ (ತಾತ್ಕಾಲಿಕ) ತಲುಪಿದೆ. ಹೊಸ ಎಫ್‌ಐಐ ಒಳಹರಿವು ಮತ್ತು ಕಚ್ಚಾ ತೈಲ ಬೆಲೆಗಳು ನಾಲ್ಕು ತಿಂಗಳ ಕನಿಷ್ಠ ಮಟ್ಟಕ್ಕೆ ವಹಿವಾಟು ನಡೆಸುತ್ತಿರುವುದು ರೂಪಾಯಿ ನಷ್ಟವನ್ನು ನಿಯಂತ್ರಿಸಲು ಸಹಾಯ ಮಾಡಿದೆ ಎಂದು ವಿದೇಶಿ ವಿನಿಮಯ ಡೀಲರ್​ಗಳು ತಿಳಿಸಿದ್ದಾರೆ.