ಸೆಮಿ-ಫೈನಲ್​​​ಗೆ ತಂಡಕ್ಕೆ ಸೇರಿಸಿಕೊಳ್ಳುವ ಚಿಂತನೆ : ಮುಂದಿನ ಎರಡು ಪಂದ್ಯಗಳಿಗೆ ಹಾರ್ದಿಕ್​ ಪಾಂಡ್ಯ ಅಲಭ್ಯ

ಹೈದರಾಬಾದ್​ : ಆಲ್‌ರೌಂಡರ್ ಮತ್ತು ಉಪನಾಯಕ ಹಾರ್ದಿಕ್ ಪಾಂಡ್ಯ ಅವರು ಮುಂದಿನ ಎರಡು ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ ಪಂದ್ಯಗಳಿಂದ ಹೊರಗುಳಿಯುವ ಸಾಧ್ಯತೆಯಿದೆ.ಪುಣೆಯಲ್ಲಿ ಬಾಂಗ್ಲಾದೇಶದ ವಿರುದ್ಧದ ಪಂದ್ಯದ ವೇಳೆ ಪಾದದ ಗಾಯಕ್ಕೆ ತುತ್ತಾದ ಹಾರ್ದಿಕ್​ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್​ ಅಕಾಡೆಮಿ (ಎನ್​ಸಿಎ) ಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ. ಬಾಂಗ್ಲಾದೇಶದ ವಿರುದ್ಧದ ಪಂದ್ಯದಲ್ಲಿ ಬೌಲಿಂಗ್​ ಮಾಡುವ ವೇಳೆ ಪಾದದ ಗಾಯಕ್ಕೆ ತುತ್ತಾದ ಹಾರ್ದಿಕ್​ ಪಾಂಡ್ಯ ಚೇತರಿಸಿಕೊಳ್ಳಲು ಇನ್ನಷ್ಟೂ ದಿನಗಳು ಬೇಕಾಗಬಹುದು ಎಂಬ ಮಾಹಿತಿಯನ್ನು ಮೂಲಗಳು ನೀಡಿವೆ. ಪುಣೆಯ ಎಮ್​ಸಿಎ ಸ್ಟೇಡಿಯಂನಲ್ಲಿ ಬಾಂಗ್ಲಾದೇಶದ […]

ಇಸ್ರೇಲ್ ವಿರುದ್ಧ ಮುಂದಿನ ಕ್ರಮದ ಚರ್ಚೆ : ಹಿಜ್ಬುಲ್ಲಾ-ಹಮಾಸ್-ಇಸ್ಲಾಮಿಕ್ ಜಿಹಾದ್ ನಾಯಕರ ಸಭೆ

ಬೈರುತ್ (ಲೆಬನಾನ್): ಗಾಜಾದಲ್ಲಿ ಹಮಾಸ್ ಮತ್ತು ಇಸ್ರೇಲ್ ನಡುವೆ ಯುದ್ಧ ನಡೆಯುತ್ತಿರುವ ಮಧ್ಯೆ ಹಿಜ್ಬುಲ್ಲಾ ಗುಂಪಿನ ನಾಯಕ ಬುಧವಾರ ಹಿರಿಯ ಹಮಾಸ್ ಮತ್ತು ಪ್ಯಾಲೆಸ್ಟೈನ್ ಇಸ್ಲಾಮಿಕ್ ಜಿಹಾದ್ ನಾಯಕರೊಂದಿಗೆ ಮಾತುಕತೆ ನಡೆಸಿದರು.ಇಸ್ರೇಲ್ ವಿರುದ್ಧ ಸಂಚು ರೂಪಿಸುತ್ತಿರುವ ಮೂರು ಪ್ರಮುಖ ಉಗ್ರಗಾಮಿ ಸಂಘಟನೆಗಳ ನಾಯಕರು ಬೈರುತ್​ನಲ್ಲಿ ಒಟ್ಟಾಗಿ ಸಭೆ ನಡೆಸಿದ್ದಾರೆ. ಹಿಜ್ಬುಲ್ಲಾ ನಿಯಂತ್ರಣದಲ್ಲಿರುವ ಲೆಬನಾನ್ ಸರ್ಕಾರಿ ಮಾಧ್ಯಮದ ಪ್ರಕಾರ- ಗಾಜಾ ಹಾಗೂ ಪಶ್ಚಿಮ ದಂಡೆಯಲ್ಲಿರುವ ತುಳಿತಕ್ಕೊಳಗಾದ ನಮ್ಮ ಜನರ ವಿರುದ್ಧ ಇಸ್ರೇಲ್ ನ ವಿಶ್ವಾಸಘಾತುಕ ಮತ್ತು ಕ್ರೂರ ಆಕ್ರಮಣವನ್ನು […]

ಕೇಂದ್ರ ಸಂಪುಟ ಒಪ್ಪಿಗೆ : ಹಿಂಗಾರು ಹಂಗಾಮಿಗೆ ರಸಗೊಬ್ಬರಗಳ ಮೇಲೆ ₹22,303 ಕೋಟಿ ಸಬ್ಸಿಡಿ

ನವದೆಹಲಿ: ರೈತರು ರಬಿ ಬೆಳೆಗಳಿಗೆ ಬೇಕಾಗುವ ಮತ್ತು ಮಣ್ಣಿನ ಪೋಷಕಾಂಶ ಹೆಚ್ಚಿಸುವ ಫಾಸ್ಫಾಟಿಕ್ ಮತ್ತು ಪೊಟ್ಯಾಸಿಕ್ ರಸಗೊಬ್ಬರಗಳಿಗೆ ಸಬ್ಸಿಡಿ ನೀಡಲು ಬುಧವಾರ ನಡೆಸ ಸಚಿವ ಸಂಪುಟದಲ್ಲಿ ಒಪ್ಪಿಗೆ ಸಿಕ್ಕಿದೆ.ಮುಂಗಾರು ಹಂಗಾಮಿನಲ್ಲಿ ಮಳೆ ಕೊರತೆ ಮತ್ತು ಬೆಲೆ ಏರಿಕೆಯಿಂದ ಅಪಾರ ನಷ್ಟಕ್ಕೀಡಾಗಿರುವ ಕೃಷಿ ಕ್ಷೇತ್ರದ ನೆರವಿಗೆ ಧಾವಿಸಿರುವ ಕೇಂದ್ರ ಸರ್ಕಾರ, ಹಿಂಗಾರು ಹಂಗಾಮಿನ ಬೆಳೆಗಳಿಗೆ ಬೇಕಾಗುವ ರಸಗೊಬ್ಬರಗಳ ಮೇಲೆ 22,303 ಕೋಟಿ ರೂಪಾಯಿ ಸಬ್ಸಿಡಿ ನೀಡಿದೆ.ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ರೈತರಿಗೆ ಬಂಪರ್​ ಕೊಡುಗೆ ನೀಡಲಾಗಿದೆ. […]

ಮಂಗಳೂರು ಮತ್ತು ಉಡುಪಿ ಧರ್ಮಪ್ರಾಂತ್ಯ ಮಟ್ಟದ ಫಾ. ಮ್ಯಾಥ್ಯೂ ವಾಸ್ ಸ್ಮಾರಕ ಇಂಟರ್-ಪ್ಯಾರಿಶ್ ಟೂರ್ನಮೆಂಟ್ ಮತ್ತು ಕ್ರೀಡಾ ಪ್ರಶಸ್ತಿ ವಿತರಣೆ

ಮಂಗಳೂರು: ಫಾ. ಮ್ಯಾಥ್ಯೂ ವಾಸ್ ಸ್ಮಾರಕ ಇಂಟರ್-ಪ್ಯಾರಿಶ್ ಫುಟ್‌ಬಾಲ್ ಮತ್ತು ಥ್ರೋ ಬಾಲ್ ಪಂದ್ಯಾವಳಿ ಹಾಗೂ ಫಾ. ಮ್ಯಾಥ್ಯೂ ವಾಸ್ ಎಕ್ಸಲೆನ್ಸ್ ಇನ್ ಸ್ಪೋರ್ಟ್ಸ್ ಅವಾರ್ಡ್ಸ್ ಅಕ್ಟೋಬರ್ 22 ರಂದು, ಸಂತ ಅಲೋಶಿಯಸ್ ಪಿಯು ಕಾಲೇಜು ಕ್ರೀಡಾಂಗಣದಲ್ಲಿ ನಡೆಯಿತು. ಮಂಗಳೂರು ಮತ್ತು ಉಡುಪಿ ಧರ್ಮಪ್ರಾಂತ್ಯದ 30 ಫುಟ್‌ಬಾಲ್ ಮತ್ತು 17 ಥ್ರೋ ಬಾಲ್ ತಂಡಗಳು ಭಾಗವಹಿಸಿದ್ದವು. ಫಾದರ್ ಮ್ಯಾಥ್ಯೂ ವಾಸ್ ಎರಡನೇ ವರ್ಷದ ಪುಣ್ಯ ಸ್ಮರಣೆಯ ಪ್ರಯುಕ್ತ, ಕಮ್ಯೂನಿಟಿ ಎಂಪವರ್‌ಮೆಂಟ್ ಟ್ರಸ್ಟ್, ಮಂಗಳೂರು, ಕ್ರಿಶ್ಚಿಯನ್ ಸ್ಪೋರ್ಟ್ಸ್ ಎಸೋಸಿಯೇಶನ್, […]

ಎಲ್ಲಾ ಶಾಲಾ ಪಠ್ಯಪುಸ್ತಕಗಳಲ್ಲಿ “ಇಂಡಿಯಾ”ವನ್ನು “ಭಾರತ” ಎಂದು ಬದಲಿಸಲು NCERT ಸಮಿತಿ ಶಿಫಾರಸು

ನವದೆಹಲಿ: ನ್ಯಾಷನಲ್ ಕೌನ್ಸಿಲ್ ಆಫ್ ಎಜುಕೇಶನಲ್ ರಿಸರ್ಚ್ ಅಂಡ್ ಟ್ರೈನಿಂಗ್ (NCERT) ಸಮಿತಿಯು ಎಲ್ಲಾ ಶಾಲಾ ಪಠ್ಯಪುಸ್ತಕಗಳಲ್ಲಿ ಸಾರ್ವತ್ರಿಕವಾಗಿ “ಇಂಡಿಯಾ”ವನ್ನು “ಭಾರತ” ಎಂದು ಬದಲಿಸಲು ಪ್ರಸ್ತಾಪಿಸಿದೆ. ಇದು ಕೇವಲ ಶಿಫಾರಸು ಮಾತ್ರ ಮತ್ತು ಇದು ಇನ್ನೂ ಅನುಮೋದನೆ ಪಡೆಯಬೇಕಾಗಿದೆ ಎಂದು ಎನ್‌ಸಿಇಆರ್‌ಟಿ ನಿರ್ದೇಶಕರು ಹೇಳಿರುವುದಾಗಿ ನ್ಯೂಸ್ 18 ವರದಿ ಮಾಡಿದೆ. ನಾವು ಸದ್ಯಕ್ಕೆ ಏನನ್ನೂ ಒಪ್ಪಿಕೊಂಡಿಲ್ಲ. ಸಮಿತಿಯು ತಮ್ಮ ವರದಿಯನ್ನು ಕಳುಹಿಸಿದೆ ಎಂದು ಎನ್‌ಸಿಇಆರ್‌ಟಿ ನಿರ್ದೇಶಕರು ತಿಳಿಸಿದ್ದಾರೆ. ಹಲವು ತಿಂಗಳ ಹಿಂದೆಯೇ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಇತ್ತೀಚಿನ ದಿನಗಳಲ್ಲಿ […]