ಸೆಪ್ಟೆಂಬರ್ 23 ಮತ್ತು 24 ರಂದು ಪರೀಕ್ಷೆ : ಪಿಜಿಸಿಇಟಿ ಪರಿಷ್ಕೃತ ವೇಳಾಪಟ್ಟಿ ಪ್ರಕಟ
ಬೆಂಗಳೂರು: ಬಹು ನಿರೀಕ್ಷಿತ ಪಿಜಿ ಸಿಇಟಿ ಪರಿಷ್ಕೃತ ವೇಳಾಪಟ್ಟಿ ಪ್ರಕಟವಾಗಿದೆ. ಕರ್ನಾಟಕದಲ್ಲಿನ ವಿವಿಧ ವಿಶ್ವವಿದ್ಯಾಲಯಗಳಲ್ಲಿ 2023ನೇ ಸಾಲಿನ ಪದವಿ ಕೋರ್ಸ್ಗಳ ಅಂತಿಮ ಸೆಮಿಸ್ಟರ್ ಪರೀಕ್ಷೆಗಳು ಪೂರ್ಣಗೊಳ್ಳದೇ ಇರುವುದರಿಂದ ಮತ್ತು ಅಭ್ಯರ್ಥಿಗಳ ಹಿತದೃಷ್ಟಿಯಿಂದ ಪಿಜಿಸಿಇಟಿ-2023 ಪರೀಕ್ಷೆಯನ್ನು ಮುಂದೂಡಲಾಗಿತ್ತು. ಪ್ರಸ್ತುತ ಎಂಬಿಎ, ಎಂಸಿಎ, ಎಂಇ, ಎಂಟೆಕ್, ಎಂ-ಆರ್ಕಿಟೆಕ್ಚರ್ ಕೋರ್ಸ್ಗಳ ಪ್ರವೇಶಕ್ಕಾಗಿ ಪಿಜಿಸಿಇಟಿ-2023ರ ಪರೀಕ್ಷೆಯನ್ನು ಸೆಪ್ಟೆಂಬರ್ 23 ಮತ್ತು 24 ರಂದು ಪರಿಷ್ಕೃತ ವೇಳಾಪಟ್ಟಿಯಂತೆ ನಡೆಸಲಾಗುವುದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ತಿಳಿಸಿದೆ. ಸೆಪ್ಟಂಬರ್ 9 ಮತ್ತು 10 ರಂದು ನಡೆಯಬೇಕಿದ್ದ […]
ನೇಪಾಳ ವಿರುದ್ಧ ಟಾಸ್ ಗೆದ್ದ ಪಾಕಿಸ್ತಾನ ಬ್ಯಾಟಿಂಗ್: ಏಷ್ಯಾಕಪ್ ಕ್ರಿಕೆಟ್ ಆರಂಭ
ಮುಲ್ತಾನ್ (ಪಾಕಿಸ್ತಾನ): ಈ ವರ್ಷದ ಏಕದಿನ ಕ್ರಿಕೆಟ್ ವಿಶ್ವಕಪ್ ಹಿನ್ನೆಲೆಯಲ್ಲಿ ಏಕದಿನ ಮಾದರಿಯಲ್ಲೇ ನಡೆಯುತ್ತಿರುವ ಏಷ್ಯಾ ಕಪ್ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಪಾಕಿಸ್ತಾನ ಮತ್ತು ನೇಪಾಳ ತಂಡಗಳು ಇದೀಗ ಪರಸ್ಪರ ಮುಖಾಮುಖಿ ಆಗುತ್ತಿವೆ.ಕ್ರಿಕೆಟ್ ಶಿಶು ನೇಪಾಳದ ವಿರುದ್ಧ ವಿಶ್ವದ ಅಗ್ರ ಶ್ರೇಯಾಂಕಿತ ಏಕದಿನ ಕ್ರಿಕೆಟ್ ತಂಡವಾದ ಪಾಕಿಸ್ತಾನ ಮೊದಲು ಬ್ಯಾಟಿಂಗ್ ಮಾಡುತ್ತಿದೆ. ಪಾಕಿಸ್ತಾನ ತಂಡ ಇಂದು ಮುಂಜಾನೆ ನೇಪಾಳ ತಂಡದ ವಿರುದ್ಧ ಆಡುವ 11ರ ಬಳಗವನ್ನು ನಿರ್ಧರಿಸಿ ಪ್ರಕಟಿಸಿತ್ತು. ಇದೀಗ ಪಂದ್ಯಾರಂಭವಾಗಿದೆ. ಟಾಸ್ ಗೆದ್ದ ಪಾಕಿಸ್ತಾನ ಬ್ಯಾಟಿಂಗ್ […]
ವೈಷ್ಣೋದೇವಿ ಸನ್ನಿಧಿಗೆ ಶಾರುಖ್ ಖಾನ್ ಭೇಟಿ : ಜವಾನ್ ಬಿಡುಗಡೆಗೆ ದಿನಗಣನೆ!
ದೇಶ ಮಾತ್ರದಲ್ಲದೇ ವಿಶ್ವದಾದ್ಯಂತ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಸಂಪಾದಿಸಿರುವ ಜನಪ್ರಿಯ ನಟ ಶಾರುಖ್ ಖಾನ್ ಮುಖ್ಯಭೂಮಿಕೆಯ ಜವಾನ್ ಬಿಡುಗಡೆಗೆ ದಿನಗಣನೆ ಆರಂಭವಾಗಿದೆ.ಪ್ರಸಿದ್ಧ ಧಾರ್ಮಿಕ ಕ್ಷೇತ್ರ ವೈಷ್ಣೋದೇವಿ ಸನ್ನಿಧಿಗೆ ಶಾರುಖ್ ಖಾನ್ ಭೇಟಿ ಕೊಟ್ಟು ಪ್ರಾರ್ಥನೆ ಸಲ್ಲಿಸಿದ್ದಾರೆ. ವೈಷ್ಣೋದೇವಿ ಸನ್ನಿಧಿಗೆ ಎಸ್ಆರ್ಕೆ ಭೇಟಿ: ಪ್ರಸಿದ್ಧ ನಟ ಎಸ್ಆರ್ಕೆ ಜಮ್ಮು ಕಾಶ್ಮೀರದ ರಿಯಾಸಿ ಜಿಲ್ಲೆಯ ತ್ರಿಕೂಟ ಬೆಟ್ಟಗಳ ಮೇಲಿರುವ ಮಾತಾ ವೈಷ್ಣೋದೇವಿ ಸನ್ನಿಧಿಗೆ ಭೇಟಿ ಕೊಟ್ಟಿದ್ದಾರೆ. ಜವಾನ್ ಬಿಡುಗಡೆಗೂ ಮುನ್ನ ಧಾರ್ಮಿಕ ಕ್ಷೇತ್ರಕ್ಕೆ ಭೇಟಿ ಕೊಟ್ಟ ನಟ ವಿಶೇಷ ಪ್ರಾರ್ಥನೆ […]
ಏಷ್ಯಾಕಪ್: ಸೆಪ್ಟೆಂಬರ್ 2ರಂದು ಭಾರತ vs ಪಾಕ್ ಪಂದ್ಯ, ಕೊಲಂಬೊ ತಲುಪಿದ ರೋಹಿತ್ ಬಳಗ!
ಕೊಲಂಬೊ (ಶ್ರೀಲಂಕಾ): ಪಾಕಿಸ್ತಾನದ ಮುಲ್ತಾನ್ ಅಂತರರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನೇಪಾಳ ಮತ್ತು ಪಾಕಿಸ್ತಾನದ ನಡುವೆ ಉದ್ಘಾಟನಾ ಪಂದ್ಯ ನಡೆಯುತ್ತಿದೆ.ಇನ್ನೊಂದೆಡೆ, ಕಳೆದ 6 ದಿನಗಳಿಂದ ಏಷ್ಯಾಕಪ್ ಮತ್ತು ವಿಶ್ವಕಪ್ ಹಿನ್ನೆಲೆಯಲ್ಲಿ ಬೆಂಗಳೂರಿನ ಆಲೂರಿನಲ್ಲಿ ಕಠಿಣ ಅಭ್ಯಾಸ ನಡೆಸಿದ ಭಾರತ ಕ್ರಿಕೆಟ್ ತಂಡ ಇಂದು ಶ್ರೀಲಂಕಾ ದೇಶಕ್ಕೆ ತೆರಳಿದೆ. ಸೆಪ್ಟೆಂಬರ್ 2ರಂದು ನಡೆಯುವ ಭಾರತ-ಪಾಕಿಸ್ತಾನ ನಡುವಣ ಪಂದ್ಯಕ್ಕೆ ಕೋಟ್ಯಂತರ ಕ್ರಿಕೆಟ್ಪ್ರೇಮಿಗಳು ಕಾತರದಿಂದ ಕಾದು ಕುಳಿತಿದ್ದಾರೆ.ಬೆಂಗಳೂರಿನ ಎನ್ಸಿಎಯಲ್ಲಿ ಕಠಿಣ ಅಭ್ಯಾಸ ನಡೆಸಿದ ಭಾರತ ಕ್ರಿಕೆಟ್ ತಂಡ ಇಂದು ಏಷ್ಯಾಕಪ್ ಟೂರ್ನಿಗಾಗಿ ಶ್ರೀಲಂಕಾ […]
19 ಲಕ್ಷ ವಿಡಿಯೋಗಳನ್ನು 3 ತಿಂಗಳಲ್ಲಿ ಡಿಲೀಟ್ ಮಾಡಿದ ಯೂಟ್ಯೂಬ್!
ನವದೆಹಲಿ: ಗೂಗಲ್ ಒಡೆತನದ ಯೂಟ್ಯೂಬ್ 2023 ರ ಜನವರಿ ಮತ್ತು ಮಾರ್ಚ್ ನಡುವೆ ನಿಯಮ ಉಲ್ಲಂಘನೆಗಾಗಿ ಭಾರತದಲ್ಲಿ ತನ್ನ ಪ್ಲಾಟ್ಫಾರ್ಮ್ನಿಂದ 19 ಲಕ್ಷಕ್ಕೂ ಹೆಚ್ಚು ವಿಡಿಯೋಗಳನ್ನು ತೆಗೆದುಹಾಕಿದೆ. ಅದೇ ರೀತಿ ಜಾಗತಿಕವಾಗಿ ಯೂಟ್ಯೂಬ್ 64.8 ಲಕ್ಷ ವಿಡಿಯೋಗಳನ್ನು ತೆಗೆದುಹಾಕಿದೆ. ಹಗರಣಗಳು, ದಾರಿತಪ್ಪಿಸುವ ಮೆಟಾಡೇಟಾ ಅಥವಾ ಥಂಬ್ನೇಲ್ಗಳು ಮತ್ತು ವಿಡಿಯೋ ಮತ್ತು ಕಾಮೆಂಟ್ಗಳ ಸ್ಪ್ಯಾಮ್ ಸೇರಿದಂತೆ ಯೂಟ್ಯೂಬ್ನ ಸ್ಪ್ಯಾಮ್ ನೀತಿಗಳನ್ನು ಉಲ್ಲಂಘಿಸಿದ್ದಕ್ಕಾಗಿ 87 ಲಕ್ಷಕ್ಕೂ ಹೆಚ್ಚು ಚಾನೆಲ್ಗಳನ್ನು ಕಂಪನಿಯು ಇದೇ ಅವಧಿಯಲ್ಲಿ ತೆಗೆದುಹಾಕಿದೆ.ಈ ವರ್ಷದ ಆರಂಭದ ಮೂರು ತಿಂಗಳಲ್ಲಿ […]