ಪಂದ್ಯಕ್ಕೂ ಮುನ್ನ ಮೌನಾಚರಣೆ : ರೈಲು ದುರಂತದಲ್ಲಿ ಮಡಿದವರಿಗೆ ಹಾಕಿ ಆಟಗಾರರಿಂದ ಕಂಬನಿ
ಲಂಡನ್: ಒಡಿಶಾದಲ್ಲಿ ನಡೆದ ಭೀಕರ ತ್ರಿವಳಿ ರೈಲು ದುರಂತಕ್ಕೆ ಹಾಕಿ ಆಟಗಾರರು ಸಂತಾಪ ಸೂಚಿಸಿದರು. ಇಂಗ್ಲೆಂಡ್ನಲ್ಲಿ ನಡೆಯುತ್ತಿರುವ ಟೂರ್ನಿಯಲ್ಲಿ ಮೌನಾಚರಣೆ ಮಾಡಿದರು. ಒಡಿಶಾದಲ್ಲಿ ತ್ರಿವಳಿ ರೈಲುಗಳ ಭೀಕರ ಡಿಕ್ಕಿ ದುರಂತದಲ್ಲಿ 288 ಜನರು ಬಲಿಯಾಗಿದ್ದು, ಸಾವಿರಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಭೀಕರ ದುರಂತ: ಜೂನ್ 2 ರಂದು (ಶುಕ್ರವಾರ) ಸಂಜೆ 7 ಗಂಟೆ ಸುಮಾರಿನಲ್ಲಿ ಒಡಿಶಾದ ಬನಹಗಾ ರೈಲು ನಿಲ್ದಾಣದ ಬಳಿ ಜವರಾಯ ಕಾದು ಕುಳಿತಿದ್ದ. ನಿಲ್ದಾಣದ ಹೊರಭಾಗದಲ್ಲಿ ಹೌರಾದಿಂದ ಚೆನ್ನೈಗೆ ಹೊರಟಿದ್ದ ಕೋರಮಂಡಲ್ ರೈಲು ಚಲಿಸುತ್ತಿದ್ದಾಗಲೇ […]
ಉತ್ಕರ್ಷ ಪವಾರ್ ಜೊತೆ ಸಪ್ತಪದಿ ತುಳಿದ ಕ್ರಿಕೆಟರ್ ರುತುರಾಜ್ ಗಾಯಕ್ವಾಡ್
ನವದೆಹಲಿ: ಇಂಗ್ಲೆಂಡ್ನಲ್ಲಿ ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಸೆಣಸಾಟಕ್ಕೆ ಸಜ್ಜಾಗುತ್ತಿದ್ದರೆ, ಇತ್ತ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ಕೆ) ತಂಡದ ಸ್ಟಾರ್ ಬ್ಯಾಟರ್ ಆಗಿರುವ ರುತುರಾಜ್ ಗಾಯಕ್ವಾಡ್ ಅವರು ಗೆಳತಿ ಉತ್ಕರ್ಷ ಪವಾರ್ ಅವರೊಂದಿಗೆ ವೈವಾಹಿಕ ಜೀವನಕ್ಕೆ ಶನಿವಾರ ಕಾಲಿಟ್ಟರು. ಮದುವೆಯ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಗಾಯಕ್ವಾಡ್, “ಕ್ರಿಕೆಟ್ ಪಿಚ್ನಿಂದ ವಿಶೇಷ ವೇದಿಕೆಯವರೆಗೆ ನಮ್ಮ ಪ್ರಯಾಣ ಪ್ರಾರಂಭವಾಗಿದೆ!” ಎಂದು ಒಕ್ಕಣೆ ಬರೆದುಕೊಂಡಿದ್ದಾರೆ. ಇದಕ್ಕೆ ಕ್ರಿಕೆಟಿಗರು, ಗಣ್ಯರು ಶುಭಾಶಯ ಕೋರಿದ್ದಾರೆ. ಮದುವೆ ಸಂಭ್ರಮದ ಕೆಲವು […]
20 ಸಾವಿರದವರೆಗೂ ರಿಯಾಯಿತಿ ನೀಡಿದ ಶಿಯೋಮಿ 4 ಸ್ಮಾರ್ಟ್ಫೋನ್ಗಳ ಬೆಲೆ ಕಡಿತ
ನವದೆಹಲಿ : ಶಿಯೋಮಿಯ ನಾಲ್ಕು ಸ್ಮಾರ್ಟ್ಫೋನ್ಗಳ ಬೆಲೆಗಳನ್ನು ಕಡಿಮೆ ಮಾಡಲಾಗಿದೆ. ಚೀನಾ ಮೂಲದ ಸ್ಮಾರ್ಟ್ಫೋನ್ಗಳ ತಯಾರಕ ಕಂಪನಿ ಶಿಯೋಮಿ (Xiaomi) ತನ್ನ ನಾಲ್ಕು ಸ್ಮಾರ್ಟ್ಫೋನ್ಗಳ ಮೇಲೆ ಬೆಲೆ ಕಡಿತವನ್ನು ಘೋಷಿಸಿದೆ. ರಿಯಾಯಿತಿ ದರದಲ್ಲಿ ಲಭ್ಯವಾಗುತ್ತಿರುವ ಶಿಯೋಮಿ ಸ್ಮಾರ್ಟ್ಫೋನ್ಗಳ ಮಾಹಿತಿ ಇಲ್ಲಿದೆ. ವಿಭಿನ್ನ ಬೆಲೆ ಶ್ರೇಣಿಗಳಲ್ಲಿರುವ ಈ ಸ್ಮಾರ್ಟ್ಫೋನ್ಗಳು Mi ಡಾಟ್ ಕಾಂ ಹಾಗೂ ಶಿಯೋಮಿಯ ಆನ್ಲೈನ್ ರಿಟೇಲ್ ಪ್ಲಾಟ್ಫಾರ್ಮ್ ಮತ್ತು ಅಮೆಜಾನ್ ಮತ್ತು ಶಿಯೋಮಿಯ ಇ-ಕಾಮರ್ಸ್ ವೆಬ್ಸೈಟ್ಗಳಲ್ಲಿ ಇನ್ನು ಮುಂದೆ ಮೊದಲಿಗಿಂತೆ ಕಡಿಮೆ ಬೆಲೆಗೆ ಲಭ್ಯವಾಗಲಿವೆ. ರೆಡ್ಮಿ […]
ಚೀನಾದಲ್ಲಿದೆ ವಿಶ್ವದ ಮೊದಲ ಮತ್ತು ಏಕೈಕ ಸಂಪೂರ್ಣ ಬಿಳಿ ಬಣ್ಣದ ಪಾಂಡಾ!
ವಿಶ್ವದ ಮೊದಲ ಮತ್ತು ಏಕೈಕ ಅಲ್ಬಿನೋ ಪಾಂಡಾ ಅಂತಿಮವಾಗಿ ಚೀನಾದ ಪರ್ವತಗಳಲ್ಲಿ ಚಲನೆ-ಸೂಕ್ಷ್ಮ ಕ್ಷೇತ್ರ ಕ್ಯಾಮೆರಾದ ಮುಂದೆ ಕಾಣಿಸಿಕೊಂಡಿದೆ. 2019 ರಲ್ಲಿ ಪತ್ತೆಯಾದ ಬಳಿಕ ಇದು ಮೊದಲ ಬಾರಿಗೆ ಕ್ಯಾಮರಾ ಮುಂದೆ ಬಂದಿದೆ. ನೈಋತ್ಯ ಚೀನಾದ ಸಿಚುವಾನ್ ಪ್ರಾಂತ್ಯದ ವೊಲಾಂಗ್ ನ್ಯಾಷನಲ್ ನೇಚರ್ ರಿಸರ್ವ್ನಲ್ಲಿ ಸಂಪೂರ್ಣ ಬಿಳಿ ಬಣ್ಣದ ಪಾಂಡಾವನ್ನು ಗುರುತಿಸಲಾಗಿದೆ. Sciencealert.com ವರದಿಯ ಪ್ರಕಾರ, ಈ ಅಪರೂಪದ ಪ್ರಾಣಿ ತನ್ನ ವಿಶಿಷ್ಟ ನೋಟದ ಹೊರತಾಗಿಯೂ ಚೀನಾದ ಸಿಚುವಾನ್ ಪ್ರಾಂತ್ಯದ ವೊಲಾಂಗ್ ನ್ಯಾಷನಲ್ ನೇಚರ್ ರಿಸರ್ವ್ನಲ್ಲಿ ಆರೋಗ್ಯಕರವಾಗಿರುವಂತೆ […]
ಹಿರಿಯರ ಮಾತಿಗೆ ಬೆಲೆ ಕೊಟ್ಟು ತಲೆಬಾಗಬೇಕಾಯಿತು; ತಾಳ್ಮೆ ಕಾಯ್ದುಕೊಳ್ಳಿ: ಅಭಿಮಾನಿಗಳಿಗೆ ಡಿಕೆಶಿ ಕರೆ
ಕನಕಪುರ: ಮುಖ್ಯಮಂತ್ರಿ ಪಟ್ಟಕ್ಕಾಗಿ ತಮ್ಮ ಆಕಾಂಕ್ಷೆಗಳನ್ನು ಜೀವಂತವಾಗಿರಿಸಿಕೊಂಡಿರುವ ಕರ್ನಾಟಕ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ತಮ್ಮ ಬೆಂಬಲಿಗರನ್ನು ಉದ್ದೇಶಿಸಿ “ತಾಳ್ಮೆಯಿಂದ” ಇರಿ ಮತ್ತು “ನಿರಾಶೆಗೊಳ್ಳಬೇಡಿ” ಎಂದು ಕೇಳಿಕೊಂಡಿದ್ದಾರೆ. ದೊಡ್ಡ ಜವಾಬ್ದಾರಿಯಾದ ಮುಖ್ಯಮಂತ್ರಿ ಹುದ್ದೆ ಸಿಗುತ್ತದೆ ಎಂದು ನೀವೆಲ್ಲರೂ ಭಾವಿಸಿ ಪ್ರೀತಿಯ ಸುರಿಮಳೆಗೈದಿದ್ದೀರಿ, ಯಾರೂ ನಿರಾಶರಾಗುವ ಅಗತ್ಯವಿಲ್ಲ ಎಂದು ಶನಿವಾರ ತಮ್ಮ ಕ್ಷೇತ್ರ ಕನಕಪುರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಉಪ ಮುಖ್ಯಮಂತ್ರಿ ಹೇಳಿದ್ದಾರೆ. ತಮ್ಮನ್ನು ಅಧಿಕಾರಕ್ಕೆ ತಂದ ಮತದಾರರಿಗೆ ಅವರು ಧನ್ಯವಾದ ಅರ್ಪಿಸಿ ಮಾತನಾಡಿ, ನನ್ನನ್ನು ಮುಖ್ಯಮಂತ್ರಿಯನ್ನಾಗಿ […]