ಉದ್ಯಾವರ ಮಹತೋಭಾರ ಶ್ರೀ ಸಿದ್ಧಿವಿನಾಯಕ ದೇವಸ್ಥಾನ ಬ್ರಹ್ಮಕುಂಭಾಭಿಷೇಕ ಸಂಪನ್ನ
ಉಡುಪಿ: ಧಾರ್ಮಿಕ, ಸಾಂಸ್ಕೃತಿಕ, ಸಂಸ್ಕಾರಯುತ ಸಮೃದ್ಧಿಯ ದೇವಾಲಯ ನಮ್ಮ ಸಂಪತ್ತು. ಭಕ್ತರು ಮತ್ತು ಭಗವಂತನನ್ನು ಸೇರಿಸುವ ಮಾಧ್ಯಮವಾಗಿದೆ. ನಮ್ಮ ಮನಸ್ಸಿನ ನೆಮ್ಮದಿಗಾಗಿ ಪ್ರಾಚೀನರು ಕಂಡುಕೊಂಡ ಪರಿಹಾರವಾಗಿದೆ. ಮಕ್ಕಳಲ್ಲಿ ಧರ್ಮ ಸಂಸ್ಕೃತಿಯ ಪರಿಜ್ನಾನ ಅರಳಿಸಿ ಹಿಂದು ಧರ್ಮವನ್ನು ಉಳಿಸೋಣ ಎಂದು ಕಾಣಿಯೂರು ಮಠದ ಶ್ರೀ ವಿದ್ಯಾಾವಲ್ಲಭತೀರ್ಥ ಶ್ರೀಪಾದರು ಹೇಳಿದರು. ಅವರು ಉದ್ಯಾವರ ಮಹತೋಭಾರ ಶ್ರೀ ಸಿದ್ಧಿವಿನಾಯಕ ದೇವಸ್ಥಾನದ ಬ್ರಹ್ಮಕುಂಭಾಭಿಷೇಕದ ಸಂದರ್ಭ ನಡೆದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ಸಂದೇಶ ನೀಡಿದರು. ಭೀಮನಕಟ್ಟೆ ಮಠದ ಶ್ರೀ ರಘುವರೇಂದ್ರತೀರ್ಥ ಶ್ರೀಪಾದರು, ಮಕ್ಕಳಿಗೆ ಬಾಗುವಿಕೆ […]
ರಾಂಪುರದಲ್ಲಿ 40 ಅಡಿ ಆಳದ ಬಾವಿಗೆ ಬಿದ್ದ ಗೋವಿನ ರಕ್ಷಣೆ
40 ಅಡಿ ಆಳದ ಬಾವಿಗೆ ಬಿದ್ದ ಗೋವನ್ನು ರಕ್ಷಣೆ ಮಾಡಿದ ಘಟನೆ ಅಲೆವೂರಿನ ರಾಂಪುರದಲ್ಲಿ ಇಂದು ನಡೆದಿದೆ. ಮೇಯಲು ಬಿಟ್ಟಿದ್ದ ಗಂಡು ಕರು, ಬಾವಿಯ ಬಳಿ ಸೊಪ್ಪು ತಿನ್ನಲು ಹೋಗಿದೆ. ಆಗ ಆಕಸ್ಮಿಕವಾಗಿ ಕಾಲು ಜಾರಿ ಬಾವಿಯೊಳಗೆ ಬಿದ್ದಿದೆ. ಇದನ್ನು ನೋಡಿದ ಸ್ಥಳೀಯರು ಕಾರ್ಯಕರ್ತ ಪ್ರಸಾದ್ ಪೂಜಾರಿ ಅವರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ತೆರಳಿದ ಪ್ರಸಾದ್ ಅವರು, ಮುಳುಗು ತಜ್ಞ ಅಶೋಕ್ ಶೆಟ್ಟಿ ದಂದೂರುಕಟ್ಟೆ ಮಾಹಿತಿ ನೀಡಿದರು. ಅದರಂತೆ ತಕ್ಷಣ ಸ್ಥಳಕ್ಕೆ ಬಂದ ಅಶೋಕ್ ಶೆಟ್ಟಿ […]
ಪೆಲತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ “ಬ್ರಹ್ಮಕಲಶೋತ್ಸವ”
ಹಿರಿಯಡ್ಕ: ಪೆಲತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ಪ್ರಯುಕ್ತ ಮೇ.24 ರಂದು ನಡೆದ ಧಾರ್ಮಿಕ ಸಭೆಯನ್ನು ಅದಮಾರು ಮಠದ ಹಿರಿಯ ಯತಿ ಶ್ರೀ ವಿಶ್ವಪ್ರಿಯತೀರ್ಥ ಸ್ವಾಮೀಜಿ ಉದ್ಘಾಟಿಸಿ ಮಾತನಾಡಿದರು. ನಮ್ಮ ಕರೆಯುವಿಕೆಗೆ ಭಗವಂತನು ಸಮೀಪಿಸುತ್ತಾನೆ. ಕಂಠದಿಂದ ಬರುವ ಕೂಗಿಗಿಂತ ಹೃದಯದಿಂದ ಬರುವ ಕೂಗಿಗೆ ಭಗವಂತ ಒಲಿಯುತ್ತಾನೆ. ಪ್ರತಿಯೊಬ್ಬರೂ ದೇವರನ್ನು ಧ್ಯಾನದಿಂದ ಸ್ತುತಿಸಿದಾಗ ಭಗವಂತನ ಅನುಗ್ರಹ ಪ್ರಾಪ್ತಿಯಾಗುತ್ತದೆ. ಸುವ್ಯವಸ್ಥೆಯಲ್ಲಿ ಸಮಾಜ ಮುನ್ನಡೆಯಲು ಭಗವಂತನ ಅನುಗ್ರಹ ಅತ್ಯಗತ್ಯ. ಕಾಲಕಾಲಕ್ಕೆ ಮಳೆ ಬೆಳೆ ನೀಡುವ ಮೂಲಕ ಪ್ರತಿಯೊಬ್ಬರಿಗೂ ಬದುಕಲು ಅವಕಾಶವನ್ನು ಕಲ್ಪಿಸಿಕೊಟ್ಟಿದ್ದಾನೆ. […]
ಬಸ್ ನಲ್ಲಿ ಟಿಕೆಟ್ ಕೊಳ್ಳಲು ಮಹಿಳೆಯರ ಹಿಂದೇಟು: ರಾಜ್ಯ ಸಾರಿಗೆ ಸಿಬ್ಬಂದಿಗಳ ಪರದಾಟ; ಸಿಎಂಗೆ ಪತ್ರ
ಬೆಂಗಳೂರು: ಚುನಾವಣೆಯ ಸಂದರ್ಭದಲ್ಲಿ ಮಹಿಳೆಯರಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ ಗಳಲ್ಲಿ ಉಚಿತ ಪ್ರಯಾಣದ ಗ್ಯಾರಂಟಿ ಅನ್ನು ಕಾಂಗ್ರೆಸ್ ಪಕ್ಷವು ನೀಡಿದ್ದು, ಇದೀಗ ಮಹಿಳೆಯರು ಬಸ್ ಪ್ರಯಾಣದ ಸಂದರ್ಭದಲ್ಲಿ ಟಿಕೆಟ್ ಕೊಳ್ಳಲು ನಿರಾಕರಣೆ ಮಾಡುತ್ತಿರುವ ಘಟನೆಗಳು ವರದಿಯಾಗುತ್ತಿವೆ. ಮಹಿಳೆಯರಿಂದ ಟಿಕೆಟ್ ಶುಲ್ಕವನ್ನು ಪಡೆಯಲು ಸಾರಿಗೆ ಸಿಬ್ಬಂದಿಗಳು ಹರಸಾಹಸ ಪಡಬೇಕಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮಹಿಳೆಯರಿಗೆ ಬಸ್ ನಲ್ಲಿ ಉಚಿತ ಪ್ರಯಾಣವನ್ನು ಘೋಷಣೆ ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಕೆ.ಎಸ್.ಆರ್.ಟಿ.ಸಿ ಸ್ಟಾಫ್ ಎಂಡ್ ವರ್ಕರ್ಸ್ ಫೆಡರೇಷನ್ ಪ್ರಧಾನ ಕಾರ್ಯದರ್ಶಿ […]
ಮೇ 29 ರಂದು ಆದಿಪುರುಷ್ ಚಿತ್ರದ “ರಾಮ್ ಸಿಯಾ ರಾಮ್” ದೇಶಾದ್ಯಂತ ಎಲ್ಲಾ ವೇದಿಕೆಗಳಲ್ಲಿ ಬಿಡುಗಡೆ
ಭಾರತದ ಐತಿಹಾಸಿಕ ಚರಿತ್ರೆ ರಾಮಾಯಣ ಆಧಾರಿತ ಎನ್ನಲಾದ ಆದಿಪುರುಷ್ ಚಿತ್ರವು ದಾಖಲೆ ಬರೆಯಲಿದ್ದು, ಚಿತ್ರದ ರಾಮ್ ಸಿಯಾ ರಾಮ್ ಹಾಡು ಮೇ 29 ರಂದು ಮಧ್ಯಾಹ್ನ 12 ಗಂಟೆಗೆ ಭಾರತದಾದ್ಯಂತ 70+ ಮಾರುಕಟ್ಟೆಗಳನ್ನು ವ್ಯಾಪಿಸಿರುವ ವಿವಿಧ ವೇದಿಕೆಗಳಾದ ಚಲನಚಿತ್ರ ಚಾನೆಲ್‌ಗಳು, ಜಿಇಸಿ ಗಳು, ರೇಡಿಯೋ ಸ್ಟೇಷನ್, ರಾಷ್ಟ್ರೀಯ ಸುದ್ದಿ ವಾಹಿನಿಗಳು, ಹೊರಾಂಗಣ ಜಾಹೀರಾತು ಫಲಕಗಳು, ಸಂಗೀತ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ಗಳು, ಟಿಕೆಟಿಂಗ್ ಪಾಲುದಾರರು, ಚಲನಚಿತ್ರ ಥಿಯೇಟರ್‌ಗಳು, ವೀಡಿಯೊ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ಗಳು ಮತ್ತು ಎಲ್ಲಾ ಪ್ರಮುಖ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ […]