ಕಲ್ಯಾದ ಕೈರಬೆಟ್ಟುವಿನ 7 ಕಾಂಗ್ರೆಸ್ಸ್ ಕಾರ್ಯಕರ್ತರು ಬಿಜೆಪಿಗೆ ಸೆರ್ಪಡೆ

ಕಾರ್ಕಳ: ಕಲ್ಯಾ ಗ್ರಾಮದ ಕೈರಬೆಟ್ಟು ಪರಿಸರದ ಸುಮಾರು 7 ಜನ ಕಾಂಗ್ರೆಸ್ಸ್ ಪಕ್ಷದ ಸಕ್ರೀಯ ಕಾರ್ಯಕರ್ತರು ಕಾರ್ಕಳ ಕ್ಷೇತ್ರದ ಶಾಸಕರು ಮತ್ತು ಸಚಿವರಾದ ಶ್ರೀ.ವಿ.ಸುನಿಲ್ ಕುಮಾರ್ ರವರ ಅಭಿವೃದ್ದಿ ಚಟುವಟಿಕೆಗಳು ಮತ್ತು ಕ್ಷೇತ್ರದ ಬಗೆಗಿನ ವಿಶೇಷ ಕಾಳಜಿಯನ್ನು ಮೆಚ್ಚಿ ಇಂದು ಸಚಿವರ ಸಮ್ಮುಖದಲ್ಲಿ ಕಾಂಗ್ರೆಸ್ಸ್ ತೊರೆದು ಬಿಜೆಪಿಗೆ ಸೇರ್ಪಡೆಗೊಂಡರು. ಬಾಲೇಶ್ ಕುಮೆರೊಟ್ಟು, ಜಯ ನಾಯಕ್ ಕೈರಬೆಟ್ಟು, ಶೀನ ನಾಯಕ್ ಶೇಡಿ ಬಾಕ್ಯಾರು ರಾಧ ಕೈರಬೆಟ್ಟು, ಸುಪ್ರೀತ ಕೈರಬೆಟ್ಟು, ಮೂರ್ತಿ ನೆಲ್ಲಿಗುಡ್ಡೆ, ನಾಗರಾಜ್ ಕೈರಬೆಟ್ಟು, ಮೊದಲಾದವರು ಸ್ವ- ಇಚ್ಛೆಯಿಂದ […]

ನಾಡ್ಪಾಲು ಗ್ರಾಮ ಸೋಮೇಶ್ವರದ ಮತದಾರರನ್ನು ಭೇಟಿ ಮಾಡಿದ ಕಾರ್ಕಳ ಬಿಜೆಪಿ ಅಭ್ಯರ್ಥಿ ವಿ.ಸುನಿಲ್ ಕುಮಾರ್

ಹೆಬ್ರಿ: ಕಾರ್ಕಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ನಾಡ್ಪಾಲು ಗ್ರಾಮದ ಸೋಮೇಶ್ವರದಲ್ಲಿ ಮತದಾರರನ್ನು ಇಂದು ಭೇಟಿ ಮಾಡಿದರು. ಬರುವ ಮೇ10 ಕ್ಕೆ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಅಮೂಲ್ಯವಾದ ಮತವನ್ನು ನನಗೆ ನೀಡಿ ಸ್ವರ್ಣ ಕಾರ್ಕಳದ ಮತ್ತಷ್ಟು ಅಭಿವೃದ್ಧಿಗಾಗಿ ಹರಸಿ ಆಶೀರ್ವದಿಸುವಂತೆ ಕೋರಿದರು.

ಮನೆಯಿಂದಲೇ ಮತದಾನಕ್ಕೆ ಒಲ್ಲೆ ಎಂದರು: ಮತಗಟ್ಟೆಗೆ ಬರಲು ಉತ್ಸಾಹ ತೋರುತ್ತಿದ್ದಾರೆ ಹಿರಿಯನಾಗರಿಕರು/ವಿಕಲಚೇತನರು

ಉಡುಪಿ: ರಾಜ್ಯದಲ್ಲಿ ವಿಧಾನಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಇದೇ ಮೊದಲ ಬಾರಿಗೆ ಚುನಾವಣಾ ಆಯೋಗವು ವಿಕಲಚೇತನರಿಗೆ ಮತ್ತು 80 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಮನೆಯಿಂದಲೇ ಮತ ಚಲಾಯಿಸಲು ವಿಶೇಷ ಸೌಲಭ್ಯ ಒದಗಿಸಿದೆ. ಆದರೆ ಜಿಲ್ಲೆಯ ಬಹುತೇಕ ವಿಕಲಚೇತನರು ಮತ್ತು ಹಿರಿಯ ನಾಗರೀಕರು ಮನೆಯಿಂದಲೇ ಮತದಾನ ಮಾಡುವ ಸೌಲಭ್ಯವನ್ನು ಬಳಸಿಕೊಳ್ಳದೇ, ಮತದಾನದ ದಿನದಂದು ಮತಗಟ್ಟೆಗೆ ಖುದ್ದು ತೆರಳಿ ತಮ್ಮ ಮತದಾನದ ಹಕ್ಕು ಚಲಾಯಿಸಲು ಉತ್ಸಾಹ ತೋರಿದ್ದಾರೆ. ಜಿಲ್ಲೆಯಲ್ಲಿ 80 ವರ್ಷ ಮೇಲ್ಪಟ್ಟ, ಬೈಂದೂರು ವಿಧಾನಸಭಾ ಕ್ಷೇತ್ರದ 5864 ಹಿರಿಯ […]

ಕಾಸರಗೋಡು-ತಿರುವನಂತಪುರ ವಂದೇ ಭಾರತ್ ಎಕ್ಸ್ ಪ್ರೆಸ್ ವೇಳಾಪಟ್ಟಿ ಮತ್ತು ಟಿಕೆಟ್ ದರಗಳು ಇಂತಿವೆ

ತಿರುವನಂತಪುರಂ: ಪ್ರಧಾನಿ ನರೇಂದ್ರ ಮೋದಿ ಅವರು ಕೇರಳದ ಮೊದಲ ವಂದೇ ಭಾರತ್ ಎಕ್ಸ್‌ಪ್ರೆಸ್ ಅನ್ನು ಏಪ್ರಿಲ್ 25 ರಂದು ಉದ್ಘಾಟಿಸಲಿದ್ದಾರೆ. ತಿರುವನಂತಪುರಂ ಮತ್ತು ಕಾಸರಗೋಡು ಮಧ್ಯೆ ಕೇರಳದ 11 ಜಿಲ್ಲೆಗಳ ನಡುವೆ ಸಂಚರಿಸಲಿದೆ. ಇದು ದೇಶದ 16ನೇ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಾಗಿದೆ. ಕಾಸರಗೋಡು – ತಿರುವನಂತಪುರಂ ಸೆಂಟ್ರಲ್ ವಂದೇ ಭಾರತ್ ಎಕ್ಸ್‌ಪ್ರೆಸ್ ಕಾಸರಗೋಡು ಮತ್ತು ತಿರುವನಂತಪುರಂ ನಡುವೆ ಕಾರ್ಯನಿರ್ವಹಿಸಲಿದ್ದು, ಕೊಲ್ಲಂ, ಕೊಟ್ಟಾಯಂ, ಎರ್ನಾಕುಲಂ ಟೌನ್, ತ್ರಿಶೂರ್, ಶೋರನೂರು, ಕೋಝಿಕ್ಕೋಡ್, ಕಣ್ಣೂರು ಮತ್ತು ಕಾಸರಗೋಡುಗಳಲ್ಲಿ ನಿಲುಗಡೆಯಾಗಲಿದೆ. ವಂದೇ […]

ರಾಹುಲ್ ಗಾಂಧಿ ಮಾನನಷ್ಟ ಮೊಕದ್ದಮೆ: ಕೆಳ ನ್ಯಾಯಾಲಯದ ಆದೇಶ ಮೇ 15 ರವರೆಗೆ ತಡೆಹಿಡಿದ ಪಟ್ನಾ ಹೈಕೋರ್ಟ್

ನವದೆಹಲಿ: ‘ಮೋದಿ ಉಪನಾಮ’ ಮಾನನಷ್ಟ ಪ್ರಕರಣದಲ್ಲಿ ಕೆಳ ನ್ಯಾಯಾಲಯದ ಆದೇಶವನ್ನು ಮೇ 15 ರವರೆಗೆ ತಡೆಹಿಡಿಯುವ ಮೂಲಕ ಪಾಟ್ನಾ ಹೈಕೋರ್ಟ್ ಸೋಮವಾರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ತಾತ್ಕಾಲಿಕ ಉಪಶಮನ ನೀಡಿದೆ. ಇದಕ್ಕೂ ಮೊದಲು, ‘ಮೋದಿ ಉಪನಾಮ’ ಕುರಿತು ರಾಹುಲ್ ಗಾಂಧಿ ಆಕ್ಷೇಪಾರ್ಹ ಹೇಳಿಕೆಗಳಿಗಾಗಿ 2019 ರಲ್ಲಿ ಬಿಹಾರದ ಮಾಜಿ ಉಪಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ರಾಹುಲ್ ವಿರುದ್ಧ ಸಲ್ಲಿಸಿದ ಅರ್ಜಿಗೆ ಸಂಬಂಧಿಸಿದಂತೆ ಏಪ್ರಿಲ್ 12 ರಂದು ಹಾಜರಾಗುವಂತೆ ಮತ್ತು ತನ್ನ ವಾದವನ್ನು ಮಂಡಿಸುವಂತೆ ಪಾಟ್ನಾದ ಕೆಳ […]