ಕೊಚ್ಚಿ: ದೇಶದ ಪ್ರಪ್ರಥಮ ವಾಟರ್ ಮೆಟ್ರೋಗೆ ಚಾಲನೆ: ಪ್ರವಾಸೋದ್ಯಮಕ್ಕೆ ಉತ್ತೇಜನ

ಕೊಚ್ಚಿ: ಕೇರಳದ ಬಂದರು ನಗರವಾದ ಕೊಚ್ಚಿಯ ಸುತ್ತಲಿನ ಹತ್ತು ಸಣ್ಣ ದ್ವೀಪಗಳನ್ನು ಸಂಪರ್ಕಿಸುವ ದೇಶದ ಮೊದಲ ವಾಟರ್ ಮೆಟ್ರೋಗೆ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಚಾಲನೆ ನೀಡಲಿದ್ದಾರೆ. ಕೊಚ್ಚಿನ್ ಶಿಪ್‌ಯಾರ್ಡ್ ಲಿಮಿಟೆಡ್ ತಯಾರಿಸಿದ ಎಂಟು ಎಲೆಕ್ಟ್ರಿಕ್ ಹೈಬ್ರಿಡ್ ಬೋಟ್‌ಗಳೊಂದಿಗೆ ಮೆಟ್ರೋ ಯೋಜನೆಯು ಪ್ರಾರಂಭವಾಗಲಿದೆ ಎಂದು ವಾಟರ್ ಮೆಟ್ರೋ ಅಧಿಕಾರಿಗಳು ತಿಳಿಸಿದ್ದಾರೆ. ರೈಲು, ರಸ್ತೆ ಮತ್ತು ನೀರನ್ನು ಸಂಪರ್ಕಿಸುವ ಇಂಟಿಗ್ರೇಟೆಡ್ ಮೆಟ್ರೋ ವ್ಯವಸ್ಥೆಯು ರಾಜ್ಯದ ಅಭಿವೃದ್ದಿಗೆ ವೇಗ ನೀಡಲಿದೆ. ರಸ್ತೆ ಸಾರಿಗೆ ವ್ಯವಸ್ಥೆಯ ಮೇಲಿನ ಒತ್ತಡಗಳನ್ನು ಕಡಿಮೆಗೊಳಿಸಲು ಜಲ […]

ಕೋಟ: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ವಿವೇಕ ಪ.ಪೂ ಕಾಲೇಜಿಗೆ ಶೇ. 99.5 ಫಲಿತಾಂಶ

ಕೋಟ: ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ವಿವೇಕ ಪ.ಪೂ ಕಾಲೇಜಿನ ವಿದ್ಯಾರ್ಥಿಗಳು ಶೇ. 99.5 ಫಲಿತಾಂಶ ದಾಖಲಿಸಿದ್ದಾರೆ. ಒಟ್ಟು ಹಾಜರಾದ 573 ವಿದ್ಯಾರ್ಥಿಗಳಲ್ಲಿ 314 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿ, 236 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ, 20 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿ ಪಡೆದಿದ್ದಾರೆ. ವಿಜ್ಞಾನ ವಿಭಾಗದಲ್ಲಿ ವೈದೇಹಿ.ವಿ.ಪೈ 588 ಅಂಕ ಪಡೆದು ಪ್ರಥಮ ಸ್ಥಾನ, ಶ್ರೀನಿಧಿ 585 ಅಂಕ ಪಡೆದು ದ್ವಿತೀಯ ಹಾಗೂ ರಾಘವೇಂದ್ರ ಅಡಿಗ 584 ಅಂಕ ಪಡೆದು ಕಾಲೇಜಿಗೆ ತೃತೀಯ ಸ್ಥಾನ ಪಡೆದಿದ್ದಾರೆ. ವಾಣಿಜ್ಯ […]

ಕಟಪಾಡಿ: ಬಬ್ಬುಸ್ವಾಮಿ ವ್ಯೆದ್ಯನಾಥೇಶ್ವರ ದೈವಸ್ಥಾನಕ್ಕೆ ಭೇಟಿ ನೀಡಿದ ವಿನಯ್ ಕುಮಾರ್ ಸೊರಕೆ

ಉಡುಪಿ: ಕಾಪು ವಿಧಾನಸಭಾ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕುಮಾರ್ ಸೊರಕೆ ಇಂದು ಕಿನ್ನಿಗುಡ್ಡೆ ಬಬ್ಬು ಸ್ವಾಮಿ ವ್ಯೆದ್ಯನಾಥೇಶ್ವರ ಪರಿವಾರ ದೈವಗಳ ದೇವಸ್ಥಾನಕ್ಕೆ ಭೇಟಿ ನೀಡಿ, ದರ್ಶನ‌ ಸೇವೆಯಲ್ಲಿ ಭಾಗವಹಿಸಿ ಪ್ರಸಾದ ಸ್ವೀಕರಿಸಿದರು.

ಕಾರ್ಕಳ: ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡ ಬಿಜೆಪಿ ಕಾರ್ಯಕರ್ತರು

ಕಾರ್ಕಳ: ವಿಧಾನಸಭಾ ಕ್ಷೇತ್ರದ ರೆಂಜಾಳ ಗ್ರಾಮದ ಸುಮಾರು 17 ಜನ ಬಿಜೆಪಿ ಕಾರ್ಯಕರ್ತರು ರೆಂಜಾಳ ರಮೇಶ್ ಶೆಟ್ಟಿ , ಪ್ರವೀಣ್ ಶೆಟ್ಟಿ, ಜೀವನ್ ಶೆಟ್ಟಿ ಹಾಗೂ ಸಾಧಿಕ್ ರೆಂಜಾಳ ಇವರ ಮುಂದಾಳತ್ವದಲ್ಲಿ ಭಾನುವಾರ ಅಧಿಕೃತವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು. ಕಾಂಗ್ರೆಸ್ ಅಭ್ಯರ್ಥಿ ಉದಯ ಕುಮಾರ್ ಶೆಟ್ಟಿ, ಪಕ್ಷದ ಮುಖಂಡರಾದ ಪುರಸಭೆಯ ವಿಪಕ್ಷ ನಾಯಕ ಅಸ್ಪಾಕ್, ಸುಬೀತ್ ಎನ್.ಆರ್ ,ಪ್ರಚಾರ ಸಮಿತಿಯ ಅಧ್ಯಕ್ಷ ಸುಭೋದ್ ರಾವ್, ವಲೇರಿಯನ್ ಪಾಯಸ್, ಜಿಲ್ಲಾ ಕಾಂಗ್ರೆಸ್ ಯುವ ಕಾಂಗ್ರೆಸ್ ಅಧ್ಯಕ್ಷ ದೀಪಕ್ ಕೋಟ್ಯಾನ್, […]

ನೋರ್ತ್ ಶಾಲಾ ಹಳೇ ವಿದ್ಯಾರ್ಥಿ ಮತ್ತು ಶಾಲಾಭಿವೃದ್ಧಿ ಸಮಿತಿ ಬೇಸಗೆ ಶಿಬಿರ ಸಂಪನ್ನ

ಉಡುಪಿ: ನೋರ್ತ್ ಶಾಲಾ ಹಳೇ ವಿದ್ಯಾರ್ಥಿ ಮತ್ತು ಶಾಲಾಭಿವೃದ್ಧಿ ಸಮಿತಿಯ ವತಿಯಿಂದ ಎಂಟು ದಿನಗಳ‌ ಕಾಲ ನೋರ್ತ್ ಶಾಲೆಯಲ್ಲಿ ಆಯೋಜಿಸಿದ್ದ ಉಚಿತ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭವು ಇಂದು ರವಿವಾರ (ಎಪ್ರಿಲ್ 23 ರಂದು) ಶಾಲಾ ಆವರಣದಲ್ಲಿ ಆಯೋಜಿಸಲ್ಪಟ್ಟಿತು. ಕಳೆದ ವಾರ, ಎಪ್ರಿಲ್ 16 ರಂದು, ಉಡುಪಿಯ ಯುವ ಉದ್ಯಮಿ ಅಜಯ್ ಪಿ. ಶೆಟ್ಟಿ ಇವರು ಬೇಸಿಗೆ ಶಿಬಿರವನ್ನು ಉದ್ಘಾಟಿಸಿದ್ದರು. ಇಂದಿನ ಸಮಾರೋಪ ಸಮಾರಂಭ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶ್ರೀಮತಿ ರಂಜಿತಾ ರಮಾನಾಥ್ ನಾಯಕ್, ಮುರಳಿ […]