ಕುಂದಾಪುರ: ಮಂದಾರ್ತಿ ದೇವಸ್ಥಾನಕ್ಕೆ ರಜತ ರಥ ಸಮರ್ಪಣೆ

ಕುಂದಾಪುರ: ಸ್ವಪ್ರಯತ್ನಕ್ಕೆ ದೇವರ ಅನುಗ್ರಹವಿರುತ್ತದೆ. ನಮ್ಮ ಪ್ರಯತ್ನಕ್ಕೆ ದೇವರ ಅನುಗ್ರಹ ಸೇರಿದಾಗ ಮಾತ್ರವೇ ಕಾರ್ಯ ಸಫಲವಾಗುತ್ತದೆ ಎಂದು ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಹೇಳಿದರು. ಅವರು ಮಂಗಳವಾರ ಮಂದಾರ್ತಿ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ದಾನಿಗಳಾದ ಹೆಗ್ಗುಂಜೆ ಬಡಾಮನೆ ವಿಶ್ವನಾಥ ಹೆಗ್ಡೆ, ಹೆಗ್ಗುಂಜೆ ಚಾವಡಿಮನೆ ರುದ್ರಮ್ಮ ಹೆಗ್ಗಡ್ತಿ, ಅಮರನಾಥ ಶೆಟ್ಟಿ ಮತ್ತು ಕುಟುಂಬಸ್ಥರು ಸೇವಾ ರೂಪದಲ್ಲಿ ನೀಡಿದ ನೂತನ ರಜತ ರಥ ಲೋಕಾರ್ಪಣೆಗೊಳಿಸಿ ಆಶೀರ್ವಚನ ನೀಡಿದರು. ನಾವು ನೀಡಿದ್ದು, ಮಾಡಿದ್ದು ಎನ್ನುವುದಕ್ಕಿಂತ ದೇವರೇ ಮಾಡಿಸಿದ್ದು ಎನ್ನುವುದು ಅರ್ಥಪೂರ್ಣ. […]

ಏ.1ರಿಂದ ತಂಬಾಕು ಉತ್ಪನ್ನ, ಚಿನ್ನ ಬೆಳ್ಳಿ ದುಬಾರಿ; ಟಿವಿ- ಮೊಬೈಲ್ ಅಗ್ಗ

ನವದೆಹಲಿ: ಸಿಗರೇಟ್, ಪಾನ್ ಮಸಾಲಾ ಸೇರಿದಂತೆ ತಂಬಾಕು ಉತ್ಪನ್ನಗಳನ್ನು ಸೇವನೆ ಮಾಡುವವರಿಗೆ ಏಪ್ರಿಲ್ 1ರಿಂದ ಜೇಬಿನ ಮೇಲೆ ಹೆಚ್ಚಿನ ಹೊರೆ ಬೀಳಲಿದೆ. ಸಿಗರೇಟ್ ಹಾಗೂ ಪಾನ್ ಮಸಾಲಾ ಸೇರಿದಂತೆ ತಂಬಾಕು ಉತ್ಪನ್ನಗಳ ಮೇಲಿನ ಜಿ ಎಸ್ ಟಿ ಪರಿಹಾರ ಸೆಸ್ ಮಿತಿ ಅಥವಾ ಗರಿಷ್ಠ ದರವನ್ನು ಕೇಂದ್ರ ಸರ್ಕಾರ ನಿಗದಿಪಡಿಸಿದೆ. ಈ ದರವು ಏ.1ರಿಂದ ಜಾರಿಗೆ ಬರಲಿದೆ. 2023ರ ಹಣಕಾಸು ವಿಧೇಯಕದ ತಿದ್ದುಪಡಿಯ ಭಾಗವಾಗಿ ಈ ದರವನ್ನು ನಿಗದಿಪಡಿಸಲಾಗಿದೆ. ಮಾ. 24 ರಂದು ಲೋಕಸಭೆಯಲ್ಲಿ ಹಣಕಾಸು ಮಸೂದೆ […]

ಚಕ್ರತೀರ್ಥ ಶ್ರೀ ಉಮಾಮಹೇಶ್ವರ ದೇವಸ್ಥಾನ ನೂತನ ಧ್ವಜಸ್ಥಂಭದ ಶೋಭಾಯಾತ್ರೆ

ಉಡುಪಿ: ಚಕ್ರತೀರ್ಥ ಶ್ರೀ ಉಮಾಮಹೇಶ್ವರ ದೇವಸ್ಥಾನ ಸಗ್ರಿ ಇದರ ನೂತನ ಧ್ವಜಸ್ಥಂಭದ ಶೋಭಾಯಾತ್ರೆಗೆ ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭ ತೀರ್ಥ ಸ್ವಾಮೀಜಿ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ಸಗ್ರಿ ಉಮಾಮಹೇಶ್ವರ ದೇವಸ್ಥಾನದಲ್ಲಿ ನಡೆಯಲಿರುವ ಮುಂದಿನ‌ ಎಲ್ಲ ಧಾರ್ಮಿಕ ಚಟುವಟಿಕೆಗಳು ಉತ್ತಮ ರೀತಿಯಲ್ಲಿ ನಡೆಯಲಿ ಎಂದು ಶುಭಹಾರೈಸಿದರು. ಸಹಕಾರಿ ಯೂನಿಯನ್ ಅಧ್ಯಕ್ಷ ಇಂದ್ರಾಳಿ ಜಯಕರ ಶೆಟ್ಟಿ, ಉದ್ಯಮಿ ಡಾ. ತಲ್ಲೂರು ಶಿವರಾಮ್ ಶೆಟ್ಟಿ, ಸಾಧು ಸಾಲ್ಯಾನ್, ಮಟ್ಟು ಲಕ್ಷ್ಮೀನಾರಾಯಣ ರಾವ್, ವಿಷ್ಣು ಪ್ರಸಾದ್ ಪಾಡಿಗಾರ್, ರಂಜನ್ ಕಲ್ಕೂರ, […]

ಕಿಡ್ ಝೀ ಸಮ್ಮರ್ ಫೆಸ್ಟ್: ರಜಾದಿನಗಳನ್ನು ಸೃಜನಾತ್ಮಕವಾಗಿ ಕಳೆಯುವ ಅವಕಾಶ

ಮಣಿಪಾಲ: ಪ್ರಿ-ಸ್ಕೂಲ್ ವಿದ್ಯಾಭ್ಯಾಸದಲ್ಲಿ ಮುಂಚೂಣಿಯಲ್ಲಿರುವ ಕಿಡ್ ಝೀ ಸಂಸ್ಥೆಯು ಮಕ್ಕಳಿಗಾಗಿ ಸಮ್ಮರ್ ಫೆಸ್ಟ್ ಚಟುವಟಿಕೆಗಳನ್ನು ಹಮ್ಮಿಕೊಂಡಿದ್ದು, ಮಕ್ಕಳು ರಜಾದಿನಗಳನ್ನು ಸೃಜನಾತ್ಮಕವಾಗಿ ಕಳೆಯಬಹುದು. ಈ ಚಟುವಟಿಕೆಗಳು, ಕಥೆ ಹೇಳುವಿಕೆ, ನೃತ್ಯ, ಸಂಗೀತ, ಆಟಗಳು, ಯೋಗಾ ಮತ್ತು ಝುಂಬಾ, ಚಿತ್ರಕಲೆ ಮುಂತಾದವುಗಳನ್ನು ಒಳಗೊಂಡಿದೆ. ಸಮ್ಮರ್ ಫೆಸ್ಟ್ ಎಪ್ರಿಲ್ 3 ರಿಂದ ಪ್ರಾರಂಭವಾಗಲಿದ್ದು, 2 ರಿಂದ 9 ವರ್ಷ ವಯಸ್ಸಿನ ಮಕ್ಕಳು ಇದರಲ್ಲಿ ಭಾಗವಹಿಸಬಹುದು. ಸಮ್ಮರ್ ಫೆಸ್ಟ್ ಪ್ರತಿದಿನ ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ1 ಗಂಟೆ ಹಾಗೂ ಬೆಳಿಗ್ಗೆ 9 ಗಂಟೆಯಿಂದ […]