ಚಕ್ರತೀರ್ಥ ಶ್ರೀ ಉಮಾಮಹೇಶ್ವರ ದೇವಸ್ಥಾನ ನೂತನ ಧ್ವಜಸ್ಥಂಭದ ಶೋಭಾಯಾತ್ರೆ

ಉಡುಪಿ: ಚಕ್ರತೀರ್ಥ ಶ್ರೀ ಉಮಾಮಹೇಶ್ವರ ದೇವಸ್ಥಾನ ಸಗ್ರಿ ಇದರ ನೂತನ ಧ್ವಜಸ್ಥಂಭದ ಶೋಭಾಯಾತ್ರೆಗೆ ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭ ತೀರ್ಥ ಸ್ವಾಮೀಜಿ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ಸಗ್ರಿ ಉಮಾಮಹೇಶ್ವರ ದೇವಸ್ಥಾನದಲ್ಲಿ ನಡೆಯಲಿರುವ ಮುಂದಿನ‌ ಎಲ್ಲ ಧಾರ್ಮಿಕ ಚಟುವಟಿಕೆಗಳು ಉತ್ತಮ ರೀತಿಯಲ್ಲಿ ನಡೆಯಲಿ ಎಂದು ಶುಭಹಾರೈಸಿದರು.

ಸಹಕಾರಿ ಯೂನಿಯನ್ ಅಧ್ಯಕ್ಷ ಇಂದ್ರಾಳಿ ಜಯಕರ ಶೆಟ್ಟಿ, ಉದ್ಯಮಿ ಡಾ. ತಲ್ಲೂರು ಶಿವರಾಮ್ ಶೆಟ್ಟಿ, ಸಾಧು ಸಾಲ್ಯಾನ್, ಮಟ್ಟು ಲಕ್ಷ್ಮೀನಾರಾಯಣ ರಾವ್, ವಿಷ್ಣು ಪ್ರಸಾದ್ ಪಾಡಿಗಾರ್, ರಂಜನ್ ಕಲ್ಕೂರ, ಹರಿಯಪ್ಪ ಕೋಟ್ಯಾನ್, ತೋನ್ಸೆ ಮನೋಹರ್ ಶೆಟ್ಟಿ, ಬಾಲಕೃಷ್ಣ ಶೆಟ್ಟಿ, ನರಹರಿ ಆಚಾರ್ಯ, ಗಿರಿಧರ್ ಆಚಾರ್ಯ, ರಮೇಶ್ ಕಾಂಚಾನ್, ರಮೇಶ್ ನಾಯಕ್ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ದೇವಸ್ಥಾನದ ಬ್ರಹ್ಮಕಲಶ ಮತ್ತು ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಬೈಕಾಡಿ ಸುಪ್ರಸಾದ್ ಶೆಟ್ಟಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.

ಶೋಭಾ ಯಾತ್ರೆಯು ಶ್ರೀ ಕೃಷ್ಣ ಮಠದ ಪಾರ್ಕಿಂಗ್ ಸಮೀಪದಿಂದ ಕಲ್ಸಂಕ ಮಾರ್ಗವಾಗಿ ಗುಂಡಿಬೈಲ್, ದೊಡ್ಡಣಗುಡ್ಡೆ ಮೂಲಕ ಚಕ್ರತೀರ್ಥ ಶ್ರೀ ಉಮಾಮಹೇಶ್ವರ ದೇವಸ್ಥಾನಕ್ಕೆ ತಲುಪಿತು.

ಶೋಭಾಯಾತ್ರೆಯಲ್ಲಿ ಹಲವು‌ ಜನಪದ ಗೊಂಬೆ ಬಳಗ, ಜನತಾ ವ್ಯಾಯಾಮ‌ ಶಾಲೆಯ ಮಕ್ಕಳಿಂದ ತಾಲೀಮು, ಚೆಂಡೆ ಬಳಗ, ವಿವಿಧ ಭಜನಾ ತಂಡಗಳು ಪಾಲ್ಗೊಂಡು ಮೆರುಗು ಹೆಚ್ಚಿಸಿತು. ಸಾವಿರಾರು‌ ಮಂದಿ ಭಕ್ತರು ಶೋಭಾಯಾತ್ರೆಯಲ್ಲಿ ಭಾಗವಹಿಸಿದರು.