ವಿಶು ಶೆಟ್ಟಿ ಅವರಿಂದ ಗರುಡನ ರಕ್ಷಣೆ: ಆರೈಕೆ ಮಾಡಿ ಬಿಡುಗಡೆ…

ಉಡುಪಿ: ನಿಟ್ಟೂರು ಬಳಿ ರೆಕ್ಕೆಗೆ ಪೆಟ್ಟಾಗಿ ಹಾರಲಾಗದ ಸ್ಥಿತಿಯಲ್ಲಿದ್ದ ಗರುಡ (ಬ್ರಾಹ್ಮಣಿ ಕೈಟ್) ಪಕ್ಷಿಯನ್ನು ಸಮಾಜ ಸೇವಕ ವಿಶು ಶೆಟ್ಟಿ ಅವರು ರಕ್ಷಿಸಿ, ಚಿಕಿತ್ಸೆ ನೀಡಿ ಮತ್ತೆ ಪರಿಸರಕ್ಕೆ ಬಿಟ್ಟಿದ್ದಾರೆ. ವೈದ್ಯರ ಸಲಹೆ ಪಡೆದು ಅದಕ್ಕೆ ಸೂಕ್ತ ಚಿಕಿತ್ಸೆ ನೀಡಿ ಸುಮಾರು 22 ದಿನಗಳವರೆಗೆ ತನ್ನ ವರ್ಕ್ಶಾಪ್‌ನಲ್ಲಿರಿಸಿ ಆರೈಕೆ ಮಾಡಿದ್ದ ವಿಶು ಶೆಟ್ಟಿ ಅವರು ಗರುಡ ಪಕ್ಷಿ ಪೂರ್ಣವಾಗಿ ಚೇತರಿಸಿಕೊಂಡು ಹಾರಲು ಶಕ್ತವಾದ ಬಳಿಕ ಗುರುವಾರ ಅದನ್ನು ಬಿಡುಗಡೆಗೊಳಿಸಿದರು. ನಿರ್ಗತಿಕರಿಗೆ, ರೋಗಿಗಳಿಗೆ, ಸಂತ್ರಸ್ತರಿಗೆ ಸದಾ ಮಾನವೀಯ ನೆರವು […]

ಸಂತೆಕಟ್ಟೆ ಜಂಕ್ಷನ್ ಮಧ್ಯದಲ್ಲಿ ಬೃಹತ್ ಗಾತ್ರದ ಬಂಡೆಕಲ್ಲು ಕಂಡು ಬಂದ ಹಿನ್ನೆಲೆ-ನಿರೀಕ್ಷಿತ ಓವರ್ ಪಾಸ್ ಕಾಮಗಾರಿಗೆ ತಡೆ

ಉಡುಪಿ:ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಆದಾಗಿನಿಂದ ಸಮಸ್ಯೆಗೆ ಕಾರಣವಾಗಿದ್ದ ಸಂತೆಕಟ್ಟೆ ಜಂಕ್ಷನ್ ನ ಸಮಸ್ಯೆಗೆ ಮತ್ತು ಪಾದಾಚಾರಿಗಳ ಸುಗಮ ಸಂಚಾರಕ್ಕೆ ಪರಿಹಾರ ಕಂಡುಕೊಳ್ಳುವ ಸಲುವಾಗಿ ಈ ಜಂಕ್ಷನ್ ನಲ್ಲಿ ಸುಮಾರು 27.4 ಕೋಟಿ ರೂಪಾಯಿ ವೆಚ್ಚದಲ್ಲಿ ಓವರ್ ಪಾಸ್ ನಿರ್ಮಾಣ ಮಾಡಲು ಕೇಂದ್ರ ಹೆದ್ದಾರಿ ಪ್ರಾಧಿಕಾರವು ಅನುಮೋದನೆ ನೀಡಿತ್ತು. ಈ ಕಾಮಗಾರಿಗೆ ಜನವರಿ 12ರಂದು ಉಡುಪಿ ಗುದ್ದಲಿ ಫೂಜೆಯನ್ನು ಕೂಡಾ ನಡೆಸಿದ್ದರು. ಇದೀಗ ಈ ಓವರ್ ಪಾಸ್ ಕಾಮಗಾರಿಗೆ ಸಂಕಷ್ಟ ಎದುರಾಗಿದ್ದು  ಸಂತೆಕಟ್ಟೆ ಜಂಕ್ಷನ್ ಮಧ್ಯದಲ್ಲಿ ಬೃಹತ್ ಗಾತ್ರದ […]

ಕುಂದಾಪುರ: ಕಟ್ಟಡ ತೆರಿಗೆ, ಉದ್ದಿಮೆ ಪರವಾನಿಗೆ ನವೀಕರಣಕ್ಕೆ ಮಾರ್ಚ್ 31 ಕೊನೆ ದಿನ

ಕುಂದಾಪುರ: ಕುಂದಾಪುರ ಪುರಸಭಾ ವ್ಯಾಪ್ತಿಯ ಖಾತಾದಾರರು ಪುರಸಭಾ ವ್ಯಾಪ್ತಿಯಲ್ಲಿ ಪ್ರಸಕ್ತ ಸಾಲಿನಲ್ಲಿ ಮತ್ತು ಹಿಂದಿನ ವರ್ಷಗಳ ಬಾಕಿ ಉಳಿಸಿಕೊಂಡಿರುವ ಕಟ್ಟಡದ ತೆರಿಗೆ, ಉದ್ದಿಮೆ ಪರವಾನಿಗೆಯ ನವೀಕರಣ ಮತ್ತು ಶಾಶ್ವತ ಜಾಹಿರಾತು ಫಲಕಗಳ ನವೀಕರಣ ಮಾಡಿಸದೆ ಇದ್ದಲ್ಲಿ ಮಾರ್ಚ್ 31 ರ ಒಳಗೆ ದಂಡ ಸಹಿತ ತೆರಿಗೆ ಪಾವತಿಸಿ, ನವೀಕರಣಗೊಳಿಸಿಕೊಳ್ಳುವಂತೆ ಪುರಸಭೆ ಮುಖ್ಯಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.

ಬೈಪೋಲಾರ್ ಡಿಸಾರ್ಡರ್ ಕುರಿತ ಸಾಮಾಜಿಕ ಕಳಂಕಗಳ ಸುತ್ತ ತಪ್ಪು ಕಲ್ಪನೆಗಳ ಹುತ್ತ: ಡಾ. ಶ್ರದ್ಧಾ ಶೇಜೇಕರ್

ಬೈಪೋಲಾರ್ ಡಿಸಾರ್ಡರ್ ಎಂಬ ಮಾನಸಿಕ ರೋಗ ಕುರಿತು ಜಾಗೃತಿ ಹೆಚ್ಚಿಸಲು ಪ್ರತಿ ವರ್ಷ ಮಾರ್ಚ್ 30ರಂದು ವಿಶ್ವ ಬೈಪೋಲಾರ್ ದಿನ ಆಚರಿಸಲಾಗುತ್ತಿದೆ. ಈ ರೋಗಕ್ಕೆ ಉನ್ಮಾದ ಖಿನ್ನತೆಯ ರೋಗ ಎಂದು ಕೂಡ ಕರೆಯಲಾಗುತ್ತದೆ. ಈ ತೊಂದರೆ ಹೊಂದಿರುವ ವ್ಯಕ್ತಿಗಳಿಗೆ ಮತ್ತು ಅವರ ಕುಟುಂಬಗಳಿಗೆ ಅಲ್ಲದೆ, ಸಾರ್ವಜನಿಕರಿಗೆ ಶಿಕ್ಷಣ ಮತ್ತು ಸಂಪನ್ಮೂಲಗಳನ್ನು ಪೂರೈಸುವ ಗುರಿಯನ್ನು ಈ ದಿನ ಹೊಂದಿರುತ್ತದೆ. ಇದರೊಂದಿಗೆ ಈ ರೋಗ ಕುರಿತ ಕಳಂಕವನ್ನು ಕಡಿಮೆ ಮಾಡಿ ತಿಳುವಳಿಕೆಯನ್ನು ಹೆಚ್ಚಿಸುವ ಧ್ಯೇಯ ಇದರಲ್ಲಿದೆ. ಬೈಪೋಲಾರ್ ಡಿಸಾರ್ಡರ್ ಒಂದು […]

ಯುಪಿಎ ಆಡಳಿತದಲ್ಲಿ ಪ್ರಧಾನಿ ಮೋದಿಯವರನ್ನು ಬಂಧಿಸುವಂತೆ ಸಿಬಿಐ ಒತ್ತಡ ಹೇರಿದ್ದರೂ ಪಕ್ಷ ಗದ್ದಲ ಎಬ್ಬಿಸಿರಲಿಲ್ಲ: ಅಮಿತ್ ಶಾ

ಹೊಸದಿಲ್ಲಿ: ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಅವಧಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಗುಜರಾತ್‌ನಲ್ಲಿ ನಡೆದ ತಥಾಕಥಿತ ನಕಲಿ ಎನ್‌ಕೌಂಟರ್ ಪ್ರಕರಣದಲ್ಲಿ “ಸಿಲುಕಿಸುವಂತೆ” ತನಿಖಾ ಸಂಸ್ಥೆ ವಿಚಾರಣೆಯ ಸಂದರ್ಭದಲ್ಲಿ ಸಿಬಿಐ ತನ್ನ ಮೇಲೆ “ಒತ್ತಡ” ಹೇರಿತ್ತು. ಆದಾಗ್ಯೂ, ನಾವ್ಯಾರೂ ಗದ್ದಲ ಎಬ್ಬಿಸಲಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಬುಧವಾರ ಹೇಳಿದ್ದಾರೆ. ‘ನ್ಯೂಸ್ 18 ರೈಸಿಂಗ್ ಇಂಡಿಯಾ’ ಕಾರ್ಯಕ್ರಮದಲ್ಲಿ ನರೇಂದ್ರ ಮೋದಿ ಸರ್ಕಾರವು ಪ್ರತಿಪಕ್ಷಗಳನ್ನು ಗುರಿಯಾಗಿಸಲು ಕೇಂದ್ರೀಯ ಸಂಸ್ಥೆಗಳನ್ನು “ದುರುಪಯೋಗಪಡಿಸಿಕೊಳ್ಳುತ್ತಿದೆ” ಎಂಬ ಪ್ರತಿಪಕ್ಷಗಳ ಆರೋಪದ ಪ್ರಶ್ನೆಗೆ […]