ಮಧ್ವನವಮಿಯ ಪ್ರಯುಕ್ತ ಮಧ್ವಾಚಾರ್ಯರಿಗೆ ಪೂಜೆ
ಉಡುಪಿ: ಶ್ರೀಕೃಷ್ಣಮಠದಲ್ಲಿ ಮಧ್ವನವಮಿಯ ಪ್ರಯುಕ್ತ ಉಡುಪಿ ಶ್ರೀ ಅನಂತೇಶ್ವರ ದೇವಸ್ಥಾನದಲ್ಲಿ ಅದೃಶ್ಯರಾಗಿ ಸನ್ನಿಹಿತರಾಗಿರುವ ಮಧ್ವಾಚಾರ್ಯರ ಸನ್ನಿಧಿಯಲ್ಲಿ ಪರ್ಯಾಯ ಕೃಷ್ಣಾಪುರ ಮಠಾಧೀಶರಾದ ಶ್ರೀವಿದ್ಯಾಸಾಗರತೀರ್ಥ ಶ್ರೀಪಾದರು ಪಾದ್ಯವನ್ನಿತ್ತು ವಿಶೇಷ ಪೂಜೆ ಸಲ್ಲಿಸಿದರು.
ಆರೋಗ್ಯವೇ ಭಾಗ್ಯ: ನಿಮ್ಮ ಕುಟುಂಬಕ್ಕಾಗಿ ಸರಿಯಾದ ಆರೋಗ್ಯ ವಿಮೆಯನ್ನೇ ಆಯ್ಕೆ ಮಾಡಿಕೊಳ್ಳಿ
ಆರೋಗ್ಯವೇ ಭಾಗ್ಯ ಎನ್ನುವುದು ಎಲ್ಲರಿಗೂ ತಿಳಿದಿದೆ. ಈ ಆರೋಗ್ಯವನ್ನು ಎಷ್ಟು ಸಾಧ್ಯವೋ ಅಷ್ಟು ಪ್ರಾಕೃತಿಕವಾಗಿ ಕಾಪಾಡಿಕೊಂಡರೆ ಒಳಿತು. ಆದಾಗ್ಯೂ, ಕೆಲವೊಮ್ಮೆ ಕೈಮೀರಿದ ಸಂದರ್ಭಗಳಲ್ಲಿ ಆರೋಗ್ಯ ಹದಗೆಟ್ಟು ಆಸ್ಪತ್ರೆ ಸೇರಬೇಕಾಗಿ ಚಿಕಿತ್ಸೆ ಪಡೆದುಕೊಂಡಾಗ ಕೈಗೆ ನೀಡಲಾಗುವ ಆಸ್ಪತ್ರೆ ಬಿಲ್ ಗಳನ್ನು ಕಂಡು ಮತ್ತೊಮ್ಮೆ ಆಸ್ಪತ್ರೆ ಸೇರುವ ಪರಿಸ್ಥಿತಿ ಎದುರಾದರೂ ಅಚ್ಚರಿಯಿಲ್ಲ. ಇಂತಹ ಪರಿಸ್ಥಿತಿಗಳನ್ನು ತಪ್ಪಿಸಿಕೊಳ್ಳಲು ಹೆಲ್ತ್ ಇನ್ಶೂರೆನ್ಸ್(ಆರೋಗ್ಯ ವಿಮೆ)ಗಳನ್ನು ಮಾಡಿಸಿಕೊಳ್ಳಬಹುದು. ಮಾರುಕಟ್ಟೆಯಲ್ಲಿ ತರಹೇವಾರಿ ಆರೋಗ್ಯ ವಿಮೆಗಳಿದ್ದು ಯಾವುದನ್ನು ಆಯ್ಕೆ ಮಾಡಲಿ ಎನ್ನುವ ಗೊಂದಲ ಎಲ್ಲರನ್ನೂ ಕಾಡುತ್ತವೆ. ಕಂಪನಿಗಳು ಕೂಡಾ […]
ಕಾಪು: ಫೆ. 4- 5ರಂದು ‘ಕೋಸ್ಟಲ್ ಆಟೋ ಕಾರ್ನಿವಲ್- 2023’ ಸಾಹಸ ಪ್ರದರ್ಶನ ಕಾರ್ಯಕ್ರಮ
ಉಡುಪಿ: ಫೆ. 4 ಮತ್ತು 5ರಂದು ಕಾಪುವಿನಲ್ಲಿ ‘ಕೋಸ್ಟಲ್ ಆಟೋ ಕಾರ್ನಿವಲ್- 2023’ ಸಾಹಸ ಪ್ರದರ್ಶನ ಕಾರ್ಯಕ್ರಮವು ಕಾಪುವಿನ ಪ್ಯಾಲೇಸ್ ಗಾರ್ಡನ್ ನಲ್ಲಿ ನಡೆಯಲಿದೆ ಎಂದು ಕಾರ್ಯಕ್ರಮದ ಸಂಚಾಲಕ ಸುದೀಪ್ ಶೆಟ್ಟಿ ಹೇಳಿದರು. ನಗರದ ಪತ್ರಿಕಾ ಭವನದಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಅವರು ಮಾತನಾಡಿದರು. ಗೋವಾ ಮತ್ತು ಇತರ ಉತ್ತರ ಭಾರತದ ರಾಜ್ಯಗಳಲ್ಲಿ ಮಾಡಲಾಗುತ್ತಿದ್ದ ಆಟೋ ಕಾರ್ನಿವಲ್ ಅನ್ನು ಮೊದಲ ಬಾರಿಗೆ ಕರಾವಳಿಯಲ್ಲಿ ಆಯೋಜಿಸಲಾಗುತ್ತಿದೆ. ಫೆ. 4 ರಂದು ಬೆಳಗ್ಗೆ 9 ಗಂಟೆಗೆ ಕಾರ್ಯಕ್ರಮ ಪ್ರಾರಂಭವಾಗಲಿದ್ದು, ಅವಿಭಜಿತ ಜಿಲ್ಲೆಯ […]
ಸಾಹಸಸಿಂಹ ಕನ್ನಡ ಚಿತ್ರ ರಸಿಕರ ನೆಚ್ಚಿನ ನಟ ಡಾ.ವಿಷ್ಣುವರ್ಧನ್ ಸ್ಮಾರಕ ಲೋಕಾರ್ಪಣೆ
ಮೈಸೂರು: ಇಲ್ಲಿನ ಹಾಲಾಳು ಗ್ರಾಮದಲ್ಲಿ ನಿರ್ಮಿಸಿರುವ ಡಾ.ವಿಷ್ಣುವರ್ಧನ್ ಸ್ಮಾರಕ ಭವನದ ಉದ್ಘಾಟನೆಯು ಭಾನುವಾರ ನಡೆಯಿತು. ಸ್ಮಾರಕವನ್ನು ಉದ್ಘಾಟಿಸಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ಸ್ವಭಾವತಃ ಭಾವುಕ ಹಾಗೂ ಮಾನವೀಯತೆಯ ಗುಣಗಳುಳ್ಳ ಜೀವಿಯಾಗಿದ್ದ ವಿಷ್ಣುವರ್ಧನ್, ತೆರೆಯ ಮೇಲಿನ ಅವರ ಚಿತ್ರಗಳಲ್ಲಿಯೂ ಸಹ ಅದೇ ಗುಣಗಳುಳ್ಳ ಪಾತ್ರಗಳ ಮೂಲಕ ಪ್ರೇಕ್ಷಕರಿಗೆ ಮಾನವೀಯತೆಯ ಗುಣಗಳನ್ನು ತುಂಬಿದ್ದ ಯಜಮಾನರಾಗಿರಾದ್ದರು. ಅವರು ಸ್ಮಾರಕ ವಿಚಾರದಲ್ಲಿ ಹಲವಾರು ಅಡೆತಡೆಗಳು ಬಂದರೂ, ಕೊನೆಗೂ ವಿಷ್ಣುವರ್ಧನ್ ರವರ ಹುಟ್ಟೂರು ಮೈಸೂರಿನಲ್ಲಿಯೇ ಸ್ಮಾರಕ ನಿರ್ಮಾಣಗೊಂಡು ಲೋಕಾರ್ಪಣೆಯಾಗಿರುವುದು ಸಂತಸದ ಸಂಗತಿಯಾಗಿದೆ ಎಂದರು. […]
ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ ಸಮಾಪ್ತ
ಲಾಲ್ ಚೌಕ್: ಶ್ರೀನಗರದ ಐತಿಹಾಸಿಕ ನಗರ ಕೇಂದ್ರವಾದ ಲಾಲ್ ಚೌಕ್‌ನಲ್ಲಿ ರಾಷ್ಟ್ರಧ್ವಜಾರೋಹಣ ಮಾಡಿದ ನಂತರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಭಾನುವಾರ (ಜನವರಿ 29) ಭಾರತ್ ಜೋಡೋ ಯಾತ್ರೆಯನ್ನು ಮುಕ್ತಾಯಗೊಳಿಸಿದರು. ಭಾನುವಾರ ಬೆಳಗ್ಗೆ ರಾಹುಲ್ ಗಾಂಧಿ ಮತ್ತು ಇತರ ಹಿರಿಯ ನಾಯಕರ ಶ್ರೀನಗರ ನಗರದ ಹೊರವಲಯದ ಪಂಥಾ ಚೌಕ್‌ನ ರಾತ್ರಿ ವಾಸ್ತವ್ಯದ ಬಳಿಕ ಭಾರತ್ ಜೋಡೋ ಯಾತ್ರೆ ಪ್ರಾರಂಭವಾಯಿತು. ಇತರ ಸ್ಥಳೀಯ ಪಕ್ಷಗಳ ಅನೇಕ ರಾಜಕಾರಣಿಗಳು ಲಾಲ್ ಚೌಕ್‌ಗೆ ರಾಹುಲ್ ಗಾಂಧಿ ಜೊತೆ ಮೆರವಣಿಗೆ ನಡೆಸಿದರು. […]