ತುಳು ಚಿತ್ರರಂಗದಲ್ಲಿ ಕ್ರಾಂತಿ ಮೂಡಿಸಿದ  ‘ಶಕಲಕ ಬೂಂ ಬೂಂ’: ಎರಡನೇ ವಾರವು ಭರ್ಜರಿ ಪ್ರದರ್ಶನ

ಜನ ಮೆಚ್ಚಿದ ಚಿತ್ರ ಶಕಲಕ ಬೂಂ ಬೂಂ ತುಳು ಚಿತ್ರರಂಗದಲ್ಲಿ ಏಕತಾನೆತೆಯಿಂದ ವಿಭಿನ್ನತೆಗೆ ಕೊಂಡೊಯ್ಯುವ ಸಾಹಸವನ್ನು ಯು.ಎನ್ ಸಿನಿಮಾಸ್ ಉಡುಪಿ ಮಾಡಿದಲ್ಲದೆ ಚಿತ್ರದ ಕಥೆ,ನಿರ್ಮಾಣ,ಛಾಯಗ್ರಹಣ,ಹಾಡುಗಳು ಎಲ್ಲರ ಮನ ಮುಟ್ಟುತ್ತಿರುವುದು ಅತೀವ ಸಂತಸದ ವಿಚಾರ. ಚಿತ್ರ ವೀಕ್ಷಿಸಿದ ಎಲ್ಲರೂ ಅತ್ಯುತ್ತಮ ಚಿತ್ರ ,ಒಳ್ಳೆಯ ಸಂದೇಶ ಹಾಗೂ ಸಾಮಾಜಿಕ ಕಳಕಳಿಯನ್ನು ಹೊತ್ತು ವಿಭಿನ್ನವಾಗಿದೆ ಎಂದು ಪ್ರಶಂಸಿರುವರು.ಶ್ರೀಶ ನಾಯಕ್ ಎಳ್ಳಾರೆ ಯುವ ನಿರ್ದೇಶಕ ನಿರ್ದೇಶಿಸಿದ ಪ್ರಥಮ ಚಿತ್ರವಾದರೂ ಅತ್ಯದ್ಭುತವಾಗಿ ನಿರ್ದೇಶಿಸಿರುವರು. ತುಳು ಚಿತ್ರರಂಗದಲ್ಲಿ ನೂತನ ಪ್ರತಿಭೆಗಳನ್ನು ರಂಗಕ್ಕೆ ಪರಿಚಯಿಸಿದಲ್ಲದೇ ನೈಜವಾದ ಅಭಿನಯ […]

ತುಳು ಚಿತ್ರನಟ ಅರವಿಂದ ಬೋಳಾರ್ ಬೈಕ್ ಸ್ಕಿಡ್: ಕಾಲಿಗೆ ಏಟು 

ಮಂಗಳೂರು: ತುಳುನಾಡ ಮಾಣಿಕ್ಯ ಎಂದೇ ಖ್ಯಾತರಾಗಿರುವ ಹಾಸ್ಯನಟ, ಕಲಾವಿದ ಅರವಿಂದ ಬೋಳಾರ್ ಚಲಾಯಿಸುತ್ತಿದ್ದ ದ್ವಿಚಕ್ರ ವಾಹನವೊಂದು ನಗರದ ಪಂಪ್‌ವೆಲ್ ಬಳಿ ಇಂದು ಸ್ಕಿಡ್ಡಾಗಿ ಉರುಳಿದ್ದು ನಟನ ಕಾಲಿಗೆ ಏಟಾಗಿದೆ. ಅತೀ ವೇಗವಾಗಿ ಚಲಿಸಿಕೊಂಡು ಬರುತ್ತಿದ್ದ ಬಷ್ಟೊಂದು ಢಿಕ್ಕಿ ಹೊಡೆಯುವುದನ್ನು ತಪ್ಪಿಸುವ ಸಲುವಾಗಿ ಅರವಿಂದ್ ಬೋಳಾರ್ ತಾನು ಚಲಾಯಿಸುತ್ತಿದ್ದ ದ್ವಿಚಕ್ರ ವಾಹನದ ಬ್ರೇಕ್ ಹಾಕಿದ್ದು, ಈ ಸಂದರ್ಭ ಸ್ಕಿಡ್ಡಾಗಿ ಬಿದ್ದ ಪರಿಣಾಮ ಅರವಿಂದ ಬೋಳಾರ್‌ ಅವರ ಕಾಲಿಗೆ ಏಟಾಗಿದೆ. ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಕಾಲಿಗೆ ಶಸ್ತ್ರಚಿಕಿತ್ಸೆ […]

ಬ್ರಹ್ಮಾವರ: ಫಾರ್ಚ್ಯೂನ್ ಅಕಾಡೆಮಿಯಲ್ಲಿ ನರ್ಸಿಂಗ್ ವಿದ್ಯಾರ್ಥಿಗಳ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ

ಬ್ರಹ್ಮಾವರ: ಇಲ್ಲಿನ ರಾ.ಹೆ 66 ರ ಪಕ್ಕದಲ್ಲಿರುವ ಫಾರ್ಚ್ಯೂನ್ ಅಕಾಡೆಮಿ ಆಫ್ ಹೆಲ್ತ್ ಸೈನ್ಸನ್ ನ ಜನರಲ್ ನರ್ಸಿಂಗ್ ಮತ್ತು ಬಿ.ಎಸ್ಸಿ ನರ್ಸಿಂಗ್ ವಿದ್ಯಾರ್ಥಿಗಳ ದೀಪ ಬೆಳಗಿಸುವ ಮತ್ತು ಪತ್ರಿಜ್ಞಾ ವಿಧಿ ಸ್ವೀಕರಿಸುವ ಕಾರ್ಯಕ್ರಮವು ಜ.29 ರಂದು ಬಿ.ಡಿ.ಶೆಟ್ಟಿ ಆಡಿಟೋರಿಯಂ ಹಾಲ್ ನಲ್ಲಿ ಜರುಗಿತು.   ಮುಖ್ಯ ಅತಿಥಿಗಳಾಗಿ ಮಲ್ನಾಡ್ ಹೈಟೆಕ್ ಡಯಾಗ್ನಾಸ್ಟಿಕ್ ಸೆಂಟರ್ ಶಿವಮೊಗ್ಗ ಇದರ ವಿಕಿರಣಶಾಸ್ತ್ರ ವಿಭಾಗದ ಸಲಹೆಗಾರ್ತಿ ಡಾ. ಶ್ರದ್ದಾ ಶೆಟ್ಟಿ ಭಾಗವಹಿಸಿದ್ದರು. ಬಿ.ಡಿ ಶೆಟ್ಟಿ ಬಿಸ್ ನೆಸ್ ಮ್ಯಾನೇಜ್ಮೆಂಟ್ ಕಾಲೇಜಿನ ನಿವೃತ್ತ […]

ಮಣಿಪಾಲ: ಕೆ.ಎಂ.ಸಿ ಆಸ್ಪತ್ರೆಯಲ್ಲಿ ಲೈವ್ ಎಂಡೋಸ್ಕೋಪಿ ಮತ್ತು ಬಂಜೆತನ ಅಲ್ಟ್ರಾಸೌಂಡ್ ಕಾರ್ಯಾಗಾರ

ಮಣಿಪಾಲ: ಮಣಿಪಾಲ ಉನ್ನತ ಶಿಕ್ಷಣ ಅಕಾಡೆಮಿಯ ಅಂಗ ಸಂಸ್ಥೆಯಾಗಿರುವ ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಸಂತಾನೋತ್ಪತ್ತಿ ಔಷಧ ಮತ್ತು ಶಸ್ತ್ರಚಿಕಿತ್ಸಾ ವಿಭಾಗವು ಜ. 28 ರಂದು ಎಂಡೋಸ್ಕೋಪಿ ಕಾರ್ಯಾಗಾರ ಮತ್ತು ಜ.29 ರಂದು ಬಂಜೆತನ ಅಲ್ಟ್ರಾಸೌಂಡ್ ಕುರಿತು ನೇರಪ್ರಸಾರದ ಜಾಗೃತಿ ಕಾರ್ಯಾಗಾರವನ್ನು ಆಯೋಜಿಸಿತ್ತು. ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನ ಡಾ.ಟಿಎಂಎ ಪೈ ಸಭಾಂಗಣದಲ್ಲಿ ನಡೆದ ಈ ಎರಡು ದಿನಗಳ ಕಾರ್ಯಾಗಾರವನ್ನು ಮಣಿಪಾಲದ ಮಾಹೆಯ ಬೋಧಕ ಆಸ್ಪತ್ರೆಗಳ ಮುಖ್ಯ ನಿರ್ವಹಣಾಧಿಕಾರಿ ಡಾ.ಆನಂದ್ ವೇಣುಗೋಪಾಲ್ ಉದ್ಘಾಟಿಸಿ, ನೇರ ಪ್ರಸಾರದ […]

ಹಿರಿಯಡ್ಕ ಸರಕಾರಿ ಪ್ರಥಮ ದರ್ಜೆ ಕಾಲೇಜು ಶಿಕ್ಷಕರಿಗೆ ಬೀಳ್ಕೊಡುಗೆ

ಹಿರಿಯಡ್ಕ: ಸರಕಾರಿ ಪ್ರಥಮ ದರ್ಜೆ ಕಾಲೇಜು ಹಿರಿಯಡ್ಕ ವಿದ್ಯಾಸಂಸ್ಥೆಯಲ್ಲಿ ಉಪನ್ಯಾಸಕರುಗಳಾಗಿ, ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ಇದೀಗ ಇತರೆ ಸಂಸ್ಥೆಗಳಿಗೆ ವರ್ಗಾವಣೆಗೊಳ್ಳುತ್ತಿರುವ ಉಪನ್ಯಾಸಕರಾದ ದೈಹಿಕ ಶಿಕ್ಷಕಿ ಶ್ರೀಮತಿ ಸವಿತಾ , ವಿಶ್ವೇಶ್ವರ ಗಾವಂಕರ್ , ಪ್ರಾಂಶುಪಾಲೆ ಶ್ರೀಮತಿ ನಿಕೇತನ ಇವರನ್ನು ಗೌರವದಿಂದ ಬೀಳ್ಕೊಡುವ ಕಾರ್ಯಕ್ರಮವು ಹಿರಿಯ ವಿದ್ಯಾರ್ಥಿ ಸಂಘದ ವತಿಯಿಂದ ನಡೆಯಿತು. ಡಾ. ಪಾದೆಕಲ್ಲು ವಿಷ್ಣುಭಟ್, ಸಭಾಧ್ಯಕ್ಷರಾಗಿ ಪ್ರಾಂಶುಪಾಲೆ ಡಾ. ಸೀಮಾ ಜಿ. ಕೆ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸುರೇಶ ನಾಯ್ಕ್, ಕಾಲೇಜು ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಸಂಘದ […]