ಕುಂದಾಪುರ ಬಸ್ ಗಳು ಹೆಬ್ರಿ ಪ್ರಥಮ ದರ್ಜೆ ಕಾಲೇಜು ರಸ್ತೆಯಾಗಿ ಬರುವಂತೆ ಸೂಚನೆ

ಉಡುಪಿ: ಜಿಲ್ಲಾ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ನಿರ್ಣಯದಂತೆ ಕುಂದಾಪುರ ಹಾಗೂ ಬ್ರಹ್ಮಾವರದಿಂದ ಆಗಮಿಸುವ ಎಲ್ಲಾ ಬಸ್ಸುಗಳು ಹೆಬ್ರಿ ತಾಲೂಕಿನ ಹೆಬ್ರಿ ಪ್ರಥಮ ದರ್ಜೆ ಕಾಲೇಜು ರಸ್ತೆಗೆ ಬಂದು ಉಡುಪಿ ರಸ್ತೆಗೆ ಸಂಧಿಸಿ, ಹೆಬ್ರಿ ಪೇಟೆಗೆ ತೆರಳುವಂತೆ ಸಂಬಂಧಪಟ್ಟ ಬಸ್ಸು ಮಾಲೀಕರು ಕ್ರಮವಹಿಸುವಂತೆ ಪ್ರಾದೇಶಿಕ ಸಾರಿಗೆ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮುನಿಯಾಲು ಗೋಧಾಮದಲ್ಲಿ ತೆನೆ ತುಂಬಿ ತುಳುಕಾಡುತ್ತಿದೆ ಮೆಕ್ಕೆ ಜೋಳ: ಸಂಜೀವಿನಿ ಫಾರ್ಮ್ ನ ಅಪೂರ್ವ ಸಾಧನೆ

ಕಾರ್ಕಳ: ಹೆಬ್ರಿ ತಾಲೂಕಿನ ಮುನಿಯಾಲಿನಲ್ಲಿ ದೇಸೀ ತಳಿಗಳ ಅಭಿವೃದ್ದಿ ಕೇಂದ್ರ ಸಂಜೀವಿನಿ ಫಾರ್ಮ್ ಮತ್ತು ಡೈರಿಯ ಗೋಧಾಮದಲ್ಲಿ ತುಂಬಿ ತುಳುಕಿ ಬಳುಕಾಡುತ್ತಿದೆ ಮೆಕ್ಕೆಜೋಳ. ಮೂಲತಃ ಮಲೆನಾಡಿನಲ್ಲಿ ಬೆಳೆಯಲಾಗುವ ಮೆಕ್ಕೆ ಜೋಳವನ್ನು ಪಾರಂಪರಿಕ ಕ್ರಮದಲ್ಲಿ ಇದೇ ಮೊದಲ ಬಾರಿಗೆ ಮುನಿಯಾಲಿನಲ್ಲಿ ಬೆಳೆಯಲಾಗಿದೆ. ಗೋಧಾಮದ 6 ಎಕರೆ ಜಾಗದಲ್ಲಿ ದೇಸೀ ಗೋವುಗಳ ಸೆಗಣಿ ಗೊಬ್ಬರ, ಜೀವಾಮೃತ ಮತ್ತು ವರ್ಮಿ ಕಾಂಪೋಸ್ಟ್ ಬಳಸಿ ರಾಸಾಯನಿಕಗಳಿಲ್ಲದೆ ಸಾವಯವ ಮೆಕ್ಕೆ ಜೋಳವನ್ನು ಬೆಳೆದು ಸಂಜೀವಿನಿ ಫಾರ್ಮ್ಸ್ ಸೈ ಎನಿಸಿಕೊಂಡಿದೆ. ಜಾನುವಾರು ಸಾಕಣೆ ಮತ್ತು ಕೃಷಿಯಲ್ಲಿ […]

ಸಹಕಾರ ಸಂಘಗಳ ನೌಕರರ ಕ್ರೀಡಾಕೂಟ ಪೂರ್ವಾಭಾವಿ ಸಭೆ

ಉಡುಪಿ: ಜಿಲ್ಲೆಯ ಸಹಕಾರ ಸಂಘಗಳ ನೌಕರರಿಗೆ ಫೆಬ್ರವರಿ ತಿಂಗಳ‌ ಮೊದಲ‌ ವಾರದಲ್ಲಿ ಸಹಕಾರಿ ಕ್ರೀಡಾಕೂಟವನ್ನು ಆಯೋಜಿಸಲು ನಿರ್ದರಿಸಲಾಗಿದ್ದು ಈ ಕುರಿತು ಪೂರ್ವಭಾವಿ ಸಭೆಯನ್ನು‌‌ ಜ.18 ರಂದು ಹೋಟೆಲ್‌ ಡಯಾನ‌ ಸಭಾಂಗಣದಲ್ಲಿ ನಡೆಸಲಾಯಿತು. ಉಡುಪಿ‌ ಜಿಲ್ಲಾ‌ ಸಹಕಾರಿ‌‌ ಯೂನಿಯನ್ ಅಧ್ಯಕ್ಷ ಬಿ.ಜಯಕರ‌ ಶೆಟ್ಟಿ ಇಂದ್ರಾಳಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ‌ ಸಹಕಾರಿ ಯೂನಿಯನ್ ನಿರ್ದೇಶಕ ಮಂಡಳಿ ಸದಸ್ಯ ಹಾಗೂ ‌ಸಹಕಾರ ಸಂಘಗಳ ಉಪನಿಬಂಧಕ ಲಕ್ಷ್ಮೀನಾರಾಯಣ ಜಿ.ಎನ್ ಉಪಸ್ಥಿತರಿದ್ದರು. ಈ‌ ಸಂದರ್ಭದಲ್ಲಿ ಸಹಕಾರ ರತ್ನ‌ ಪ್ರಶಸ್ತಿ ಪುರಸ್ಕೃತರಾದ ಬಿ.ಜಯಕರ ಶೆಟ್ಟಿ […]

ಜ.22 ರಂದು ಜಯಕರ ಶೆಟ್ಟಿ ಇಂದ್ರಾಳಿ ಅವರಿಗೆ ಅಭಿನಂದನಾ ಸಮಾರಂಭ; ಸೇವಾ ಚಿಂತನಾ ಕಾರ್ಯಕ್ರಮ

ಉಡುಪಿ: ಬಡಗಬೆಟ್ಟು ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿ ಉಡುಪಿ ಇದರ ಆಶ್ರಯದಲ್ಲಿ ಸಹಕಾರ ರತ್ನ‌ ಪ್ರಶಸ್ತಿ ಪುರಸ್ಕೃತರಾದ ಜಯಕರ ಶೆಟ್ಟಿ ಇಂದ್ರಾಳಿ ಅವರಿಗೆ ಅಭಿನಂದನಾ ಸಮಾರಂಭ ಹಾಗೂ ಸೇವಾ ಚಿಂತನಾ ಕಾರ್ಯಕ್ರಮವನ್ನು ಜ.22ರಂದು ಉಡುಪಿಯ ಬಾಸೆಲ್ ಮಿಷನರೀಸ್ ಅಡಿಟೋರಿಯಂನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸೊಸೈಟಿಯ ಅಧ್ಯಕ್ಷ ಸಂಜೀವ ಕಾಂಚನ್‌ ಹೇಳಿದರು. ನಗರದಲ್ಲಿ ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಿಗ್ಗೆ 8.30ಕ್ಕೆ ಸರಿಯಾಗಿ ಉಡುಪಿಯ ಜೋಡುಕಟ್ಟೆಯಿಂದ ಮಿಷನ್ ಆಸ್ಪತ್ರೆಯ ಮಾರ್ಗವಾಗಿ ಬಾಸೆಲ್ ಮಿಷನರೀಸ್ ಅಡಿಟೋರಿಯಂವರೆಗೆ ಭವ್ಯ ಮೆರವಣಿಗೆ […]

ತೇಜಸ್ವಿ ಸೂರ್ಯ ವಿಮಾನ ತುರ್ತು ನಿರ್ಗಮನ ಬಾಗಿಲು ತೆರೆದ ಪ್ರಕರಣ: ಸಹ ಪ್ರಯಾಣಿಕ ಅಣ್ಣಾಮಲೈ ಸ್ಪಷ್ಟನೆ

ಚೆನ್ನೈ: ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರು ಚೆನ್ನೈ ವಿಮಾನ ನಿಲ್ದಾಣದಲ್ಲಿ ಇಂಡಿಗೋ ವಿಮಾನದ ತುರ್ತು ನಿರ್ಗಮನವನ್ನು ಅನಧಿಕೃತವಾಗಿ ತೆರೆದಿದ್ದಾರೆ ಎನ್ನುವ ಆರೋಪದ ನಂತರ, ಬಿಜೆಪಿ ತಮಿಳುನಾಡು ಘಟಕದ ಮುಖ್ಯಸ್ಥ ಕೆ ಅಣ್ಣಾಮಲೈ ಗುರುವಾರದಂದು ಮೌನ ಮುರಿದು ಘಟನೆಯ ಬಗ್ಗೆ ಸ್ಪಷ್ಟೀಕರಣ ನೀಡಿದ್ದಾರೆ. ಡಿಸೆಂಬರ್ 10 ರಂದು ನಡೆದಿದೆ ಎನ್ನಲಾದ ಘಟನೆಯ ಸಮಯ ವಿಮಾನದಲ್ಲಿ ತೇಜಸ್ವಿ ಸೂರ್ಯ ಅವರ ಪಕ್ಕದಲ್ಲಿ ಕುಳಿತಿದ್ದ ಅಣ್ಣಾಮಲೈ ಅವರು ತಮ್ಮ ಪಕ್ಷದ ಸಹೋದ್ಯೋಗಿ ಯಾವುದೇ ತಪ್ಪು ಮಾಡಿಲ್ಲ ಎಂದು ಹೇಳಿದ್ದಾರೆ. TN […]