ಎಲ್ಲರ ಬಾಳು ಬಂಗಾರವಾಗಿಸಲಿದೆ ಹೊಂಬಾಳೆ: ಮುಂದಿನ 5 ವರ್ಷಗಳಲ್ಲಿ 3,000 ಕೋಟಿ ರೂ ಹೂಡಿಕೆ ಮಾಡಲಿದೆ ಚಿತ್ರ ನಿರ್ಮಾಣ ಸಂಸ್ಥೆ!
2022 ರಲ್ಲಿ ಬೆನ್ನು ಬೆನ್ನಿಗೆ ಎರಡು ಯಶಸ್ವಿ ಚಿತ್ರಗಳಾದ ಕೆ.ಜಿ.ಎಫ್-೨ ಮತ್ತು ಕಾಂತಾರ ಚಿತ್ರಗಳನ್ನು ನೀಡಿದ ನಿರ್ಮಾಪಕ ವಿಜಯ್ ಕಿರಗಂದೂರು ಮುಂದಿನ ಐದು ವರ್ಷಕ್ಕೆ ಬರೋಬ್ಬರಿ 3,000 ಕೋಟಿ ರೂ ಹೂಡಿಕೆ ಮಾಡಲಿದ್ದಾರೆ. ಅಲ್ಲದೆ, ಹೊಂಬಾಳೆ ಫಿಲ್ಮ್ಸ್ ನಿರ್ಮಾಣ ಸಂಸ್ಥೆಯು ಮುಂದಿನ ಎರಡು ವರ್ಷಗಳಲ್ಲಿ 10-12 ಚಿತ್ರಗಳನ್ನು ನಿರ್ಮಿಸುವ ಯೋಜನೆಯನ್ನು ಹಾಕಿಕೊಂಡಿದೆ. ದಕ್ಷಿಣ ಭಾರತದ ಘಟಾನುಘಟಿ ನಟರನ್ನು ಹೊಂಬಾಳೆ ಫಿಲ್ಮ್ಸ್ ತೆರೆಗೆ ತರಲಿದ್ದು ಹೊಂಬಾಳೆಯಿಂದ ಎಲ್ಲರ ಬಾಳು ಬಂಗಾರವಾಗಲಿದೆ. ಪ್ರಭಾಸ್ ನಟನೆಯ ಸಲಾರ್, ಪೃಥ್ವಿರಾಜ್ ನ ಟೈಸನ್, […]
ಜ. 4 ರಂದು ಕೋವಾಕ್ಸಿನ್ ಮುನ್ನೆಚ್ಚರಿಕಾ ಡೋಸ್ ಲಸಿಕಾ ಮೇಳ
ಉಡುಪಿ: ಚೀನಾ, ರಿಪಬ್ಲಿಕ್ ಆಫ್ ಕೊರಿಯಾ, ಜಪಾನ್, ಯು.ಎಸ್.ಎ, ಬ್ರೆಝಿಲ್ ದೇಶಗಳಲ್ಲಿ ಈಗಾಗಲೇ ಕೋವಿಡ್-19 ಪ್ರಕರಣಗಳು ಹೆಚ್ಚುತ್ತಿದ್ದು, ನಾಲ್ಕನೆ ಅಲೆಯಲ್ಲಿ ಸಂಭವಿಸಬಹುದಾದ ತೀವ್ರತೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಜನವರಿ 4 ರಂದು ಜಿಲ್ಲೆಯ ಎಲ್ಲಾ ಸರಕಾರಿ ಆಸ್ಪತ್ರೆಗಳಲ್ಲಿ ಕೋವಾಕ್ಸಿನ್ ಮುನ್ನೆಚ್ಚರಿಕೆ ಡೋಸ್ ಲಸಿಕಾ ಮೇಳವನ್ನು ಆಯೋಜಿಸಲಾಗಿದೆ. ಕೋವಾಕ್ಸಿನ್ ಪ್ರಥಮ ಡೋಸ್ ಲಸಿಕೆ ಪಡೆದು 28 ದಿನಗಳು ಮೀರಿದವರು, 2ನೇ ಡೋಸ್ ಕೋವಾಕ್ಸಿನ್ ಲಸಿಕೆ ಪಡೆಯಲು ಮತ್ತು 2ನೇ ಡೋಸ್ ಕೋವಾಕ್ಸಿನ್ ಲಸಿಕೆ ಪಡೆದು 6 ತಿಂಗಳು ಪೂರೈಸಿದವರು […]
ಕುತೂಹಲ ಹುಟ್ಟಿಸಿದೆ ಎಲ್ಲಿಂದ ಬರ್ತಿರೋ ನೀವೆಲ್ಲಾ ವೆಬ್ ಸೀರೀಸ್ ನ ಮೂರನೆ ಎಪಿಸೋಡಿನ ಟ್ರೈಲರ್
ಸಿನಿಮಾ ಸೈಕಲ್ ಪ್ರೊಡಕ್ಷನ್ಸ್ & ಭಾಗ್ಯರತ್ನ ಪಿಕ್ಚರ್ಸ್ ಬ್ಯಾನರ್ ನಡಿಯಲ್ಲಿ ಹೇಮಂತ್ ಯುಬಿಸಿ ಬರೆದು ನಿರ್ದೇಶಿಸಿರುವ ಪ್ರತೀಕ್ ಶೆಟ್ಟಿ, ಸರ್ವಣ್, ಗೌರವ್ ಶೆಟ್ಟಿ, ಗೌರವ್ ಶೆಟ್ಟಿ, ಆರಾಧನಾ ಭಟ್, ಕುನಾಲ್ ಸವಕಾರ್, ಶೀಲ ರಾಜು, ಅಂಜಲಿ ಡಾಲಿ ಮುಂತಾದವರ ತಾರಾಗಣದ ಎಲ್ಲಿಂದ ಬರ್ತಿರೋ ನೀವೆಲ್ಲಾ ವೆಬ್ ಸೀರೀಸ್ ನ ಮೂರನೆ ಎಪಿಸೋಡಿನ ಟ್ರೈಲರ್ ಯೂಟ್ಯೂಬ್ ನಲ್ಲಿ ಡಿ.30 ರಂದು ಬಿಡುಗಡೆಯಾಗಿದ್ದು ಎಪಿಸೋಡ್ ನೋಡಲು ಎಲ್ಲರೂ ಕಾತರದಿಂದ ಕಾಯುತ್ತಿದ್ದಾರೆ. ಕಾರ್ತಿಕ್ ಕಣ್ಣನ್ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ರೋಹಿತ್ ಸೊವರ್ […]
ಕಾರ್ನಿಕದ ಪಂಜುರ್ಲಿ ತುಳು ಭಕ್ತಿ ಸುಗಿಪು ಯೂಟ್ಯೂಬ್ ಡ್ ಬಿಡುಗಡೆ
ನೇತ್ರಾವತಿ ಪ್ರದೀಪ್ ಮೆರೆನ ಪರಿಕಲ್ಪನೆ, ಪ್ರದೀಪ್ ಕುಕ್ಕುಡೆ ಮೆರೆನ ಗೀತ ರಚನೆ, ಸಾಹಿತ್ಯ ಸಂಗೀತ ಬೊಕ್ಕ ಸೊರೊಟು ತುಳುನಾಡ ದೈವ ಕಾರ್ನಿಕದ ಪಂಜುರ್ಲಿನ ತುಳು ಭಕ್ತಿ ಸುಗಿಪು ಯೂಟ್ಯೂಬ್ ಡ್ ಬಿಡುಗಡೆ ಆತ್ಂಡ್. ಕುಮಾರಿ ಭಾವನಾ ಶ್ರೀಮತಿ ಪ್ರತಿಮಾ ರವೀಂದ್ರ ಬೊಕ್ಕ ಕುಮಾರಿ ರಂಜಿತಾ ಮೊಕ್ಲು ಸುಗಿಪುಗು ಸೊರೊ ಸೇರ್ಸಾದೆರ್. ವಯಲಿನ್ ಡ್ ಮಣಿಪಾಲದ ವಿದ್ವಾನ್ ವೈಭವ್ ಪೈ, ಹಾರ್ಮೋನಿಯಂದ್ ಆಕಾಶ್ ಗುಜ್ಜರಬೆಟ್ಟು, ತಬಲೊಡು ಒಡಿಪುದ ಪ್ರಜ್ವಲ್ ಆಚಾರ್ಯ ಮೇರ್ ಬೆರಿ ಸಹಾಯ ಕೊರ್ತೆರ್. ಸ್ವರಂ ಸ್ಟೂಡಿಯೋ […]
ಶಾಲಾ ಮಕ್ಕಳ ಪ್ರವಾಸದ ಬಸ್ ಪಲ್ಟಿ: ಇಬ್ಬರು ವಿದ್ಯಾರ್ಥಿ; ಮೂವರು ಶಿಕ್ಷಕಿಯರಿಗೆ ಗಂಭೀರ ಗಾಯ
ಕಾರ್ಕಳ: ರಾಜ್ಯ ಹೆದ್ದಾರಿಯ ಪಾಜೆಗುಡ್ಡ ತಿರುವಿನಲ್ಲಿ ಶಾಲಾ ಮಕ್ಕಳ ಪ್ರವಾಸದ ಬಸ್ ಪಲ್ಟಿ ಹೊಡೆದ ಘಟನೆ ವರದಿಯಾಗಿದೆ. ಕಾರ್ಕಳ ರಾಜ್ಯ ಹೆದ್ದಾರಿಯ ನಲ್ಲೂರು ಸಮೀಪ ಇಂದು ಈ ಘಟನೆ ನಡೆದಿದ್ದು, ಬಸ್ನಲ್ಲಿ ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲೂಕಿನ ಪ್ರೌಢಶಾಲೆಯೊಂದರ ವಿದ್ಯಾರ್ಥಿಗಳಿದ್ದರು. ಇಲ್ಲಿನ ಬಸವೇಶ್ವರ ಪ್ರೌಢಶಾಲೆಯ ವಿದ್ಯಾರ್ಥಿಗಳ ಬಸ್ ಶಾಲಾ ಪ್ರವಾಸ ನಿಮಿತ್ತ ಈ ಹೆದ್ದಾರಿಯಲ್ಲಿ ಸಾಗುತ್ತಿತ್ತು. ದುರಾದೃಷ್ಟವಶಾತ್ ಮಕ್ಕಳ ಬಸ್ ತಿರುವಿನಲ್ಲಿ ಅಪಘಾತಕ್ಕೀಡಾಗಿದೆ. ವರದಿಗಳ ಪ್ರಕಾರ ಘಟನೆಯಲ್ಲಿ ಮೂವರು ಶಿಕ್ಷಕಿಯರು ಮತ್ತು ಇಬ್ಬರು ವಿದ್ಯಾರ್ಥಿಗಳಿಗೆ ಗಂಭೀರ ಪ್ರಮಾಣದ […]