ಕುತೂಹಲ ಹುಟ್ಟಿಸಿದೆ ಎಲ್ಲಿಂದ ಬರ್ತಿರೋ ನೀವೆಲ್ಲಾ ವೆಬ್ ಸೀರೀಸ್ ನ ಮೂರನೆ ಎಪಿಸೋಡಿನ ಟ್ರೈಲರ್

ಸಿನಿಮಾ ಸೈಕಲ್ ಪ್ರೊಡಕ್ಷನ್ಸ್ & ಭಾಗ್ಯರತ್ನ ಪಿಕ್ಚರ್ಸ್ ಬ್ಯಾನರ್ ನಡಿಯಲ್ಲಿ ಹೇಮಂತ್ ಯುಬಿಸಿ ಬರೆದು ನಿರ್ದೇಶಿಸಿರುವ ಪ್ರತೀಕ್ ಶೆಟ್ಟಿ, ಸರ್ವಣ್, ಗೌರವ್ ಶೆಟ್ಟಿ, ಗೌರವ್ ಶೆಟ್ಟಿ, ಆರಾಧನಾ ಭಟ್, ಕುನಾಲ್ ಸವಕಾರ್, ಶೀಲ ರಾಜು, ಅಂಜಲಿ ಡಾಲಿ ಮುಂತಾದವರ ತಾರಾಗಣದ ಎಲ್ಲಿಂದ ಬರ್ತಿರೋ ನೀವೆಲ್ಲಾ ವೆಬ್ ಸೀರೀಸ್ ನ ಮೂರನೆ ಎಪಿಸೋಡಿನ ಟ್ರೈಲರ್ ಯೂಟ್ಯೂಬ್ ನಲ್ಲಿ ಡಿ.30 ರಂದು ಬಿಡುಗಡೆಯಾಗಿದ್ದು ಎಪಿಸೋಡ್ ನೋಡಲು ಎಲ್ಲರೂ ಕಾತರದಿಂದ ಕಾಯುತ್ತಿದ್ದಾರೆ.

ಕಾರ್ತಿಕ್ ಕಣ್ಣನ್ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ರೋಹಿತ್ ಸೊವರ್ ಸಂಗೀತ ನೀಡಿದ್ದಾರೆ. ಸಂಕಲನ ಮತ್ತು ಸಾಹಿತ್ಯವನ್ನು ಅನಿರುದ್ ಭಟ್ ನಿಭಾಯಿಸಿದ್ದಾರೆ.

ಟ್ರೈಲರ್ 14,830 ವೀಕ್ಷಣೆಗಳನ್ನು ಪಡೆದಿದೆ.