ನವಿಲುಗಳ ಕಣಿವೆಯೆಂದೆ ಪ್ರಖ್ಯಾತವಾಗಿದೆ ಭಾರತದ ಈ ಹಳ್ಳಿ: ಅಜ್ಜನ ಕನಸನ್ನು ಜೀವಂತವಾಗಿರಿಸಿದ ಮೊಮ್ಮಗ

ಭಾರತದ ಯಾವುದೇ ಒಂದು ಹಳ್ಳಿಯಂತೆಯೆ ಇದೂ ಕೂಡಾ ಒಂದು ಹಳ್ಳಿ. ಹಸಿರು ಹೊಲಗಳ ಮಧ್ಯೆ ಹಾದು ಹೋಗಿರುವ ಕೆಂಪು ಮಣ್ಣಿನ ರಸ್ತೆಯ ಈ ಹಳ್ಳಿಯಲ್ಲಿ ನೋಡಲು ವಿಶೇಷವಾದದ್ದು ಏನೂ ಇಲ್ಲ. ಆದರೂ ಇದೆ. ಇಲ್ಲೊಂದು ಒಂಟಿ ಗುಡಿಸಲಿದೆ ಮತ್ತು ಅಲ್ಲಿರುವ ಒಬ್ಬ ವ್ಯಕ್ತಿ ವಾಸಿಸುತ್ತಾರೆ ಮತ್ತು ಆತ ಕರೆದ ತಕ್ಷಣ ಅಲ್ಲೇ ಪಕ್ಕದಲ್ಲಿ ಆಡ್ಡಾಡಿಕೊಂಡಿರುವ ನವಿಲುಗಳೆಲ್ಲಾ ಓಡೋಡಿ ಬರುತ್ತವೆ! ಆಗ ಆ ವ್ಯಕ್ತಿ ಸಂತೋಷದಿಂದ ನವಿಲುಗಳಿಗೆ ಆಹಾರ ನೀಡುತ್ತಾರೆ. ನವಿಲುಗಳೂ ಯಾವುದೇ ಭಯವಿಲ್ಲದೆ ಕಾಳುಗಳನ್ನು ಹೆಕ್ಕಿ ತಿನ್ನುತ್ತವೆ. […]

ಕೊಡವೂರು: ಇಂಡಿಯಾ ಬುಕ್ ಆಫ್ ರೆಕಾರ್ಡ್ ನಲ್ಲಿ ಸ್ಥಾನ ಪಡೆದ ಕಲಾವಿದ ಗಗನ್ ಜೆ ಸುವರ್ಣ ಇವರಿಗೆ ಗೌರವಾರ್ಪಣೆ

ಕೊಡವೂರು: ಜ್ಞಾನೇಂದ್ರ ಸುವರ್ಣ ಹಾಗೂ ವಾಣಿ ದಂಪತಿಗಳ ಪುತ್ರನಾದ ಗಗನ್ ಜೆ ಸುವರ್ಣ ಇವರು ಸ್ಟ್ರಿಂಗ್ ಆರ್ಟ್ (ನೂಲು ಕಲೆ)ನಲ್ಲಿ ವಿಶಿಷ್ಟ ಸಾಧನೆ ಮಾಡಿದ್ದು, ಇವರನ್ನು ಕೊಡವೂರಿನ ನಾಗರಿಕರ ಪರವಾಗಿ ಗೌರವಿಸುವ ಕಾರ್ಯ ನಡೆಯಿತು. ಗಗನ್ ಇವರು ಉಡುಪಿಯ ಪೂರ್ಣ ಪ್ರಜ್ಞಾ ಕಾಲೇಜಿನ ವಾಣಿಜ್ಯ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಾ ಇದ್ದು, ಸುಮಾರು 200 ಸಣ್ಣ ಕಬ್ಬಿಣದ ಮೊಳೆಗಳನ್ನು ಹಾಗೂ 2,500 ನೂಲಿನ ಉಂಡೆಗಳನ್ನು ಉಪಯೋಗಿಸಿ ಕಾಂತಾರ ಸಿನಿಮಾದ ಪುಟ್ಟ ಪ್ರತಿಕೃತಿಯನ್ನು ರಚಿಸಿ ಇಂಡಿಯಾ ಬುಕ್ ಆಫ್ ರೆಕಾರ್ಡ್ […]

2016 ರ ನೋಟು ಅಮಾನ್ಯೀಕರಣ ಅರ್ಜಿಗಳನ್ನು ವಜಾಗೊಳಿಸಿದ ಸುಪ್ರೀಂ ಕೋರ್ಟ್: ಕೇಂದ್ರದ ಅಧಿಸೂಚನೆ ಮಾನ್ಯ ಎಂದ ಪೀಠ

ನವದೆಹಲಿ: 500 ರೂ ಮತ್ತು 1000 ರೂ.ಗಳ ಕರೆನ್ಸಿ ನೋಟುಗಳನ್ನು ಅಮಾನ್ಯಗೊಳಿಸಿ ಕೇಂದ್ರ ಸರ್ಕಾರ ಆರು ವರ್ಷಗಳ ಹಿಂದೆ ತೆಗೆದುಕೊಂಡಿದ್ದ ನಿರ್ಧಾರವನ್ನು ಸುಪ್ರೀಂ ಕೋರ್ಟಿನ ಸಂವಿಧಾನ ಪೀಠ ಎತ್ತಿ ಹಿಡಿದಿದೆ. ನವೆಂಬರ್ 8, 2016 ರ ಕೇಂದ್ರದ ಅಧಿಸೂಚನೆಯು ಮಾನ್ಯವಾಗಿದೆ ಮತ್ತು ಅನುಪಾತದ ಪರೀಕ್ಷೆಯನ್ನು ತೃಪ್ತಿಪಡಿಸುತ್ತದೆ ಎಂದು ಅದು ಹೇಳಿದೆ. ನ್ಯಾಯಮೂರ್ತಿಗಳಾದ ಎಸ್ ಅಬ್ದುಲ್ ನಜೀರ್, ಬಿಆರ್ ಗವಾಯಿ, ಎ.ಎಸ್ ಬೋಪಣ್ಣ, ವಿ ರಾಮಸುಬ್ರಮಣಿಯನ್ ಮತ್ತು ಬಿವಿ ನಾಗರತ್ನ ಅವರನ್ನೊಳಗೊಂಡ ಐವರು ನ್ಯಾಯಾಧೀಶರ ಪೀಠವು ಡಿಸೆಂಬರ್ 7, […]

ಸಂಘ- ಸಂಸ್ಥೆಗಳ ಸಾಮಾಜಿಕ ಕಾರ್ಯಗಳು ಅದರ ಅಭಿವೃದ್ದಿಗೆ ಕಾರಣ: ಸರಿತಾ ಸಂತೋಷ್

ಉಡುಪಿ: ಸಾಮಾಜಿಕ ಕಳಕಳಿಯಿಂದ ಕೂಡಿದ ಕಾರ್ಯಗಳು ಸಂಘ- ಸಂಸ್ಥೆಗಳ ಅಭಿವೃದ್ಧಿಗೆ ಕಾರಣವಾಗುತ್ತದೆ ಎಂದು ಕರ್ನಾಟಕ ಸರ್ಕಾರದ ಮಹಿಳಾ ಮತ್ತು ಮಕ್ಕಳ ಆರೋಗ್ಯ ಇಲಾಖೆಯ ಪ್ಯಾನಲಿಸ್ಟ್ ಪವರ್ ಪ್ಲಾಟ್ಫಾರ್ಮ್ ಆಫ್ ವಿಮೆನ್‌ ಎಂಟ್ರಪ್ರೇನಿಯರ್ಸ್ ಸ್ಥಾಪಕ ಸದಸ್ಯೆ ಸರಿತಾ ಸಂತೋಷ್ ಹೇಳಿದರು. ಉಪ್ಪೂರಿನ ಸ್ಪಂದನಾ ಭೌತಿಕ ಭಿನ್ನ ಸಾಮರ್ಥ್ಯ ಪುನರ್ವಸತಿ ಕೇಂದ್ರದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿಆರ್ಗನೈಸೇಷನ್ ಫಾರ್‌ ರೂರಲ್‌ ಡೆವಲಪ್ಮೆಂಟ್‌ ಎಜ್ಯುಕೇಶನ್‌ ಎಂಡ್‌ ರಿಸರ್ಚ್ ಇದರ 2023 ನೇ ವರ್ಷದ ಚಟುವಟಿಕೆಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು. ಸ್ಪಂದನಾ ಸಂಸ್ಥೆಯ […]

ಕರ್ನಾಟಕ ಬ್ಯಾಂಕ್ ನೇಮಕಾತಿ 2022: ಪ್ರೊಬೇಷನರಿ ಆಫೀಸರ್ ಹುದ್ದೆಗೆ ಅರ್ಜಿಸಲ್ಲಿಸಲು ಜ. 10 ಕೊನೆ ದಿನ

ಕರ್ನಾಟಕ ಬ್ಯಾಂಕ್ ಅಧಿಕೃತ ವೆಬ್‌ಸೈಟ್ www.karnatakabank.com ನಲ್ಲಿ ಕರ್ನಾಟಕ ಬ್ಯಾಂಕ್ ನೇಮಕಾತಿ 2022 ಗಾಗಿ ಅಧಿಕೃತ ಅಧಿಸೂಚನೆಯನ್ನು ಪ್ರಕಟಿಸಿದೆ. ದೇಶದಾದ್ಯಂತ ಕರ್ನಾಟಕ ಬ್ಯಾಂಕಿನ ವಿವಿಧ ಶಾಖೆಗಳಲ್ಲಿ ಸ್ನಾತಕೋತ್ತರ ಪದವೀಧರ ಅಭ್ಯರ್ಥಿಗಳನ್ನು ಪ್ರೊಬೇಷನರಿ ಆಫೀಸರ್-ಪಿಒ (ಸ್ಕೇಲ್ 1) ಆಗಿ ನೇಮಿಸಿಕೊಳ್ಳಲು ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ. ನೇಮಕಾತಿಯಲ್ಲಿ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಅಧಿಕೃತ ಅಧಿಸೂಚನೆ ವಿವರಗಳನ್ನು ಪರಿಶೀಲಿಸಬಹುದು ಮತ್ತು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಕರ್ನಾಟಕ ಬ್ಯಾಂಕ್ ನೇಮಕಾತಿ 2022 ಅಧಿಸೂಚನೆ ಮತ್ತು ನೋಂದಣಿ ದಿನಾಂಕಗಳನ್ನು ಬ್ಯಾಂಕಿನ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದ್ದು, […]