ಮಣಿಪಾಲ: ಶಿವಪಾಡಿ ಉಮಾಮಹೇಶ್ವರ ದೇವಸ್ಥಾನದಲ್ಲಿ 75ನೇ ವರ್ಷದ ಭಜನಾ ಕಾರ್ಯಕ್ರಮ
ಮಣಿಪಾಲ: ಶಿವಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ 75ನೇ ವರ್ಷದ ಭಜನಾ ಕಾರ್ಯಕ್ರಮವು ನಡೆಯಿತು. ಈ ಸಂದರ್ಭದಲ್ಲಿ ಗೋಪಾಲಕೃಷ್ಣ ಭಜನಾ ಮಂದಿರ ಮುಂಡ್ಕಿನಜೆಡ್ಡು, ಚೇರ್ಕಾಡಿ ಇದರ ಅಧ್ಯಕ್ಷ ರಾಜೇಶ್ ಪಾಟೀಲ್ ಇವರನ್ನು ಗೌರವಿಸಲಾಯಿತು.
ನವೆಂಬರ್ 12 ರಂದು ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನಲ್ಲಿ ವಾಣಿಜ್ಯ ವಿದ್ಯಾರ್ಥಿಗಳಿಗಾಗಿ ಬಿಸಿನೆಸ್ ಡೇ ಆಯೋಜನೆ
ಕುಂದಾಪುರ: ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನಲ್ಲಿ ಬಿಸಿನೆಸ್ ಡೇ (ವ್ಯವಹಾರದ ದಿನ) ಅನ್ನು ನವೆಂಬರ್ 12 ರಂದು ಬೆಳಿಗ್ಗೆ10 ರಿಂದ ಸಂಜೆ 5 ರ ವರೆಗೆ ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನಲ್ಲಿ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗಾಗಿ ಬಿಸಿನೆಸ್ ಡೇ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಪೂರಕವಾದ ಶಿಕ್ಷಣವನ್ನು ನೀಡುವುದರ ಮೂಲಕ ಅವರ ಭವ್ಯ ಭವಿಷ್ಯ ಪ್ರಕಾಶಮಾನವಾಗಬೇಕು ಎನ್ನುವ ನಿಟ್ಟಿನಲ್ಲಿ ವ್ಯವಹಾರಕ್ಕೆ ಸಂಬಂಧಿಸಿದ ವಿಷಯಗಳನ್ನು ತರಗತಿಯಲ್ಲಿ ಅಭ್ಯಾಸ ಮಾಡುವುದರೊಂದಿಗೆ ಪ್ರಾಯೋಗಿಕ ಜ್ಞಾನದ ಅರಿವಾಗಬೇಕು ಎನ್ನುವುದು […]
ಮಸಾಲೆಗಳ ರಾಣಿ ಬಹುಪಯೋಗೀ ಏಲಕ್ಕಿಯ ಆರೋಗ್ಯಕಾರಿ ಪ್ರಯೋಜನಗಳು
ಮಸಾಲೆಗಳ ರಾಣಿ ಎಂದೂ ಕರೆಯಲ್ಪಡುವ ಏಲಕ್ಕಿಯನ್ನು ಭಾರತೀಯ ಸಾಂಪ್ರದಾಯಿಕ ಔಷಧ ಅಥವಾ ಆಯುರ್ವೇದದಲ್ಲಿ ಶತಮಾನಗಳಿಂದಲೂ ವಿವಿಧ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಬಳಸಲಾಗುತ್ತಿದೆ. ಏಲಕ್ಕಿ ಅಥವಾ ಎಲೈಚಿ ಬಹುಪಯೋಗಿ ಮಸಾಲೆಯಾಗಿದ್ದು, ಇದನ್ನು ಬಿರಿಯಾನಿ, ಪುಲಾವ್, ಚಹಾ ಮತ್ತು ಹಲವಾರು ತಿಂಡಿ ತಿನಿಸುಗಳಲ್ಲಿ ಬಳಸುವುದು ಕೇವಲ ಸುವಾಸನೆಗೆ ಮಾತ್ರವಲ್ಲ, ಬದಲಿಗೆ ಇದರಲ್ಲಿರುವ ಆರೋಗ್ಯಭರಿತ ಅಂಶಗಳಿಗಾಗಿಯೂ ಹೌದು. ಏಲಕ್ಕಿಯು ಪೊಟ್ಯಾಸಿಯಮ್, ಕ್ಯಾಲ್ಸಿಯಂ ಮತ್ತು ಮೆಗ್ನೀಸಿಯಮ್‌ನಂತಹ ಪೋಷಕಾಂಶಗಳು, ವಿಟಮಿನ್‌ಗಳು ಮತ್ತು ಖನಿಜಗಳ ಉತ್ತಮ ಮೂಲವಾಗಿದೆ. ಅಜೀರ್ಣದ ಸಮಸ್ಯೆಗಳನ್ನು ನಿವಾರಿಸುತ್ತದೆ ಏಲಕ್ಕಿ ಚಹಾವು ಅಜೀರ್ಣ, […]
ಹಿಂದೂ ಪದವನ್ನು ಕೀಳಾಗಿ ಟೀಕಿಸಿದ ಸತೀಶ್ ಜಾರಕಿಹೊಳಿ ಪರವಾಗಿ ಕಾಂಗ್ರೆಸ್ ದೇಶದ ಕ್ಷಮೆಯಾಚಿಸಬೇಕು: ಸಚಿವ ಸುನಿಲ್ ಕುಮಾರ್
ಬೆಂಗಳೂರು: ಬೆಳಗಾವಿಯ ನಿಪ್ಪಾಣಿ ಪಟ್ಟಣದಲ್ಲಿ ಭಾನುವಾರ ರಾತ್ರಿ ಮಾನವ ಬಂಧುತ್ವ ವೇದಿಕೆ ಕಾರ್ಯಕ್ರಮದಲ್ಲಿ ಕರ್ನಾಟಕ ಕಾಂಗ್ರೆಸ್ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರು ‘ಹಿಂದೂ’ ಎಂಬ ಪದವು ಪರ್ಷಿಯನ್ ಪದವಾಗಿದ್ದು, ಅದರ ಅರ್ಥ “ತುಂಬಾ ಕೊಳಕು” ಎಂದು ಹೇಳುವ ಮೂಲಕ ವಿವಾದವನ್ನು ಎಬ್ಬಿಸಿದ್ದರು. ಇದಕ್ಕೆ ತಿರುಗೇಟು ನೀಡಿರುವ ಇಂಧನ ಸಚಿವ ವಿ ಸುನಿಲ್ ಕುಮಾರ್ ಸರಣಿ ಟ್ವೀಟ್ ಮಾಡಿ ಪ್ರತಿಕ್ರಿಯಿಸಿದ್ದಾರೆ. ತಮ್ಮ ಟ್ವಿಟರ್ ಖಾತೆಯಲ್ಲಿ ಸರಣಿ ಟ್ವೀಟ್ ಮಾಡಿ ಪ್ರತಿಕ್ರಿಯಿಸಿರುವ ಸುನಿಲ್ ಕುಮಾರ್, ನನ್ನನ್ನು ಹಿಂದು ಎಂದು ಕರೆಯಬೇಡಿ […]
ಪಟ್ಲ ಯು.ಎಸ್.ನಾಯಕ್ ಶಾಲಾ ವಿದ್ಯಾರ್ಥಿಗಳಿಗೆ ಬಾಲೋಪಚಾರ ಕೈಪಿಡಿ ವಿತರಣೆ
ಹಿರಿಯಡ್ಕ: ಆರೋಗ್ಯ ಭಾರತಿ ಉಡುಪಿ ಜಿಲ್ಲಾ ಸಮಿತಿಯ ವತಿಯಿಂದ ಪ್ರಕಾಶಿತವಾದ ಆರೋಗ್ಯ ಭಾರತಿ ಕಾರ್ಕಳ ಇದರ ಅಧ್ಯಕ್ಷ ಮತ್ತು ಮೈಸೂರು ಆಯುರ್ವೇದ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ. ಸತ್ಯನಾರಾಯಣ ಭಟ್ ಅವರು ಶಾಲಾ ಮಕ್ಕಳಿಗಾಗಿ ಬರೆದ ” ಬಾಲೋಪಾಚಾರ-ನಮ್ಮ ಆರೋಗ್ಯ ನಮ್ಮ ಕೈಯಲ್ಲಿ” ಕೈಪಿಡಿಯನ್ನು ಪಟ್ಲದ ಯು.ಎಸ್.ನಾಯಕ್ ಹೈಸ್ಕೂಲಿನ ವಿದ್ಯಾರ್ಥಿಗಳಿಗೆ ಇಂದು ಉಚಿತವಾಗಿ ವಿತರಿಸಲಾಯಿತು. ಮುಖ್ಯ ಅತಿಥಿಯಾಗಿ ಆರೋಗ್ಯ ಭಾರತಿಯ ಅಖಿಲ ಭಾರತ ಸ್ವಸ್ಥಗ್ರಾಮ ಪ್ರಮುಖ್ ಹಾಗೂ ಕಾರ್ಯಕಾರಣಿ ಸದಸ್ಯ, ಕ್ಷೇತ್ರ ಸಂಘಟನಾ ಕಾರ್ಯದರ್ಶಿ ಸದಾಶಿವ ಜೀ […]