ಅಕ್ಟೋಬರ್ 28 ರಂದು ಜಿಲ್ಲೆಯಾದ್ಯಂತ ಏಕಕಾಲದಲ್ಲಿ ಏಕಕಂಠದಲ್ಲಿ ಕೋಟಿ ಕಂಠ ಗಾಯನ

ಉಡುಪಿ: ಈ ಬಾರಿಯ 67 ನೇ ಕನ್ನಡ ರಾಜ್ಯೋತ್ಸವವನ್ನು ನಾಡಿನಾದ್ಯಂತ ಸಂಭ್ರಮ, ಉತ್ಸಾಹದಿಂದ ಅತ್ಯಂತ ವಿಶಿಷ್ಠವಾಗಿ ಆಚರಿಸಲು ಉದ್ದೇಶಿಸಿದ್ದು, ಒಂದು ಕೋಟಿಗೂ ಹೆಚ್ಚು ಜನರಿಂದ ಏಕ ಕಾಲದಲ್ಲಿ ಏಕ ಕಂಠದಲ್ಲಿ ಆಯ್ದ 6 ಕನ್ನಡ ಗೀತೆಗಳ ಗಾಯನ ಕಾರ್ಯಕ್ರಮ ನಡೆಯಲಿದ್ದು, ಉಡುಪಿ ಜಿಲ್ಲೆಯಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಅಕ್ಟೋಬರ್ 28 ರಂದು ಬೆಳಗ್ಗೆ 11 ಗಂಟೆಗೆ ಜಿಲ್ಲೆಯಲ್ಲಿ ನಡೆಯುವ ಕೋಟಿ ಕಂಠ ಗಾಯನ ಕಾರ್ಯಕ್ರಮದಲ್ಲಿ ಮಲ್ಪೆಯ ಸಮುದ್ರ ಮಧ್ಯದಲ್ಲಿ ಸುಮಾರು 130 ಬೋಟುಗಳಲ್ಲಿ 4000 […]

ಕಾಂತಾರ ಕಂಡು ಆನಂದಿಸಿದ ಕೋಟ ಶ್ರೀನಿವಾಸ ಪೂಜಾರಿ: ರಿಷಭ್ ಶೆಟ್ಟಿಗೆ ಅಭಿನಂದನೆ ಎಂದ ಸಚಿವರು                                                 

  ಕೋಟ:   ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಇವರು ಗುರುವಾರ ದೈವ ನರ್ತಕರು, ಕಲಾವಿದರು ಹಾಗೂ ದೈವ ಪಾತ್ರಿಗಳ ಜೊತೆಯಲ್ಲಿ ಕಾಂತಾರ ಚಲನಚಿತ್ರವನ್ನು ವೀ ಕ್ಷಿಸಿದರು. ಗಲ್ಲಾ ಪೆಟ್ಟಿಗೆಯನ್ನು ಕೊಳ್ಳೆ ಹೊಡೆಯುತ್ತಿರುವ, ಜನರನ್ನು ಬೇರೆಯದೇ ಲೋಕಕ್ಕೆ ಕೊಂಡೊಯ್ಯುವ ಕರಾವಳಿಯ ಜೀವನಾಡಿಯ ಕಾಂತಾರ ಚಲನಚಿತ್ರವನ್ನು ಕೋಟೇಶ್ವರದ ಭಾರತ್ ಸಿನಿಮಾ ಮಂದಿರದಲ್ಲಿ ಸಚಿವರು ನೋಡಿದರು. ಈ ಸಂದರ್ಭದಲ್ಲಿ ಚಲನಚಿತ್ರ ನೋಡಲು ಆಗಮಿಸಿದ್ದ ದೈವ ನರ್ತಕರನ್ನು ಹಾಗೂ ಚಲನಚಿತ್ರದಲ್ಲಿ ಭಾಗವಹಿಸಿ ಪಾತ್ರ ನಿರ್ವಹಣೆ […]

ಕಾಂತಾರ ಖ್ಯಾತಿಯ ಮಾನಸಿ ಸುಧೀರ್ ಅವರಿಂದ ಶಕಲಕ ಬೂಮ್ ಬೂಮ್ ಪೋಸ್ಟರ್ ಬಿಡಗಡೆ 

ಇದು ಯಾರು??! ಉತ್ತರ ಸರಿ ಹೇಳಿದ್ದೀರಾ??? ಇದರ ಉತ್ತರ ಕಾಂತಾರ ಚಿತ್ರದ ನಾಯಕ ಶಿವನ ತಾಯಿಯ ಪಾತ್ರ ಹಾಕಿದ ಮಾನಸಿ ಸುಧೀರ್ ಕೊಡ್ತಾರೆ. ಅ.30 ರಂದು ಪೋಸ್ಟರ್ ಬಿಡುಗಡೆ

ತೆಂಕಪೇಟೆ ಶ್ರೀಲಕ್ಷ್ಮೀವೆಂಕಟೇಶ ದೇವಸ್ಥಾನದಲ್ಲಿ ಗೋಪೂಜೆ

ಉಡುಪಿ: ತೆಂಕಪೇಟೆ ಶ್ರೀಲಕ್ಷ್ಮೀವೆಂಕಟೇಶ ದೇವಸ್ಥಾನದಲ್ಲಿ ದೀಪಾವಳಿಯ ಪಾಡ್ಯ ನಿಮಿತ್ತ ಬುಧವಾರ ಗೋವುಗಳ ಗೋ ಪೂಜೆಯನ್ನು ಅರ್ಚಕ ವಿನಾಯಕ ಭಟ್ ನೆರವೇರಿಸಿದರು. ದೀಪಕ ಭಟ್ , ಜಿ ಎಸ್ ಬಿ ಯುವಕ ಮಂಡಳಿಯ ಅಧ್ಯಕ್ಷ ನಿತೇಶ್ ಶೆಣೈ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಕರಾವಳಿಯಲ್ಲಿ ಕೆಂಗಣ್ಣು ಕಾಟ: ಮುನ್ನೆಚ್ಚರಿಕೆಯೇ ಮದ್ದು

ಮಂಗಳೂರು: ಇಲ್ಲಿನ ಬಜಪೆ ಸಮೀಪದ ಪಡುಪೆರಾರ ಗ್ರಾಮದಲ್ಲಿ ವಾರಗಳ ಹಿಂದೆ ಕೆಂಗಣ್ಣು ರೋಗದ ಪ್ರಕರಣ ವರದಿಯಾಗಿದ್ದು, ಇದೀಗ ಪೆರ್ಮುದೆ, ಎಕ್ಕಾರು ಮತ್ತು ಬಜಪೆ ಪರಿಸರದಲ್ಲಿ ಹಲವರಿಗೆ ಕೆಂಗಣ್ಣು ಸಮಸ್ಯೆ ಕಾಡುತ್ತಿದೆ ಎಂದು ವರದಿಯಾಗಿದೆ. ವಿದ್ಯಾರ್ಥಿಗಳು, ವ್ಯಾಪಾರಿಗಳು ಕೆಂಗಣ್ಣು ರೋಗದಿಂದ ಬಾಧಿತರಗಿದ್ದು ಅವರಿಂದ ಇತರರಿಗೂ ಹರಡುವ ಸಾಧ್ಯತೆಗಳು ಹೆಚ್ಚಿವೆ. ಕೆಂಗಣ್ಣು ಕಾಯಿಲೆಗೆ ನಿರ್ದಿಷ್ಟ ಚಿಕಿತ್ಸೆ ಇಲ್ಲವಾಗಿದ್ದು, ಮುನ್ನೆಚ್ಚರಿಕೆಯೇ ಅತ್ಯುತ್ತಮ ಮದ್ದು ಎಂದು ವೈದ್ಯರು ತಿಳಿಸಿದ್ದಾರೆ. ರೋಗ ಪೀಡಿತ ಪ್ರದೇಶಗಳಲ್ಲಿ ಸುತ್ತಾಡುವಾಗ ಕಣ್ಣುಗಳಿಗೆ ಕನ್ನಡಕ ಹಾಕಿಕೊಳ್ಳುವುದು. ಕೈಗಳನ್ನು ಶುಚಿಯಾಗಿಟ್ಟುಕೊಳ್ಳುವುದು ಮತ್ತು […]