ಸುಡು ಮದ್ದು, ಬೆಂಕಿ, ಹೊಗೆ ಯಾವುದೂ ಇಲ್ಲದ ಪರಿಸರಕ್ಕೆ ಎಳ್ಳಷ್ಟೂ ಹಾನಿಮಾಡದ ಬಿದಿರಿನ ಪಟಾಕಿ

ಕಾರವಾರ: ಮೂಲತಃ ಶಿರಸಿಯವರಾಗಿರುವ ಪಾಂಡುರಂಗ ಭಟ್ ರವರ ಈ ವಿಶಿಷ್ಟ ಬಿದಿರಿನ ಪಟಾಕಿಯಲ್ಲಿ ಸುಡು ಮದ್ದು, ಬೆಂಕಿ, ಹೊಗೆ ಯಾವುದೂ ಇಲ್ಲದ ಕಾರಣ ಪರಿಸರಕ್ಕೆ ಎಳ್ಳಷ್ಟೂ ಹಾನಿಯಾಗುವುದಿಲ್ಲ. ಬರೇ ನಾಲ್ಕು ಗಂಟಿನ ಬಿದಿರು ತಂದು ಅದರ ನಡುವಿನ ಗಂಟುಗಳನ್ನೆಲ್ಲ ತೆಗೆದು ಒಂದು ಗಂಟಿನ ಬುಡದಲ್ಲಿ ಒಂದೂವರೆಯಿಂದ ಎರಡು ಇಂಚು ದೂರದಲ್ಲಿ 16 ಮಿ.ಮೀ ರಂಧ್ರವನ್ನು ಮಾಡಿ, ಅದರಲ್ಲಿ 50 ರಿಂದ 60 ಮಿ.ಲೀ ನಷ್ಟು ಸೀಮೆ ಎಣ್ಣೆ ತುಂಬಿ 75 ಡಿಗ್ರಿ ಕೋನದಲ್ಲಿ ಹಿಡಿದು ಆ ಬಳಿಕ ಕಡ್ಡಿಯಿಂದ […]

ಹೆಡ್ ಬುಷ್ ಚಿತ್ರದಲ್ಲಿ ವೀರಗಾಸೆಗೆ ಅಪಮಾನ: ಸ್ಪಷ್ಟೀಕರಣ ನೀಡಿದ ಚಿತ್ರತಂಡ

ಬೆಂಗಳೂರು: ಹೆಡ್ ಬುಷ್ ಚಿತ್ರದಲ್ಲಿ ವೀರಗಾಸೆ ಕುಣಿತಕ್ಕೆ ಅಪಮಾನವಾಗಿದೆ ಎಂಬ ಚರ್ಚೆ ಮಾಧ್ಯಮ ಹಾಗೂ ಜಾಲತಾಣದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ವೀರಗಾಸೆ ಕನ್ನಡದ ಹೆಮ್ಮೆಯ ಜಾನಪದ ಪರಂಪರೆ. ಚಲನಚಿತ್ರವೂ ಸೇರಿದಂತೆ ಯಾವುದೇ ಮನೋರಂಜನಾ ಮಾಧ್ಯಮದಿಂದ ಜಾನಪದ ಸಂಸ್ಕ್ರತಿಗೆ ಅವಮಾನವಾಗದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿ. ಒಂದೊಮ್ಮೆ ಹೆಡ್ ಬುಷ್ ಚಿತ್ರದಲ್ಲಿ ವೀರಗಾಸೆಗೆ ಅಪಮಾನವಾದರೆ ನಿರ್ಮಾಪಕರು ಹಾಗೂ ನಿರ್ದೇಶಕರು ಮರು ಚಿಂತನೆ ನಡೆಸುವುದು ಸೂಕ್ತ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಟ್ವೀಟ್ ಮಾಡಿದ್ದಾರೆ. ಹೆಡ್ ಬುಷ್ ಚಿತ್ರದ ನಟ […]

47 ಸದಸ್ಯರ ಸ್ಟೀರಿಂಗ್ ಸಮಿತಿ ರಚಿಸಿದ ಖರ್ಗೆ: ಶಶಿ ತರೂರ್ ಗಿಲ್ಲ ಜಾಗ

ನವದೆಹಲಿ: ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ವರು 47 ಜನರ ಸ್ಟೀರಿಂಗ್ ಸಮಿತಿ ರಚಿಸಿದ್ದು, ಇದು ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಸ್ಥಾನದಲ್ಲಿ ಕಾರ್ಯನಿರ್ವಹಿಸಲಿದೆ. ಸಮಿತಿಯ ಪಟ್ಟಿಯಲ್ಲಿ ಕಾಂಗ್ರೆಸ್ ನ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ವಾದ್ರಾ, ಮನಮೋಹನ್ ಸಿಂಗ್, ಎ.ಕೆ ಆಂಟನಿ, ಜೈರಾಮ್ ರಮೇಶ್, ರಣದೀಪ್ ಸುರ್ಜೇವಾಲ, ಅಂಬಿಕಾ ಸೋನಿ, ಅಜಯ್ ಮಾಕನ್, ಹರೀಶ್ ರಾವತ್, ಅಭಿಷೇಕ್ ಮನು ಸಿಂಘ್ವಿ ಮುಂತಾದವರಿದ್ದಾರೆ. ಕಾಂಗ್ರೆಸ್ ಪುನರುಜ್ಜೀವನಕ್ಕಾಗಿ ಸೋನಿಯಾ ಗಾಂಧಿಗೆ ಪತ್ರ ಬರೆದಿದ್ದ ಜಿ-23 ಬಣದ […]

10 ಡೌನಿಂಗ್ ಸ್ಟ್ರೀಟ್‌ ನಲ್ಲಿ ದೀಪಾವಳಿ ಆಚರಿಸಿದ ಬ್ರಿಟನ್ ಪ್ರಧಾನಿ ರಿಷಿ ಸುನಕ್

ಲಂಡನ್: ನಿರ್ಗಮಿತ ಪ್ರಧಾನಿ ಲಿಜ್ ಟ್ರಸ್ ಅವರಿಂದ ಅಧಿಕಾರ ವಹಿಸಿಕೊಂಡ ನಂತರ, ಬ್ರಿಟನ್‌ನ ಹೊಸ ಪ್ರಧಾನಿ ರಿಷಿ ಸುನಕ್ ಬುಧವಾರ ರಾತ್ರಿ 10 ಡೌನಿಂಗ್ ಸ್ಟ್ರೀಟ್‌ನಲ್ಲಿ ದೀಪಾವಳಿಯ ಆಚರಣೆಗಳಲ್ಲಿ ಪಾಲ್ಗೊಂಡರು. ಎಲ್ಲರಿಗೂ ದೀಪಾವಳಿಯ ಶುಭಾಶಯಗಳನ್ನು ತಿಳಿಸಿದ ಸುನಕ್, “ನಮ್ಮ ಮಕ್ಕಳು ಮತ್ತು ಮೊಮ್ಮಕ್ಕಳು ತಮ್ಮ ದೀಪಗಳನ್ನು ಬೆಳಗಿಸುವ ಮತ್ತು ಭವಿಷ್ಯವನ್ನು ಭರವಸೆಯಿಂದ ನೋಡುವಂತಹ ಬ್ರಿಟನ್ ಅನ್ನು ನಿರ್ಮಿಸಲು ಈ ಕೆಲಸದಲ್ಲಿ ಸಾಧ್ಯವಿರುವ ಎಲ್ಲವನ್ನೂ ನಾನು ಮಾಡುತ್ತೇನೆ” ಎಂದು ವಾಗ್ದಾನ ಮಾಡಿದರು. ಅವರು ತಮ್ಮ ಅಧಿಕೃತ ನಿವಾಸದಲ್ಲಿ ದೀಪಾವಳಿಯ […]

ತ್ರಿಶಾ ಕಾಲೇಜಿನಲ್ಲಿ ಎನ್.ಎಸ್.ಎಸ್. ಹಾಗೂ ವೈ.ಆರ್. ಸಿ. ಸ್ವಯಂಸೇವಕರಿಗೆ ಮಾಹಿತಿ ಕಾರ್ಯಗಾರ

ಮಂಗಳೂರು: ನಗರದ ತ್ರಿಶಾ ಕಾಲೇಜ್ ಆಫ್ ಕಾಮರ್ಸ್ ಆ್ಯಂಡ್ ಮ್ಯಾನೇಜ್ಮೆಂಟ್ ಹಾಗೂ ತ್ರಿಶಾ ಸಂಧ್ಯಾ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ (ಎನ್‍ಎಸ್‍ಎಸ್) ಮತ್ತು ಯೂತ್ ರೆಡ್ ಕ್ರಾಸ್ (ವೈ.ಆರ್.ಸಿ.) ಘಟಕಗಳಿಗೆ ಹೊಸದಾಗಿ ಸೇರ್ಪಡೆಗೊಂಡ ಸ್ವಯಂ ಸೇವಕರಿಗೆ ಒಂದು ದಿನದ ಮಾಹಿತಿ ಕಾರ್ಯಗಾರವನ್ನು ಕಾಲೇಜಿನ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಹ್ಯಾದ್ರಿ ಕಾಲೇಜು ಮಂಗಳೂರಿನ ಕಾರ್ಯತಂತ್ರ ಯೋಜನಾ ವಿಭಾಗದ ಮುಖ್ಯಸ್ಥ ರಮೇಶ್ ಕೆ.ಜಿ., ವ್ಯಕ್ತಿಯೊಬ್ಬನ ವ್ಯಕ್ತಿತ್ವವನ್ನು ರೂಪಿಸುವಲ್ಲಿ ಎನ್.ಎಸ್.ಎಸ್ ಮತ್ತು ವೈ.ಆರ್.ಸಿ. ಗಳ ಪಾತ್ರ ಬಹಳ ಮಹತ್ವದ್ದಾಗಿದೆ. […]