ಕರಾವಳಿಯಲ್ಲಿ ಕೆಂಗಣ್ಣು ಕಾಟ: ಮುನ್ನೆಚ್ಚರಿಕೆಯೇ ಮದ್ದು

ಮಂಗಳೂರು: ಇಲ್ಲಿನ ಬಜಪೆ ಸಮೀಪದ ಪಡುಪೆರಾರ ಗ್ರಾಮದಲ್ಲಿ ವಾರಗಳ ಹಿಂದೆ ಕೆಂಗಣ್ಣು ರೋಗದ ಪ್ರಕರಣ ವರದಿಯಾಗಿದ್ದು, ಇದೀಗ ಪೆರ್ಮುದೆ, ಎಕ್ಕಾರು ಮತ್ತು ಬಜಪೆ ಪರಿಸರದಲ್ಲಿ ಹಲವರಿಗೆ ಕೆಂಗಣ್ಣು ಸಮಸ್ಯೆ ಕಾಡುತ್ತಿದೆ ಎಂದು ವರದಿಯಾಗಿದೆ.

ವಿದ್ಯಾರ್ಥಿಗಳು, ವ್ಯಾಪಾರಿಗಳು ಕೆಂಗಣ್ಣು ರೋಗದಿಂದ ಬಾಧಿತರಗಿದ್ದು ಅವರಿಂದ ಇತರರಿಗೂ ಹರಡುವ ಸಾಧ್ಯತೆಗಳು ಹೆಚ್ಚಿವೆ.

ಕೆಂಗಣ್ಣು ಕಾಯಿಲೆಗೆ ನಿರ್ದಿಷ್ಟ ಚಿಕಿತ್ಸೆ ಇಲ್ಲವಾಗಿದ್ದು, ಮುನ್ನೆಚ್ಚರಿಕೆಯೇ ಅತ್ಯುತ್ತಮ ಮದ್ದು ಎಂದು ವೈದ್ಯರು ತಿಳಿಸಿದ್ದಾರೆ. ರೋಗ ಪೀಡಿತ ಪ್ರದೇಶಗಳಲ್ಲಿ ಸುತ್ತಾಡುವಾಗ ಕಣ್ಣುಗಳಿಗೆ ಕನ್ನಡಕ ಹಾಕಿಕೊಳ್ಳುವುದು. ಕೈಗಳನ್ನು ಶುಚಿಯಾಗಿಟ್ಟುಕೊಳ್ಳುವುದು ಮತ್ತು ಕಣ್ಣುಗಳನ್ನು ಮುಟ್ಟದೇ ಇರುವುದರಿಂದ ಕೆಂಗಣ್ಣು ಬರದಂತೆ ತಡೆಯಬಹುದು.

ಆದಾಗ್ಯೂ, ಕೆಂಗಣ್ಣು ಕಾಯಿಲೆ ಬಾಧಿಸಿದಲ್ಲಿ ನೇತ್ರ ವೈದ್ಯರು ನೀಡುವ ಕಣ್ಣಿನ ಹನಿಗಳನ್ನು ಬಳಸಬಹುದು. ಮನೆಮದ್ದುಗಳಲ್ಲಿ ಶುದ್ದ ಕೊಬ್ಬರಿ ಎಣ್ಣೆಯೂ ಕೆಂಗಣ್ಣಿನ ವೈರಸ್ ಮತ್ತು ಬ್ಯಾಕ್ಟೀರಿಯಾ ನಿರೋಧಕವಾಗಿ ಕೆಲಸ ಮಾಡುತ್ತದೆ. ಹಿಂದಿನ ಕಾಲದಲ್ಲಿ ಹಿರಿಯರು ಶುದ್ದ ಕೊಬ್ಬರಿ ಎಣ್ಣೆಯನ್ನು ಕಣ್ಣುಗಳಿಗೆ ಹಚ್ಚಿಕೊಳ್ಳುತ್ತಿದುದ್ದನ್ನು ನೆನಪಿಸಿಕೊಳ್ಳಬಹುದು.