ಮರಳಿನಲ್ಲಿ ಮೂಡಿಬಂತು ದೈವಕಳೆ: ಸ್ಯಾಂಡ್ ಥೀಮ್ ತಂಡದಿಂದ ಕಾಂತಾರ ಶಿಲ್ಪಕಲೆ

ಕುಂದಾಪುರ: ಹರೀಶ್ ಸಾಗಾ, ಸಂತೋಷ ಭಟ್ ಹಾಲಾಡಿ, ಪ್ರಸಾದ್ ಆರ್ ಅವರ ‘ಸ್ಯಾಂಡ್ ಥೀಮ್’ ತಂಡವು ವರಾಹರೂಪಿ ಪಂಜುರ್ಲಿ ದೈವ ಮತ್ತು ಕಾಂತಾರದಲ್ಲಿ ಪಂಜುರ್ಲಿ ದೈವದ ರೂಪ ಧರಿಸಿದ ನಟ ರಿಷಬ್ ಶೆಟ್ಟಿಯವರನ್ನು ಕೇಂದ್ರವಾಗಿರಿಸಿ, 4.00 ಅಡಿ ಎತ್ತರದ ಮರಳು ಶಿಲ್ಪ ಕಲಾಕೃತಿಯನ್ನು ರಚಿಸಿ ಗಮನ ಸೆಳೆದಿದೆ. ಕೋಡಿ ಕುಂದಾಪುರ ಹಳೇ ಆಳಿವೆ ಬೀಚ್‌ನಲ್ಲಿ ಕಾಂತಾರ ಚಿತ್ರದ ಪಂಜುರ್ಲಿ ದೈವದ ಮರಳು ಶಿಲ್ಪವು ಜನರನ್ನು ಕೈ ಬೀಸಿ ಕರೆದಿದೆ ಮಾತ್ರವಲ್ಲ ಕಲಾವಿದರ ಕೈ ಚಳಕಕ್ಕೆ ತಲೆ ಬಾಗಿದೆ.
ಅಕ್ಟೋಬರ್ 28 ರಂದು ಗ್ರಾಮ ಪಂಚಾಯತ್ ಚುನಾವಣೆ ಹಿನ್ನೆಲೆ ಸಂತೆ-ಜಾತ್ರೆ ನಿಷೇಧ

ಉಡುಪಿ: ಗ್ರಾಮ ಪಂಚಾಯತ್ ಚುನಾವಣೆಗೆ ಸಂಬಂಧಿಸಿದಂತೆ ವಿವಿಧ ಕಾರಣಗಳಿಂದ ತೆರವಾಗಿರುವ ಜಿಲ್ಲೆಯ ಬೈಂದೂರು ತಾಲೂಕು ಕಾಲ್ತೋಡು ಗ್ರಾಮ ಪಂಚಾಯತ್, ಬ್ರಹ್ಮಾವರ ತಾಲೂಕು ಯಡ್ತಾಡಿ ಹಾಗೂ ಉಪ್ಪೂರು ಗ್ರಾಮ ಪಂಚಾಯತ್ ಮತ್ತು ಕಾಪು ತಾಲೂಕು ಮುದರಂಗಡಿ ಗ್ರಾಮ ಪಂಚಾಯತ್‌ನ ಸದಸ್ಯ ಸ್ಥಾನಗಳಿಗೆ ಅಕ್ಟೋಬರ್ 28 ರಂದು ಮತದಾನ ನಡೆಯಲಿರುವ ಹಿನ್ನೆಲೆ, ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ಸಲುವಾಗಿ ಮತ್ತು ಸಾರ್ವಜನಿಕರು ಮತ ಹಾಕಲು ಅನುಕೂಲವಾಗುವಂತೆ ಮತದಾನದ ದಿನದಂದು ಈ ಮೇಲ್ಕಂಡ ವ್ಯಾಪ್ತಿಯ ಪ್ರದೇಶಗಳಲ್ಲಿ ಸಂತೆ, ಜಾತ್ರೆಗಳನ್ನು ನಿಷೇಧಿಸಿ ಜಿಲ್ಲಾಧಿಕಾರಿ […]
ದೂರಿಗಾಗಿ ಕಾಯದೆ ದ್ವೇಷ ಭಾಷಣದ ಅಪರಾಧಗಳ ವಿರುದ್ಧ ಸ್ವಯಂ ಪ್ರೇರಿತ ಕ್ರಮ ಕೈಗೊಳ್ಳಿ: ಸುಪ್ರೀಂ ಕೋರ್ಟ್

ನವದೆಹಲಿ: “ವಿವಿಧ ಧಾರ್ಮಿಕ ಸಮುದಾಯಗಳು ಸೌಹಾರ್ದತೆಯಿಂದ ಬದುಕಲು ಸಾಧ್ಯವಾಗದ ಹೊರತು ಭ್ರಾತೃತ್ವ ಇರಲು ಸಾಧ್ಯವಿಲ್ಲ” ಎಂದು ಗಮನಿಸಿದ ಸುಪ್ರೀಂ ಕೋರ್ಟ್ ಶುಕ್ರವಾರ ದೇಶದಲ್ಲಿ ದ್ವೇಷದ ಭಾಷಣಗಳನ್ನು ತಡೆಯುವ ಮನವಿಯಲ್ಲಿ ಮಧ್ಯಂತರ ನಿರ್ದೇಶನಗಳನ್ನು ನೀಡಿದೆ. ನ್ಯಾಯಮೂರ್ತಿಗಳಾದ ಕೆ.ಎಂ.ಜೋಸೆಫ್ ಮತ್ತು ಹೃಷಿಕೇಶ್ ರಾಯ್ ಅವರನ್ನೊಳಗೊಂಡ ಪೀಠವು ದೆಹಲಿ, ಉತ್ತರಾಖಂಡ ಮತ್ತು ಉತ್ತರ ಪ್ರದೇಶದ ಸರ್ಕಾರಗಳಿಗೆ ತಮ್ಮ ಅಧಿಕಾರ ವ್ಯಾಪ್ತಿಯಲ್ಲಿ ನಡೆದ ದ್ವೇಷ ಭಾಷಣ ಅಪರಾಧಗಳ ಕುರಿತು ತೆಗೆದುಕೊಂಡ ಕ್ರಮಗಳ ಬಗ್ಗೆ ನ್ಯಾಯಾಲಯಕ್ಕೆ ವರದಿ ಸಲ್ಲಿಸುವಂತೆ ಸೂಚಿಸಿದೆ. ಮುಖ್ಯವಾಗಿ, ಯಾವುದೇ ದೂರಿಗೆ […]
ಅಪ್ಪ ಮಗನ ಅಪೂರ್ವ ಸಂಗಮದ ಪೋಸ್ಟರ್; ಚಿತ್ರ ಕ್ಕೆ ತೆರಿಗೆ ವಿನಾಯಿತಿ; ಗಂಧದಗುಡಿ ಎಲ್ಲಾ ದಾಖಲೆಗಳನ್ನೂ ಪುಡಿಗಟ್ಟಲಿ ಎಂದ ಯಶ್

ಬೆಂಗಳೂರು: ಸಸ್ಯ ಮತ್ತು ಪ್ರಾಣಿಗಳ ರಕ್ಷಣೆ ಮತ್ತು ಸಂರಕ್ಷಣೆಯನ್ನು ಆಧರಿಸಿದ ದಿವಂಗತ ಪುನೀತ್ ರಾಜ್‌ಕುಮಾರ್ ಅಭಿನಯದ ಕನ್ನಡ ಸಾಕ್ಷ್ಯಚಿತ್ರ ‘ಗಂಧದ ಗುಡಿ’ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶುಕ್ರವಾರ ತೆರಿಗೆ ವಿನಾಯಿತಿ ಘೋಷಿಸಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ. ಇದು ಅಪ್ಪು ನಟನೆಯ ಕೊನೆಯ ಚಿತ್ರವಾಗಿದೆ. ಈ ಮಧ್ಯೆ ಅಪ್ಪು ಮತ್ತು ವರನಟ ಡಾ. ರಾಜ್ ಕುಮಾರ್ ಅವರ ಚಿತ್ರಗಳನ್ನೊಳಗೊಂಡ ಪೋಸ್ಟರ್ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ. ಅಪ್ಪ-ಮಗ ಇಬ್ಬರೂ ಗಂಧದಗುಡಿ ಎನ್ನುವ ಹೆಸರಿನ ಚಿತ್ರದಲ್ಲಿ ನಟಿಸಿದ್ದು, ದುರಾದೃಷ್ಟವಶಾತ್ ಈ […]
ಸೇನರ ಜಿಡ್ದ ಮಾರ್ಗಕ್ಕೆ ಅರುಣಾಬ್ಜ ಮಾರ್ಗ ನಾಮಕರಣ: ಆಕ್ಷೇಪಣೆ ಆಹ್ವಾನ

ಉಡುಪಿ: ಉಡುಪಿ ನಗರಸಭಾ ವ್ಯಾಪ್ತಿಯ ಕೊಡವೂರಿನ ಸಾಲ್ಮರದಿಂದ ಸೇನರ ಜಿಡ್ದಕ್ಕೆ ಹೋಗುವ ಮಾರ್ಗಕ್ಕೆ ಕವಿ ಅರುಣಾಬ್ಜ ಮಾರ್ಗ ಎಂದು ನಾಮಕರಣಗೊಳಿಸುವ ಕುರಿತು ಆಕ್ಷೇಪಣೆ ಹಾಗೂ ಸಲಹೆಗಳಿದ್ದಲ್ಲಿ 30 ದಿನಗಳ ಒಳಗೆ ನಗರಸಭೆ ಕಚೇರಿಗೆ ಸಲ್ಲಿಸುವಂತೆ ನಗರಸಭೆ ಪೌರಾಯುಕ್ತರ ಕಚೇರಿ ಪ್ರಕಟಣೆ ತಿಳಿಸಿದೆ.