ಮಣಿಪಾಲ: ಮಾಹೆಯ ಆರ್ಕಿಟೆಕ್ಚರ್ ವಿಭಾಗದಿಂದ ಡಾ. ವಿ ಎಸ್ ಆಚಾರ್ಯ ರಸ್ತೆ ವಿನ್ಯಾಸ

ಮಣಿಪಾಲ: ನಗರ ಭೂ ಸಾರಿಗೆ ನಿರ್ದೇಶನಾಲಯ ಅಡಿಯಲ್ಲಿ ನೋಂದಾಯಿತವಾಗಿರುವ ಕೆ.ಎನ್.ಎಮ್.ಟಿ.ಎ ಯು ಕರ್ನಾಟಕದ ಶ್ರೇಣಿ 2 ಮತ್ತು ಶ್ರೇಣಿ 3 ರ ನಗರಗಳಲ್ಲಿ ಬೀದಿ ನಡಿಗೆಗಳನ್ನು ಸುಧಾರಿಸಲು ತನ್ನ ಆಸಕ್ತಿಯನ್ನು ವ್ಯಕ್ತಪಡಿಸಿದೆ. ಬೀದಿಗಳ ವಿನ್ಯಾಸ ಪ್ರಕ್ರಿಯೆಯನ್ನು ಸುಧಾರಿಸುವಲ್ಲಿ ಸಮಾಜದ ಎಲ್ಲಾ ಪಾಲುದಾರರ ಸಹಯೋಗವನ್ನು ಕೆ.ಎನ್.ಎಮ್.ಟಿ.ಎ ಹೊಂದಿದೆ. ಈ ನಿಟ್ಟಿನಲ್ಲಿ, ಉಡುಪಿ ನಗರ ಪಾಲಿಕೆಯು, ಡಾ.ವಿ.ಎಸ್.ಆಚಾರ್ಯ ರಸ್ತೆಯ ವಿನ್ಯಾಸ ಅಭಿವೃದ್ಧಿ ಪಡಿಸಲು ಇಚ್ಛೆ ವ್ಯಕ್ತಪಡಿಸಿದೆ. ಸಿಂಡಿಕೇಟ್ ವೃತ್ತದಿಂದ ಆರಂಭಗೊಂಡು ಜಿಲ್ಲಾಧಿಕಾರಿ ಕಚೇರಿವರೆಗೆ ಸರಿಸುಮಾರು 1.8 ಕಿಮೀ ಉದ್ದದ ರಸ್ತೆ […]

ದೀಪಾವಳಿ ಹಬ್ಬದ ಪ್ರಯುಕ್ತ ಉಡುಪಿಯ ‘ಡೆನಿಮ್ ಹಟ್’ ಪ್ರೀಮಿಯಂ ಮೆನ್ಸ್ ವೇರ್ ನಲ್ಲಿ ರಿಯಾಯಿತಿ ದರ ಮಾರಾಟ

ಉಡುಪಿ: ಈ ಸಲದ ದೀಪಾವಳಿಗೊಂದು ಚೆಂದದ ಬಟ್ಟೆ ಖರೀದಿಸಬೇಕು ಎಂದು ಉಡುಪಿ ನಗರದ ಜನರು ಯೋಚಿಸುತ್ತಿರಬಹುದು. ಇಲ್ಲಿದೆ ನೋಡಿ ನಿಮ್ಮ ಬಟ್ಟೆ ಶಾಪಿಂಗ್ ಗೊಂದು ಹೇಳಿಮಾಡಿಸಿದ ಅಡ್ಡಾ. ಯಸ್, ನಗರದ ಹಳೆ ಪೋಸ್ಟ್ ಆಫೀಸ್ ರಸ್ತೆಯ ಕೊಳದ ಪೇಟೆ (ತೆಂಕಪೇಟೆ) ಸಾಯಿ ಹರ್ಷ ಸ್ಕ್ವಾರ್ ಕಟ್ಟಡದಲ್ಲಿರುವ ‘ಡೆನಿಮ್ ಹಟ್’ ಪ್ರೀಮಿಯಂ ಮೆನ್ಸ್ ವೇರ್ ಶೋರೂಮ್ ನಿಮ್ಮ ಶಾಪಿಂಗ್ ಆಸೆಯನ್ನು ಪೂರೈಸಿ ಭರ್ಜರಿ ಬಟ್ಟೆಗಳನ್ನು ನಿಮಗೆ ನೀಡಲಿದೆ. ಕಡಿಮೆ ಬೆಲೆಗೆ ಗುಣಮಟ್ಟದ ಬಟ್ಟೆ ನೀಡುವಲ್ಲಿ ಈಗಾಗಲೇ ಈ ಸಂಸ್ಥೆ […]

ಕಾಂತಾರ ವೀಕ್ಷಿಸಿದ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಪರಿವಾರ

ಮಂಗಳೂರು: ಧರ್ಮಸ್ಥಳ ಧರ್ಮಾಧಿಕಾರಿಗಳಾದ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರು ಶುಕ್ರವಾರ ಮಂಗಳೂರಿನ ಚಲನಚಿತ್ರ ಮಂದಿರದಲ್ಲಿ ಕುಟುಂಬ ಸಮೇತರಾಗಿ ಆಗಮಿಸಿ ರಿಷಬ್ ಶೆಟ್ಟಿ ಅಭಿಯನದ ಕಾಂತಾರ ಚಿತ್ರ ವೀಕ್ಷಣೆ ಮಾಡಿದರು. ಕಾಂತಾರ ಚಿತ್ರ ವೀಕ್ಷಿಸಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಹೆಗ್ಗಡೆಯವರು ಚಿತ್ರದ ತಮ್ಮ ಅನುಭವವನ್ನು ಹಂಚಿಕೊಂಡು ಮೆಚ್ಚುಗೆ ವ್ಯಕ್ತಪಡಿಸಿದರು. ಇತ್ತೀಚಿನ ದಿನಗಳಲ್ಲಿ ಚಲನಚಿತ್ರ ನೋಡುವುದು ಕಡಿಮೆಯಾಗಿತ್ತು. ಕರ್ನಾಟಕದ ಒಂದು ಭಾಗದ ವಿಶೇಷ ಅನುಭವಗಳು, ನಂಬಿಕೆ, ನಡವಳಿಕೆಗಳು ಮತ್ತು ದೈವಾರಾಧನೆಯಲ್ಲಿರುವ ಸೂಕ್ಷ್ಮತೆಯನ್ನು ಬಹಳ ಚೆನ್ನಾಗಿ ರಿಷಭ್ ಶೆಟ್ಟಿ ಈ ಚಿತ್ರದಲ್ಲಿ […]

ರಜತಾದ್ರಿ: ಅಕ್ಟೋಬರ್ 23 ರಂದು ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ

ಉಡುಪಿ: ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಜಿಲ್ಲೆ ಇವರ ಸಂಯುಕ್ತ ಆಶ್ರಯದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಆಚರಣೆಯು ಅಕ್ಟೋಬರ್ 23 ರಂದು ಬೆಳಗ್ಗೆ 10 ಗಂಟೆಗೆ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

ವಿಜಯ್ ಮಲ್ಯ ಮತ್ತು ನೀರವ್ ಮೋದಿ ಹಸ್ತಾಂತರವನ್ನು ತ್ವರಿತಗೊಳಿಸಿ: ಯುಕೆ ಅಧಿಕಾರಿಗಳಿಗೆ ಭಾರತ ತಾಕೀತು

ನವದೆಹಲಿ: ಭಾರತದ ಕಾನೂನು ಜಾರಿ ಅಧಿಕಾರಿಗಳು ದ್ವಿಪಕ್ಷೀಯ ಸಭೆಯಲ್ಲಿ ಭೂಗತ ಪಾತಕಿ ಇಕ್ಬಾಲ್ ಮಿರ್ಚಿ ಅವರ ಪತ್ನಿ ಹಜ್ರಾ ಮೆಮನ್ ಮತ್ತು ಅವರ ಪುತ್ರರಾದ ಆಸಿಫ್ ಮತ್ತು ಜುನೈದ್ ಸೇರಿದಂತೆ ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯ ಅವರ ಹಸ್ತಾಂತರವನ್ನು “ತ್ವರಿತಗೊಳಿಸುವಂತೆ” ಯುಕೆ ಅಧಿಕಾರಿಗಳನ್ನು ಕೇಳಿಕೊಂಡಿದ್ದಾರೆ ಎಂದು ವರದಿಯಾಗಿದೆ. ಮಲ್ಯ ಅವರ ಹಸ್ತಾಂತರವನ್ನು ಯುಕೆ ಹೈಕೋರ್ಟ್ ಏಪ್ರಿಲ್ 2020 ರಲ್ಲಿ ತೆರವುಗೊಳಿಸಿದೆ. ಆದರೆ ಅಜ್ಞಾತವಾದ ಯಾವುದೋ “ರಹಸ್ಯ ಪ್ರಕ್ರಿಯೆಗಳಿಂದ” ಎರಡೂವರೆ ವರ್ಷಗಳ ಕಾಲದಿಂದ ಹಸ್ತಾಂತರ ಪ್ರಕ್ರಿಯೆ ವಿಳಂಬವಾಗುತ್ತಿದೆ. ಯುಕೆ […]