ಪಂಚೆ ಉಟ್ಟು ಮುಂಡಾಸು ಕಟ್ಟಿ ಕಾಂತಾರ ವೀಕ್ಷಿಸಿದ ಎಂ.ಆರ್.ಪಿ.ಎಲ್ ಉದ್ಯೋಗಿಗಳು!

ಮಂಗಳೂರು: ತುಳುವ ನಾಡಿನ ಸೊಗಡನ್ನು ಹೊಂದಿರುವ ಕಾಂತಾರ ಸೃಷ್ಟಿಸಿದ ಸಂಚಲನ ಹೇಗಿದೆಯೆಂದರೆ ಇದೀಗ ವಿಶ್ವವೆ ತುಳುವ ಸಂಸ್ಕೃತಿಯ ಬಗ್ಗೆ ಮಾತನಾಡುತ್ತಿದೆ ಮಾತ್ರವಲ್ಲ, ಇಲ್ಲಿನ ಆಚಾರ ವಿಚಾರಗಳನ್ನು ತಿಳಿದುಕೊಳ್ಳುವತ್ತ ಮುಖ ಮಾಡಿದೆ. ಇದೀಗ ಎಂ.ಆರ್.ಪಿ.ಎಲ್ ನ ಉದ್ಯೋಗಿಗಳು ಪಂಚೆ ಉಟ್ಟುಕೊಂಡು ಎರಡನೇ ಬಾರಿಗೆ ಚಲನಚಿತ್ರ ವೀಕ್ಷಣೆಗೆ ಹೊರಟಿದ್ದು, ಇದು ಈ ಸಿನಿಮಾ ಮತ್ತು ಈ ಮಣ್ಣಿನ ಸಂಸ್ಕೃತಿಯ ಬಗ್ಗೆ ಈ ಯುವಕರಿಗಿರುವ ಅಭಿಮಾನವನ್ನು ಎತ್ತಿ ತೋರಿಸುತ್ತಿದೆ. ಮೊದಲನೆ ಬಾರಿಗೆ ಕಾಂತಾರ ಚಲನಚಿತ್ರವನ್ನು ಕಂಡು ಖುಷಿಪಟ್ಟ ಈ ಯುವಕರ ತಂಡವು […]

ಮಹಿಳೆಯ ಮರಣಕ್ಕೆ ಕಾರಣನಾದ ಅಪಘಾತದ ಆರೋಪಿಗೆ ಕಾರಾಗೃಹ ಶಿಕ್ಷೆ

ಉಡುಪಿ: ದುಡುಕುತನ ಹಾಗೂ ಅಜಾಗರೂಕತೆಯಿಂದ ದ್ವಿಚಕ್ರ ವಾಹನ ಚಲಾಯಿಸಿ ಮಹಿಳೆಯ ಸಾವಿಗೆ ಕಾರಣವಾದ ಆರೋಪಿಗೆ ನಗರದ 1 ನೇ ಹೆಚ್ಚುವರಿ ಸಿ.ಜೆ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯವು ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿದೆ. 2019 ಜನವರಿ 26 ರಂದು 8.30 ರ ಸುಮಾರಿಗೆ ಅಲೆವೂರು ಗ್ರಾಮದ ಬೋಜ ಎಂಬಾತನು ಬಡಗುಬೆಟ್ಟು ಗ್ರಾಮದ ಕುಕ್ಕಿಕಟ್ಟೆ ಮುಚ್ಲಿಕೋಡು ದೇವಸ್ಥಾನದ ದ್ವಾರದ ಬಳಿ ದ್ವಿಚಕ್ರ ವಾಹನವನ್ನು ದುಡುಕುತನ ಹಾಗೂ ಅಜಾಗರೂಕರೆಯಿಂದ ರಸ್ತೆಯ ತೀರಾ ಎಡ ಬದಿಗೆ ಚಲಾಯಿಸಿ ರಸ್ತೆ ಪಕ್ಕದಲ್ಲಿ ನಡೆದುಕೊಂಡು […]

ಅ. 15 ರಿಂದ ತ್ರಿಶಾ ಕ್ಲಾಸಸ್ ನಲ್ಲಿ ಸಿಎಸ್ಇಇಟಿ ಕ್ರ್ಯಾಶ್ ಕೋರ್ಸ್ ಆರಂಭ

ಉಡುಪಿ: ಸಿಎ, ಸಿಎಸ್ ಮೊದಲಾದ ವೃತ್ತಿಪರ ಕೋರ್ಸ್ ಗಳಿಗೆ ತರಬೇತಿ ನೀಡುತ್ತಾ, ವಿದ್ಯಾರ್ಥಿಗಳನ್ನು ಯಶಸ್ಸಿನ ಪಥದಲ್ಲಿ ಮುನ್ನಡೆಸುತ್ತಿರುವ ತ್ರಿಶಾ ಸಂಸ್ಥೆಯು ನವೆಂಬರ್ ನಲ್ಲಿ ಸಿಎಸ್ಇಇಟಿ ಪರೀಕ್ಷೆ ಎದುರಿಸುತ್ತಿರುವ ವಿದ್ಯಾರ್ಥಿಗಳಿಗೆ 1 ವಾರದ ಕ್ರ್ಯಾಶ್ ಕೋರ್ಸ್ ಆರಂಭಿಸುತ್ತಿದ್ದು, ಅ.15 ರಿಂದ ಆರಂಭವಾಗಲಿದೆ. ನುರಿತ ಅಧ್ಯಾಪನ ವೃಂದ, ರಿವಿಜನ್ ಪುಸ್ತಕಗಳು, ಪೂರ್ವಸಿದ್ಧತೆ ಪರೀಕ್ಷೆಗಳು, ವಸತಿ ಸೌಲಭ್ಯ ಒದಗಿಸುವುದು ಸಂಸ್ಥೆಯ ವಿಶೇಷತೆಯಾಗಿದೆ. ವಿದ್ಯಾರ್ಥಿಗಳಲ್ಲಿ ಪರೀಕ್ಷೆ ಎದುರಿಸಲು ಬೇಕಾದ ಆತ್ಮವಿಶ್ವಾಸ ಹೆಚ್ಚಿಸುವುದು ಈ ಕೋರ್ಸ್ ನ ಮೂಲ ಉದ್ದೇಶ. ನೂತನ ಮಾದರಿಯಲ್ಲಿ ನಡೆಯಲಿರುವ […]

ಹಿಜಾಬ್ ಪ್ರಕರಣದಲ್ಲಿ ಭಿನ್ನ ತೀರ್ಪು: ಪ್ರಕರಣ ಮುಖ್ಯ ನ್ಯಾಯಾಧೀಶರ ಅಂಗಳದ ಮುಂದೆ

ನವದೆಹಲಿ: ಮುಸ್ಲಿಂ ವಿದ್ಯಾರ್ಥಿನಿಯರು ಶಿಕ್ಷಣ ಸಂಸ್ಥೆಯಲ್ಲಿ ಹಿಜಾಬ್ ಧರಿಸುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಮೇಲ್ಮನವಿಗಳ ಮೇಲೆ ಸುಪ್ರೀಂ ಕೋರ್ಟ್ ಇಂದು ವಿಭಜಿತ ತೀರ್ಪು ನೀಡಿದೆ. ಹಿಜಾಬ್ ಇಸ್ಲಾಂ ಧರ್ಮದ ಅತ್ಯಗತ್ಯ ಆಚರಣೆಯಲ್ಲ ಮತ್ತು ರಾಜ್ಯದ ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ಧರಿಸುವುದನ್ನು ನಿಷೇಧಿಸಲು ಅನುಮತಿ ನೀಡಿದ ಕರ್ನಾಟಕ ಹೈಕೋರ್ಟ್ ತೀರ್ಪಿನ ವಿರುದ್ಧ ಸಲ್ಲಿಸಲಾದ 26 ಮೇಲ್ಮನವಿಗಳನ್ನು ನ್ಯಾಯಮೂರ್ತಿ ಹೇಮಂತ್ ಗುಪ್ತಾ ವಜಾಗೊಳಿಸಿದ್ದಾರೆ. ತಮ್ಮ ಅಭಿಪ್ರಾಯದಲ್ಲಿನ ಭಿನ್ನಾಭಿಪ್ರಾಯವನ್ನು ವ್ಯಕ್ತಪಡಿಸಿದ ನ್ಯಾಯಮೂರ್ತಿ ಸುಧಾಂಶು ಧುಲಿಯಾ ಅವರು ಕರ್ನಾಟಕ ಹೈಕೋರ್ಟ್ ತೀರ್ಪನ್ನು ತಳ್ಳಿಹಾಕಿದರು ಮತ್ತು […]

ದೀಪಾವಳಿಯಂದು ಖಂಡಗ್ರಾಸ ಸೂರ್ಯಗ್ರಹಣ: ಸೂರ್ಯಾಸ್ತಮಾನದ ಹೊತ್ತಿನಲ್ಲಿ ಖಗೋಳ ವಿದ್ಯಮಾನ

ಉಡುಪಿ/ ಮಂಗಳೂರು: ಅಕ್ಟೋಬರ್ 25 ರ ದೀಪಾವಳಿ ಸಂಭ್ರಮದಂದು ಭಾರತವು ಸೂರ್ಯಗ್ರಹಣಕ್ಕೆ ಸಾಕ್ಷಿಯಾಗಲಿದೆ. ಕೊಲ್ಕತ್ತಾದಿಂದ ಭಾಗಶಃ ಸೂರ್ಯಗ್ರಹಣವನ್ನು ಸ್ವಲ್ಪ ಸಮಯದವರೆಗೆ ವೀಕ್ಷಿಸಬಹುದಾದರೆ, ಭಾರತದ ಉತ್ತರ ಮತ್ತು ಪಶ್ಚಿಮ ಪ್ರದೇಶಗಳಲ್ಲಿ ಚೆನ್ನಾಗಿ ಕಾಣಬಹುದು. ಸೂರ್ಯಸ್ತಮಾನದ ಸಮಯದಲ್ಲಿ ಖಂಡಗ್ರಾಸ ಸೂರ್ಯಗ್ರಹಣ ನಡೆಯುವುದರಿಂದ ಈಶಾನ್ಯ ಭಾರತದಿಂದ ಈ ಗ್ರಹಣವನ್ನು ವೀಕ್ಷಿಸಲು ಸಾಧ್ಯವಿಲ್ಲ. ಯುರೋಪ್, ಉತ್ತರ ಆಫ್ರಿಕಾ, ಮಧ್ಯಪ್ರಾಚ್ಯ ಮತ್ತು ಏಷ್ಯಾದಲ್ಲಿ ಈ ವಿದ್ಯಮಾನವನ್ನು ಗಮನಿಸಬಹುದು. ಅಕ್ಟೋಬರ್ 25ರಂದು ಸೂರ್ಯ, ಚಂದ್ರ ಮತ್ತು ಭೂಮಿಯು ಬಹುತೇಕ ಒಂದೇ ಸಮತಲದಲ್ಲಿರುತ್ತದೆ, ಇದರ ಪರಿಣಾಮವಾಗಿ ಚಂದ್ರನು […]