ಅ. 15 ರಿಂದ ತ್ರಿಶಾ ಕ್ಲಾಸಸ್ ನಲ್ಲಿ ಸಿಎಸ್ಇಇಟಿ ಕ್ರ್ಯಾಶ್ ಕೋರ್ಸ್ ಆರಂಭ

ಉಡುಪಿ: ಸಿಎ, ಸಿಎಸ್ ಮೊದಲಾದ ವೃತ್ತಿಪರ ಕೋರ್ಸ್ ಗಳಿಗೆ ತರಬೇತಿ ನೀಡುತ್ತಾ, ವಿದ್ಯಾರ್ಥಿಗಳನ್ನು ಯಶಸ್ಸಿನ ಪಥದಲ್ಲಿ ಮುನ್ನಡೆಸುತ್ತಿರುವ ತ್ರಿಶಾ ಸಂಸ್ಥೆಯು ನವೆಂಬರ್ ನಲ್ಲಿ ಸಿಎಸ್ಇಇಟಿ ಪರೀಕ್ಷೆ ಎದುರಿಸುತ್ತಿರುವ ವಿದ್ಯಾರ್ಥಿಗಳಿಗೆ 1 ವಾರದ ಕ್ರ್ಯಾಶ್ ಕೋರ್ಸ್ ಆರಂಭಿಸುತ್ತಿದ್ದು, ಅ.15 ರಿಂದ ಆರಂಭವಾಗಲಿದೆ.

ನುರಿತ ಅಧ್ಯಾಪನ ವೃಂದ, ರಿವಿಜನ್ ಪುಸ್ತಕಗಳು, ಪೂರ್ವಸಿದ್ಧತೆ ಪರೀಕ್ಷೆಗಳು, ವಸತಿ ಸೌಲಭ್ಯ ಒದಗಿಸುವುದು ಸಂಸ್ಥೆಯ ವಿಶೇಷತೆಯಾಗಿದೆ. ವಿದ್ಯಾರ್ಥಿಗಳಲ್ಲಿ ಪರೀಕ್ಷೆ ಎದುರಿಸಲು ಬೇಕಾದ ಆತ್ಮವಿಶ್ವಾಸ ಹೆಚ್ಚಿಸುವುದು ಈ ಕೋರ್ಸ್ ನ ಮೂಲ ಉದ್ದೇಶ. ನೂತನ ಮಾದರಿಯಲ್ಲಿ ನಡೆಯಲಿರುವ ಈ ಅಧ್ಯಯನದ ತರಬೇತಿಯಲ್ಲಿ ಭಾಗವಹಿಸಲಿಚ್ಚಿಸುವ ಆಸಕ್ತ ವಿದ್ಯಾರ್ಥಿಗಳು ಮಾಹಿತಿಗೆ ಸಂಸ್ಥೆಯನ್ನು ಸಂಪರ್ಕಿಸಲು ಪ್ರಕಟನೆ ತಿಳಿಸಿದೆ.