“ಕಾಂತಾರ” ನಮಗೆ ಕಾಣಿಸಿದ್ದೇನು? “ಕಾಂತಾರ” ಕ್ಕೆ ಸಿಗುವ ದೊಡ್ಡ ಗೆಲುವು ಯಾವುದೆಂದರೆ! :

♦ಪ್ರಸಾದ್ ಶೆಣೈ ಆರ್.ಕೆ ನಮ್ಮ ತುಳುನಾಡಿನ‌ ದೈವಗಳು, ಆ ದೈವಗಳ ಕಾರ್ಣೀಕಗಳು, ಅದರ ರೌದ್ರತೆ, ಅದು ನೀಡುವ ಅಭಯ, ಅದು ಹುಟ್ಟಿಸುವ ಭಯ. ಇವೆಲ್ಲವನ್ನೂ ಇನ್ನಷ್ಟು ಅಚ್ಚರಿ, ನಿಗೂಢತೆ ಬೆರೆಸಿ, ರಸವತ್ತಾದ ಕತೆಯಾಗಿಸಿ‌ ಹಿರಿಯರು ಹೇಳುವಾಗ ನಮ್ಮ ಕಲ್ಪನೆಯ ಹರಿವು ವಿಸ್ತಾರವಾಗುತ್ತಿತ್ತು, ನಮ್ಮ ನೆಲ‌ ಸಂಸ್ಕೃತಿಯ ಅರಿವೂ ಆಗುತ್ತಿತ್ತು. ನಮ್ಮ ಬಾಲ್ಯವನ್ನು ಪೊರೆಯುತ್ತಿದ್ದುದು ಇದೇ ದೈವಗಳ ಕುರಿತ ಕತೆಗಳು. ಈಗಲೂ ನನಗೆ ದೈವಗಳ ಕುರಿತು ಧಾರ್ಮಿಕ ನಂಬಿಕೆಗಿಂತಲೂ ಜಾಸ್ತಿ ಅದೊಂದು ನಿಗೂಢತೆ, ರೋಚಕತೆ, ಬೆರಗುಗಳನ್ನು ತುಂಬಿಕೊಂಡ‌ ಕಾನನದಂತೆಯೇ […]

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸಂಸ್ಕೃತದಲ್ಲಿ ಕ್ರಿಕೆಟ್ ಕಾಮೆಂಟರಿ!! ನೆಟ್ಟಿಗರಿಂದ ಮೆಚ್ಚುಗೆ

ಬೆಂಗಳೂರು: ಬೆಂಗಳೂರು ನಗರದ ಬಡಾವಣೆಯೊಂದರಲ್ಲಿ ಸಂಪೂರ್ಣವಾಗಿ ಸಂಸ್ಕೃತದಲ್ಲಿ ಮಾತನಾಡುವ ಮತ್ತು ಕ್ರಿಕೆಟ್ ಕಾಮೆಂಟರಿಯನ್ನೂ ಸಂಪೂರ್ಣವಾಗಿ ಸಂಸ್ಕೃತದಲ್ಲಿ ನಡೆಸುವ ವೀಡಿಯೋ ಒಂದನ್ನು ಸಂಸ್ಕೃತ ಭಾರತಿ ಸಂಸ್ಥೆಯ ಪೂರ್ಣ ಕಾಲಿಕ ಕಾರ್ಯಕರ್ತ ಲಕ್ಷ್ಮೀ ನಾರಾಯಣ್ ಬಿ.ಎಸ್ ಎಂಬುವರು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. Sanskrit and cricket pic.twitter.com/5fWmk9ZMZy — LAKSHMI NARAYANA B.S (BHUVANAKOTE) (@chidsamskritam) October 2, 2022

ಶ್ರೀರಾಮನ ಪಾತ್ರದಲ್ಲಿ ಬಾಹುಬಲಿ ಪ್ರಭಾಸ್: ಆದಿಪುರುಷ್ ಟೀಸರ್ ಬಿಡುಗಡೆ

ಪ್ರಭಾಸ್, ಕೃತಿ ಸನೋನ್ ಮತ್ತು ಸೈಫ್ ಅಲಿ ಖಾನ್ ಅಭಿನಯದ ಆದಿಪುರುಷ ಚಿತ್ರದ ಬಹು ನಿರೀಕ್ಷಿತ ಟೀಸರ್ ನಿನ್ನೆ ಅಯೋಧ್ಯೆಯಲ್ಲಿ ಭಾರೀ ಸಡಗರದಿಂದ ಬಿಡುಗಡೆಯಾಗಿದೆ. ಆದಿಪುರುಷ್ ಚಿತ್ರವು ರಾಮಾಯಣವನ್ನು ಆಧರಿಸಿದ್ದು, ಇದರಲ್ಲಿ ಪ್ರಭಾಸ್ ರಾಮನಾಗಿ ಕಾಣಿಸಿಕೊಳ್ಳಲಿದ್ದಾರೆ. ಸೀತೆಯ ಪಾತ್ರದಲ್ಲಿ ಕೃತಿ ಕಾಣಿಸಿಕೊಂಡಿದ್ದು, ಸೈಫ್ ಅಲಿ ಖಾನ್ ರಾವಣನ ಪಾತ್ರವನ್ನು ನಿರ್ವಹಿಸಲಿದ್ದಾರೆ. ಸನ್ನಿ ಸಿಂಗ್ ಲಕ್ಷ್ಮಣ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. आ रहा हूँ, अधर्म का विध्वंस करने 🏹 Step into the word of Adipurush✨ […]

ಕಾರ್ಕಳ ಅಂಚೆ ಕಛೇರಿಯಿಂದ “ಫಿಟ್ ಇಂಡಿಯಾ ಫ್ರೀಡಂ ರನ್”

ಕಾರ್ಕಳ: ಆಜಾದಿ ಕಾ ಅಮೃತ ಮಹೋತ್ಸವದ ಪ್ರಯುಕ್ತ ಗಾಂಧೀ ಜಯಂಜಿಯ ದಿನವಾದ ಅಕ್ಟೋಬರ್:2 ರಂದು ಕಾರ್ಕಳ ಪ್ರಧಾನ ಅಂಚೆ ಕಛೇರಿಯ ವತಿಯಿಂದ ಫಿಟ್ ಇಂಡಿಯಾ ಫ್ರೀಡಂ ರನ್ ಕಾರ್ಯಕ್ರಮ ನಡೆಯಿತು. ಕಾರ್ಕಳ ಅಂಚೆ ಇಲಾಖೆಯ ಸಿಬಂಧಿಗಳು ಮುಖ್ಯ ಕಛೇರಿಯಿಂದ ಗಾಂಧೀ ಮೈಧಾನದವರೆಗೂ ಜಾಥಾ ನಡೆಸಿದರು. ಎಲ್ಲಾ ಸಿಬಂಧಿಗಳು ಈ ಜಾಥಾದಲ್ಲಿ ವಿಭಿನ್ನ ಉಡುಗೆ ಧರಿಸಿ  ಭಾಗವಹಿಸಿ ಜಾಥಾವನ್ನು ಯಶಸ್ವಿಗೊಳಿಸಿದರು. ಜಾಥಾದಲ್ಲಿ  ಅಂಚೆಸಾಹಾಯಕರಾದ  ರಮೇಶನಾಯ್ಕ್, ಸೌಮ್ಯಆಚಾರ್ಯ, ವಿದ್ಯಾಹೊಸಕೋಟೆ, ಶ್ರುತಿನಾಯ್ಕ್, ರಶ್ಮಿಕಾಮತ್, ಲೀನಾಕೊರ್ನೆಲಿಯೊ, ಹರೀಶ್ಪಿ, ಹೇಮಚಂದ್ರ, ತಿಪ್ಪೇಸ್ವಾಮಿ, ಅಂಚೆಪೇದೆಗಳಾದ  ಸುಚಿತ್ರಾಭಟ್, […]

ಬ್ರಹ್ಮಗಿರಿ ವೃತ್ತಕ್ಕೆ ಸಾವರ್ಕರ್ ವೃತ್ತ ಎಂದು ನಾಮಕರಣ: ನಗರಸಭೆಗೆ ಮರು ಅರ್ಜಿ ಸಲ್ಲಿಕೆಗೆ ನಿರ್ಧಾರ

ಉಡುಪಿ: ನಗರದ ಬ್ರಹ್ಮಗಿರಿ ವೃತ್ತಕ್ಕೆ ಸಾವರ್ಕರ್ ವೃತ್ತ ಎಂದು ನಾಮಕರಣ ಮಾಡುವ ಬಗ್ಗೆ ಯಶ್ ಪಾಲ್ ಸುವರ್ಣ ಪ್ರತಿಕ್ರಿಯಿಸಿದ್ದು, ಈ ಬಗ್ಗೆ ನಗರಸಭೆಗೆ ಮನವಿ ಮಾಡಲಾಗಿದೆ. ನಗರಸಭೆಯಿಂದ ಈ ವೃತ್ತಕ್ಕೆ ಆಸ್ಕರ್ ಫೆರ್ನಾಂಡೀಸ್ ವೃತ್ತವೆಂದು ನಾಮಕರಣ ಮಾಡುವ ಬಗ್ಗೆ ಪ್ರಸ್ತಾವನೆ ಸಲ್ಲಿಕೆಯಾಗಿರುವ ಮಾಹಿತಿ ದೊರೆತಿದೆ. ಆದರೆ ಈ ಹಿಂದೆ ತೀರ್ಮಾನವಾದಂತೆ ಈ ವೃತ್ತಕ್ಕೆ ಸ್ವಾತಂತ್ರ್ಯ ವೀರ ಸಾವರ್ಕರ್ ಅವರ ಹೆಸರು ಇಡಬೇಕು. ಯಾವುದೇ ತೀರ್ಮಾನ ತೆಗೆದುಕೊಂಡಾಗ ತಕ್ಷಣಕ್ಕೆ ವಾಪಸ್ ಪಡೆಯುವುದು ಸಾಧ್ಯವಿಲ್ಲ, ಆದರೂ ಕ್ಷೇತ್ರದ ಶಾಸಕರು ಮತ್ತು […]