ತೆಂಕುಪೇಟೆ ಶ್ರೀಲಕ್ಷ್ಮೀ ವೆಂಕಟೇಶ ದೇವಸ್ಥಾನದಲ್ಲಿ ಶಾರದಾ ಪ್ರತಿಷ್ಠೆ

ಉಡುಪಿ: ಇಲ್ಲಿನ ತೆಂಕುಪೇಟೆ ಶ್ರೀಲಕ್ಷ್ಮೀ ವೆಂಕಟೇಶ ದೇವಸ್ಥಾನದ ಶಾರದಾ ದೇವಿಯ ಪ್ರತಿಷ್ಠೆ ಕಾರ್ಯಕ್ರಮವು ಭಾನುವಾರದಂದು ನಡೆಯಿತು. ದೇವಳದ ಅರ್ಚಕರುಗಳಾದ ದಯಾಘನ್ ಭಟ್, ವಿನಾಯಕ ಭಟ್ ಧಾರ್ಮಿಕ ಪೂಜಾ ವಿಧಾನಗಳನ್ನು ನೆರವೇರಿಸಿ ಶಾರದಾ ದೇವಿಗೆ ಮಹಾ ಮಂಗಳಾರತಿ ಬೆಳಗಿಸಿದರು. ಈ ಹಿನ್ನೆಲೆಯಲ್ಲಿ ಉಡುಪಿ ನಗರವನ್ನು ತಳಿರು ತೋರಣ ಮತ್ತು ವಿದ್ಯುತ್ ದೀಪಗಳಿಂದ ಅಲಂಕೃತಗೊಳಿಸಲಾಗಿತ್ತು. ದೇವಳದ ಆಡಳಿತ ಮೊಕ್ತೇಸರ ಪಿ.ವಿ.ಶೆಣೈ, ವಸಂತ್ ಕಿಣಿ, ವಿಶ್ವನಾಥ್ ಭಟ್, ರೋಹಿತಾಕ್ಷ ಪಡಿಯಾರ್ , ಗಣೇಶ್ ಕಿಣಿ, ಅಶೋಕ ಬಾಳಿಗಾ , ನರಹರಿ ಪೈ, […]

ಬಂಗಾಲಿ ಗೋಲ್ಡ್ ಸ್ಮಿತ್ ವರ್ಕ್ಸ್ ಅಸೋಸಿಯೇಶನ್ ವತಿಯಿಂದ ದುರ್ಗಾ ಪೂಜೆ

ಉಡುಪಿ: ಇಲ್ಲಿನ ಬಂಗಾಲಿ ಗೋಲ್ಡ್ ಸ್ಮಿತ್ ವರ್ಕ್ಸ್ ಅಸೋಸಿಯೇಶನ್ ವತಿಯಿಂದ ಉಡುಪಿ ಬೀಡಿನಗುಡ್ಡೆಯ ಮೈದಾನದಲ್ಲಿ ಪ್ರಥಮ ವರ್ಷದ ಸಾರ್ವಜನಿಕ ದುರ್ಗಾ ಪೂಜೆ ನೆರವೇರಿತು.

ಜ್ಞಾನಸುಧಾ ಕಾಲೇಜಿನಲ್ಲಿ ಲಾಲ್ ಬಹಾದ್ದೂರ್ ಶಾಸ್ತ್ರಿ, ಗಾಂಧಿ ಜಯಂತಿ ಆಚರಣೆ

ಗಣಿತ ನಗರ: ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಆಶ್ರಯದಲ್ಲಿ ಮಹಾತ್ಮಗಾಂಧಿಯವರ 153ನೇ ಹಾಗೂ ಲಾಲ್‌ ಬಹಾದ್ದೂರ್‌ ಶಾಸ್ತ್ರಿಯವರ 118ನೇ ಜನ್ಮ ಜಯಂತಿಯನ್ನು ಆಚರಿಸಲಾಯಿತು. ಕುಕ್ಕುಂದೂರಿನ ಉದ್ಯಮಿ ತ್ರಿವಿಕ್ರಮ ಕಿಣಿಯವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಭಾವಚಿತ್ರಗಳಿಗೆ ಪುಷ್ಪನಮನ ಸಲ್ಲಿಸಿದರು. ಅಜೆಕಾರ್‌ ಪದ್ಮಗೋಪಾಲ್‌ ಎಜ್ಯುಕೇಶನ್‌ ಟ್ರಸ್ಟ್‌ನ ಅಧ್ಯಕ್ಷ ಡಾ.ಸುಧಾಕರ್‌ ಶೆಟ್ಟಿ, ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ದಿನೇಶ್‌.ಎಂ. .ಕೊಡವೂರ್, ಕಾರ್ಕಳ ಜ್ಞಾನಸುಧಾ ಆಂಗ್ಲಮಾದ್ಯಮ ಪ್ರೌಢಶಾಲೆಯ ಪ್ರಾಂಶುಪಾಲೆ ಉಷಾ.ರಾವ್‌.ಯು, ಉಪಪ್ರಾಂಶುಪಾಲೆ ವಾಣಿ ಜಯಶೀಲ್‌, ಸಂಸ್ಥೆಯ ಎನ್‌.ಎಸ್.ಎಸ್‌.ಕಾರ್ಯಕ್ರಮಾಧಿಕಾರಿ ರವಿ.ಜಿ., ಡೀನ್‌ಸ್ಟೂಡೆಂಟ್‌ […]

ತೆರೆಮರೆಯ ಅರ್ಹ ಸಾಧಕರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ: ಸಚಿವ ಸುನಿಲ್ ಕುಮಾರ್

ಉಡುಪಿ: ಈ ಬಾರಿಯ ರಾಜ್ಯ ಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ 9823 ಅರ್ಜಿಗಳು ಬಂದಿವೆ. ಆದರೆ ಈ ಬಾರಿ ತೆರೆಯಮರೆಯಲ್ಲಿನ ಅರ್ಹ ಸಾಧಕರನ್ನು ಗುರುತಿಸಿ ಪ್ರಶಸ್ತಿ ನೀಡಲು ನಿರ್ಧರಿಸಿದ್ದು, ಈ ಕುರಿತು ಈಗಾಗಲೇ ಆಯ್ಕೆ ಸಮಿತಿ ರಚನೆಯಾಗಿದ್ದು ಪ್ರಥಮ ಸಭೆ ಕೂಡಾ ಮುಗಿದಿದೆ ಆದಷ್ಟು ಶೀಘ್ರದಲ್ಲಿ ಅರ್ಹ ಸಾಧಕರನ್ನು ಆಯ್ಕೆ ಮಾಡಲಾಗುವುದು ಎಂದು ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ.ಸುನೀಲ್ ಕುಮಾರ್ ಹೇಳಿದರು. ಅವರು ಭಾನುವಾರ ಆದಿ ಉಡುಪಿಯಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ […]

ಜಾಗೃತ ನಾರೀ ಶಕ್ತಿಯಿಂದ ದೇಶದಲ್ಲಿ ಇತಿಹಾಸ ನಿರ್ಮಾಣ ಸಾಧ್ಯ: ಕಾಜಲ್ ಹಿಂದೂಸ್ಥಾನಿ

ಉಡುಪಿ: ಜಿಲ್ಲಾ ಹಿಂದೂ ಜಾಗರಣ ವೇದಿಕೆ ವತಿಯಿಂದ ರಾಜಾಂಗಣ ಸಮೀಪ ಶನಿವಾರದಂದು ನಡೆದ ದುರ್ಗಾ ದೌಡ್ ಹಿಂದೂ ಶಕ್ತಿ ಸಂಚಲನ ಕಾರ್ಯಕ್ರಮದಲ್ಲಿ ಪ್ರಧಾನ ಭಾಷಣ ಮಾಡಿದ ಸಾಮಾಜಿಕ ಕಾರ್ಯಕರ್ತೆ ಕಾಜಲ್ ಹಿಂದೂಸ್ಥಾನಿ, ಹಿಂದೂ ಧರ್ಮದ ಸ್ಥಾಪನೆಯಲ್ಲಿ ದುರ್ಗೆ-ಸೀತೆಯರ ಕೊಡುಗೆ ಅಪಾರವಿದ್ದು, ಕಲಿಯುಗದಲ್ಲಿ ಧರ್ಮ ಸಂಸ್ಥಾಪನೆಯ ಜವಾಬ್ದಾರಿಯನ್ನು ಮಹಿಳೆಯರ ಕೈಗೆ ನೀಡಬೇಕು. ಜಾಗೃತ ನಾರೀ ಶಕ್ತಿಯಿಂದ ದೇಶದಲ್ಲಿ ಇತಿಹಾಸ ನಿರ್ಮಾಣ ಸಾಧ್ಯ ಎಂದರು. ಲವ್ ಜಿಹಾದ್ ಹಾಗೂ ಭೂಮಿ ಜಿಹಾದ್ ಮೂಲಕ ದೇಶದಲ್ಲಿ ಇಸ್ಲಾಮಿಕ್ ಆಕ್ರಮಣವಾಗುತ್ತಿದ್ದು, ಇದಕ್ಕೆ ಕುಮ್ಮಕ್ಕು […]