ಅವಿಭಜಿತ ದ.ಕನ್ನಡದಲ್ಲಿ ಭ್ರಷ್ಟಾಚಾರದ ದೂರುಗಳಿದ್ದಲ್ಲಿ ಲೋಕಾಯುಕ್ತ ಠಾಣೆಗೆ ದೂರು ನೀಡಿ: ಲೋಕಾಯುಕ್ತ ಎಸ್.ಪಿ ಲಕ್ಷ್ಮೀ ಗಣೇಶ್
ಮಂಗಳೂರು: ಮಂಗಳೂರು ಮತ್ತು ಉಡುಪಿ ಜಿಲ್ಲೆಯ ಜನತೆಗೆ ಭ್ರಷ್ಟಾಚಾರದ ವಿರುದ್ದ ಯಾವುದೇ ರೀತಿಯ ದೂರು ಅಥವಾ ಅಕ್ರಮ ಆಸ್ತಿಗಳ ಬಗ್ಗೆ ದೂರು ದಾಖಲಿಸಲಿದ್ದಲ್ಲಿ, ಮಂಗಳೂರಿನ ಊರ್ವಾ ಸ್ಟೋರಿನಲ್ಲಿರುವ ಲೋಕಾಯುಕ್ತ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಮಂಗಳೂರು-ಉಡುಪಿ ವಿಭಾಗದ ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಲಕ್ಷ್ಮೀ ಗಣೇಶ್ ಹೇಳಿದ್ದಾರೆ. ಸೋಮವಾರದಂದು ಊರ್ವಾಸ್ಟೋರ್ ನ ಲೋಕಾಯುಕ್ತ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು. ಲೋಕಾಯುಕ್ತದ ವಾಪ್ತಿಯು ಅವಿಭಜಿತ ದ.ಕ ಜಿಲ್ಲೆಯ ಮಂಗಳೂರು ಮತ್ತು ಉಡುಪಿ ಜಿಲ್ಲೆಗಳೆರಡಲ್ಲೂ ಇದ್ದು, ಈ ಹಿಂದೆ ಕರ್ನಾಟಕ […]
ತಪೋವನದಲ್ಲಿ ‘ಪರಂಪರಾ’ ಕಲಾವೇದಿಕೆ ಮತ್ತು ತರಗತಿಗಳು ಪ್ರಾರಂಭ
ಮಣಿಪಾಲ: ತಪೋವನ ಇದು ಭಾರತೀಯ ಕಲಾ ಪ್ರಕಾರಗಳ ಕೇಂದ್ರವಾಗಿದ್ದು ವಿವಿಧ ತರಹದ ಲಲಿತ ಕಲೆಗಳಿಗೆ ‘ಪರಂಪರಾ’ ಎಂಬ ಕಲಾವೇದಿಕೆಯನ್ನು ಪ್ರಾರಂಭಿಸಲಿದೆ. ಇದು ಕಲೆ, ಕಲಾವಿದರು ಮತ್ತು ಕಲಾರಾಧಕರು ಪರಸ್ಪರ ಕೈ ಜೋಡಿಸುವ ವೇದಿಕೆಯಾಗಿದೆ. ಪ್ರಸ್ತುತ ತಪೋವನದ ಧ್ಯೇಯವೆಂದರೆ ಲಲಿತಾ ಕಲಾ ಪ್ರಕಾರಗಳನ್ನು ಒಂದೇ ಸೂರಿನಡಿ ತರುವುದಾಗಿದೆ. ಯಕ್ಷಗಾನ, ಭರತನಾಟ್ಯ, ಕರ್ನಾಟಕ ಸಂಗೀತ, ರಂಗಭೂಮಿ ಮತ್ತು ಅರ್ಥ ಸಹಿತ ಭಗವದ್ಗೀತೆಯ 18 ಅಧ್ಯಾಯಗಳ ಪಠಣ ಮುಂತಾದವುಗಳು ಪರಂಪರಾದಲ್ಲಿರಲಿದೆ. ಕಲಿಕೆಗೆ ವಯಸ್ಸಿನ ಹಂಗಿಲ್ಲವಾದ್ದರಿಂದ ಕಲಿಯುವ ಆಸಕ್ತಿ ಇರುವ ಯಾರು ಬೇಕಾದರೂ […]
ಗಣಿತನಗರ ಸೌಹಾರ್ದ ಸಹಕಾರಿ ನಿಯಮಿತದ ವಾರ್ಷಿಕ ಮಹಾಸಭೆ: ಶೇ.10 ಡಿವಿಡೆಂಟ್ ಘೋಷಣೆ
ಗಣಿತನಗರ: ಗಣಿತನಗರ ಸೌಹಾರ್ದ ಸಹಕಾರಿ ನಿಯಮಿತ ಇದರ 2021-22ನೇ ಸಾಲಿನ ವಾರ್ಷಿಕ ಮಹಾಸಭೆಯು ಜ್ಞಾನಸುಧಾ ಕಾಲೇಜಿನ ಆವರಣದಲ್ಲಿ ನಡೆಯಿತು. ವಾರ್ಷಿಕ ಸಾಮಾನ್ಯ ಸಭೆಯ ಅಧ್ಯಕ್ಷತೆಯನ್ನು ಸಹಕಾರಿಯ ಅಧ್ಯಕ್ಷ ಸಾಹಿತ್ಯ ಇವರು ವಹಿಸಿದ್ದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶೈಲೇಶ್ 2021-22ನೇ ಸಾಲಿನ ಲೆಕ್ಕಪರಿಶೋಧನಾ ವರದಿ ಮತ್ತು ಆರ್ಥಿಕ ತಖ್ತೆಗಳನ್ನು ಸಭೆಯಲ್ಲಿ ಮಂಡಿಸಿದರು. ನಿರ್ದೇಶಕರಾದ ಶಾಂತಿರಾಜ್ ಹೆಗ್ಡೆ, ಅನಿಲ್ ಕುಮಾರ್ ಜೈನ್, ರವಿ.ಜಿ., ಮಂಜುನಾಥ್ ಮುದ್ರಾಡಿ, ಅರುಣ್ ಕುಮಾರ್, ಉಮೇಶ್ ಶೆಟ್ಟಿ, ಶ್ರೀಕಾಂತ್ ಮತ್ತು ನಿತೇಶ್.ಎಂ.ಶೆಟ್ಟಿ ಸಭೆಯಲ್ಲಿ ಉಪಸ್ಥಿತರಿದ್ದರು. ಸಹಕಾರಿಯ […]
ಟೆನ್ನಿಕ್ವಾಯಿಟ್ ಪಂದ್ಯಾಟ: ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜು ರಾಜ್ಯ ಮಟ್ಟಕ್ಕೆ ಆಯ್ಕೆ
ಕುಂದಾಪುರ: ಉಡುಪಿ ಜಿಲ್ಲಾ ಪದವಿಪೂರ್ವ ಶಿಕ್ಷಣ ಇಲಾಖೆ ಹಾಗೂ ಸರಸ್ವತಿ ವಿದ್ಯಾಲಯ ಗಂಗೊಳ್ಳಿ ಇದರ ಜಂಟಿ ಆಶ್ರಯದಲ್ಲಿ ಸೆ. 24 ರಂದು ಜರುಗಿದ ಜಿಲ್ಲಾ ಮಟ್ಟದ ಟೆನ್ನಿಕ್ವಾಯಿಟ್ ಪಂದ್ಯಾಟದಲ್ಲಿ ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಾದ ಪ್ರಖ್ಯಾತ್ ಮತ್ತು ಮನೀಶ್ ಜಿಲ್ಲಾ ಮಟ್ಟದಲ್ಲಿ ಗೆಲುವು ಸಾಧಿಸಿರಾಜ್ಯ ಮಟ್ಟದಲ್ಲಿ ಕಾಲೇಜನ್ನು ಪ್ರತಿನಿಧಿಸಲು ಸಜ್ಜಾಗಿದ್ದಾರೆ. ವಿದ್ಯಾರ್ಥಿಗಳು ಕಾಲೇಜಿನ ದೈಹಿಕ ಶಿಕ್ಷಣ ಉಪನ್ಯಾಸಕ ರಾಘವೇಂದ್ರ ಗಾಣಿಗ ಇವರಿಂದ ತರಬೇತಿಯನ್ನು ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ವಿದ್ಯಾರ್ಥಿಗಳಿಗೆ ಕಾಲೇಜಿನ ಆಡಳಿತ ಮಂಡಳಿ, […]
ನಿಟ್ಟೆ ಇಂಜಿನಿಯರಿಂಗ್ ವಿಭಾಗದ ಸಹಪ್ರಾಧ್ಯಾಪಕಿ ಪದ್ಮಾವತಿ ಕೆ ಅವರಿಗೆ ಡಾಕ್ಟರೇಟ್
ನಿಟ್ಟೆ: ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ಎಲೆಕ್ಟ್ರಾನಿಕ್ಸ್ & ಕಮ್ಯುನಿಕೇಶನ್ ಇಂಜಿನಿಯರಿಂಗ್ ವಿಭಾಗದ ಸಹಪ್ರಾಧ್ಯಾಪಕಿ ಪದ್ಮಾವತಿ ಕೆ ಅವರು ‘ಕಂಪ್ಯೂಟರ್ ಏಯ್ಡೆಡ್ ಡಯಗ್ನೋಸಿಸ್ ಬೇಸ್ಡ್ ಆನ್ ಫ್ಯೂಶನ್ ಆಫ್ ಮಲ್ಟಿಮೋಡಲ್ ಡಾಟಾ’ ಎಂಬ ವಿಷಯದ ಬಗೆಗೆ ಮಂಡಿಸಿದ ಸಂಶೋಧನಾ ಪ್ರಬಂಧಕ್ಕೆ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು ಪಿ.ಎಚ್.ಡಿ. ಪದವಿಯನ್ನು ನೀಡಿದೆ. ಇವರು ಬೆಂಗಳೂರಿನ ರಾಮಯ್ಯ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಎಲೆಕ್ಟ್ರಾನಿಕ್ಸ್ & ಕಮ್ಯುನಿಕೇಶನ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥೆ ಡಾ. ಮಾಯಾ ವಿ ಕರ್ಕಿ ಅವರ […]