ಕ್ಷುದ್ರಗ್ರಹಕ್ಕೆ ಬಾಹ್ಯಾಕಾಶ ನೌಕೆಯನ್ನು ಅಪ್ಪಳಿಸಿದ ನಾಸಾ: ವಿಚಲನ ತಂತ್ರಜ್ಞಾನದ ಯಶಸ್ವಿ ಪರೀಕ್ಷೆ

ವಿಚಲನ ತಂತ್ರಜ್ಞಾನವನ್ನು ಪರೀಕ್ಷಿಸಲು ನಾಸಾ ತನ್ನ ಬಾಹ್ಯಾಕಾಶ ನೌಕೆಯನ್ನು ಕ್ಷುದ್ರಗ್ರಹಕ್ಕೆ ಅಪ್ಪಳಿಸಿದೆ. ಕಳೆದ ವರ್ಷದ ನವೆಂಬರ್‌ ನಲ್ಲಿ ಉಡಾವಣೆಯಾದ ವೆಂಡಿಂಗ್ ಮೆಷಿನ್-ಗಾತ್ರದ ಬಾಹ್ಯಾಕಾಶ ನೌಕೆ ಡಾರ್ಟ್ (DART) ಫುಟ್‌ಬಾಲ್ ಮೈದಾನದ ಗಾತ್ರದ ಕ್ಷುದ್ರಗ್ರಹ ಡೈಮಾರ್ಫಾಸ್‌ ನತ್ತ ಪ್ರಯಾಣಿಸಿದೆ ಮತ್ತು ಅದಕ್ಕೆ ಡಿಕ್ಕಿ ಹೊಡೆದಿದೆ ಮತ್ತು ಅದನ್ನು ಪಥದಿಂದ ಹೊರಕ್ಕೆ ತಳ್ಳಿದೆ. ಬಾಹ್ಯಾಕಾಶದಲ್ಲಿ 10 ತಿಂಗಳ ಹಾರಾಟದ ನಂತರ, ನಾಸಾ ದ ಡಬಲ್ ಆಸ್ಟ್ರಾಯಿಡ್ ರಿ-ಡೈರೆಕ್ಷನ್ ಟೆಸ್ಟ್ (ಡಾರ್ಟ್), ವಿಶ್ವದ ಮೊದಲ ಗ್ರಹಗಳ ರಕ್ಷಣಾ ತಂತ್ರಜ್ಞಾನ ಪ್ರದರ್ಶನವು ಸೋಮವಾರ […]

ತುಳುನಾಡಿನ ಮೊದಲ ತುಳು ಹಾರರ್ ಚಲನಚಿತ್ರ ಶಕಲಕ ಬೂಂ ಬೂಂ ಡಿಸೆಂಬರ್ 16 ರಂದು ಬಿಡುಗಡೆ

ಉಡುಪಿ: ಬಹುನಿರೀಕ್ಷಿತ ಶಕಲಕ ಬೂಂ ಬೂಂ ಹಾರರ್ ಚಿತ್ರದ ಪೋಸ್ಟರ್ ಅನ್ನು ಸೆ. 26 ರಂದು ಸಂಜೆ 6 ಗಂಟೆಗೆ ಶ್ರೀ ನರಸಿಂಹ ದೇವಸ್ಥಾನ ನರಸಿಂಗೆ ಇಲ್ಲಿ ದೇವಳದ ಆಡಳಿತ ಮೊಕ್ತೇಸರರಾದ ರಮೇಶ್ ಸಲ್ವಾನ್ಕಾರ್ ಬಿಡುಗಡೆ ಗೊಳಿಸಿದರು. ಚಲನಚಿತ್ರವು ಡಿಸೆಂಬರ್ 16 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಗೊಳ್ಳಲಿದೆ ಎಂದು ಈ ಸಂದರ್ಭದಲ್ಲಿ ಘೋಷಿಸಲಾಯಿತು. ಅತಿಥಿಗಳಾಗಿ ಭಾಗವಹಿಸಿದ್ದ ದೇವಳದ ಅಧ್ಯಕ್ಷ ಎಸ್ ಗೋಪಾಲಕೃಷ್ಣ ನಾಯಕ್, ಆನಂದ ನಾಯಕ್ ಆರ್ಬಿ, ಶ್ರೀ ದುರ್ಗಾಪರಮೇಶ್ವರಿ ಸೊಸೈಟಿಯ ಅಧ್ಯಕ್ಷ ಅಶೋಕ ಕಾಮತ್ ಕೋಡಂಗೆ, ಡಾ. […]

ವಿಶ್ವ ಪ್ರವಾಸೋದ್ಯಮ ದಿನಾಚರಣೆ: ಬೈಕ್ ರ‍್ಯಾಲಿಗೆ ಶಾಸಕ ರಘುಪತಿ ಭಟ್ ರಿಂದ ಚಾಲನೆ

ಉಡುಪಿ: ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ ಹಾಗೂ ಕರಾವಳಿ ಪ್ರವಾಸೋದ್ಯಮ ಸಂಘಟನೆ ಇವರ ಸಹಯೋಗದೊಂದಿಗೆ ವಿಶ್ವ ಪ್ರವಾಸೋದ್ಯಮ ದಿನಾಚರಣೆ 2022 ಅಂಗವಾಗಿ ‘ಪ್ರವಾಸೋದ್ಯಮದ ಪುನರಾವಲೋಕನ’ ಎಂಬ ಸಂದೇಶದೊಂದಿಗೆ ಬೈಕ್ ರ‍್ಯಾಲಿಯನ್ನು ಆಯೋಜಿಸಲಾಯಿತು. ಮಂಗಳವಾರದಂದು ಮಣಿಪಾಲ ಜಿಲ್ಲಾಧಿಕಾರಿಗಳ ಕಚೇರಿ ಸಂಕೀರ್ಣದ ಬಳಿ ಆಯೋಜಿಸಲಾದ ಬೈಕ್ ರ‍್ಯಾಲಿಗೆ ಶಾಸಕ ರಘುಪತಿ ಭಟ್ ಅವರು ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಕೂರ್ಮಾ ರಾವ್ ಎಂ, ಪ್ರವಾಸೋದ್ಯಮ ಇಲಾಖೆಯ ಪ್ರಭಾರ ಸಹಾಯಕ ನಿರ್ದೇಶಕ ಕ್ಲಿಫರ್ಡ್ ಲೋಬೋ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಕಿರಣ್ […]

ಸುಲ್ತಾನ್ ಡೈಮಂಡ್ಸ್ ಎಂಡ್ ಗೋಲ್ಡ್ ನಲ್ಲಿ ‘ವಿಶ್ವವಜ್ರ’ ಪ್ರದರ್ಶನ: ವಜ್ರಾಭರಣದ ಮೇಲೆ ರಿಯಾಯತಿ ಮಾರಾಟ

ಉಡುಪಿ: ಇಲ್ಲಿನ ವಜ್ರಾಭರಣ ಮಳಿಗೆಯಾದ ಸುಲ್ತಾನ್ ಡೈಮಂಡ್ಸ್ ಎಂಡ್ ಗೋಲ್ಡ್ ನಲ್ಲಿ ಸೆ.26 ರಿಂದ ಅ.9 ರವರೆಗೆ ವಿಶ್ವದಾದ್ಯಂತದ ಅಮೂಲ್ಯ ವಜ್ರಗಳ ‘ವಿಶ್ವವಜ್ರ’ ವಜ್ರಾಭರಣ ಪ್ರದರ್ಶನ ಹಮ್ಮಿಕೊಳ್ಳಲಾಗಿದ್ದು, ಸೋಮವಾರದಂದು ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದ ಜನತಾ ಫಿಶ್ ಮಿಲ್ ಮತ್ತು ಆಯಿಲ್ ಪ್ರಾಡಕ್ಟ್ ನ ಆಡಳಿತ ಪಾಲುದಾರ ಆನಂದ್ ಸಿ ಕುಂದರ್, ಸುಲ್ತಾನ್ ಚಿನ್ನಾಭರಣ ಸಂಸ್ಥೆಯು ಗ್ರಾಹಕರಿಗೆ ಉತ್ತಮ ಸೇವೆ ನೀಡುತ್ತಿದ್ದು, ದೇಶ ಮಾತ್ರವಲ್ಲದೆ ಅಂತಾರಾಷ್ಟ್ರೀಯ ಸಂಗ್ರಹಗಳ ಗುಣಮಟ್ಟದ ಆಭರಣಗಳು ಇಲ್ಲಿ ದೊರೆಯುತ್ತವೆ. ಕೇವಲ […]

ಪೊಲೀಸ್ ಲೈನ್ ಶ್ರೀಮೂಕಾಂಬಿಕಾ ಭಜನಾ ಮಂದಿರದಲ್ಲಿ ನವರಾತ್ರಿ ಪೂಜೆ

ಉಡುಪಿ: ಶ್ರೀ ಮೂಕಾಂಬಿಕಾ ಭಜನಾ ಮಂದಿರ ಪೊಲೀಸ್ ಲೈನ್ ನಲ್ಲಿ ಸೋಮವಾರದಂದು ನವರಾತ್ರಿ ಅಂಗವಾಗಿ ಶ್ರೀ ದೇವಿಗೆ ವಿಶೇಷ ಹೂವಿನ ಅಲಂಕಾರ, ಚಂಡಿಕಾ ಹೋಮದ ಧಾರ್ಮಿಕ ಪೂಜಾ ವಿಧಾನಗಳನ್ನು ಹರೀಶ್ ಕೊಡಂಚ ನಡೆಸಿಕೊಟ್ಟರು. ವಿವಿಧ ಭಜನಾ ತಂಡಗಳಿಂದ ಭಜನಾ ಕಾರ್ಯಕ್ರಮ ಜರಗಿತು. ಪೊಲೀಸ್ ಹಿರಿಯ ಅಧಿಕಾರಿಗಳು ಹಾಗೂ ನೂರಾರು ಸಿಬ್ಬಂದಿಗಳು ಉಪಸ್ಥಿತರಿದ್ದರು. ಪೂರ್ಣ ಆಹುತಿ ಮಹಾ ಪೂಜೆಯ ಬಳಿಕ ಸಾರ್ವಜನಿಕರ ಅನ್ನಸಂತರ್ಪಣೆಯಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡರು.