ತಪೋವನದಲ್ಲಿ ‘ಪರಂಪರಾ’ ಕಲಾವೇದಿಕೆ ಮತ್ತು ತರಗತಿಗಳು ಪ್ರಾರಂಭ

ಮಣಿಪಾಲ: ತಪೋವನ ಇದು ಭಾರತೀಯ ಕಲಾ ಪ್ರಕಾರಗಳ ಕೇಂದ್ರವಾಗಿದ್ದು ವಿವಿಧ ತರಹದ ಲಲಿತ ಕಲೆಗಳಿಗೆ ‘ಪರಂಪರಾ’ ಎಂಬ ಕಲಾವೇದಿಕೆಯನ್ನು ಪ್ರಾರಂಭಿಸಲಿದೆ. ಇದು ಕಲೆ, ಕಲಾವಿದರು ಮತ್ತು ಕಲಾರಾಧಕರು ಪರಸ್ಪರ ಕೈ ಜೋಡಿಸುವ ವೇದಿಕೆಯಾಗಿದೆ.

ಪ್ರಸ್ತುತ ತಪೋವನದ ಧ್ಯೇಯವೆಂದರೆ ಲಲಿತಾ ಕಲಾ ಪ್ರಕಾರಗಳನ್ನು ಒಂದೇ ಸೂರಿನಡಿ ತರುವುದಾಗಿದೆ. ಯಕ್ಷಗಾನ, ಭರತನಾಟ್ಯ, ಕರ್ನಾಟಕ ಸಂಗೀತ, ರಂಗಭೂಮಿ ಮತ್ತು ಅರ್ಥ ಸಹಿತ ಭಗವದ್ಗೀತೆಯ 18 ಅಧ್ಯಾಯಗಳ ಪಠಣ ಮುಂತಾದವುಗಳು ಪರಂಪರಾದಲ್ಲಿರಲಿದೆ. ಕಲಿಕೆಗೆ ವಯಸ್ಸಿನ ಹಂಗಿಲ್ಲವಾದ್ದರಿಂದ ಕಲಿಯುವ ಆಸಕ್ತಿ ಇರುವ ಯಾರು ಬೇಕಾದರೂ ಪರಂಪರಾ ಕುಟುಂಬಕ್ಕೆ ಸೇರಬಹುದು. ಭಾರತೀಯ ಸಂಸ್ಕೃತಿ, ಕಲೆ ಮತ್ತು ಬೋಧನೆಗಳ ಹಲವು ರೂಪಗಳನ್ನು ಒಂದೇ ಸೂರಿನಡಿಯಲ್ಲಿ ಪರಂಪರಾ ನೀಡುತ್ತದೆ.

ಹಲವು ಯಕ್ಷಗಾನ ಪ್ರಶಸ್ತಿ ಪುರಸ್ಕೃತರಾದ ಸುಜೇಂದ್ರ ಹಂದೆ ಯಕ್ಷಗಾನವನ್ನು, ರಂಗಭೂಮಿ ಕಲಾವಿದೆ ಶ್ರೀಮತಿ ರೇವತಿ ನಾಡಗೀರ ಅವರು ನಾಟಕವನ್ನು, ಆಲ್ ಇಂಡಿಯಾ ರೇಡಿಯೋದಲ್ಲಿ ಬಿ ಹೈ ಗ್ರೇಡ್ ಕಲಾವಿದರಾದ ಚಿನ್ಮಯಿ ದೀಕ್ಷಿತ್ ಕರ್ನಾಟಕ ಸಂಗೀತವನ್ನು, 600ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ನೀಡಿದ ಧನ್ಯಶ್ರೀ ಪ್ರಭು ಭರತನಾಟ್ಯವನ್ನು , ವೇದವ್ಯಾಸ ಸಂಶೋಧನಾ ಕೇಂದ್ರದ ಸಂಚಾಲಕ ಡಾ ಆನಂದ ತೀರ್ಥ ಭಗವದ್ಗೀತಾ ತರಗತಿಗಳನ್ನು ಕಲಿಸಿಕೊಡಲಿದ್ದಾರೆ.

ಮೈತ್ರಿ ಉಪಾಧ್ಯಾಯ ಪರಂಪರಾ ಸಂಚಾಲಕರಾಗಿ ಕಾರ್ಯನಿರ್ವಹಿಸಲಿದ್ದಾರೆ.

ವಿಳಾಸ:
ತಪೋವನ ಲೈಫ್ ಸ್ಪೇಸ್ ಪ್ರೈ.ಲಿ
ನೆಲ ಮಹಡಿ, ಪ್ರಗತಿ ಪ್ರೈಡ್ ಕಟ್ಟಡ,
ಕ್ರೈಸ್ಟ್ ಚರ್ಚ್ ಎದುರು, ಅಲೆವೂರ್ – ಮಣಿಪಾಲ್ ರಸ್ತೆ,
ಉಡುಪಿ – ಕರ್ನಾಟಕ – 576104

Ph: 8762563517,9008033981,8792515824
ಇ-ಮೇಲ್; tapovanalifespace@gmail.com